ಶುಂಭ-ನಿಶುಂಭಾದಿ ದೈತ್ಯರನ್ನು (ಮಹಿಷನನ್ನೂ ಕೂಡಿ) ದುರ್ಗೆ ಸಂಹರಿಸಿದ್ದು ನವಮಿಯಂದು.
ಅಂದಿನ ದಿನವೇ ಶ್ರೀರಾಮನು ಸೀತೆಯನ್ನು ಸೇರಲೋಸುಗ ಸೇತುಕರ್ತೃತ್ತ್ವನಾಗುವುದಕ್ಕೂ ಮುನ್ನ ರಾಮೇಶ್ವರದಲ್ಲಿ ಜಯಪ್ರಾಪ್ತಿಗಾಗಿ ಶಂಕರನನ್ನು ಕುರಿತು ಪೂಜೆಗೈಯುತ್ತಾನೆ. ಈ ಪೂಜೆಯೇ ರಂಭ (ಮಹಿಷನ ತಂದೆ, ಮತ್ತು ದುರ್ಗೆಯಿಂದ ಹತನಾದವನು) ಮತ್ತು ರಾವಣರ ಪ್ರಾಣಗಳು ಸೇರಬೇಕಾದಲ್ಲಿಗೆ ಸೇರಿಸಿದ್ದೆಂದು, ಅದನ್ನೇ ಮದುವೆಗೆ ಹೋಲಿಸಿ ರಾಮನನ್ನೇ ಜೋಯಿಸನನ್ನಾಗಿಸಿದೆ.
ಶೂರಂ = ರಾಮ
ಮಾನ್ಯರೆ,
ನಿಮ್ಮ ಪದ್ಯದಲ್ಲಿ ಆದಿಪ್ರಾಸದಲ್ಲಿ ಅಲ್ಪಪ್ರಾಣದ ಬಳಕೆ ಮಾಡಿದ್ದೀರಿ. ಇದು ಸಮೀಪಪ್ರಾಸವಾಗುತ್ತದೆ. ಅಷ್ಟು ಉಚಿತವಲ್ಲ. ಅಲ್ಲದೇ ರಾತ್ರೀ ಫಲ, ಚಂಡೀ ರಣಾಂಗಕ್ಕೆ ಇತ್ಯಾದಿ ದೀರ್ಘವನ್ನು ಮಾಡಿದ್ದೀರ ಇದು ಯುಕ್ತವಲ್ಲ. ಪರಿಹಾರಮಾರ್ಗ ಚೆನ್ನಾಗಿದೆ. ಕೆಲವು ಹಳಗನ್ನಡ ಶಬ್ದಪ್ರಯೋಗಗಳು ಚೆನ್ನಾಗಿವೆ.
Very simple. Those who die fighting in battle are taken to (veera) swarga by tge nymphs and served there in various ways. I have used the word Jhrimbhesha to signify kumbhakarna whi preceded him. I very much wnted to use the word parivettr but couldn’t due to chandas and dviteeyaakshara constraints.
ಸುಧೀರ್ ಸರ್ 🙂 ಒಳ್ಳೆಯ ಪರಿಹಾರ ಹಾಗೂ ಚಿತ್ರಣ… ಆ ದಿನ ಗಣೇಶರು ಇದೇ ಮಾರ್ಗದಲ್ಲಿ ಮಾಡಿದ್ದರು.
