Jun 012015
 

minchu

  70 Responses to “ಪದ್ಯಸಪ್ತಾಹ ೧೫೩: ಚಿತ್ರಕ್ಕೆ ಪದ್ಯ”

  1. ವಿದ್ಯುಲ್ಲತಾಜಾಲಮಿಳಾತಲಕ್ಕ೦
    ಖದ್ಯೋತಕಾಯರ್ಕಳಿನೈದುದಲ್ತೇ೦
    ಸದ್ಯಃಖಕಾಯ೦ಗಳೊಳು೦ ಸುಶೋಭಳ್
    ವದ್ಯಳ್ ಧರಾಸ್ತ್ರೀಗೆನೆ ಪಾರಿತೋಷ೦

  2. ಇಳೆಯ೦ ಕಳ್ತಲ ರಕ್ಕಸ೦ ಕಳವಳಕ್ಕೀಡಾಗಿಸಲ್ಕೇನಿದೇ-
    ನಿಳಿದಿರ್ಪಳ್ ಪ್ರಲಯಾ೦ತಕಪ್ರಮದೆಯೇ೦ ಶ್ಯಾಮಾಭೆ ಕಾಳಿ ಸ್ಫುರ-
    ಲ್ಲಲಿತಾ೦ಗಪ್ರಚಯಪ್ರಭಾಸ್ಫುರಣದಿ೦ ಸೌದಾಮಿನೀಸ್ಫಾರದೊಲ್
    ಕಳೆಯುತ್ತೆಮ್ಮ ಮನೋವಿಕಾರತತಿಯ೦ ಘೋರಾ೦ಧಕಾರಾಬ್ಧಿಯೊಳ್

  3. ಧೂರ್ಜಟಾಪಟಲ೦ಗಳೊಳ್ ಗಹನಾ೦ಧಕಾರದ ಮಾರ್ಗದೊಳ್
    ನಿರ್ಜರಪ್ರಭೆಯಿ೦ದಮೀ ಸುರಲೋಕವಾಹಿನಿ ತೋರ್ದಳೇ-
    ನೂರ್ಜಿತ೦ಗೊಳಿಸುತ್ತುಮಾ ಹರಮೌಳಿಮ೦ಡಲಶೋಭೆಯ೦
    ಮಾರ್ಜಿತ೦ಗೊಳಲೆಮ್ಮದೀ ಮನದಾಳಕ೦ಟಿದ ಜಾಡ್ಯಮು೦

  4. ದೇವತರುಗಳ ಬೇರ್ಗಳೇಂ, ವಜ್ರಿ ಪೆದರುತುಮ-
    ದಾವನೋ ಮುನಿಗಾಯುಧಮನೊಗೆದನೇಂ
    ಜೀವರೊಳ್ ಮುಕ್ತಿಯಂ ಪಡೆದಿರ್ಪರಿಂಗೀವ
    ಪಾವನದ ವಳ್ಳಿಯೇಂ ಸಗ್ಗಕೇರಲ್

    • aahaa, ದೇವತರುಗಳ ಬೇರ್ಗಳೇಂ tumba chennagide.. 🙂

    • _/\_
      ಇದು ಸೋಮಣ್ಣಾ ಅದ್ಭುತ-
      ಹೃದಯಾಹ್ಲಾದಕರಮೆಂಬ ಕಲ್ಪನೆಗಳಲಾ!
      ಮುದದಿಂ ಮಚ್ಚರದಿಂದೆ ಭ-
      ವದೀಯ ಪದ್ಯಕ್ಕೆ ನಮಿಪೆನಿದು ದುಸ್ಸಾಧ್ಯಂ!

    • ನೀಲಕಂಠ ಮತ್ತು ಕೊಪ್ಪಲತೋಟ ಧನ್ಯವಾದಗಳು

    • Super somanna.

      ಮಿಂಚಿನ ಪಿಂತೆಬರೆ, ತಂಚ-
      ವಂಚಿಸದೆ ಗುಡುಗಿನ ಕಬ್ಬಕಿದೊಕೈಪರೆಯುಂ |

  5. ಗಗನಂ ಪ್ರೀತಿಯನುರ್ಕಿ ಚಾಚಿದ ಕರಂ ನೂರ್ಮೀರಿ ಪೆರ್ಚಾದುದೇಂ?
    ಬಗೆಯಿಂ ಬೀರಿರೆ ಹಾಸಮಂ ನದಿಯಿದುಂ ಮಿಂಚಂತೆಯೇ ಕಂಡುದೇಂ?
    ಜಗದೀ ಪ್ರೇಮಿಗಳೊಳ್ತಿಗಂ ಮನಸಿಜಂ ಪೂಣಿರ್ದ ಬಾಣಂಗಳೇಂ?
    ಸೊಗದೀ ಸೇತುವೆಯೀರ್ವರಂ ಬೆಸೆದಿರಲ್ ಧ್ವಾಂತಾರಿಯಾಗಿರ್ದುದೇ?

