Oct 162012
“ವಿಪ್ರೋ”(Wipro), “ಸತ್ಯಂ”(Satyam),”ಟಿಸಿಎಸ್”(TCS), “ಗೂಗಲ್”(Google), ಈ ಪದಗಳನ್ನು ಉಪಯೋಗಿಸಿ ಮಳೆಯನ್ನು ವರ್ಣಿಸಿ. ಛ೦ದಸ್ಸಿನ ಆಯ್ಕೆ ನಿಮ್ಮದೇ.
“ವಿಪ್ರೋ”(Wipro), “ಸತ್ಯಂ”(Satyam),”ಟಿಸಿಎಸ್”(TCS), “ಗೂಗಲ್”(Google), ಈ ಪದಗಳನ್ನು ಉಪಯೋಗಿಸಿ ಮಳೆಯನ್ನು ವರ್ಣಿಸಿ. ಛ೦ದಸ್ಸಿನ ಆಯ್ಕೆ ನಿಮ್ಮದೇ.
ವರಕವಿಪ್ರೋತ್ಸಾಹಹೇತುವು
ಸುರರಿಮಿಳೆಗಭಿಷೇಚವಯ್, ಪರಿ-
ಹರಿಸಲುಳುವವನಶ್ರುವ೦ ಸತ್ಯ೦ಬುಧಾರೆಯಿದಯ್,
ವಿರಹಿಗಳನುತ್ಕಟಿಸಿ ಎಸೆಗಲ-
ವರೊಳು ರಾಸಿಕಭಾವ, ಕಾರಣ
ಕರುವಿಗೂ ಗಲ್ಗಲನೆ ಹಸುರಿನ ಹುಲ್ಲಿನಾಟಕಿದಯ್
ಸತ್ಯ೦ = unfailing
ಸ್ವಲ್ಪ ಅನ್ವಯ ಕ್ಲೇಶವಿದೆ
OMG…I bowdown to this zeal and spirit.
ಸತ್ಯ೦ + ಅ೦ಬುಧಾರೆ = ಸತ್ಯಮ೦ಬುಧಾರೆ. adjust ಮಾಡಿ
ಕಾರಣ ಕರುವಿಗೂ – ಅರ್ಥವಾಗಲಿಲ್ಲ. ವಿವರಣೆ please?
use of words embedding dattapadas are very peculiar and made it look this difficult one, so easy..
ಶ್ರೀಶ, ಕರುವಿನ ಬಗ್ಗೆ ವಿವರಣೆ ಕೊಡೋದು ಪದ್ಯ ಬರೆದ ನನಗೂ ಕಷ್ಟವಾಗುತ್ತಿದೆ 😉
ಆದರೂ ಪ್ರಯತ್ನಿಸುತ್ತೇನೆ, ಹೀಗೆ ಅನ್ವಯ:
ಕರುವಿಗೂ ಗಲ್ಗಲನೆ ಹಸುರಿನ ಹುಲ್ಲಿನಾಟಕಿದಯ್ ಕಾರಣ = ಅ೦ದರೆ, ಮಳೆಯಿ೦ದ ಹಸುರಿನ ಹುಲ್ಲುಗಾವಲು ಬೆಳೆದು ಕರುವಿನ ಆಟಕ್ಕೆ ಮಳೆಯೇಕಾರಣ ಅ೦ತ, ಹೆಚ್ಚು ಜೆಗ್ಗಿದ್ದೇನೆ…
ಏನು ಮಾಡಲಿ ಸುಲಭೋಪಾಯ ಹೊಳೆಯುತ್ತಿಲ್ಲ…
ಸತ್ಯ೦ಬು -> ಎಡವಟ್ಟನ್ನು ತಿದ್ದಿದ್ದೇನೆ
ವರಕವಿಪ್ರೋತ್ಸಾಹಹೇತುವು,
ಸುರರಿಮಿಳೆಗಭಿಷೇಚವಯ್, ಪರಿ-
ಹರಿಸಲುಳುವವನಶ್ರುವ೦ ಸತ್ಯ೦ಬೆನಿಪಧಾರೆ ,