ಆದಿಪ್ರಾಸ ಇದೆ, ಕನ್ನಡ ಲಿಪಿ ಇದೆ ಆದರೆ ಪರಿಹಾರ ಕನ್ನಡದಲ್ಲಿಲ್ಲ 😉 ಸಂಸ್ಕೃತದ ಸಮಸ್ಯೆಯ ಸಾಲು ಹೀಗಿತ್ತು-
ರಂಭಾರಾವಣಪಾಣಿಪೀಡನವಿಧೌ ರಾಮಃ ಪುರೋಧಾ ಭಭೌ||
ರಾಮಾಯಣದ ಉತ್ತರಕಾಂಡದಲ್ಲಿ ವರ್ಣಿತವಾಗಿರುವ ಘಟನೆಯಂತೆ – ರಾವಣನು, ಒಮ್ಮೆ ಕುಬೇರಸುತನಾದ ನಳಕೂಬರನಿಗಾಗಿ ಸಿಂಗರಿಸಿಕೊಂಡು ಹೊರಟಿದ್ದ ರಂಭೆಯನ್ನು ಪತ್ನಿಯಾಗೆಂದು ಪೀಡಿಸುತ್ತಾನೆ. ರಂಭೆಯು ಪರಿಪರಿಯಾಗಿ ಬೇಡವೆಂದು, ಕುಬೇರಸುತನ ಸೇವೆಗಾಗಿ ಹೊರಟಿರುವ ನಾನು, ಕುಬೇರಾನುಜನಾದ ನಿನಗೆ ಸೊಸೆಯ ಸಮಾನಳು ಎಂದೆಲ್ಲ ಗೋಗರೆದರೂ “ದೇವಗಣಿಕೆಗೆ ಪತಿಯಾರು ?” ಎಂದು ಜರೆದು ಆಕೆಯನ್ನು ಬಲಾತ್ಕರಿಸಿಯೇ ಬಿಡುತ್ತಾನೆ. ಅಳುತ್ತ ಹೋದ ರಂಭೆಯನ್ನು ಕಂಡ ನಳಕೂಬರನು ಕ್ರುದ್ಧನಾಗಿ ರಾವಣನು ಯಾವ ಸ್ತ್ರೀಯನ್ನಾದರೂ ಮತ್ತೊಮ್ಮೆ ಬಲಾತ್ಕರಿಸಿದರೆ ಮರಣವುಂಟಾಗಲೆಂದು ಶಪಿಸುತ್ತಾನೆ. But little did he know, ರಾವಣನು ಮರಣಿಸಿದರೆ ರಂಭೆಯನ್ನು ಭೋಗಿಸುವ ಮಾರ್ಗ ಮತ್ತೂ ಸುಲಭವಾಗುವುದೆಂದು. ಎಷ್ಟಾದರೂ ಪಾಪಿಗಳಿಗೆ ಮೊದಲು ಸ್ವರ್ಗಸುಖವಾದ ನಂತರವೇ ನರಕವಲ್ಲವೇ ? Fortunately or unfortunately, ರಾಮನು ರಾವಣನನ್ನು ಕೊಂದು ಇವರೀರ್ವರ ವಿವಾಹಕ್ಕೆ ಜೋಯಿಸನಾಗಿಬಿಟ್ಟ…
ನಾನು ಬರೆಯುವುದು ಯಾವುದೋ ಒಂದು ರೀತಿಯದಾಯಿತು…ಆದರೆ ತಾವು ನವರಸಗಳನ್ನೂ ತಮ್ಮ ಪದ್ಯಗಳಲ್ಲಿ ಕಡೆದಿರಿಸಿ, ಕಡೆಗೆ “ರಸಂಗಳೊಳ್ ಹಾಸ್ಯರಸಮೆ ವಲಂ” ಎನ್ನುವಂತೆ, ಹಾಸ್ಯಾದ್ವೈತಿಯಾಗಿ ಎಲ್ಲರಿಗೂ ಮುದವನ್ನು ನೀಡಿದ್ದೀರಿ…ಅಲ್ಲದೇ ಗುರುಗಳೂ ಒಮ್ಮೊಮ್ಮೆ ತೋರಲಾಗದ ಪದ್ಯದೋಷಗಳನ್ನು ತೋರಿದ್ದೀರಿ …ಇಂತಹ ಹಾದಿರಂಪರ ಬರೆವಣಿಗೆಯು ಎಂದಾದರೂ ಕಂತೆಯಾಗುವುದುಂಟೆ ? ನಾನೋ ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪದ್ಯಗಳನ್ನು ನೀಡಿದ್ದಿರಬಹುದು…ಆದರೆ consistencyಯ ವಿಚಾರದಲ್ಲಿ ನೀವೇ ಅಗ್ರಶ್ರೇಣಿಯವರು…
