Aug 032020
 

ಶಶಿಕಿರಣ್ ರವರ ಪದ್ಯ – ಹೂವಿನ ಬಗೆಗಿನ ಅನ್ಯೋಕ್ತಿ:
मा कत्थिष्ठाः सुम व्यक्तं सौरभत्वात्कदाचन।
विप्रकीर्णत्वमाप्नोषि वियोगाद्गुणसम्पदः॥
ಹೂವೇ, ನಿನ್ನಲ್ಲಿ ಸೌರಭವಿದೆಯೆಂದು ಬೀಗದಿರು, ಗುಣ(ದಾರ)ವಿಲ್ಲದಿದ್ದರೆ ನೀವು ಬಿಡಿಯಾಗಿಯೇ (ಬೆರೆಯದೆಲೆ) ಉಳಿಯುವೆ.
——-
ಉಷಾರವರ ಪದ್ಯ – ಉಪ್ಪು & ಸಕ್ಕರೆಯ ಸಂವಾದ:
ಒದಗಿರ್ಪುದೆನಗೂಟದೆಲೆಯ ಬಲತುದಿ ಭಾಗ್ಯ-
ಮದೆ ನಿನ್ನನೆಡಕಿಡುದ ನಾನು ಬಲ್ಲೆಂ|
ಮದಮೆಂತದೆಲೆಮರುಳೆಯೆನಗಿಲ್ಲ ಪರ್ಯಾಯ
ಬದಲುಂಟು ನಿನಗೆ ಕಾಣ್ ಜೇನು ಬೆಲ್ಲಂ||
ಉಪ್ಪಿಗೆ ಆಲ್ಟರ್ನೇಟೇ ಇಲ್ಲ ಅಲ್ಲವೇ? ಹೇಗಿದೆ ಅದರ ಆಲ್ಟರ್ಕೇಟ್?
——-
ವೀಣಾರವರ ಪದ್ಯ – ಸೂರ್ಯ ಹಸಿರಾಗಿ ಕಂಡರೆ
रविर्हरिद्वर्णमवाप्नुयाच्चेत्
सुवर्णवर्णं गिरिकाननादि।
सूर्यो धारा स्याद्धरणिश्च सूर्यः
किं नामनि स्यात् क्रियया ह्यभिज्ञा।।

  5 Responses to “ಉಪ್ಪು & ಸಕ್ಕರೆಯ ಸಂವಾದ, ಸೂರ್ಯ ಹಸಿರಾಗಿ ಕಂಡರೆ, ಮತ್ತು ಹೂವಿನ ಮೇಲೆ ಅನ್ಯೋಕ್ತಿ”

  1. ಉಪ್ಪು ಸಕ್ಕರೆಗೆ ಹೇಳಿದ್ದು:
    ಕಾಲವೆಲ್ಲಕು ದೇಶದೇಶಿಗರ್ಗೆಲ್ಲರ್ಗೆ
    ಸಾಲುವನಿತಿಹೆನಾನು ಸೃಷ್ಟ್ಯಾದಿಯಿಂ|
    ಸಾಲಿಟ್ಟು ಬಿತ್ತಿ ನೀರೂಡಿಸುತೆ ಕಬ್ಬ ಕೊ-
    ಯ್ದಾಲೆಯಾಡಲು ವೇಳ್ಕುಮವತರಿಸೆ ನೀಂ||

    ಗೊಬ್ಬರವು, ಮಣ್ಣು, ಬೀಜವು, ನೀರು ಮೇಣ್ ಋತುವು
    ಕಬ್ಬು ಬೆಳೆಯಲು ಬೇಕು, ನೀನುದಿಪೆ ಅದರಿಂ|
    ಹಬ್ಬಿರುವ ಸಾಗರದ* ಪಾತ್ರವೇ ಸಾಕೆನಗೆ
    ಅಬ್ಬರವದಿನ್ನಿಲ್ಲ ಉದ್ಭವಿಸೆ ನಾಂ||
    * Even Rock salt occurs in vast beds of sedimentary evaporite minerals that result from the drying up of enclosed lakes, playas, and seas.

  2. ಸೂರ್ಯ ಹಸಿರಾಗಿ ಕಂಡರೆ
    ’ನೀ ನೋಡಬಲ್ಲೆಯೇಂ ಪಸುರನ್ನು ನೆತ್ತರದು
    ತಾನೆ ಪಸುರಾಗುವನ್ನೆಗಮೆಂ’ದ ಕವಿಯೆ|
    ’ನಾ ನೋಡಲಾರೆಯೆಂ’ಬನಿತು ಪಸುರಪ್ಪುದೀ
    ಬಾನು-ಬುವಿ-ಪೂ-ಪಣ್ಣು-ದನವು-ಗೊಲ್ಲಂ||

  3. ಉಪ್ಪು ಸಕ್ಕರೆಯ ಸಂವಾದ(ಕಂದಪದ್ಯ)
    ~~~~~~~~~~~~~~~

    ಉಪ್ಪಿನ ಚರಿತೆಯು ಸಕ್ಕರೆ
    ಮುಪ್ಪಲಿ ಕೇಳುತಲಿ ನಿಂದು ಮನದಲಿ ಚಣದಿಂ|
    ತಪ್ಪನು ಮಾಡುತ ಸಿಹಿಯ
    ನ್ನಪ್ಪದೆ ಲವಣದಲಿ ನಿಜವು ಭೋಜನದಲಿಯಿಂ||

    ಚಹದಲಿ ಬಳಸಲು ನನ್ನನು
    ಮಹಿಮೆಯು ಬಲುವಿಹುದು ಕೇಳು ವೀರನೆ ಸಿಹಿಯೈ|
    ಕಹಿಯದು ಮನಸಿನ ರೀತಿಯು
    ಮಹಿಯನ್ನಾಳುವನು ರಾಮ ನೋಡುತ ಚಣದೊಳ್||

    ಶಂಕರಾನಂದ ಹೆಬ್ಬಾಳ

    • ತಾತ್ಪರ್ಯವಾಗಲಿಲ್ಲ. ದಯವಿಟ್ಟು ವಿವರಿಸಿ.

  4. ಪರಿಮಳವವ ಚೆಲ್ಲುತಿಹ ಮಲ್ಲಿಗೆ ಭಾಗ್ಯವೇನನು ಗಳಿಸಿದೆ?
    ತುರುಬಲಿಟ್ಟರೆ ಹೊಸಕಿ ಹೋಗುವೆ! ಕಂಡವರ ಕೊರಳಲ್ಲಿ ನೀ
    ಹಾರವಾದರೆ ಕೊನೆಗೆ ಒಣಗುತ ಕೊಳೆತು ಬೀಳುವೆ ತಿಪ್ಪೆಗೆ;
    ಬರಿದೆ ಕಳ್ಳಿಯ ಮುಳ್ಳಿನಂತಿರೆ ನೋಡು! ಬಹುದಿನ ಬಾಳುವೆ!

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)