ವಿರಹಿಗಳನುತ್ಕಟಿಸಿ ಎಸೆಗಲ-
ವರೊಳು ರಾಸಿಕಭಾವ, ಕಾರಣ
ಕರುವಿಗೂ ಗಲ್ಗಲನೆ ಹಸುರಿನ ಹುಲ್ಲಿನಾಟಕಿದಯ್
ಸೋಮಾ! ಇದೇಮಿ ತೆನ್ಗುನ್
ಪ್ರೇಮಾಸ್ಪದಮೈನ ತೀರು ಪಿಲುವಗ ಕವಿತನ್|
ಸ್ತೋಮಿಸಿತೇಂ ಬಗೆ? ಚೋದ್ಯಂ
ಸೀಮೆಯನರಿಯಯ್ ವಚೋವಿಲಾಸದ ಪರಿಯಾ!!:-)
ಗಣೇಶ್ ಸರ್,
ತು೦ಬಾ ತಲೆಕೆರೆದುಕೊ೦ಡೆ, ನೀವು ಬರೆದಿರುವುದೇನು ಎ೦ದು…
ಈಗ ಪಕ್ಕದಮನೆಯ ಸ್ನೇಹಿತನ ನೆರವು ತೆಗೆದುಕೊ೦ಡು ಬರೆಯುತ್ತಿದ್ದೇನೆ… 🙂
ತೆಲುಗುಲೊ ರಾಸಿ೦ದೆ೦ದುಕು
ತೆಲಿಸಿ೦ದಿಪ್ಪುಡು ಪ್ರಯೋಗಮಿದಿ ಮೀವಲ್ಲಾ 🙂
ಸತ್ಯ೦ + ಎನಿಪ = ‘ಸತ್ಯ೦ಬೆನಿಪ’ವೂ ಆಗುವುದಿಲ್ಲವೆ೦ದು ತಿಳಿಯಿತು, ಇನ್ನೊಮ್ಮೆ ಪ್ರಯತ್ನಿಸುತ್ತಿದ್ದೇನೆ…
ವರಕವಿಪ್ರೋತ್ಸಾಹಹೇತುವು,
ಸುರರಿಮಿಳೆಗಭಿಷೇಚವಯ್, ಪರಿ-
ಹರಿಸಲುಳುವವನಶ್ರುವ೦ ಸತ್ಯಮಿದೆನಿಪಧಾರೆ,
ವಿರಹಿಗಳನುತ್ಕಟಿಸಿ ಎಸೆಗಲ-
ವರೊಳು ರಾಸಿಕಭಾವ, ಕಾರಣ
ಕರುವಿಗೂ ಗಲ್ಗಲನೆ ಹಸುರಿನ ಹುಲ್ಲಿನಾಟಕಿದಯ್
“ಇಳೆಗೆ ಮಳೆ”
ಮೋದದೀಪರಿ ವೀಕ್ಷಣೆ |
ಮೋಡದ ಸ”ವಿ ಪ್ರೋ”ಕ್ಷಣೆ ||
ಗುಡು”ಗು ಗಲ್ಲೆ”ನೆ ಒಮ್ಮೆಗೆ |
ಉಡುಗಿ ಮೆಲ್ಲನೆ ಸುಮ್ಮಗೆ ||
ಮಳೆಯು ಸುರಿದಿದೆ ಭೂಮಿಗೆ |
ಗೆಳೆಯು ಸುಳಿದಿದೆ ಭಾನಿಗೆ ||
ಬೆಳೆಯ ನಾ”ಟಿಸಿ ಎಸೆ”ದಿದೆ |
ಇಳೆಯ ನಾಚಿಸಿ ಬೆಸೆದಿದೆ ||
ಇದುವೆ ಬಾನಿನ ನಿತ್ಯತೆ |
ಅದುವೆ ಬಾಳಿನ “ಸತ್ಯ”ತೆ ||
ಜೀವ ಜಗಕಿದು ರಕ್ಷೆಯು |
ದೇವ ನೀಡುವ ಭಿಕ್ಷೆಯು ||
(ಸವಿ = ಹಿತವಾದ , ಗಲ್ಲೆನೆ = ಘಲ್ಲೆನೆ = ತಾಗು, ಅಲುಗಾಡು)
“ಮ(ಹಿ)ಳೆ”ಯನ್ನು ವರ್ಣಿಸಬೇಕೆಂದು ತಪ್ಪಾಗಿ ಓದಿಕೊಂಡಿದ್ದೆ. ಸೋಮ ಸರ್ ರವರ ಪದ್ಯ ಓದಿದಮೇಲೆ “ಮಳೆ”ಯನ್ನು ಎಂದು ಗಮನಿಸಿದ್ದು !!