It is quite common for famous (related) personalities to attend weddings of commoners. This is a wedding between a groom called Shumbha and a reluctant bride called Kumbhaa. Among the august guests are Rambhaa and Ravana. The jOyisa performing the rites is a person called Gayaram who generally undertakes ಅಪರ rites 😉
ಸಂಭಾವ್ಯಂ ಗಡ ಖ್ಯಾತರಾಗಮನಮೈ ಸಾಮಾನ್ಯರುದ್ವಾಹಕಂ (wedding)
ಶುಂಭಾಖ್ಯಂ ವರನಾತನಂ ವರಿಸಿಹಳ್ ಕುಂಭಾಖ್ಯಳೊತ್ತಾಯಕಂ|
ಸಂಭಾವ್ಯರ್ ಬಹುತೇಕರಾಗಮಿಸಿಹರ್, ಮೇಣಿಂದೆ ತಾಂ ಪೋಗಿಹರ್
ರಂಭಾರಾವಣರಿರ್ವರಾ (ಇರ್ವರು ಆ) ಮದುವೆಗಂ, ರಾಮಂ ಗಡಾ ಜೋಯಿಸಂ|| 🙂
ಪ್ರಸಂಗ ಜರುಗಲ್: ’ಪ್ರಸಂಗ’ ಶಬ್ದವು (’ವು’ ಎಂಬ) ಪ್ರತ್ಯಯರಹಿತವಾಗಿದೆ. ಹೀಗಾದಾಗ ಅದನ್ನು ಮುಂದಿನ ಶಬ್ದದೊಂದಿಗೆ (space ಕೊಟ್ಟಿದ್ದರೂ ಸಹ) ಸಾಮಸಿಕವಾಗಿ ಗ್ರಹಿಸಲಾಗುತ್ತದೆ. ಇಲ್ಲಿ ಅದು ಅರಿಸಮಾಸವಾಗುತ್ತದೆ. ನೀವೇ ಸಮಾಸಮಾಡಿಬಿಡಿ, ಇಲ್ಲವೇ ಪ್ರತ್ಯಯವನ್ನು ಸೇರಿಸಿರಿ. ಹೊಸಗನ್ನಡದಲ್ಲಿ ಪ್ರತ್ಯಯರಾಹಿತ್ಯವು ಮಾನ್ಯವಾದರೂ, ನಿಯಮಪಾಲನೆಯಿಂದ ಪದ್ಯದ ಮೌಲ್ಯವು ಹೆಚ್ಚುತ್ತದೆ.
‘ಶ್ರೋತ್ರಿಯ’ ಸಾಧು. ’ಶ್ರೋತ್ರೀಯ’ ಎಂಬ ರೂಪವೂ ಇದೆಯೆ?
ಧನ್ಯವಾದಗಳು ಪ್ರಸಾದ್ ಸರ್,
ಆದ ಎರಡೂ ತಪ್ಪಿಗೆ ಶ್ರೋತ್ರಿಯರಲ್ಲಿ ಅಂತ್ಯದಲ್ಲಿ ಆಗಲೇ ಕ್ಷಮೆಕೋರಿದ್ದೇನೆ!!
ಪ್ರಣಯಪ್ರಸಂಗವನ್ನು ಹೇಗೆ “ಸಮಾಸ”ಗೊಳಿಸಬೇಕೆಂದು ತಿಳಿಯದಾಗಿದೆ, ಹೀಗೆ ತಿದ್ದಿದರೆ ಸರಿಯಾಗುವುದೇ?
ಮೈಭಾರಂ ಕುಲಜೋಯಿಸರ್ ತಳೆದೊಡಂ ತುತ್ತಾಗುತುಂ ವ್ಯಾಧಿಗಂ,
ಕೆಂಭೂತಾಪುರದೂರಿನೊಳ್ಕುಶಲಮಂ ರಾಮಾಂಕಿತರ್ ಕಂಡರಯ್!
ಶಂಭೋ!ಸಾಗಿಸೆ ಸಂದೊಡಂ ಶರಣರಾ ಸತ್ಕಾರ್ಯಕಂ ಪ್ರೀತಿಯಿಂ,
ರಂಭಾ,ರಾವಣರಿರ್ವರಾ ಮದುವೆಗಂ ರಾಮಂ ಗಡಾ ಜೋಯಿಸಂ!
(ತೀರಾ ಸಣ್ಣ ಊರಿನ ಕಥೆ!)(ಆದ ಎಲ್ಲ ಸತ್ಕಾರ್ಯಕ್ಕೂ ರಾಮಾಂಕಿತರೇ ಜೋಯಿಸರಾಗುವಂತಾಯಿತು 🙂 )
ಶುಂಭಾದ್ಯನ್ಯದುರಾಧಮರ್ ಮೆರೆದೊಡಂ, ಚಂಡೀ ರಣಾಂಗಕ್ಕೆ ಚಿ-
ದ್ಬಿಂಬಾಲೀಲೆಯೊಳಾಡುತುಂ ಪೊರಟಿರಲ್, ಶೂರಂ ಕಲತ್ರಂ ತರ-
ಲ್ಕಂಬಾನಾಥನ ಪೂಜಿಸಲ್ ನವಮಿಯಾ ರಾತ್ರೀ ಫಲಂ ನೀಡಿತೈ!
