On a westward flight, the sun is Geo-stationery with respect to the aircraft. Let us consider a flight taking off at noon:
ಹತ್ತಿ ವಿಮಾನವ ಪಾರಿದನೊರ್ವನ್
ಮಿತ್ತನ ಪಿಂತೆಯೆ ಪಶ್ಚಿಮ ದಿಕ್ಕೊಳ್| (mitta – can it be a tadbhava of mitra?)
ನೆತ್ತಿಯ ಮೇಲೆಯೆ ನಿಂದಿರೆ ಸೂರ್ಯನ್
ಮತ್ತಿನ ಸಂಜೆಯನೆಂತು ಪೊಗಳ್ವನ್||
ಮಿತ್ತ ಎನ್ನುವ ತದ್ಭವ ಸಾಧುವೇ ಹೌದು. ಆದರೆ ಸಾಮಾನ್ಯವಾಗಿ ಜನಸಮಷ್ಟಿಯಿಂದಲೇ ತದ್ಭವದ ರೂಪಣವಾಗುತ್ತದಲ್ಲದೆ ವ್ಯಷ್ಟಿಯಾದ ಕವಿಯೊಬ್ಬನಿಂದಲ್ಲ. ಇದೊಂದು ಗಂಭೀರವಿಚಾರ. ಆದರೆ ಕೆಲಮಟ್ಟಿಗೆ ನಾನು ನಿಮ್ಮೊಡನಿದ್ದೇನೆ:-) ಏಕೆಂದರೆ ಇಂಥ ಪ್ರಯತ್ನಗಳು ಯಾರೋ ಕೆಲವರಿಂದ ಆಗಲೇ ಬೇಕಿವೆ. ಆದರೆ ಇವು ಅಶಕ್ತಿಯಿಂದಾಗದೆ ಸ್ವಶಕ್ತಿಯಿಂದಾದರೆ ತುಂಬ ಚೆನ್ನ.
ಅಂಗಿಗುಂಡಿಯನನಂಗಭಾವನಾ-
ಭಂಗಿಯಿಂ ತೆರೆದು ಸಾಗೆ ಜವ್ವನಂ|
ಸಂಗಳಿಕ್ಕುಮೊಲವರ್ಗೆ, ಗುಂಡಿಯೇ
ಭಂಗಗೊಂಡವನ ಯತ್ನಮಂತುಟೇಂ?
ಉಳಿದಂತೆ ಪದ್ಯದ ಭಾಷೆ-ಬಂಧ-ಛಂದಗಳೆಲ್ಲ ಅನವದ್ಯ, ನಿಜಕ್ಕೂ ನನಗೆ ಹರ್ಷ ತಂದಿದೆ.

ನಿಮ್ಮ ಕಂಜಮಿತ್ರ…ಪದ್ಯವೂ ಚೆಲುವಾಗಿದೆ. ಕಲ್ಪನೆಯಂತೂ ತುಂಬ ತುಂಬ ಸೊಗಸಾಅಗಿದೆ. ವಿಶೇಷತಃ ಇಲ್ಲಿಯ ಶ್ಲೇಷಸಂಯೋಜನೆ ಬಲುಬಲ್ಮೆಗೆಲಸವಾಗಿದೆ. ಮತ್ತೆ ಮತ್ತೆ ಧನ್ಯವಾದಗಳು.
ಕೇವಲ ಕೆಲವೊಂದು ಸಣ್ಣ ಪುಟ್ಟ ಸವರಣೆಗಳು:
ಕಂಜಮಿತ್ರನನುಗಾಲಮರ್ಚಿಸಲ್ (ಅರ್ಚಿ ಎಂದರೆ ಅಗ್ನಿ ಎನ್ನುವ ಅರ್ಥವೂ ಇದೆ!! ಇದು ಪೂಜಿಸುವುದೆಂಬ ಅರ್ಥದಲ್ಲಿಲ್ಲಿ ಬಳಕೆಯಾಗಿಲ್ಲ) ಬಂಜರಾಗಿಸುತೆ ಲೋಕಮೆಲ್ಲಮಂ| ಮಂಜುಕಾರಿಣಿ ನಿಶೀಥೆ ಮೇಣ್ ಬರಲ್
ಸಂಜೆ ಪಾಸಿದುದೆ ಲೋಹಿತಾಂಬರಂ? (ಇಲ್ಲಿಯ ವಿಭಕ್ತಿಪಲ್ಲಟ ಕ್ಷಮ್ಯ:-)
ಈ ಪದ್ಯದ ಸವರಣೆಯ ಹಿಂದಿನ ಉದ್ದೇಶ-ಭಾಷಾಸಂಬಂಧಿತವಿಚಾರಾದ್ಗಳನ್ನು ವಿಸ್ತರಿಸಿ ಹೇಳಲು ಸಮಯ-ತೋಳ್ಬಲ(!) ಸಾಲದಾದ ಕಾರಣ ಇಲ್ಲಿಗೇ ವಿರಮಿಸುವೆ. ಫೋನಿಸಿ ಕೇಳಬಹುದು.