ನೀವು ದಯಮಾಡಿ ನಿಶ್ಚಿತವಾದ ಛಂದಸ್ಸುಗಳಲ್ಲಿ ಬರೆಯಿರಿ. ಎಷ್ಟು ಬಾರಿ ತಿಳಿಸಿದರೂ ಅದೇಕೆ ನಿಮ್ಮ ಜಾಡಿನ ಹಠದಿಂದ ಹೊರಬರುತ್ತಿಲ್ಲ? ಪದ್ಯಪಾನವು ಮುಖ್ಯವಾಗಿ ಸಾಂಪ್ರದಾಯಿಕಚ್ಛಂದಸ್ಸುಗಳ ಮೂಲಕ ಪದ್ಯರಚನೆಗೆ ಹೊರಟಿದೆ. ಅದೇಕೆ ನೀವು ನಮ್ಮ ಮೂಲೋದ್ದೇಶವನ್ನೇ ಅರ್ಥಮಾಡಿಕೊಳ್ಳುತ್ತಿಲ್ಲ? ನಿಮಗೆ ಭಾಷೆಯ ಮೇಲೆ ತಕ್ಕಮಟ್ಟಿನ ಹಿಡಿತವಿದೆ. ಕಲ್ಪನೆಗಳಿಗೂ ಕೊರತೆಯಿದ್ದಂತೆ ಕಾಣದು. ಉಳಿದದ್ದು ಛಂದಸ್ಸಿನ ಹಿಡಿತ. ಅದು ಪ್ರಾಮಾಣಿಕವಾಗಿ ದುಡಿದಲ್ಲದೆ ಬಾರದು.ಯಾವುದೇ ವಿದ್ಯೆಯ ಬಗೆಯಾದರೂ ಹೀಗೆಯೇ ತಾನೆ! ದಯಮಾಡಿ ನೀವು ಕಂದ-ವೃತ್ತ-ಷಟ್ಪದಿ-ಚೌಪದಿಗಳಂಥ ಬಂಧಗಳಲ್ಲಿಯೇ ರಚಿಸಿರಿ. ಇಲ್ಲವಾದರೆ ಇಲ್ಲಿ ಬರೆಯುವ ಉಳಿದವರಿಗೆ ನೀವೇ ಅಡ್ಡದಾರಿಯನ್ನು ತೋರಿಸಿದಂತಾಗುತ್ತದೆ. ಕಟುವಾಗಿ ಹೇಳಿದ್ದಕ್ಕೆ ಬೇಸರಿಸದಿರಿ:-)
ಗಣೇಶ್ ಸರ್,
ನನ್ನ ಈ ಉತ್ಸಾಹ ರಗಳೆಗೆ ಕ್ಷಮೆಯಿರಲಿ.ದಯವಿಟ್ಟು ತಪ್ಪುತಿಳಿಯಬೇಡಿ. ಮುಂದೆ ಛಂದೋಬದ್ಧವಾಗಿಯೇ ಬರೆಯಲು ಪ್ರಯತ್ನಿಸುತ್ತೇನೆ.
ಬಲ್ ತ್ರಾಸ ಕೊಟ್ಬುಡ್ತೋ! ವಿಸಂಧಿದೋಷಗಳು ನುಸುಳಿರಬಹುದು. ಕೊನೆಯಪಾದವಂತೂ ಶಿಥಿಲವಾಗಿದೆ. ಅದನ್ನು ಚತುಷ್ಪಾದಿ ಎನ್ನಬಹುದೇನೋ.