ರಂಭಾರಾವಣರಿರ್ವರಾ ಮದುವೆಗಂ ರಾಮಂ ಗಡಾ ಜೋಯಿಸಂ.
ಶುಂಭ-ನಿಶುಂಭಾದಿ ದೈತ್ಯರನ್ನು (ಮಹಿಷನನ್ನೂ ಕೂಡಿ) ದುರ್ಗೆ ಸಂಹರಿಸಿದ್ದು ನವಮಿಯಂದು.
ಅಂದಿನ ದಿನವೇ ಶ್ರೀರಾಮನು ಸೀತೆಯನ್ನು ಸೇರಲೋಸುಗ ಸೇತುಕರ್ತೃತ್ತ್ವನಾಗುವುದಕ್ಕೂ ಮುನ್ನ ರಾಮೇಶ್ವರದಲ್ಲಿ ಜಯಪ್ರಾಪ್ತಿಗಾಗಿ ಶಂಕರನನ್ನು ಕುರಿತು ಪೂಜೆಗೈಯುತ್ತಾನೆ. ಈ ಪೂಜೆಯೇ ರಂಭ (ಮಹಿಷನ ತಂದೆ, ಮತ್ತು ದುರ್ಗೆಯಿಂದ ಹತನಾದವನು) ಮತ್ತು ರಾವಣರ ಪ್ರಾಣಗಳು ಸೇರಬೇಕಾದಲ್ಲಿಗೆ ಸೇರಿಸಿದ್ದೆಂದು, ಅದನ್ನೇ ಮದುವೆಗೆ ಹೋಲಿಸಿ ರಾಮನನ್ನೇ ಜೋಯಿಸನನ್ನಾಗಿಸಿದೆ.
ಶೂರಂ = ರಾಮ
ಮಾನ್ಯರೆ,
ನಿಮ್ಮ ಪದ್ಯದಲ್ಲಿ ಆದಿಪ್ರಾಸದಲ್ಲಿ ಅಲ್ಪಪ್ರಾಣದ ಬಳಕೆ ಮಾಡಿದ್ದೀರಿ. ಇದು ಸಮೀಪಪ್ರಾಸವಾಗುತ್ತದೆ. ಅಷ್ಟು ಉಚಿತವಲ್ಲ. ಅಲ್ಲದೇ ರಾತ್ರೀ ಫಲ, ಚಂಡೀ ರಣಾಂಗಕ್ಕೆ ಇತ್ಯಾದಿ ದೀರ್ಘವನ್ನು ಮಾಡಿದ್ದೀರ ಇದು ಯುಕ್ತವಲ್ಲ. ಪರಿಹಾರಮಾರ್ಗ ಚೆನ್ನಾಗಿದೆ. ಕೆಲವು ಹಳಗನ್ನಡ ಶಬ್ದಪ್ರಯೋಗಗಳು ಚೆನ್ನಾಗಿವೆ.
ಅಂಭೋಜಾಸನಲೇಖ ಏವ ಭುವನಸ್ಯಾಹ್ವಾನಪತ್ರಾಯತೇ
ಜೃಂಭೇಶಾರ್ಪಿತಸಾಶ್ರುಪಾದ್ಯಸಲಿಲಂ ವೀರೋಚಿತಂ ಸ್ವಾಗತಂ
ಜಂಭಾರಾತಿಪುರೀ ಸ್ಥಲಂ, ಕಿಮಪರಂ ಸಾಕ್ಷೀ ಚಿತಾಗ್ನಿಃ ಸ್ವಯಂ
ರಂಭಾರಾವಣರಿರ್ವರಾ ಮದುವೆಗಂ ರಾಮಂ ಗಡಾ ಜೋಯಿಸಂ
Very simple. Those who die fighting in battle are taken to (veera) swarga by tge nymphs and served there in various ways. I have used the word Jhrimbhesha to signify kumbhakarna whi preceded him. I very much wnted to use the word parivettr but couldn’t due to chandas and dviteeyaakshara constraints.
