Mar 182011
 
ಇದು ಸೋಮ ಪದ್ಯ ಮೂಲಕ ಕೇಳಿದ ಪ್ರಶ್ನೆಗೆ ಒಂದು ಉತ್ತರ ::

ತಂದೆ ತಾತರು ಪಿತೃಗಳೆಲ್ಲರು 
ತಂದ ಪೂರ್ವಾಪರದ ಗತಿಗಳ
ಮುಂದುವರಿಸಿದ ತಳಿಯ ಪುಣ್ಯದ ಜನುಮವೆಮ್ಮಿರವು ||
ಹಿಂದೆ ಕೇಡಿಗರೆದುರು ಹೆದರಿರೆ
ಮುಂದೆ ಕುರುಗಳ ಕ್ಷೇತ್ರ ಯುದ್ಧದಿ
ತಂದೆ ಸಹಿತದಿ ಹೋರಿ ಮಡಿದವ ಹೇಡಿಯೆಂತಹನು?
[ಇನ್ನೂ ಮುಂದುವರಿಯಲೂ ಬಹುದು :-)]
– ರಾಮಚಂದ್ರ

  7 Responses to “ಜನ್ಮದ ಬಲ”

  1. All the five lines are perfect. Last line needs little nudging.

    tamde sahita kAdAdi madidava =3+3+5+4+3+4+2

    taMde saMgada hOri madidava hEdiyaaguvanE OR hEdiyeMtahanu? = 3+4+3+4+3+4+2 will make the last line

  2. hohoh…man….its really happening here…let me jump in soon…
    great going….

  3. ಮೌಳಿ – ನಿಮ್ಮ ಸಲಹೆಗೆ ಧನ್ಯವಾದಗಳು. ಸರಿ ಮಾಡಿದ್ದೇನೆ.

  4. Ram,

    ಬಹಳ ಬಹಳ ಚೆನ್ನಾಗಿದೆ, ತುಂಬಾ ಸಂತೋಷವಾಯ್ತು. ಒಪ್ಪಿದೆ. ನೀವು ಹೇಳಿರೋದು ಸತ್ಯ ವಿರಾಟ ಪರ್ವದ ಸಮಯಕ್ಕೆ ನನ್ನ ಮೊದಲ ಪದ್ಯ ಸರಿಯಿದೆ. ಎರಡನೇದು ಯುದ್ಧ ಪರ್ವಕ್ಕು ಹೇಳ್ತೀನಿ ಕೇಳಿ:

    ಬಾಲವಯದಲಿ ಹಾದಿ ತಪ್ಪಿದ
    ಲೋಲ ಸಖಿಯರ ತರುಣನಿವ ತಾ
    ಸಾಲ ತೀರಿಸೆ ಪಾಂಡು ಪುತ್ರಗೆ ಪ್ರಾಣವನೆ ಕೊಟ್ಟ 🙁
    ಕಾಲ ಪಥದಲಿ ಮನುಜನಡತೆಯು
    ವಾಲಿಪುದಕವಗುಣಗಳೆಲ್ಲವ
    ಜಾಲಿಸುತ ಹಿರಿಮೆಯನು ಏರಿದ ಉತ್ತರನೆ ಸಾಕ್ಷಿ

  5. ಏನಪ್ಪ ಇದು ಸವಾಲ್-ಜವಾಬ್….

    ಸೋಮಣ್ಣ ಏನಿದು…ಹಿ೦ಗೆ ಕುಮಾರ್ವ್ಯಾಸನ ತರ ಷಟ್ಪದಿಮೇಲೆ ಷಟ್ಪದಿ….ಹಲಗೆ ಬಳಪವ ಪಿಡಿಯದೆ-ಪದವನಿಟ್ಟಳುಪದೆ ಬರ್ತಾನೇ ಇದೆ…..ಸೂಪರ್….

    ಒ೦ದು ಸಣ್ಣ ಬದಲಾವಣೆ,
    ಸ೦ಧಿಯಾಗುವಲ್ಲೆಲ್ಲಾ ಮಾಡಲೇಬೇಕೆ೦ಬ ನಿಯಮ ಇದೆ…ಹಾಗಾಗಿ ಕೊನೆಯ ಸಾಲಿನಲ್ಲಿ….ಏರಿದ ಮತ್ತು ಉತ್ತರನೆ ಎರಡು ಪದಗಳು ಪೂರ್ವಪದದೊ೦ದಿಗೆ ಸೇರಬೇಕು…ಹೀಗೆ ಮಾಡಬಹುದು…
    "ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರ ನಾ"

  6. ಶ್ರೀಶ :),

    ಹವ್ದು "ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರ ನಾ" ಸರಿಹೋಗತ್ತೆ ೪ನೆ ಪಾದಕ್ಕೆ

  7. ಜಾಲಿಯಾಗಿದೆ ’ಛಂದ, ಸಂಧಿಯ’
    ಬೇಲಿಹೊದಿಸುವ ರೀತಿ, ಸಾಕ್ಷಿಯ
    ಮೂಲ, ’ಹಿರಿಮೆಯೊ? ಉತ್ತರನೊ?’ ಸಂದೇಹಕೇಡೆಯೇಕೆ?

Leave a Reply to Soma Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)