ಶಾ|| ವಿಪ್ರೋತ್ತಮರ್ ಮಳೆಯನಾಶಿಸಿ ಯಜ್ಞಗೈವರ್
ಸಪ್ರೇಮದಿಂ ಋಚವ ಪೇಳುತೆ ಸತ್ಯಮಂತ್ರರ್*|
ಸುಪ್ರೀತದಂ ಮಳೆಯ ಗಿಟ್ಟಿಸಿಯೆ ಸ್ವಪೂರ್ಣರ್
ಆ ಪ್ರಾಂತದಲ್ಲಿ ಕೊನೆಗೂ ಗಲಿತಂ ಅಕಾಲಂ||
(*ಸತ್ಯಮಂತ್ರರ್ = They whose words are true or effective)
ಒಳ್ಳೆಯ ಪ್ರಯತ್ನ.
ಇದು ಶಾ|| ಅಲ್ಲ ವ|| ಅಲ್ಲವೇ?
ಒಳ್ಳೆಯ ರೀತಿಯಲ್ಲಿಯೇ ಪರಿಹಾರಕ್ಕೆ ಯತ್ನಿಸಿ ತುಂಬ ಸಫಲರಾಗಿದ್ದೀರಿ. ಧನ್ಯವಾದ. ನೀವೇ ಲೋಪಗಲನ್ನು ಬಲ್ಲವರಾದ ಕಾರಣ, ಅದನ್ನು ಮುಕ್ತವಾಗಿ ಹೇಳಿಯೂ ಇರುವ ಕಾರಣ ನನಗೆ ಭಲೇ ಭಲೇ ಎನ್ನುವುದಲ್ಲದೆ ಮತ್ತಾವ ಕೆಲಸವೂ ಇಲ್ಲ:-). ವಸಂತತಿಲಕದಂಥ ಮಧ್ಯಮಗಾತ್ರದ ಹಾಗೂ ಕನ್ನಡಕ್ಕೆ ತುಸುಮಟ್ಟಿಗೆ ತೊಡಕೂ ಆಗಬಹುದಾದ ವೃತ್ತದಲ್ಲಿ ಆಚ್ಚುಕಟ್ಟಾಗಿ ರಚಿಸಿದ್ದೀರಿ.
ನನ್ನ ಸ್ವಲ್ಪದ ಸವರಣೆ ಹೀಗಿದೆ:
………………………………….
……………………………………..
………………..ಗಿಟ್ಟಿಸಿಯೇ ಕೃತಾರ್ಥರ್
…………………….ಗಲಿತಂ ವಿಪಾಕಂ||
(ವಿಪಾಕ = ಪಾತಕ > ಕಷ್ಟ > ಬರಗಾಲ)
ಕಾರಂತ ಶ್ರೀಶಾಚಾರ್ಯ,
ಒಂದೂ ತಿಳೀವಲ್ಲದಾಗಿದೆ ನೋಡಪ. ಅಂವ, ಆ ಹಾದಿರಂಪ, ಅವಂಗ ತೋಚಿದ ಹಾಂಗ ‘ಶಾರ್ದೂಲವಿಕ್ರೀಡಿತ’ ಅಂದಾನ. ನೀ ‘ವಸಂತತಿಲಕ’ ಅಂತಿ. ನನ್ನನ್ನ ಕೇಳಿದರ ನಾ ಏನ ಹೇಳ್ಲೋ ಮಾರಾಯ?! ನಿನ್ನನ್ನ ನೀ ಬಹಳ ಶಾಣ್ಯಾ ಅಂತ ಮಾಡೀಯೇನ? ಬೆರಿಕಿ ಇದಿ ಮ.. ನೀ.