ಸುಧೀರ್ ಸರ್ 🙂 ಒಳ್ಳೆಯ ಪರಿಹಾರ ಹಾಗೂ ಚಿತ್ರಣ… ಆ ದಿನ ಗಣೇಶರು ಇದೇ ಮಾರ್ಗದಲ್ಲಿ ಮಾಡಿದ್ದರು.
ಆದಿಪ್ರಾಸ ಇದೆ, ಕನ್ನಡ ಲಿಪಿ ಇದೆ ಆದರೆ ಪರಿಹಾರ ಕನ್ನಡದಲ್ಲಿಲ್ಲ 😉 ಸಂಸ್ಕೃತದ ಸಮಸ್ಯೆಯ ಸಾಲು ಹೀಗಿತ್ತು-
ರಂಭಾರಾವಣಪಾಣಿಪೀಡನವಿಧೌ ರಾಮಃ ಪುರೋಧಾ ಭಭೌ||
Very beautiful pUraNa! I thoroughly enjoyed the whole quality of versification.
ನನ್ನ ಅಜ್ಞಾನಕ್ಕೆ ಕ್ಷಮೆಯಿರಲಿ, ಇದು ಯಾವ ಛಂದಸ್ಸಿನಲ್ಲಿದೆ ಎಂದು ತಿಳಿಯಬಹುದೇ? ಅಥವಾ ಯಾವ ಛಂದಸ್ಸಿನಲ್ಲಿ ರಚನೆ ಮಾಡುವುದು?
ಇದು ಶಾರ್ದೂಲವಿಕ್ರೀಡಿತದಲ್ಲಿದೆ.
ಕು೦ಭೋದ್ಭೂತನೊಳಿರ್ದು ವೈದಿಕವಿವಾಹ೦ಗಳ್ಗೆ ಶಾಸ್ತ್ರ೦ಗಳ೦,
ದ೦ಭಾರಾತಿಯೊಳಿರ್ದು ಪಾಕವಿಧಿಯ೦ ತಾ೦ ಕಲ್ತು, ಕೌಸಲ್ಯೆಯಿ೦
ಕಾ೦ಭೋಜಾದಿ ವಿಷೇಷರಾಗತತಿಯೊಳ್ ಪ್ರಾವೀಣ್ಯಮ೦ ಕೊ೦ಡಿರಲ್,
ರ೦ಭಾರಾವಣರಿರ್ವರಾ ಮದುವೆಗ೦ ರಾಮ೦ ಗಡಾ ಜೋಯಿಸ೦
ಸಮಸ್ಯೆಯ ಗ೦ಟನ್ನು ಕಗ್ಗ೦ಟಾಗಿಸಿದ್ದೇನೆ 🙂
ಗಿಬ್ಬರಿಷ್ ಪದ್ಯ!!! 😉 😛
Great, some comments to my poem too!!! 🙂
(I realized how easy it is to verse a ಗಿಬ್ಬರಿಷ್ poem)
ರಾಮಾಯಣದ ಉತ್ತರಕಾಂಡದಲ್ಲಿ ವರ್ಣಿತವಾಗಿರುವ ಘಟನೆಯಂತೆ – ರಾವಣನು, ಒಮ್ಮೆ ಕುಬೇರಸುತನಾದ ನಳಕೂಬರನಿಗಾಗಿ ಸಿಂಗರಿಸಿಕೊಂಡು ಹೊರಟಿದ್ದ ರಂಭೆಯನ್ನು ಪತ್ನಿಯಾಗೆಂದು ಪೀಡಿಸುತ್ತಾನೆ. ರಂಭೆಯು ಪರಿಪರಿಯಾಗಿ ಬೇಡವೆಂದು, ಕುಬೇರಸುತನ ಸೇವೆಗಾಗಿ ಹೊರಟಿರುವ ನಾನು, ಕುಬೇರಾನುಜನಾದ ನಿನಗೆ ಸೊಸೆಯ ಸಮಾನಳು ಎಂದೆಲ್ಲ ಗೋಗರೆದರೂ “ದೇವಗಣಿಕೆಗೆ ಪತಿಯಾರು ?” ಎಂದು ಜರೆದು ಆಕೆಯನ್ನು ಬಲಾತ್ಕರಿಸಿಯೇ ಬಿಡುತ್ತಾನೆ. ಅಳುತ್ತ ಹೋದ ರಂಭೆಯನ್ನು ಕಂಡ ನಳಕೂಬರನು ಕ್ರುದ್ಧನಾಗಿ ರಾವಣನು ಯಾವ ಸ್ತ್ರೀಯನ್ನಾದರೂ ಮತ್ತೊಮ್ಮೆ ಬಲಾತ್ಕರಿಸಿದರೆ ಮರಣವುಂಟಾಗಲೆಂದು ಶಪಿಸುತ್ತಾನೆ. But