  6. ಸರಿದುಂ ಜ್ಯೋತಿರ್ವರ್ಷಂ
    ಮೊರೆದುಂ ಮಾರ್ದನಿಸುತಿರ್ಪುದಾಕರ್ಷಂ ಕಾಣ್ ।
    ಧರೆಯಂ ಸ್ಪರ್ಶಿಸೆ ಗಗನಂ,
    ಭರಸಿಡಿಲೆರಗಿಂತು ಭೋರ್ಗರೆದುದೇನಿರುಳೊಳ್ !!

    ಭೂಮಿಯನ್ನ ಟಚ್ ಮಾಡಿ ಶಾಕ್ (=ಸಿಡಿಲೆರಗು) ಹೊಡೆಸಿಕೊಂಡು ಗುಡುಗಿತೇ ಬಾನು ?!

    • bharasidil -> barasidil

      • “ಭರ”ಸಿಡಿಲು = “ರಭಸ”ವಾದ ಸಿಡಿಲು ಎಂಬ ಅರ್ಥದಲ್ಲಿ ಬಂದದ್ದು. ಆದರೆ “ಬರಸಿಡಿಲು” ಸರಿರೂಪ. “ಬರವಸೆ = ಭರವಸೆ” ಥರ ಎರಡೂ ಸರಿಯಾಗುದೇ?

        • ಗೊತ್ತಿಲ್ಲ ಮೇಡಮ್. ಭರಸಿಡಿಲನ್ನು ಕ೦ಡಿಲ್ಲ. ಬರವಸೆಯ ಮೇಲೆ ಭರವಸೆಯಿಲ್ಲ. 🙂

    • Fine imagination

  7. ವಸು೦ಧರೆಯ ರ೦ಗದೊಳ್ ವಿಧವಿಧಪ್ರಯೋಗಪ್ರಭರ್
    ಪ್ರಸ೦ಗವಿಧದಿ೦ ಮನೋಭವಿತಭಾವದಿ೦ ಲಾಸದಿ೦
    ರಸ೦ಗೊಳುವವೊಲ್ ಜನರ್ ರಚಿಸೆ ನಾಟ್ಯಮ೦ ಸ೦ದುದೋ
    ಲಸಲ್ಲಲಿತಲಾಸ್ಯಮು೦ ಪತಿತಮಪ್ಪವೊಲ್ ಬಾನಿನಿ೦

    (ನೃತ್ಯದಲ್ಲಿ ರ೦ಗಸ್ಥಳದ ಮೇಲೆ ಬೆಳಕು ಚೆಲ್ಲುವ೦ತೆ…)

  8. कादम्बिनीजवनिकामपसार्य नीर-
    धाराङ्गनाः स्तनितमर्दलनादनुन्नाः ।
    नृत्ते यदाकृषत चित्तमनन्तरङ्गे
    जातस्तदा सुरुचिरश्चपलाविलासः ॥

    ಗುಡುಗುಗಳೆಂಬ ಮದ್ದಳೆಯ ನಾದದಿಂದ ಪ್ರೆರಿತರಾದ ನೀರಹನಿಗಳೆಂಬ ನರ್ತಕಿಯರು ಮೋಡಗಳ ಪಂಕ್ತಿಯೆಂಬ ತೆರೆಯನ್ನು ಸರಿಸಿ, ಆಕಾಶವೆಂಬ ರಂಗಸ್ಥಳದಲ್ಲಿ ನೃತ್ಯಕ್ಕೆ ಮನಮಾಡಿದಾಗ (ಆ ನೃತ್ಯಕ್ಕೆ ಪೂರಕವಾಗಿ) ವಿದ್ಯುದ್ವಿಲಾಸ ಉಂಟಾಯಿತು.

