Jul 272022
 

೧. ಕೊಂಕುಮಾತು

೨. ಅನ್ನದಲ್ಲಿ ಕಲ್ಲು

೩. ನವವಸ್ತ್ರ

ಸಮಸ್ಯೆ:
ಸರೋಜಂ ಸರೋಜಂ ಸರೋಜಂ ಸರೋಜಂ 

सरोजं सरोजं सरोजं सरोजम् 

  6 Responses to “ಪದ್ಯಸಪ್ತಾಹ ೪೫೭”

  1. मुकुन्दाननस्यास्ति किं काव्यमानम्?
    तदीयाच्च नाभेः प्ररूढं सुमं किम्?
    रमाहस्तभूषं किमास्तेऽसनं किम्?
    *सरोजं सरोजं सरोजं सरोजं*

  2. ನರರ್ಗಂ ಸ್ವಜನ್ಮಸ್ಥಳಪ್ರೀತಿಯಿರ್ಪಂ
    ತಿರಲ್ ಬ್ರಹ್ಮಗಜ್ಞಾನಿ ಕೇಳಲ್ಕದೇನೆಂ
    ದುರುಪ್ರೇಮದಿಂ ಪೇಳ್ದುವಯ್ ನಾಲ್ಮೊಗಂಗಳ್
    ಸರೋಜಂ ಸರೋಜಂ ಸರೋಜಂ ಸರೋಜಂ

    ಹೇಗೆ ನರರಿಗೆ ಸ್ವಜನ್ಮಸ್ಥಳದ ಮೇಲೆ ಪ್ರೀತಿಯಿರುತ್ತದೆಯೋ ಹಾಗೆಯೇ ಬ್ರಹ್ಮನಿಗೂ ಉಂಟು. ಯಾವನೋ ಒಬ್ಬ ಅಜ್ಞಾನಿ ಅದು(ಹುಟ್ಟೂರು) ಯಾವುದೆಂದು ಕೇಳಿದಾಗ(ಬ್ರಹ್ಮನನ್ನು ನಿನ್ನ ಹುಟ್ಟೂರು ಯಾವುದೆಂದು ಕೇಳಿದಾಗ) ಅವನ ನಾಲ್ಕೂ ಮುಖಗಳೂ ಸರೋಜ ಎಂದು ನುಡಿದವು(ನಾಲ್ಕು ಮುಖಗಳೂ ಹೇಳಿದ್ದರಿಂದ ಸರೋಜ ಸರೋಜ ಸರೋಜ ಸರೋಜ ಎಂದಾಗುತ್ತದೆ.)

  3. ವಿರಾಮಂ ವಿಸರ್ಜಿರ್ಪೆ!! ಈ ಪ್ರೆಶ್ನೆ ಕಾಡಲ್
    ಕರಾಮತ್ತ ತೋರಲ್ಕೆ ನಾನಾ ವಿಭಾಗಂ
    ನರೋತ್ತುಂಗದೊಳ್ಗೆ೦ ಬರೀ ಯೋಚಿಸಲ್ಕೆಂ
    ಸರೋಜಂ ಸರೋಜಂ ಸರೋಜಂ ಸರೋಜಂ ।।

    • ಪದ್ಯದ ಭಾವ ಸ್ಪಷ್ಟವಾಗಲಿಲ್ಲ. ವಿವರಿಸಬಹುದೇ?
      ಭಾಷಾದೃಷ್ಟಿಯಿಂದ ಒಂದೆರಡು ಸವರಣೆಗಳು.
      ಕರಾಮತ್ತು – ಕರಾಮತಿ ಎಂಬ ಅರಬ್ಬೀ ಮೂಲದಿಂದ ಬಂದ ಶಬ್ದ. ವೃತ್ತ-ಕಂದಗಳು ಸಾಮಾನ್ಯವಾಗಿ ಹಳಗನ್ನಡದಲ್ಲಿ ಸೊಗಯಿಸುವುದರಿಂದ ಇಂತಹ ಶಬ್ದಗಳನ್ನು ಆದಷ್ಟು ನಡುಗನ್ನಡಕ್ಕೆ ಸೀಮಿತಗೊಳಿಸಿಕೊಂಡರೆ ಒಳ್ಳೆಯದು.
      ಒಳ್ಗೆ ಎಂಬ ರೂಪ ಅಸಾಧು. ಅದು ಒಳ್ ಆಗಬೇಕು. ಬರಿ ಎಂದು ಹ್ರಸ್ವವಾಗಬೇಕು. ಯೋಚಿಸಲ್ಕೇಂ ಎಂದು ದೀರ್ಘವಾಗಬೇಕು.

      • ವಿರಾಮಂ ವಿಸರ್ಜಿರ್ಪೆ!! ಈ ಪ್ರೆಶ್ನೆ ಕಾಡಲ್ –
        ನರೋತ್ತುಂಗದಲ್ಲೇ ಸದಾ ಯೋಚಿಸಲ್ಕೇಂ
        ನರೇಂದ್ರೋಕ್ತಿಯೊಳ್ಸೆಳ್ದ ಸಂಕೇತವೇನುಂ ?
        ಸರೋಜಂ ಸರೋಜಂ ಸರೋಜಂ ಸರೋಜಂ ।।

        ತಿದ್ದುವ ಸವರುವ ಪ್ರಯತ್ನ ಮಾಡಿದ್ದೇನೆ ..!!
        ವಿರಾಮ ತ್ಯಜಿಸಿದರೂ ಈ ಪ್ರಶ್ನೆ ತಲೆಯಲ್ಲಿ ಓಡುತ್ತಿತ್ತು … ನರೇಂದ್ರ ಮೋದಿಯ speach ನಲ್ಲಿ ಸಂಕೇತವಾಗಿ ಜನರು ಹಿಡಿದಿದ್ದಿದ್ದು ಸರೋಜ ಸರೋಜ..!! ಅಂತ ಇಲ್ಲಿ ಹೇಳಲು ಪ್ರಯತ್ನ ಮಾಡಿದ್ದೆನೆ ..!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)