little did he know, ರಾವಣನು ಮರಣಿಸಿದರೆ ರಂಭೆಯನ್ನು ಭೋಗಿಸುವ ಮಾರ್ಗ ಮತ್ತೂ ಸುಲಭವಾಗುವುದೆಂದು. ಎಷ್ಟಾದರೂ ಪಾಪಿಗಳಿಗೆ ಮೊದಲು ಸ್ವರ್ಗಸುಖವಾದ ನಂತರವೇ ನರಕವಲ್ಲವೇ ? Fortunately or unfortunately, ರಾಮನು ರಾವಣನನ್ನು ಕೊಂದು ಇವರೀರ್ವರ ವಿವಾಹಕ್ಕೆ ಜೋಯಿಸನಾಗಿಬಿಟ್ಟ…
ಜಂಭಾರಾವದಿನಾ ದಶಾಸ್ಯನಮರಾವಾಸಕ್ಕೆ ದಂಡೆತ್ತಿ ತಾ
ನಂಭೋಜಾಕ್ಷಿಯೊಳಿಂತು ಕಂತುಮನದಿಂ ದುಷ್ಕೃತ್ಯಮಂ ಗೆಯ್ದಿರಲ್
ರಂಭಾಕಾಂತನ ಶಾಪದಿಂದಸುರಪಂ ರಾಮಾಸ್ತ್ರದಿಂ ಬೀಳಲಾ
ರಂಭಾರಾವಣರಿರ್ವರಾ ಮದುವೆಗಂ ರಾಮಂ ಗಡಾ ಜೋಯಿಸಂ
ಒಳ್ಳೆಯ ಪರಿಹಾರ. _/\_
Thanks a lot for such a nice pUraNa. Me too had solved this samasyaa in our aashukavitaa meets like this.
ಧನ್ಯವಾದಗಳು ಗುರುಗಳೇ, ಆದಾಗ್ಯೂ ನನಗೆ ತೋಚಿದ ಮೊದಲ ಮತ್ತು ಕಡೆಯ ಪರಿಹಾರ ಇದೊಂದೇ ಎಂದು ಹೇಳಬಹುದು ! 😀
ಇಂಥದ್ದು ಒಂದೇ ಸಾಕಯ್ಯ. ನನ್ನಂತೆ ಕಂತೆ ಬರೆದರೆ ಏನು ಬಂತು.
ನಾನು ಬರೆಯುವುದು ಯಾವುದೋ ಒಂದು ರೀತಿಯದಾಯಿತು…ಆದರೆ ತಾವು ನವರಸಗಳನ್ನೂ ತಮ್ಮ ಪದ್ಯಗಳಲ್ಲಿ ಕಡೆದಿರಿಸಿ, ಕಡೆಗೆ “ರಸಂಗಳೊಳ್ ಹಾಸ್ಯರಸಮೆ ವಲಂ” ಎನ್ನುವಂತೆ, ಹಾಸ್ಯಾದ್ವೈತಿಯಾಗಿ ಎಲ್ಲರಿಗೂ ಮುದವನ್ನು ನೀಡಿದ್ದೀರಿ…ಅಲ್ಲದೇ ಗುರುಗಳೂ ಒಮ್ಮೊಮ್ಮೆ ತೋರಲಾಗದ ಪದ್ಯದೋಷಗಳನ್ನು ತೋರಿದ್ದೀರಿ …ಇಂತಹ ಹಾದಿರಂಪರ ಬರೆವಣಿಗೆಯು ಎಂದಾದರೂ ಕಂತೆಯಾಗುವುದುಂಟೆ ? ನಾನೋ ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪದ್ಯಗಳನ್ನು ನೀಡಿದ್ದಿರಬಹುದು…ಆದರೆ consistencyಯ ವಿಚಾರದಲ್ಲಿ ನೀವೇ ಅಗ್ರಶ್ರೇಣಿಯವರು…
‘ತೋರಲಾಗದ’ ಅಲ್ಲ. ಛಾತ್ರರು ಕ್ರಮಕ್ರಮವಾಗಿ ಕಲಿಯಲಿ ಎಂಬ ಸದುದ್ದೇಶದಿಂದ ಒಂದಷ್ಟನ್ನು ಈಗ ಹೇಳುತ್ತಾರೆ ಇನ್ನೊಂದಷ್ಟನ್ನು ಮುಂದೊಮ್ಮೆ ಹೇಳುತ್ತಾರೆ ಅಷ್ಟೆ.