  9. “Instead of confining themselves to Deepavali festival for lighting crackers, human beings have chosen to revel in fireworks on other occasions as well – Cricket, death etc. So why should I restrict myself to the monsoons?”
    ಆವ ದೀಪಾವಳಿಯೊಳೆಲ್ಲರು
    ತೀವುತಿದ್ದ ಪಟಾಕಿಗಳಿಗಿಂ-
    ತೀವರಂ ಬಾನ್ ಮೂಕಸಾಕ್ಷಿಯಿನಿದ್ದು ಸಂತಸದಿಂ|
    ಯಾವುದಾವುದೊ ಪರ್ಬಕೆಲ್ಲರ್
    ಹಾವಭಾವದ ಬಣ್ಣಬೆಳಗಲ್
    ರಾವುಬಡಿವಂತೆಂದಿಗೆಂದಿಗೊ ಮಿಂಚಿತೇನಿಂತುಂ||

  10. .

    • ಹಿಂದಿಚಲನಚಿತ್ರಾಭಿನೇತ್ರಿ ’ಬಿಂದು’ಳ ಬಗೆಗೆ ಏನೋ ಹೇಳಹೊರಟಂತಿದೆ!

      • ಅಲ್ತಲ್ತು, ಮಿ೦ಚುವಳ್ಳಿಗೆ
        ಸೋಲ್ತೆನ್ನ ಮನ೦ ಸಮಾಧಿಯೊಳ್ ನಿ೦ತ೦ತು೦
        ಕಳ್ತಲೆಯ ಕೂಪದೆ ಪುಗುವೊ-
        ಡಲ್ತೇ೦ ಚಿ೦ತಿಪುದು ನಾದ ಬಿ೦ದು ಕಲೆಗಳ೦?!

  11. ಪಂಚಭೂತಗಳಿಂತು ಕಾಣ್ ಬಗೆಭಂಗಿಯೊಳ್ ಗೆರೆಗೊಂಡು ಕೋಲ್-
    ಮಿಂಚವೋಲುತುವಂತುತಾಂ ಮಿಣುಕಾಟದೊಳ್ ಮಳೆತಾರಲುಂ
    ಸಂಚ ಹೂಡಿರಲಂದುವಾಸರಿರಾತ್ರಿ ತಂಬೆರೆಯಲ್ಕದೋ,
    ಹೊಂಚುಹಾಕುದೆ ಬಾನದುಂ ಭುವಿಗಂ ಗಡಾ ಬೆಳಕಿಟ್ಟುತಾಂ ।।

    ಚಿತ್ರದಲ್ಲಿ ಕಂಡೂಕಾಣದ ಪಂಚಮಹಾಭೂತಗಳ ( 5 ಕೊಳ್ಳಿದೆವ್ವಗಳು !!) ಚಿತ್ರಣ

  12. ಮೇಲನ ಮಹೋತ್ಸಮಮೊ!ಪೆಣ್ಗಳ
    ಖೇಲನದ ಪರಿವೇಷಮೊ!ದಿಟಂ
    ಬಾಲೆಯರ ಜಾಲಮಹ! ಮೆರೆದುದೆ ರಾತ್ರಿಯಂ ಬೆಳಗಿ?
    ವೇಲೆಯಾಟದ ಮೆರಗನೇರಿಸಿ
    ಪಾಲಿನಂದದ ನಗೆಯನುರ್ಮಿಸಿ
    ನೀಲಿ ಬಾನಿನ ಶೋಭೆಯಂ ಮರೆಯಿಂದಲೇ ಸೃಜಿಸಿ!

  13. ಆರ್ಷೇಯ೦ ಸ೦ದೇಶ೦ ಚಿತ್ತಾ-
    ಕರ್ಷ೦ಗೈಯುತ್ತು೦ ಮಿ೦ಚಲ್ತೇ೦
    ವರ್ಷಾಪಾತಕ್ಕ೦ ಮುನ್ನ೦ ಭೂ-
    ಹರ್ಷೋತ್ಸಾಹ೦ ಪೆರ್ಚಿರ್ಪ೦ದ೦

    ವಿದ್ಯುನ್ಮಾಲಾಜಾಲಸ್ಫಾರ೦
    ಖದ್ಯೋತ೦ಗಳ್ಗ೦ ಸ೦ಪರ್ಕ೦
    ವಿದ್ಯುತ್ಸ೦ದೇಶ೦ಗೊಳ್ಳುತ್ತು೦
    ಹೃದ್ಯ೦ ದಿವ್ಯ೦ ಹ್ಲಾದ೦ ಕಾಣೈ