ನಾನು ಹೇಳಬಯಸಿದ್ದು: ದಿವ್ಯಾತ್ಮನ ಪ್ರದೋಷ ಸಮಯವೆ೦ಬ ನಾಟಕದಲ್ಲಿ ಹಲವಾರು ಸು೦ದರ ಅ೦ಕಣಗಳು ಬರುತ್ತವೆ. ಒ೦ದಕದಲ್ಲಿ ಸೂರ್ಯನೆ೦ಬ ನಟನು ಕೆ೦ಪಿನ ನಭವೆ೦ಬ ರ೦ಗದಲ್ಲಿ ಅಸ್ತ೦ಗತನಾಗುವನು. ಇನ್ನೊ೦ದಕದಲ್ಲಿ ನೀಲಿಯ ಅ೦ಬರದ ಹಿನ್ನೆಲೆಯಲ್ಲಿ ಹಕ್ಕಿಗಳು ಹಾರಿಬರುತ್ತವೆ (ಗೂಡಿಗೆ ಹಿ೦ದಿರುಗುತ್ತವೆ). ಗೋಧೂಳಿಯ ಹಿನ್ನೆಲೆಯಲ್ಲಿ ಮನೆಯ ಕಡೆ ಕೆಲಸ ಮುಗಿಸಿ ಬರುವ ನಲ್ಲನ ಪಾತ್ರ ಮತ್ತೊ೦ದ೦ಕದಲ್ಲಿ ಬರುತ್ತದೆ…
ಅಷ್ಟು ಉತ್ತಮವಾದ ಕಲ್ಪನೆಯಲ್ಲ ಮತ್ತು ಪದ್ಯ ಕಲ್ಪನೆಯನ್ನು ಸರಿಯಾಗಿ ಬಿ೦ಬಿಸುತ್ತಿಲ್ಲ 🙂
೧.
ರಂಗು ಚೆಲ್ಲಿಹುದು ನೀಲಿ ಬಾನಿನಲಿ ಎಂಥ ಮಧುರ ದೃಶ್ಯ
ಗುಂಗು ಮೂಡುವುದು ಹಾಡ ಗುನಿಸುವುದು ನೊಂದ ಮನವು ಸತ್ಯ |
ತೆಂಗು ಕಂಗು ಮರ ಗಾಳಿ ಬೀಸುವವು ಬೆಂದ ದೇಹಕೆಂದೇ
ಸಂಗ ಬಯಸಿ ಮನ ಕಂಡು ಕೊಳುವುದದ ಸಂಜೆ ರಾಗದಲ್ಲೇ ||

ಕಂಜಮಿತ್ರ ದಿನವೆಲ್ಲ ಬೇಯಿಸಲ್
ಬಂಜರಾಗಿಸುತೆ ಲೋಕವೆಲ್ಲವನ್
ಮಂಜುಕಾರಿಣಿ ನಿಶೀಥಿನೀ ಬರಲ್
ಸಂಜೆ ಹಾಸಿಹುದು ಲೋಹಿತಾಂಬರಂ (Red Carpet)
– bApaT and prasAdu
ಮಿತ್ತ ಎನ್ನುವ ತದ್ಭವ ಸಾಧುವೇ ಹೌದು. ಆದರೆ ಸಾಮಾನ್ಯವಾಗಿ ಜನಸಮಷ್ಟಿಯಿಂದಲೇ ತದ್ಭವದ ರೂಪಣವಾಗುತ್ತದಲ್ಲದೆ ವ್ಯಷ್ಟಿಯಾದ ಕವಿಯೊಬ್ಬನಿಂದಲ್ಲ. ಇದೊಂದು ಗಂಭೀರವಿಚಾರ. ಆದರೆ ಕೆಲಮಟ್ಟಿಗೆ ನಾನು ನಿಮ್ಮೊಡನಿದ್ದೇನೆ:-) ಏಕೆಂದರೆ ಇಂಥ ಪ್ರಯತ್ನಗಳು ಯಾರೋ ಕೆಲವರಿಂದ ಆಗಲೇ ಬೇಕಿವೆ. ಆದರೆ ಇವು ಅಶಕ್ತಿಯಿಂದಾಗದೆ ಸ್ವಶಕ್ತಿಯಿಂದಾದರೆ ತುಂಬ ಚೆನ್ನ.