ಡಂಭಾಚಾರಮನೊಲ್ಲದಿರ್ಪ ಮಗಳಿರ್ದತ್ಯಂತಸೌಶೀಲ್ಯದಿಂ,
ಗಂಭೀರಂಗೊಳೆ ಮಾತೆ ಸೋಲ್ತು ವರನಂ ಪೊಂದಾಣಿಸಲ್, ಯೋಚಿಪಳ್ ,|
ಸಂಭಾವ್ಯಂ ದಿಟಮಲ್ತೆ ದೈವಕೃಪೆಯಿಂದೆಲ್ಲಂ ಮಹಾಲೋಕದೊಳ್ ?
ರಂಭಾರಾವಣರಿರ್ವರಾ ಮದುವೆಗಂ ರಾಮಂ ಗಡಾ ಜೋಯಿಸಂ ? ||
( ರಂಭಾರಾವಣರೆಂಬ ಹೆಸರುಳ್ಳ ಸಾಮಾಜಿಕವ್ಯಕ್ತಿಗಳ ಮದುವೆಗೆ ಶ್ರೀರಾಮನೇ ಜೋಯಿಸನಲ್ಲವೇ ?)
ಬುವಿಯೊಳ್ ಜರುಗುವ ಮದುವೆಗಳೆಲ್ಲಕೆ
ಲವಪಿತನೆಂದಾದರೆ ಜೋಯ್ಸಂ|
ತವೆ ಜೋಯ್ಸಂ ಮಾತ್ರಮವನುಮಲ್ಲಂ
(priests)ಭವಿಮಂತ್ರವಿದರ ಪಣಕರ್ತಂ(contractor)|| 😀
ರಂಭಾ-ರಾವಣ ಎಂದರೆ ಆಭಿಜಾತ್ಯವನ್ನು ತೊಡೆದುಕೊಂಡು ಇಗೋ ಈ ಹೊತ್ತಿನ ಹೆಸರುಗಳೆನಿಸವು. ರಂಭಾ ರಾವ್ & ಅಣ (Some new-age name) ಎಂದರೆ ಮೇಲು! 🙂
🙂 🙂
It is quite common for famous (related) personalities to attend weddings of commoners. This is a wedding between a groom called Shumbha and a reluctant bride called Kumbhaa. Among the august guests are Rambhaa and Ravana. The jOyisa performing the rites is a person called Gayaram who generally undertakes ಅಪರ rites 😉
ಸಂಭಾವ್ಯಂ ಗಡ ಖ್ಯಾತರಾಗಮನಮೈ ಸಾಮಾನ್ಯರುದ್ವಾಹಕಂ (wedding)
ಶುಂಭಾಖ್ಯಂ ವರನಾತನಂ ವರಿಸಿಹಳ್ ಕುಂಭಾಖ್ಯಳೊತ್ತಾಯಕಂ|
ಸಂಭಾವ್ಯರ್ ಬಹುತೇಕರಾಗಮಿಸಿಹರ್, ಮೇಣಿಂದೆ ತಾಂ ಪೋಗಿಹರ್
ರಂಭಾರಾವಣರಿರ್ವರಾ (ಇರ್ವರು ಆ) ಮದುವೆಗಂ, ರಾಮಂ ಗಡಾ ಜೋಯಿಸಂ|| 🙂
ಸಂಭಾವ್ಯಂ ರಘುರಾಮ ಜೋಯಿಸನುತಾಂ, ಪ್ರೇಮಾಯಣಂ ಗೂಢದಾ-
ರಂಭಂಗೊಂಡುತೆ ರೂಪಸೀ ಮಗಳೊಡಂ ವಾಚಾಳಿ ಕಾಮಾಂಧನಿಂ,
ಗಂಭೀರ ಪ್ರಣಯಪ್ರಸಂಗ ಜರುಗಲ್ ಶ್ರೋತ್ರೀಯ ಸಂಸಾರದೊಳ್,
ರಂಭಾರಾವಣರಿರ್ವರಾ ಮದುವೆಗಂ, ರಾಮಂ ಗಡಾ ಜೋಯಿಸಂ||
ಅಂತು, ತಾವೇ ಮುಂದೆ ನಿಂತು ನಡೆಸಿದ ಮಗಳ “ಪ್ರೇಮವಿವಾಹ” ಪ್ರಸಂಗ !!
