Nov 132012
 

ಪದ್ಯಪಾನಿಗಳಿಗೆ ದೀಪಾವಳಿಯ ಶುಭಾಶಯಗಳು

ದೀಪಾವಳಿಯನ್ನು ಪದ್ಯದ ಪಟಾಕಿಗಳ ಮೂಲಕ ಸಂಭ್ರಮಿಸಿ:

  15 Responses to “ಪದ್ಯಸಪ್ತಾಹ – ೪೬; ದೀಪಾವಳಿಯ ವರ್ಣನೆ”

  1. ಆರದುತ್ತಿ ಬಿತ್ತ ಹತ್ತಿ
    ಯಾರದೊತ್ತಿ ಬಂದ ಬತ್ತಿ
    ಸೇರಿತಾವ ಗಾಣದೆಣ್ಣೆ
    ಏರಿದಾವ ಕಾವ ಕಾಣೆ |

    ಹಾರಿ ಕಂಡುದಾವದರುಣ
    ಹೀರಿತಂದುದಾವ ಕರುಣ
    ತೂರಿಬಂದುದುರಿಯ ಗುರಿಯು
    ತೋರಿಬಂದ ಹರಿಯ ಗುಡಿಯು |

  2. 2ನೇ ಪದ್ಯದ 2ನೇ ಸಾಲು, ಸ್ವಲ್ಪ ಬದಲಾವಣೆ
    “ಹೀರಿ ಕಂಡ ಕಾವ ಕರುಣ”

  3. ದೀಪಾವಳಿ ಪಟಾಕಿಗಳನ್ನು ಮೌಕ್ತಿಕಮಾಲೆ ವೃತ್ತದಲ್ಲಿ ಹತ್ತಿಸಿದ್ದೀನಿ

    ಚಂಡವಿತಂಡಂ ಗಡ ಸಿರಿವೆಂಡಂ |
    ದಂಡಕಮಂ ಮತ್ತೊಡನಣುಗುಂಡಂ |
    ಗಂಡರ ತಂಡಂ ಹೊಡೆವುದಖಂಡಂ |
    ಡಂಡ ಡಡಂ ಡಂ ಗುಡುಗುವುದಂಡಂ ||

    ವಿತಂಡ- ಆನೆ (ಆನೆ ಪಟಾಕಿ)
    ಸಿರಿವೆಂಡು= ಸಿರಿ+ಪೆಂಡು- ಲಕ್ಷ್ಮಿ (ಲಕ್ಷ್ಮಿ ಪಟಾಕಿ)
    ದಂಡಕ- ಸರ (ಸರ ಪಟಾಕಿ)
    ಅಣುಗುಂಡು- atom bomb
    ಗಂಡರ್- ಧೈರ್ಯವಂತರು

    • Cool!!!

    • ಸ್ಫೋಟಕಾಸ್ಫೋಟನಾಟೋಪಮೇ ಟೀಕಿತಂ
      ಧಾಟಿಯಿಂ ಧಟ್ಟಿಪಾರ್ಭಾಟಮೇ ಟಂಕಿತಂ|
      ಝೋಟಿಕಾssಖೇಟಿಕಾಪ್ರಖ್ಯಮೀ ಟುಂಟುಕಂ
      ಚಾಟುಪದ್ಯಂ ಚಟಚ್ಚೇಟಮಾರ್ಭಾಟಿಗಂ||

      • ಧೂರ್ಜಟಿ ಜಟೆಯಂ ಝಟ್ಟನೆ
        ನಿರ್ಝಟಿಸಿ ಭರಾಟಿಯಿಂದ ನೆಟ್ಟನೆ ನೆರೆವಾ |
        ಜಜ್ಝಟಿ ನಿಮ್ಮಯ ಪದ್ಯಂ
        ಉಜ್ಝಟಿ ಸರಿಸಿದೊಡೆಯರ್ಥ ಥಟ್ಟನೆ ತಿಳಿಗುಂ ||

        • ಧನ್ಯವಾದ; ಆದರೆ ಜಜ್ಝಟಿ ಮತ್ತು ಉಜ್ಝಟಿ ಎಂದರೆ ಏನೆಂದು ತಿಳಿಯಲಿಲ್ಲ:-)
          ನಿಮ್ಮ ಕಂದದ ಶೈಲಿ ಮತ್ತು ಭಾಷಾಶುದ್ಧಿಗಳು ಮೆಚ್ಚುವಂತಿವೆ. ನಿಮ್ಮ ಪೂರ್ವಪರಿಚಯ ನನಗಿದೆಯೇ? ಇಲ್ಲವಾದರೆ ದಯವಿಟ್ಟು ಮಾಡಿಕೊಡುವಿರಾ?

          • Thanks

            ಜಝ್ಝಟಿ- ಭೋರ್ಗರೆವ ನೀರು
            ಕುಜ್ಝಟಿ- ಇರಿಚಲು, ಇಬ್ಬನಿ

            ಕ್ಷಮಿಸಿ ಕೊನೆಯ ಪಾದದಲ್ಲಿ ಕುಜ್ಝಟಿ ಎಂದಿರಬೇಕಿತ್ತು. ತಪ್ಪಾಗಿ ಉಜ್ಝಟಿ ಎಂದು ಬಿದ್ದಿದೆ. ನನ್ನ ಪರಿಚಯ ಸ್ವಲ್ಪದಲ್ಲೆ ಕೊಡ್ತೀನಿ.