ಮಾ,
ತಮ್ಮ ಮೆಚ್ಚುಗೆ ಮುದ ತಂದಿದೆ. ‘ಗಿಟ್ಟಿಸಿಯೇ ಕೃತಾರ್ಥರ್’ನಲ್ಲಿ ‘TCS’ ಇಲ್ಲ. ಅದ್ಕೇಯ ಯೋಳುದ್ದು ‘ಬಲ್ತ್ರಾಸ ಕೊಟ್ಬುಡ್ತೂಂ’ತ!
ನನ್ನ ತಪ್ಪುಗಳನ್ನು ನಾನೇ ಹೇಳಿಕೊಂಡುದಕ್ಕೆ ನೀವು “ಭಲೆ-ಭಲೆ” ಎನ್ನಲಾಗದು. “ಎಲ್ಲ ಗೊತ್ತಲ್ಲ. ಸರಿಪಡಿಸಿಕೊಂಡು ಬರೆಯೋಕೆ ಏನು ಧಾಡಿ ಇವನಿಗೆ?” ಎನ್ನಬೇಕು ನೀವು.
ಪರಿಣತಮೀ ಪರಾಪ್ತಛವಿ ಪ್ರೋಕ್ಷಣ ಶಕ್ತಿವಿಶುದ್ಧ ವೈಭವಂ
ಸ್ಥಿರವಹ ಸತ್ಯವೇನೊಳಗೆ? ಚಾಲಿತರಾತ್ರಿದಿನಂ ಋತುಕ್ರಮಂ
ತಿರೆಜಲಬೆಂಕಿಗಾಳಿ ನಭವಂಟಿಸಿ ಯಸ್ಖಲಭಾವದಿಂ ಜಗಂ
ನರಖಗಕುಂಮೃಗಾಳಿಗು ಗಲಂಗಲ ಧೋಯೆನೆಬಿಳ್ದದಾರಯೇಂ
ಈ ಸೃಷ್ಟಿಯ ಸ್ವರೂಪ ಏನೆಂದು ಕಲ್ಪಿಸಿಕೊಂಡರೆ ಅದೊಂದು ಅವಿರಾಮ ತ್ರಿಗುಣ ಪರಿಭ್ರಮಣ ಕರ್ಮವೆನ್ನಿಸುತ್ತದೆ. ಅದಕ್ಕೆ ಕಾರಣ ಆ ಪರಾಶಕ್ತಿಗೆ ಆಪ್ತವಾದ ಕಾಂತಿಯ ಪ್ರೋಕ್ಷಣೆ. ನಮಗೆ ತಿಳಿಯದ ಯಾವೊದೋ ಸತ್ಯಕೇಂದ್ರದಿಂದ ಚಾಲಿತವಾದ ಪ್ರಕೃತಿಯ ಪರಿಣತಿಯೇ ದಿನರಾತ್ರಿಋತುಕ್ರಮಚಲನಾ ವೈಭವ. ಅದು, ವಿಶ್ವದ, ಕ್ಷೀರಪಥಗಳ, ಸೌರಮಂಡಲಗಳ, ಗ್ರಹಗಳ ಆಕರ್ಷಣ ವಿಕರ್ಷಣಗಳ ಪ್ರವಾಹವೇ ಆಗಿದೆ. ಪಂಚಭೂತಗಳು ಬಿಡಿಯಾದ ಪ್ರಕೃತಿಯ, ಇಡಿಯಾದ ದೇಹಗಳ, ನೀರು-ಆವಿ- ಮೋಡ- ಮಳೆಯ ಆವರ್ತನ ನರ್ತನ ಕ್ರಮ, ಉತ್ಪತ್ತಿ, ಸ್ಥಿತಿ, ವಿನಾಶಕ್ಕೆ ಸಂಕೇತವೆಂಬಂತೆ ಈ ಮಳೆ ಭೂಮಿಯನ್ನೂ ಮನುಜ ಮೃಗಾದಿಗಳನ್ನೂ ತಣಿಸಲು ಗಲಗಲರವದೊಡನೆ ಧೋ ಎಂದು ಸುರಿದಿದೆ.
ಸೋಮಶೇಖರರ ಸವರಣೆಯೊಂದಿಗೆ ಇದೋ ಈ ತೊದಲ ಭಾಮಿನೀಷಟ್ಪದಿ:
ಪರಕೆ ಫಲಿಸಿತು ಸತ್ಯಮುಲಿಪರ !