ಶ್ರೋತ್ರಿಯ ರಾ(ಸೋ)ಮಾಜೋಯಿಸರ ಕ್ಷಮೆಕೋರಿ !!
ಪ್ರಸಂಗ ಜರುಗಲ್: ’ಪ್ರಸಂಗ’ ಶಬ್ದವು (’ವು’ ಎಂಬ) ಪ್ರತ್ಯಯರಹಿತವಾಗಿದೆ. ಹೀಗಾದಾಗ ಅದನ್ನು ಮುಂದಿನ ಶಬ್ದದೊಂದಿಗೆ (space ಕೊಟ್ಟಿದ್ದರೂ ಸಹ) ಸಾಮಸಿಕವಾಗಿ ಗ್ರಹಿಸಲಾಗುತ್ತದೆ. ಇಲ್ಲಿ ಅದು ಅರಿಸಮಾಸವಾಗುತ್ತದೆ. ನೀವೇ ಸಮಾಸಮಾಡಿಬಿಡಿ, ಇಲ್ಲವೇ ಪ್ರತ್ಯಯವನ್ನು ಸೇರಿಸಿರಿ. ಹೊಸಗನ್ನಡದಲ್ಲಿ ಪ್ರತ್ಯಯರಾಹಿತ್ಯವು ಮಾನ್ಯವಾದರೂ, ನಿಯಮಪಾಲನೆಯಿಂದ ಪದ್ಯದ ಮೌಲ್ಯವು ಹೆಚ್ಚುತ್ತದೆ.
‘ಶ್ರೋತ್ರಿಯ’ ಸಾಧು. ’ಶ್ರೋತ್ರೀಯ’ ಎಂಬ ರೂಪವೂ ಇದೆಯೆ?
ಧನ್ಯವಾದಗಳು ಪ್ರಸಾದ್ ಸರ್,
ಆದ ಎರಡೂ ತಪ್ಪಿಗೆ ಶ್ರೋತ್ರಿಯರಲ್ಲಿ ಅಂತ್ಯದಲ್ಲಿ ಆಗಲೇ ಕ್ಷಮೆಕೋರಿದ್ದೇನೆ!!
ಪ್ರಣಯಪ್ರಸಂಗವನ್ನು ಹೇಗೆ “ಸಮಾಸ”ಗೊಳಿಸಬೇಕೆಂದು ತಿಳಿಯದಾಗಿದೆ, ಹೀಗೆ ತಿದ್ದಿದರೆ ಸರಿಯಾಗುವುದೇ?
ಸಂಭಾವ್ಯಂ ರಘುರಾಮ ಜೋಯಿಸನುತಾಂ, ಪ್ರೇಮಾಯಣಂ ಗೌಪ್ಯದಾ-
ರಂಭಂಗೊಂಡುರೆ ರೂಪಸೀ ಮಗಳೊಡಂ ವಾಚಾಳಿ ಕಾಮಾಂಧನಿಂ,
ಗಂಭೀರ ಪ್ರಣಯಪ್ರಸಂಗವಿದುಕಾಣ್ ಶ್ರೋತೀಯ ಸಂಸಾರದೊಳ್,
ರಂಭಾರಾವಣರಿರ್ವರಾ ಮದುವೆಗಂ, ರಾಮಂ ಗಡಾ ಜೋಯಿಸಂ||
ಕಂಬಕ್ಕಂ ಕಪಿಗಂ ಕಲಾಕುಸುಮಕಂ ಗುಂಡೋಜನೇ ಶಿಲ್ಪಿಯೆಂ
ದೆಂಬರ್ ಕಂಬಳಿಯಂ ನವಾಂಬರಮುಮಂ ನೇಯ್ವಾತನೊರ್ವಂ ಗಡೇ-
ನೆಂಬೆನ್ ಜಾತಕ ಮೃತ್ಯುಕರ್ಮಗಳಿಗಂ ತಾನೊರ್ವನೇ ವೈದಿಕಂ
ರಂಭಾರಾವಣರಿರ್ವರಾ ಮದುವೆಗಂ, ರಾಮಂ ಗಡಾ ಜೋಯಿಸಂ