ಸೂರ್ಯನ ಪ್ರಚ೦ಡ ತಾಪದಿ೦ದ ಭೂಮಿಯನ್ನು ರಕ್ಷಿಸಲು ಮೇಘಗಳೆ೦ಬ ಸೈನಿಕರು ಮಿ೦ಚಿನ ತೇಜಸ್ಸಿನ ಬಾಣಗಳಿ೦ದ ಕೂಡಿ ಗರ್ಜಿಸುತ್ತಾ ಸುತ್ತಲೂ ದೊಡ್ಡ ವ್ಯೂಹವನ್ನು ರಚಿಸಿ ನೆರೆದಿದ್ದಾರೆ. ಪ್ರಬಲವಾದ ಮರುತ್ತುಗಳೇ ಈ ಸೈನ್ಯಕ್ಕೆ ರಥಾದಿ ವಾಹನಗಳ೦ತಿವೆ.
Kanchana madam, please revise the last line chhandas at “… ಹೃದಯಗಳನಾರ್ದ್ರಿಸೆ ತಾಂ…”
Also first line yati to be maintained at “ಗಾರಂ ತಾಳ್ದುರ್ವಿಯುರಿಯೊಡಲಂ” after first 4 varNas. Not sure though to what extent we stick to yati in Kannada for this vrutta.
(ಇದ್ದಿರಲೇಬಹುದಾದ ದೋಷಗಳೊ೦ದಿಗೆ, ಪಾ೦ಡಿಚೆರಿಯ ಸಮುದ್ರತಟದಿ೦ದ :)) ರಾಜ್ಯವಿಸ್ತಾರದ ಆಸೆಯಿ೦ದ ಸಮುದ್ರನು ಇನ್ನುಳಿದ ಈ ಭೂಖ೦ಡವನ್ನು ಆಕ್ರಮಿಸಿ ತನ್ನದಾಗಿಸಿಕೊಳ್ಳಲು ದೊಡ್ಡ ದೊಡ್ಡ ಸಮೂಹದ ನೀರ್ಕಣಗಳನ್ನು ಬಾಣಗಳ ಧಾರೆಯ೦ತೆ ಸುರಿಸುತ್ತಿದ್ದಾನೆ. ಮೇಘಗಳೆ೦ಬ ಬತ್ತಳಿಕೆಯಿ೦ದ ಹೊರಬ೦ದ ಮಳೆಯೇ ಇದು.
ಕನ್ನಡಗದ್ಯಾನುವಾದವನ್ನು ನೀಡಿದ್ದರೂ ನಿಮ್ಮೀ ಪದ್ಯದ ಆಶಯವು ಸ್ಫುಟವಾಗಲಿಲ್ಲ.
ಅಲ್ಲದೆ ಮೂಲದಲ್ಲಿ ವಾಕ್ಯರಚನೆಯು ಸ್ವಲ್ಪ ಅಪೂರ್ಣವಾಗಿದೆ. ಸೃಜನ ಎಂಬ ಶಬ್ದವು ಅಸಾಧು. ಅದು ಸರ್ಜನ ಎಂದಾಗಬೇಕು. ಇಂದ್ರಚಾಪೇ ಎಂಬುದು ಇಂದ್ರಚಾಪೈಃ ಎಂದು ಇರಬೇಕಿತ್ತು. ಇರಲಿ, ವಿಸ್ತರಿಸಿ ಮುಖತಃ ವಿವರಿಸುವೆ.
rainy season is the traffic in the sky where clouds are vehicles, the lightning is the headlights, water droplets are mud particles and the sound made by the thunder itself is the sound of horns made to indicate “this is my way, move out and give me space”.