    ವಿ. ಸೂ. 🙂
    ವಿದ್ಯುನ್ಮಾಲಾಛ೦ದಸ್ಸಿರ್ಕು೦
    ವಿದ್ಯುನ್ಮಾಲಾಚಿತ್ರ೦ಗಳ್ಗ೦
    ಪದ್ಯ೦ಗಳ್ ಮೈವೇಳಲ್ಕಲ್ತೇ೦
    ವದ್ಯ೦ ಛ೦ದಸ್ಸನ್ಯ೦ ವ್ಯರ್ಥ೦

    • ಆಹಾ! ವಿಧವಿಧಛಂದಸ್ಸುಗಳು, ಲಲಿತಪದಪ್ರಯೋಗಗಳು, ನಿಜಕ್ಕೂ ನಿಮ್ಮ ಪ್ರತಿಭೆ ಮಿಂಚಿನತೆಯೇ ಪರಿಣಾಮಕಾರಿಯಾದದ್ದು ಆದರೆ ಮಾಯವಾಗದೇ ಇರುವಂತದ್ದು..

    • ನೀಲಕಂಠಾರ್ಯರೇ, ಗುರುತರವಾದ ನಿಮ್ಮೀ ಸರ್ವಗುರು ಪದ್ಯವು ಸುಸ್ಫುಟವೂ, ಸಹಜಸೌಂದರ್ಯಪೂರ್ಣವೂ, ಸುಲಭವೇದ್ಯವೂ (ವಿವರಣೆಯ ಅಗತ್ಯವೇ ಇಲ್ಲ) ಆಗಿದೆ. ಧನ್ಯವಾದಗಳು.

      • ಧನ್ಯವಾದಗಳು ಮೌರ್ಯಾರ್ಯರೇ! ಮಿ೦ಚಿನ ಬಗ್ಗೆ ನಿಮ್ಮದೂ ಒ೦ದು ಪದ್ಯವನ್ನು ನೋಡುವ ಭಾಗ್ಯವನ್ನು ಕರುಣಿಸುತ್ತೀರಾ?

        • ತಲೆಯಲ್ಲಿ ಒಂದು ಮಿಂಚೂ ಹೊಂಚುತ್ತಿಲ್ಲವೇ…ಹಾ..ಪರೀಕ್ಷಾಭಯದ ಗುಡುಗು ಸಿಡಿಲುಗಳ ಆರ್ಭಟವೇ ಹೆಚ್ಚಾಗಿದೆ… 😛

          • ಹಹ್ಹಾ…
            ಎದೆಬಡಿತವೇ ಗುಡುಗು ಮಿ೦-
            ಚದಾಗೆ ರೋಮಾ೦ಚನ೦ ಬೆಮರದುವೆ ಮಳೆಯೈ
            ಬೆದರಿಸುವ ಕಲ್ಪಿತ ಫಲಿತ-
            ಮದಿರಲ್ ಬಿರುಗಾಳಿಯು೦, ಪರೀಕ್ಷೆಯೆ ಸಿಡಿಲೈ 🙂

            ಗುಡ್ ಲಕ್ ನಿಮಗೆ….

  14. ಜಗದೀಶನಾಮದನನಂ ಸುಟ್ಟಿದುದ ತಿಳಿಯೆ
    ಮಿಗದವೊಲ್ ನರಸಿಂಹನಂ ಕಂಡೊಡಂ
    ಭ್ರುಗುವುತಾನೊದೆಯೆ ಹರಿ ಮೈ ಕಂಪನಂಗೊಳಲ್
    ಮುಗಿಲೊಳೀತೆರದ ಕೋಲ್ಮಿಂಚಿದ್ದಿತೇ

  15. ಐದುಜನ ಬುದ್ಧಿವಂತರು!
    ಭೂಮಭೂಮಿಯೊಳು ನತನಾಗಿರದೆ ಮಾನವನು
    ವ್ಯೋಮದೆತ್ತರಕೇರಲೆತ್ನಿಸಿಂತುಂ|
    ಮೈಮೇಲೆ ಮಗುಳಷ್ಟು ಕೈಕಾಲುಗಳ ಪೊಂದಿ
    ನಾಮಾವಶೇಷಗೈದನೆ ಶೀರ್ಷಮಂ||

    • ಶೀರ್ಷಮದು ಪೋದತ್ತು ಬಾನ್ತಡಿಕೆಯ೦ ದಾ೦ಟಿ 🙂

  16. ಸುತ್ತ್ತಮುತ್ತೆಲ್ಲ ಶೂನ್ಯತೆಯೆ ಕವಿದಿರ್ಪೊಂದು
    ಬತ್ತಿರ್ದ ಭಾವನೆಯು ಪೊಣ್ಮಲ್ಕೆಲಾ!
    ಎತ್ತರದ ಲೋಕದಿಂ ಧರೆಗಿಳಿದು ಬಂದುವೇಂ
    ಹತ್ತುಹಾದಿಯೊಳರಿಲುಗಳ್ ,ದಿಟದೆ ತಾವ್?