ಕೆರೆಯು ತುಂಬಿತು ಕುಸುಮವರಳಿತು |
ಸರಿಯಲಿ ರವಿ ಪ್ರೋಕ್ಷಿಸುತೆ ಮಳೆಯಿಳೆಗೆ ವರಜಲವ ||
ಧರಿಸಿ ಶರವನು ಮಾರಚಾಪದಿ
ಶರದನೊಡೆಯಲು ನವಿಲುಗೂಗಲಿ |
ಬರದ ಘೋರಾಸುರನ ಕುಟ್ಟಿಸಿ ಎಸೆದ ಮಳೆರಾಯ ||
(ಸರಿ: ಬೆಟ್ಟದ ಜಾರು ಅಥವಾ ಪ್ರಪಾತ. ಶರ: ನೀರು/ಬಾಣ; ಬರ: ಕ್ಷಾಮ, ಬೇಕಂದೇ ವಿಸಂಧಿ-ದೋಷ ಮಾಡಿದೆ)
ಮೊದಲ ಪದ್ಯದೆ ಚಾರುತರಮೀ
ಪದಗಳ೦ ಪೊ೦ದಿಸುತಲೊರೆಯಲ್
ಹದವು ಸರಿಯೇಮೆನುತೆ ತೋರಿಪ ಸೌಮ್ಯಭಾವನೆಗೆ
ಮುದದೊಳೋದುತ ಭಳರದೆನ್ನುತ-
ಲಿದನು ಪದ್ಯದ ತಾಣದೊರೆಯೆನ-
ಲದನೆ ಸವರಣೆಯೆ೦ದು ಪೇಳುವ ರಾಘವೇ೦ದ್ರಗೆ ಜೈ 🙂
ಛವಿಯ ಪೆರ್ಚಿಸಿಕೊಂಬಳೀ ಭುವಿ ಪ್ರೋಕ್ಷಣದಿ
ಅವಿತವಳ ಕನಸಿಗೂ ಗಲ್ಲಣೆ ನಿಜಂ
ಸವಿಬಯಕೆಗಳ ದಾಂಟಿಸಿ ಎಸೆವುದೊಸತ ನಿತ್ಯ
ತವಕಿಪಳ್ ಮಳೆಯ ಬರವಿಗಿದು ಸತ್ಯ
ವರವಿಪ್ರೋತ್ತಮರಾಶಿಸಿ
ಕರೆಯಲ್, ಸತ್ಯಂಗೊರೆರ್ದ ವಚನವು ಮಿಂಚಲ್
ಕರಿಮುಗಿಲಾಟಿಸಿ ಎಸೆಯಲ್
ನೆರೆಕಂಗೂಗಲ್, ಅದೋ! ಮಳೆಯರಸಿಯೇಳ್ದಳ್
ಆಟಿಸು = ಅಲ್ಲಾಡಿಸು, ಊಗು = ತೂಗು, ಜೋತಾಡು, ನೆರೆಕಂಗೂಗಲ್ = ನೆರೆದ ಕಂಗು ಊಗಲ್
[ಇಲ್ಲಿ ೮ ತಿಂಗಳ ನಿದ್ರೆಯಲ್ಲಿರುವ ಮಳೆಯರಸಿಯನ್ನು ಎಚ್ಚರಿಸುವ ಕಲ್ಪನೆಯಿದೆ]
ಎನಿತು ಮಧುರ”ವೀ ಪ್ರೋ”ಕ್ಷಣ ಧರೆಗಂ |
ಮನಕೆ ಮುದವ ನಾ”ಟಿಸಿಯೆಸೆ” ಬಂಧಂ ||
ಕೊನೆ”ಗೂ ಗಲಿ”ಬಿಲಿ ಕರಗಿರೆ ಸಖ್ಯಂ |
ದಿನಕೂ ಕಲಿನಲಿ ಕಂಡಿದೆ “ಸತ್ಯಂ” ||