ಅಂಗಿಗುಂಡಿಯನನಂಗಭಾವನಾ-
ಭಂಗಿಯಿಂ ತೆರೆದು ಸಾಗೆ ಜವ್ವನಂ|
ಸಂಗಳಿಕ್ಕುಮೊಲವರ್ಗೆ, ಗುಂಡಿಯೇ
ಭಂಗಗೊಂಡವನ ಯತ್ನಮಂತುಟೇಂ?
ಉಳಿದಂತೆ ಪದ್ಯದ ಭಾಷೆ-ಬಂಧ-ಛಂದಗಳೆಲ್ಲ ಅನವದ್ಯ, ನಿಜಕ್ಕೂ ನನಗೆ ಹರ್ಷ ತಂದಿದೆ.
ನಿಮ್ಮ ಕಂಜಮಿತ್ರ…ಪದ್ಯವೂ ಚೆಲುವಾಗಿದೆ. ಕಲ್ಪನೆಯಂತೂ ತುಂಬ ತುಂಬ ಸೊಗಸಾಅಗಿದೆ. ವಿಶೇಷತಃ ಇಲ್ಲಿಯ ಶ್ಲೇಷಸಂಯೋಜನೆ ಬಲುಬಲ್ಮೆಗೆಲಸವಾಗಿದೆ. ಮತ್ತೆ ಮತ್ತೆ ಧನ್ಯವಾದಗಳು.
ಕೇವಲ ಕೆಲವೊಂದು ಸಣ್ಣ ಪುಟ್ಟ ಸವರಣೆಗಳು:
ಕಂಜಮಿತ್ರನನುಗಾಲಮರ್ಚಿಸಲ್ (ಅರ್ಚಿ ಎಂದರೆ ಅಗ್ನಿ ಎನ್ನುವ ಅರ್ಥವೂ ಇದೆ!! ಇದು ಪೂಜಿಸುವುದೆಂಬ ಅರ್ಥದಲ್ಲಿಲ್ಲಿ ಬಳಕೆಯಾಗಿಲ್ಲ) ಬಂಜರಾಗಿಸುತೆ ಲೋಕಮೆಲ್ಲಮಂ| ಮಂಜುಕಾರಿಣಿ ನಿಶೀಥೆ ಮೇಣ್ ಬರಲ್
ಸಂಜೆ ಪಾಸಿದುದೆ ಲೋಹಿತಾಂಬರಂ? (ಇಲ್ಲಿಯ ವಿಭಕ್ತಿಪಲ್ಲಟ ಕ್ಷಮ್ಯ:-)
ಈ ಪದ್ಯದ ಸವರಣೆಯ ಹಿಂದಿನ ಉದ್ದೇಶ-ಭಾಷಾಸಂಬಂಧಿತವಿಚಾರಾದ್ಗಳನ್ನು ವಿಸ್ತರಿಸಿ ಹೇಳಲು ಸಮಯ-ತೋಳ್ಬಲ(!) ಸಾಲದಾದ ಕಾರಣ ಇಲ್ಲಿಗೇ ವಿರಮಿಸುವೆ. ಫೋನಿಸಿ ಕೇಳಬಹುದು.
ಕೆ೦ಪೇರಲ್ ನಭರ೦ಗಮ೦ಚದೊಳಗ೦ ಸೂರ್ಯಾಸ್ತವ೦ ಪೊ೦ದುವ೦,
ಗು೦ಪೊಳ್ ಪಾರುವ ಪಕ್ಕಿಗಳ್ ಮೆರೆಗನ೦ ತೋರಲ್ಕೆ ನೀಲಾ೦ಬರ೦,
ತ೦ಪಾಗಲ್ ಬರುತಿರ್ಪ ನಲ್ಲನೆಡೆಗು೦ ಗೋಧೂಳಿಯ೦ಕ೦ಗಡ
ಸೊ೦ಪಯ್ ನಾಟಕವೀ ಪ್ರದೋಷಸಮಯ೦ ದಿವ್ಯಾತ್ಮನಾ ಲೀಲೆಯೊಳ್
ಅರ್ಥ ಸಫುರಣೆಯಿಲ್ಲವೇನೋ ಎನಿಸುತ್ತದೆ.
ತ೦ಪಾಗಲ್ ಬರುತಿರ್ಪ ನಲ್ಲನೆಡೆಗು೦: ಸ೦ಜೆ ಕೆಲಸ ಮುಗಿಸಿ ಮನೆಯಡೆ ಬರುವ ನಲ್ಲನ ಎದಿರು ನೋಡಿದಾಗ
ಮತ್ತೇಭವಿಕ್ರೀಡಿತದ ಪ್ರಯತ್ನ ದಿಟವಾಗಿ ಸ್ತುತ್ಯ. ಆದರೆ ನೀವೇ ಹೇಳಿದಂತ ಅರ್ಥ ಸ್ಪಷ್ಟವಾದಲ್ಲಿ ಒಳಿತು. ಭಾಷಾಸಂಬಂಧಿತವಾದ ಸವರಣೆಗಳನ್ನೂ ಆಗಲೇ ಹೇಳುವೆ.