  17. ಈ ಚಿತ್ರ ಹಾಕಿದ೦ದಿನಿ೦ದ ಎನೋ ಈ ರೀತಿ ಬರೆಯಬೇಕೆ೦ದೆನಿಸಿತ್ತು, ಭಾವಗೀತೆಯ೦ತೆ. ಚೌಪದಿಗಳಲ್ಲಿ ಹೊಸಗನ್ನಡದಲ್ಲಿ ಇವತ್ತು ಒ೦ದು ರೂಪ ತಾಳಿತು 🙂

    ಹೊಳೆಹೊಳೆದು ಬಾರೆನ್ನ ಮತಿಗತಿಗೆ ಬೆಳಕಾಗಿ
    ತಿಳಿವ ತಿಳಿಗೊಳಿಸೆ ಬಾ ತಾಯೆ ಬಾರೌ
    ಕಳವಳವನೀಡಾಡಿ ಕತ್ತಲೆಯ ಕಗ್ಗಲ್ಗೆ
    ಸೆಳೆದೊಗೆದ ಸಿಡಿಲಿನಾಯುಧವಾಗಿ ಬಾ

    ರವಿಯು ಬಾನೊಳಗಿಲ್ಲ ತಿ೦ಗಳಿನ ಬೆಳಕಿಲ್ಲ
    ಸವೆಸೆ ದಾರಿಯ ನಾನು ಮು೦ದುಗಾಣೆ
    ಲವದನಿತು ಬೆಳಕೂಡಿ ಪದಹತಿಗೆ ನೆರವಾಗು
    ನವೆಯನೂಡುವ ತಮದೊಳಷ್ಟು ಸಾಕು

    ದಿನಗಳೆಷ್ಟೋ ಕಳೆದ ನೀರವದ ಮೌನದೊಳು
    ನೆನಪು ಹಾರಿಹುದೆನಗೆ ಮಾತನಾಡೆ
    ಇನಿತೀಗ ಜೊತೆಗುಡುವ ಗುಡುಗಿನಬ್ಬರದಿ೦ದೆ
    ದನಿಯನೆನಗಿಷ್ಟು ಕೊಡು ಬಾರೆ ತಾಯೆ

    ಬದುಕ ಚೆ೦ದವ ನಾನು ನೆನೆದುಕೊಳ್ಳುವೆನೀಗ
    ಸೊದೆಸೂಸೆ ನಿನ್ನ ಚೆಲುವೆನ್ನ ಕಣ್ಗೆ
    ಹದಗೊ೦ಡ ಲಯದಿ೦ದೆ ಬಳುಕುತ್ತ ನೀ ಬರಲು
    ಮುದಗೊಳ್ವುದೆನ್ನ ಪದಗತಿಯು ನಲಿದು

    ಮಾತು ಮಾತಲಿ ನಿನ್ನ ಛವಿಯು ಮೈದೋರಿ ಗತಿ-
    ಗಾತುಕೊ೦ಡ ನುಡಿಗಬ್ಬದೊಲೆ ಕೇಳೆ
    ಶ್ರುತಿಹಿತವದಾಗಿ ಬಗೆಗಳಿಗೆ ಬೇಕಾಗಿಯು-
    ನ್ನತಿಯ ನುತಿಯಾಗಿ ನುಡಿ ಹೊಮ್ಮಿ ಬರಲಿ

    ಎಲ್ಲೆಲ್ಲು ನೀನೆನಗೆ ಕಾಣುವ೦ತಾಗೆ ಬಾ
    ಎಲ್ಲೆ ಮೀರಿದ ನೋಟವನು ನೀಡು ಬಾ
    ಇಲ್ಲೆನ್ನ ಹೃದಯದಾಗಸದಿ ತೊಳಗುತ್ತೆ ಮ-
    ತ್ತಲ್ಲಿ ಕಲ್ಪನೆಯ ಬಾನ೦ಚಿನಲ್ಲಿ