  4. Srikanthare :), tumba chennagide

  5. ಭಪ್ಪರೆ! ಪಟಾಕಿ ಸುಡುವ೦
    ಠಪ್ಪನೆ ಢಬ್ಬೆನೆ ಢವೀಲು ಢಮ್ಮೆನುತೀಗಳ್
    ಗಪ್ಪೆನುತಿರ್ಪೆಯೆ? ಭಯವೇ-
    ನೊಪ್ಪುವುದೇ೦ ಕಣ್ಗೆ ಸುರ್ರುಫರ್ಗಳ್ ಫುರ್ಗಳ್?

    • ಮೆಚ್ಚುಗೆಗೆ ಧನ್ಯವಾದ ಸೋಮರವರೆ.ನಿಮ್ಮ ಕಂದ ಮುದ್ದಾಗಿದೆ, ಕೊನೆ ಅರ್ಥವಾಗ್ತಿಲ್ಲ (ಸುರ್ರುಫರ್ಗಳ್ ಫುರ್ಗಳ್)

      • ಧನ್ಯವಾದ ಶ್ರೀಕಾ೦ತ್ ಅವರೆ,

        ಧೈರ್ಯದವರಿಗೆ ಠಪ್ ಢಬ್ ಢವೀಲ್ ಢಮ್ ಪಟಾಕಿ, ಇಲ್ಲದವರಿಗೆ ಸುರ್ರುಫರ್ಗಳ್ ಫುರ್ಗಳು (ರಾತ್ರಿ ಸುಡುವ ಬೆಳಕಿನ ಪಟಾಕಿಗಳು – ಸುರ್, ಫರ್, ಫುರ್… ಎ೦ಬಷ್ಟೇ ಶಬ್ಧದಿ೦ದ ಕಣ್ಣಿಗೆ ಮುದನೀಡುವವು)

  6. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

    *ಸರಪಟಾಕಿ, ಹೂಕುಂಡ:*
    ಮೊದಲಗ್ರೇಸರನಿಂಗೆ ತೋರ್ದ ತಿಳಿವೇ ಸಂವಾಹನಂಗೊಂಡು ತ-
    ಪ್ಪದೆ ಸಾಗಲ್ಕಡೆಗಿರ್ಪನತ್ತಣಿಮಿದಯ್ ವೇಣೀಕೃತಸ್ಫೋಟಕಂ
    ಪದುಪಿಂದಾಂತ ವಿಭೂತಿಯಂ ಚಯನದಿಂದನ್ಯರ್ಗೆ ಕೋ ಎಂಬುದೇಂ
    ಮುದದಿಂ ನೀಳ್ದಪ ಪುಷ್ಪಕುಂಡತಪನಂ ಸನ್ಯಸ್ತಭಾವೃಷ್ಟಿಯಿಂ

    *Cracker-role* is akin to the knowledge attained by first person (leader) and which gets conducted to the last in the chain with full efficiency.
    *Flower pot*’s bright and beautiful discharge reminds the sage who renounces every possession he has ammassed with vigour.

    *Rocket*
    ಕಾಲದೇಶದನುವರ್ತಿಯಂಕಮಂ
    ಪಾಲಕಂ ರಚಿಸೆ ಮರ್ತ್ಯರಾಟಮೇ
    ನೀಲಿಯಾಂತ ತೆರೆಯೊಳ್ ದ್ಯತಿಸ್ಫುರ-
    ಲ್ಲೀಲೆ ಪೂಗಣೆಗಳಂತೆ ಬಾನಿನೊಳ್
    *Rocket* represents flashes in the sky akin to temporary flamboyance of individuals life in time and space continuum of cosmic order.

    *ಭೂಚಕ್ರ*
    ಸಿಂಗರಂಗೊಳಿಪರಲ್ತೆ ರಾತ್ರಿಯೊಳ್
    ರಂಗವಲ್ಲಿಯ ವಿಲಾಸಚಕ್ರದಿಂ-
    ದಂಗಳಂ ಬೆಳಗೆ ವರ್ತುಲಂಗಳಿಂ
    ಕಂಗಳುತ್ಸವಮನೀವುದೊಳ್ಪಿನಿಂ
    *Ground Chakra* is pleasing to eyes like circular Rangolis laid out in night in front of house

    *ನಭದಲ್ಲಿ ಸಿಡಿಸುವ ಪಟಾಕಿಗಳು*
    ಬೆಳಕಿsನs ಬೀಜಮsನೊಲವಿಂದೆs ಬಿತ್ತsಲುs
    ಫಲಮೀವುದಲ್ತೆs ಮರನಾಗಿ ಒಮ್ಮೆಲೆ
    ನಲಿವಿಂದೆs ಕೃಷಿಕಂ ಬೆರಗಾಂಪಂ
    *Sky crackers*
    The farmer who planted a spark is astonished to see the seed developing into gigantic flowering tree within no time

    *ಸುರುಸುರಯಬತ್ತಿ*
    ಬೆಳಕಿನ ಮಷಿಯಿಂದೊರೆವರ್
    ತಿಳಿವಿಂಗೊಗ್ಗದ ವಿಶೇಷಕಾವ್ಯಮನೆಲ್ಲರ್
    ಕಳೆಯಲ್ಕಕ್ಷರನಿಕರಂ
    ಪುಳುಕಂಗೊಳ್ಳುತಲದೇಕೊ ಕುಣಿವರ್ ಲೋಗರ್
    *Sparklers*
    From ink of sparkle people are writing a special epic. Its amazing to note that they are enjoying even when their writing is lost without any recording.

    ಮತ್ತೊಮ್ಮೆ ಶುಭಾಶಯಗಳು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)