Mar 212011
ಸೀಸ ಪದ್ಯ…..೬ ವಿಷ್ಣುಗಣ(ಅಥವಾ ೫ ಮಾತ್ರೆಯ ೬ ಗಣಗಳು) + ೨ ಬ್ರಹ್ಮಗಣ ( ಅಥವಾ ೩ ಮಾತ್ರೆ ೨ ಗಣಗಳು) ಗಳ ೪ ಸಾಲುಗಳು…
೫*೬ + ೩*೨
ಕೊನೆಗೆ ಸೀಸದ ಜೊತೆಯಾಗಿ ಬರುವ ತೇಟಗೀತೆ( ೩ * ೧ + ೫*೨ + ೩* ೨)
ಮಾತ್ರೆಗಳಿಗಕ್ಷರಗಳನಿಡುವಿಕ್ಕಟ್ಟಲೆ ಜಗದಗಲವ ನಿರ್ಮಿಸಿ ನಗುತಲೆ ನಡೆದ
ಪದಮಾತ್ರ ದಲೆ ಕಾವ್ಯಸಾಸಿರವ ಸೃಜಿಪ ಕವಿಯ೦ತ್ರತಿರುಪುಗಳ್ ಬಿಗಿವ೦ಥ ಯ೦ತ್ರಿ |
ಛ೦ದದಿ೦ ಚ೦ದವಾಗಿಹಕಾವ್ಯದಿ೦ ಬದಲಿಸಿಹ ಜೀವಗತಿಯ ಹುರುಪಿನಿ೦ ಕಾವ್ಯೋ
ದ್ಯೋಗಕ್ಕೆಳೆಸಿ ದಾರಿಯಲಿ ಹೆಜ್ಜೆ ಗುರುತೊ೦ದಕ೦ಡು ನಮಿಸುತಿರಿಸಿಹೆ ಹೆಜ್ಜೆಯೊ೦ದಾ ||
ಸ್ವೀಕರಿಸಿ ಶ್ರೀಶನೀ ಸೀಸವ೦ ಹರಸಿ ನೀವ್
ಕೈಯೆಡವದ೦ತೆ ಮನದಿ೦ಗಿತವ೦ ರಚಿಸಲ್ ||
//ಅಕ್ಕರದ ಲೆಕ್ಕಗಳ ಸಿಕ್ಕುಬಿಡಿಸುತಸಾಗೆ ದಕ್ಕುವುದು ಶ್ರೀಶರಸುವಿನಯಭಾವ //
ಪದ್ಯದ ಭಾವ ಚೆನ್ನ. ಪಾದದ ಗುರುತನ್ನು ಕಂಡು ನಮಿಸುವ ನಮ್ರತೆಯ ಶ್ರೀಶ ಸೀಸ, ಸ್ವಲ್ಪ ಛಂದೋಘನವಾದಲ್ಲಿ, ಪಕ್ಕಾ ಸೀಸವೇ.
ಉದಾ: ಮಾತ್ರೆಗಳಿ ಗಕ್ಷರಗ ಳನಿಡುವಿಕ್ಕಟ್ಟಲೆ ಜಗದಗಲವ ನಿರ್ಮಿಸಿ ನಗುತಲೆ ನಡೆದ..ಈ ಸಾಲಿಗೆ ಗಣವಿಭಾಗ ಸೂಚಿಸಿ, ನೀಡಿದಲ್ಲಿ, ಅರ್ಥವಾಗಲು ಅನುಕೂಲ. ಈ ಸಾಲನ್ನೇ ಹೀಗೆ ಬರೆದು ಗಣನಿರ್ದೇಶನ ಸಾಧಿಸಬಹುದು..
"ಮಾತ್ರೆಗಳ ಪಾತ್ರೆಗಳೊಳಡಕುತ್ತ ಭಾವಜಗ ಹೊಮ್ಮುತ್ತ ವಿಸ್ತರಿಸೆ ನಲಿದು ನಡೆದು "
ಉಳಿದ ಮೂರುಸಾಲುಗಳನ್ನೂ ಮತ್ತೊಮ್ಮೆ ನೋಡಿ, ನೀಡಬೇಕೆಂದು ಬೇಡಿಕೆ.
ಬೇಕು ಶ್ರೀಶರಿಂ ಮತ್ತೊಮ್ಮೆ ಸೀಸಪದ್ಯ
ಕಾದ ಮೇಲಲ್ಲವೇಂ ಸೀಸದಚ್ಚು ಘನೆತೆ
ನೀಡಿ ತೇಟಗೀತಿಯೊಳುಳಿದ ಎರಡುಸಾಲು
ಕಾದು ನೋಡುತಿಹೆ ಮುದಗಳಿಸೆ ನಮ್ಮ ಪಾಲು
sikkapaTTe problems ide anta….gottaaytu….I had thought that tetageete is of only 2 lines…Ganesh has lot of comments on it…will update the same in more readable format by this sunday….
thanks a lot for your time for kaavya kutuhala…..have been observing your valuable comments for all of us…keep tightening our screws….
Also, shall i add u as one of the author…..???
Notwithstanding the syntax (which I haven't been able to figure out yet), the ಭಾವ is very nice. Please continue and post more.
Uttama praytna kaarantare..