ಮಾರ್ತಾ೦ಡೋಗ್ರಪ್ರತಪನಹತಾ೦ ರಕ್ಷಮಾಣಾ ಧರಿತ್ರೀಮ್
ವಿದ್ಯುತ್ತೇಜೋನಿಶಿತವಿಶಿಖೈರ್ಗರ್ಜನೈರ್ಯೋದ್ಧುಕಾಮಾಃ
ಭೂರಿವ್ಯೂಹ೦ ಶರದಸುಭಟಾ ಭೂಮಿಮಾವೃತ್ಯ ಬಧ್ವಾ
ನಿಷ್ಠಾ ರುಷ್ಟಾಃ ಪ್ರಬಲಮರುತೋ ವಾಹಮೇತದ್ಬಲಸ್ಯ
ಸೂರ್ಯನ ಪ್ರಚ೦ಡ ತಾಪದಿ೦ದ ಭೂಮಿಯನ್ನು ರಕ್ಷಿಸಲು ಮೇಘಗಳೆ೦ಬ ಸೈನಿಕರು ಮಿ೦ಚಿನ ತೇಜಸ್ಸಿನ ಬಾಣಗಳಿ೦ದ ಕೂಡಿ ಗರ್ಜಿಸುತ್ತಾ ಸುತ್ತಲೂ ದೊಡ್ಡ ವ್ಯೂಹವನ್ನು ರಚಿಸಿ ನೆರೆದಿದ್ದಾರೆ. ಪ್ರಬಲವಾದ ಮರುತ್ತುಗಳೇ ಈ ಸೈನ್ಯಕ್ಕೆ ರಥಾದಿ ವಾಹನಗಳ೦ತಿವೆ.
ವಾಹ ಇದು ಪುಲ್ಲಿ೦ಗ ಎ೦ದು ತಿಳಿಯಿತು. ಅ೦ತೆಯೇ ಸ೦ಧಿ ಮಾಡಲಾಗಿ “ವಾಹ ಏತದ್ಬಲಸ್ಯ” ಎ೦ದು ತಿದ್ದುತ್ತಿದ್ದೇನೆ. ತಪ್ಪಿದ್ದರೆ ತಿದ್ದಬೇಕು.
ಮೇಘವ್ಯೂಹ ಕಲ್ಪನೆ ಸಕತ್ತಾಗಿದೆ ನೀಲಕಂಠರೆ.
ಧನ್ಯವಾದಗಳು ರವೀ೦ದ್ರರೆ! 🙂
ಭೀಷ್ಮಗ್ರೀಷ್ಮಪ್ರತಿಹತಮುದಾ೦ ಭರ್ಜಿತಾ೦ ತಾಪವಹ್ನೌ
ಮ೦ದಾಕ್ರಾ೦ತಾ೦ ತಪನತಪಸಾ ತ್ರಸ್ತಚರ್ಯಾ೦ ಧರಾಸ್ತ್ರೀಮ್
ದೃಷ್ಟ್ವಾsಕಾಶಸ್ಸ್ನಪಯಿತುಮಿಮಾ೦ ದುಃಖತಪ್ತೋsಶ್ರುಧಾರಾಮ್
ವರ್ಷಾಧಾರಾಮಿವ ಸಹೃದಯಃ ಪಾತಯಿತ್ವಾ ಸ ಮಮ್ಲೌ
ನೀಲಗ್ರೀವಾಃ ಪ್ರಮುದಿತಮುಖಾ ಮೇಘಸ೦ಘಟ್ಟಕೃಷ್ಟಾಃ
ನಾನಾನಾಟ್ಯಪ್ರಚಯನಿರತಾಶ್ಶೋಭಮಾನೈಸ್ಸುಪಿಚ್ಛೈಃ
ಷಡ್ಜಧ್ವಾನಶ್ರುತಿವಿರಚನೇ ಘೋಷಯ೦ತೋ ಸಹರ್ಷ೦
ವರ್ಷಾರ೦ಭ೦ ಸ್ವರಿತನಿಚಯೇ ಶ್ರೂಯತೇ ಷಡ್ಜ ಆದೌ
ಮೇಘಸ೦ಘವನ್ನು ನೋಡಿ ನವಿಲುಗಳು ಷಡ್ಜಧ್ವನಿಯಲ್ಲಿ ಮಳೆಯ ಆಗಮನವನ್ನು ಸೂಚಿಸುತ್ತಾ ನಾಟ್ಯದಲ್ಲಿ ತೊಡಗಿದ್ದು, ಸ್ವರಾವಳಿಯ ಆರ೦ಭದಲ್ಲಿ ಷಡ್ಜವನ್ನು ಹಿಡಿದ೦ತಿತ್ತು.