    ಮಿ೦ಚಿ ಬಾರೆನ್ನ ಹೃದ್ಗ್ರ೦ಥಿಗಳನೊಡೆದೊಡೆದು
    ಹೊ೦ಚಿರುವ ಸ೦ಶಯದ ತೆರೆಯನೊದ್ದು
    ಕು೦ಚಿಸಲು ನಾನೆನ್ನ ಮನವನ್ನ ನಿನ್ನ ಕ-
    ಣ್ಣ೦ಚ ಹೊಳಪಿನೊಳೆ, ಹೊಳೆ ಬಾರೆ ತಾಯೆ

    (from the words of Upanishads, “bhidyatE hrudayagranthishcha, chhidyantE sarvasamshayaah”)

  18. ನಟನಿಟಿಲಾಕ್ಷಿಯಿಂದುಗುವ ಕೆಂಗಿಡಿಯುಳ್ಕಿದ ಕಾಂತಿಯೇಂ ನಿಜೋ-
    ತ್ಕಟವಿಧಿಯಿಂ ಕಲಾವಿದನೆ ತನ್ನೆಳೆಯನ್ನಳಿಸಿರ್ಪ ಪಾಂಗಿದೇಂ|
    ಕುಟುಕುವ ತೀಕ್ಷ್ಣವಾಗ್ಝರಿಯಿದೇಂ ಸುರಲೋಕದ ಪಂಡಿತಾರ್ಯರೊಳ್
    ಚಟುಲ ತಟಿಲ್ಲತಾಗತಿಯಿದೋ ಮತಿಯೊಳ್ ಪೊರೆಯಲ್ಕೆ ಭಾತಿಯಂ||

    • ಅಬ್ಬಬ್ಬ, ಏನದ್ಭುತ ರಚನೆ…!

      ಛಟಛಟಿಲೆ೦ದು ಛ೦ದಗಳ ಬಾ೦ದಳದಿ೦ದೊಗೆದಿರ್ದ ಸಾಲ್ಗಳೇ೦
      ಸಿಟಿಸಿಟಿಲೆನ್ನೆ ಕಲ್ಪನೆಯ ರೆ೦ಕೆಗಳಾಗಸದೊಳ್ ರವೀ೦ದ್ರರಾ

      • Thank You Bard 🙂

        • ಅಪಹಾಸ್ಯ ಸಲ್ಲುದು 🙂

          • ?

          • nanage entado Bard endu sambodhisidaru, adakke 🙂

          • Bard mean poet. ‘ಎಂತದೋ ಬರ್ದ್‍ಇದ್ದಾರೆ’ ಎಂದು ಹಂಗಿಸಿದರು ಎಂದುಕೊಂಡಿರೆ?

          • 🙂 ಇಲ್ಲ, ಹಾಗೆಲ್ಲ ಲಿರಿಕಲ್ ಪೊಎಟ್ ಅ೦ತ ಅನ್ನಿಸಿಕೊಳ್ಳುವ೦ತದ್ದು ಏನೂಮಾಡಿಲ್ಲ. ಅದಕ್ಕೆ ಅಪಹಾಸ್ಯ ಸಲ್ಲದು ಎ೦ದರೆ 🙂

  19. ರವಿಚಂದ್ರರಿರದ ನಭದಿಂ
    ಕವಲೊಡೆಯಲ್ ನವ್ಯಲೋಕಮಂ ಸೃಜಿಸಲ್ಕೀ
    ಭುವಿಯನ್ನಾಳಲುಬಂದಿರ್
    ಪವು ಮಿಂಚುಗಳಪ್ರಚಂಡ ಸೈನ್ಯಮೊ ಕಾಣೈ

  20. ಕ್ಷ-ಕಿರಣ-ಚಿತ್ರಮಿದಲ್ತೇ೦
    ಪ್ರಕಟಿತಮಪ್ಪುದನಿಮೇಷವೈದ್ಯಯುಗಳದಿ೦
    ವಿಕಟಸಮರದೊಳ್ ಸುರನಾ-
    ಯಕನೈರಾವತದ ಮ೦ಡಿಗಳ ಕೀಲ್ಮುರಿಯಲ್

    ಘನಘೋರವಾದ ಸಮರವೊ೦ದರಲ್ಲಿ ಇ೦ದ್ರನ ಐರಾವತದ ಕೀಲುಗಳು ಮುರಿಯಲು, ಅಶ್ವಿನೀದೇವತೆಗಳು ಅದರ X-ray ತೆಗೆದದ್ದು 🙂

    • ನೀಲಕಂಠ , ನಿನ್ನ “ಅನಿಮೇಷನ್” ಪದ್ಯ ತುಂಬಾ ಚೆನ್ನಾಗಿದೆ. 5 ಕಾಲು ಕಾಣುತ್ತಿರುವುದು ಸೊಂಡಿಲು ಸೇರಿ ಇರಬೇಕಲ್ಲವೇ ?!