ಕ್ಷಮಿಸಿರಿ; ಇದು ಶಾರ್ದೂಲವಿಕ್ರೀಡಿತ; ತಪಾಗಿ ಮತ್ತೇಭವೆಂದಿದ್ದೆ!!
ಗಣೇಶ್ ಸರ್,
ಕ್ಷಮಿಸಿ, ಈ ಕಾಮೆ೦ಟ್ಟನ್ನು ತಡವಾಗಿ ನೋಡಿದೆ.
ನಾನು ಹೇಳಬಯಸಿದ್ದು: ದಿವ್ಯಾತ್ಮನ ಪ್ರದೋಷ ಸಮಯವೆ೦ಬ ನಾಟಕದಲ್ಲಿ ಹಲವಾರು ಸು೦ದರ ಅ೦ಕಣಗಳು ಬರುತ್ತವೆ. ಒ೦ದಕದಲ್ಲಿ ಸೂರ್ಯನೆ೦ಬ ನಟನು ಕೆ೦ಪಿನ ನಭವೆ೦ಬ ರ೦ಗದಲ್ಲಿ ಅಸ್ತ೦ಗತನಾಗುವನು. ಇನ್ನೊ೦ದಕದಲ್ಲಿ ನೀಲಿಯ ಅ೦ಬರದ ಹಿನ್ನೆಲೆಯಲ್ಲಿ ಹಕ್ಕಿಗಳು ಹಾರಿಬರುತ್ತವೆ (ಗೂಡಿಗೆ ಹಿ೦ದಿರುಗುತ್ತವೆ). ಗೋಧೂಳಿಯ ಹಿನ್ನೆಲೆಯಲ್ಲಿ ಮನೆಯ ಕಡೆ ಕೆಲಸ ಮುಗಿಸಿ ಬರುವ ನಲ್ಲನ ಪಾತ್ರ ಮತ್ತೊ೦ದ೦ಕದಲ್ಲಿ ಬರುತ್ತದೆ…
ಅಷ್ಟು ಉತ್ತಮವಾದ ಕಲ್ಪನೆಯಲ್ಲ ಮತ್ತು ಪದ್ಯ ಕಲ್ಪನೆಯನ್ನು ಸರಿಯಾಗಿ ಬಿ೦ಬಿಸುತ್ತಿಲ್ಲ 🙂
೧.
ರಂಗು ಚೆಲ್ಲಿಹುದು ನೀಲಿ ಬಾನಿನಲಿ ಎಂಥ ಮಧುರ ದೃಶ್ಯ
ಗುಂಗು ಮೂಡುವುದು ಹಾಡ ಗುನಿಸುವುದು ನೊಂದ ಮನವು ಸತ್ಯ |
ತೆಂಗು ಕಂಗು ಮರ ಗಾಳಿ ಬೀಸುವವು ಬೆಂದ ದೇಹಕೆಂದೇ
ಸಂಗ ಬಯಸಿ ಮನ ಕಂಡು ಕೊಳುವುದದ ಸಂಜೆ ರಾಗದಲ್ಲೇ ||
[ಛಂದಸ್ಸು :: ಮದ್ಯಮಾವರ್ತಿ ಮಾತ್ರಾ ಛಂದಸ್ಸು – ೩+೫+೩+೫+೩+೫+೨]
೨.
ಪೋಪಾಗ ಭಾಸ್ಕರನು ಬಣ್ಣವನಿತ್ತು ಬಾನ್ಗಂ
ಸೊಂಪಾದ ಸಂಜೆಯೆನುವಾ ಪದ ಸೃಷ್ಟಿಸಿರ್ಪಂ
ಬಪ್ಪಾಗ ಗೂಡಿಗತಿ ತಂಪೆರೆಯಲ್ಕೆ ಕಾಲಂ
ಒಪ್ಪಾದ ಬಂಧಬೆಳೆಸಲ್ ಭಗವಂತನಾಟಂ
[ಛಂದಸ್ಸು : ವಸಂತ ತಿಲಕ]
ಅರರೆ ! ಬಾನಂಗಳಕೆ ಬಣ್ಣವೀದಂತಿದೆಯೆ !
ಸುರರವರ ಕುಂಚದಿಂ ಕೆಂಬಣ್ಣವಂ
ಹಿರಿರವಿಯು ಸುಡುಮರೆತ , ಮಂದಮಾರುತ ಬೀಸಿ
ನರಬಣ್ಣಿಸಲಳವೇ ಸಂಜೆಬಿಸಿಲ