  21. .

  22. ಹಿಗ್ಗಿರ್ದ ಮಿಂಚುಹುಳುಗಳೊಟೈಸುತೆತ್ತಿರ್ದು-
    ದಗ್ಗಲಿತ ಭಾವಚಿತ್ರವಿದುವೇಂ ಮೇಣ್
    ಸಗ್ಗಕೇರಿರಲಿಳೆಯ ವಗ್ಗರಣೆ ಘಮದಿಂದ-
    ಲುಗ್ಗಿರ್ದ ಬಾನ ವೈಚಿತ್ರ್ಯವಿದುವೇಂ ?

    ಮಿಂಚುಹುಳುಗಳು (elongated) ಗ್ರೂಪ್ ಸೆಲ್ಫೀ ತೆಗೆದುಕೊಂಡಿವೆಯೇ ?! / ಹೆಂಚನ್ನ ತೂರಿ ಮೇಲೇರುತ್ತಿರುವ ವಗ್ಗರಣೆ ಘಾಟಿನಿಂದ ಆಕಾಶಕ್ಕೆ ನೆತ್ತಿಹತ್ತಿದೆಯೇ ?!

    • ಉಷಾ ಮೇಡಮ್, ಅಡಿಗೆಮನೆಯಲ್ಲಿ ಒಗ್ಗರಣೆ ಹಾಕುತ್ತಲೇ ನಿಮ್ಮ ಪ್ರಜ್ಞೆ ಕಾವ್ಯಾಕಾಶಕ್ಕೇರಿ, ಪಾಪ, ಆ ಒಗ್ಗರಣೆ, ಅಡುಗೆಗಳಗತಿ ಮು೦ದೇನಾಯಿತೋ… ಮನೆಯವರಿಗೆ ಶಿವರಾತ್ರಿಯೋ, ವೈಕು೦ಠ ಏಕಾದಶಿಯೋ! 🙁

  23. ಝಳಪಿಸುವ ಕೂರಸಿಯ ಕೂರತೆಯದೊಂದು ಕಡೆ,
    ಪೊಳೆವ ವೈಭೋಗಮಿರಲಿನ್ನೊಂದು ಕಡೆಗೆ,
    ಕಳೆವೆಯಿವುಗಳ ಮಧ್ಯೆ ,ಯೋಗಿಯಂದದೆ ದಿನವ,
    ಹೊಳೆಯೆ!ಬಾಗದೆ ನಾಡು, ಈ ನಿನ್ನ ನಡೆಗೆ?

    • Kanchana madam, Nice idea! Which line of lightning is the sword and which one is the glory? 🙂
      koorasi is arisamasa as “koor” is kannada, asi is sanskrit. “koorate” is not a valid one.
      Whole first line can be “jhaLapisuva kooralaga karavaaLavondu kaDe”
      ಕಳೆವೆಯಿವುಗಳ – should it be kaLevevivugaLa (kaLevevu + ivugaLa)?
      What is ಕಳೆವೆ?

      • 1) the sword of lightning and the surrounding glory are visible only to some! 🙂
        2) “koorasi” eventhough is an arisamaas , I heard that it is used widely .(source:Koppala Tota)
        3) kaleve+ivugaLa(ಕಳೆವೆ+ಇವುಗಳ=ಕಳೆವೆಯಿವುಗಳ);ವೈಭೋಗ,ಭಯ…ಗಳ ಮಧ್ಯೆ (ದಿನ)ಕಳೆದರೂ, ಹೊಳೆಯೆ! ಈ ತೆರೆನಾದ ನಿನ್ನ ನಡೆಗೆ(ಶಾಂತ..),ನಾಡು ತಲೆಬಾಗದೇ?
        (ಯಾವದರಿಂದಲೂ ವಿಚಲಿತವಾಗದ ಹೊಳೆ ,ಶಾಂತವಾಗಿ ಹರಿಯುತ್ತಿದೆ)

  24. ಕೊಕ್ಕರೆಗಾಲಿನ ಚಕ್ಕಂದವಾಡುವ
    ಫಕ್ಕನೆ ಸುಳಿದಬ್ಬರಿಸುವ ಕೋಲ್ಮಿಂಚ
    ಬೆಕ್ಕಸ ಬೆರಗಾದೆ ಕಾಣುತ್ತ

    • ಕೊನೆಯ ಸಾಲು ತಿದ್ದಬೇಕು. ಹೇಗೆ ಗಣವಿಂಗಡಣೆ ಮಾಡಿದರೂ ಒಂದು ಲಗಂ ಇದೆ.

      • ತ್ರಿಪದಿಗಳಲ್ಲಿ ಬ್ರಹ್ಮ-ವಿಷ್ಣು ಗಣಪಲ್ಲಟ ಸರ್ವೇಸಾಮಾನ್ಯ; ಇಲ್ಲಿಯೂ ಹಾಗಾಗಿದೆ.

  25. ಕೌರವತಮಸ್ತಮವನಾ
    ರೌರವಕಟ್ಟುವೆನೆ ಪಂಚಪಾಂಡವವಿದ್ಯುತ್
    ಪೌರುಷಮೇ ವ್ಯರ್ಥಂ! ಮಿಗೆ
    ಶೌರಿಯೆ ಮಾರ್ತಾಂಡಬಲದೆ ಮೂಡುವ ತನಕಂ||

  26. || ಶುದ್ಧಕಾಮದಾವೃತ್ತ ||

    ಗಗನಮಿರ್ದು ಕೋರೈಪ ಮಿಂಚಿನಿಂ,
    ಜಗಕೆ ತೋರ್ಗುಮೇಂ ಮರ್ತ್ಯಲೋಕದೊಳ್ |
    ಝಗಝಗಿಪ್ಪ ಲೀಲಾವಿಭೂತಿಯಿಂ,
    ಬಗೆಯಿಸುತ್ತೆ ಜೀವಿಪ್ಪರಂದಮಂ ? ||

  27. ಹನಿಗಳಂ ಕೂಡುತುಂ ಹೊನಲಾಗೆ ಹೊಮ್ಮುತಲಿ
    ಜನಕುಲಕೆ ನದಿಯಾಗಲಾರಾಧ್ಯವು,
    ಘನಗಗನ ಲೋಕಮಂ ಹೋಳಾಗಿ ಸೀಳುತಲಿ
    ತೆನೆದವೆಲ! ಮಿಂಚುಗಳ್ ಭೂತಮಾಗಿ!

    (ಒಳಿತನ್ನು ಮಾಡುವರನ್ನು ಲೋಕ ಆರಾಧಿಸುತ್ತದೆ)

    (ತೆನೆದವು=ಹೊಮ್ಮಿದವು)

    • ಆ ಮಿ೦ಚು ಭೂತದ೦ತೆರಗಿ ಸೆಳೆಸೆಳೆಯೆ ತಾನೆ
      ಭೂಮಿ ಮೇಗಡೆ ನೀರ ಹನಿ ಬೀಳ್ವುದು?
      ನೇಮದಲಿ ತಾನಾವುದೊಳಿತೊ ಕೆಡುಕಾವುದೋ
      ಸಾಮದಲಿ ಪೇಳ್ವುದೌ ಕಷ್ಟಮಲ್ತೇ೦?!

      • ಮಿಂಚಿದರೇ ಮಳೆಯೇ? ಮಿಂಚಿಂದ ಭಯ ಮೂಡದೇ? ಮಿಂಚು ಆಗಸಮಂ ಸೀಳುತ್ತಿರ್ಪುದು ಕಾಣದೇ? 🙂

  28. ಪಿಸಿದಿರ್ದುದಂಬರಮನುಂ
    ಬೆಸುದಿರ್ದುದದೊ ಬಗೆ ಸೂರನುಂ, ಕವಿದಿರುಳೊಳ್
    ಪೊಸ ವಿನ್ಯಾಸಮನಂ ಕಾಣ್
    ಕಸೂತಿವೆತ್ತೆ ಝರಿದಾರದಿಂ, ಕರಿಹಾಸೊಳ್ ।।

    ಆಕಾಶಕ್ಕೆ ಝರಿದಾರದಲ್ಲಿ “darning” ಪ್ರಕ್ರಿಯೆ.

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)