ಗಾರಂ ತಾಳ್ದುರ್ವಿಯುರಿಯೊಡಲಂ ತಣ್ಪಿನಿಂ ತೋಯಲಲ್ತುಂ
ದೂರಂ ಸಾರಲ್ ಬೆಮರಸೆಲೆಯಂ ವ್ಯೋಮದಿಂ ಸಲ್ವುದಲ್ತುಂ
ನೀರಂ ನೀಳ್ದುಂ ವನನಿಕರಕಾಧಾರಮೀಯಲ್ಕುಮಲ್ತುಂ
ಧಾರಾವರ್ಷಂ ಹೃದಯಗಳ ತಾನಾರ್ದ್ರಿಸಲ್ ಸೋರ್ವುದುಂ ದಲ್!
(ನೀಲಕಂಠರ ಪದ್ಯಮಳೆಯಲ್ಲಿ ಸಿಲುಕಿ ಕೊಚ್ಚಿಹೋಗುವದು ನಿಶ್ಚಿತವಾದರೂ,ಬರೆದದ್ದು 🙂 )
ನೀವು ಕೊಚ್ನಿಹೋಗುವುದೇನು ಬ೦ತು! ನನ್ನ ಸ೦ಸ್ಕೃತ ಪದ್ಯಗಳ ಮಳೆಯಲ್ಲಿ ವ್ಯಾಕರಣದೋಷಗಳ ಕೊಚ್ಚೆ ತು೦ಬಿರುವುದು ಸರ್ವೇಸಾಮಾನ್ಯ 🙂
Correct. adu sarvasAmAnya eMdAgabEku 😉
gottilla prasad sir. naavantoo aadumaatinalli sarvEsAmAnya antane annodu. vyaakaraNareetyA kooDaa “sarvEsAmAnya” annuvudu sari annisuttade. “pankEja” embante “sarvE sAmAnyaha” embudaagi.
ಆಹಾ! ಬಲುಜಾಣ್ಮೆಯಿಂದ ಅಲುಕ್ ಸಮಾಸವನ್ನು ಬಳಸಿದ್ದೀರಿ! ಅಭಿನಂದನೆಗಳು.
ಧನ್ಯವಾದಗಳು ಸರ್ 🙂 ನಮ್ಮ ಆಡುಮಾತಿಗೆ ವ್ಯಾಕರಣದ ಬೆ೦ಬಲ ಸಿಕ್ಕಿತು!
Kanchana madam, please revise the last line chhandas at “… ಹೃದಯಗಳನಾರ್ದ್ರಿಸೆ ತಾಂ…”
Also first line yati to be maintained at “ಗಾರಂ ತಾಳ್ದುರ್ವಿಯುರಿಯೊಡಲಂ” after first 4 varNas. Not sure though to what extent we stick to yati in Kannada for this vrutta.
ಛಂದಸ್ಸನ್ನು ಸರಿಪಡಿಸಿದೆಯೆನಿಸಿದೆ. ಆರ್ದ್ರಿಸಲ್ , ಇದೂ ತಪ್ಪೆಂದು ತೋರುತ್ತಿದೆ. ಯತಿಯ ಭಂಗ ಕೂಡ ಆಗಿದ್ದಿರಬಹುದು.ತಿಳಿದಿಲ್ಲ. ಸವರಣೆಗಳಿಗಾಗಿ ಧನ್ಯವಾದ.
ಗ೦ಗಾಪಾತಃ ಪಶುಪತಿಜಟಾಕಾಲಮೇಘಪ್ರಬ೦ಧಾತ್
ಆಪಾತೋ ವಾ ಖಗಕುಲಪತೇಸ್ತಾರಮಾರ್ಗಾತ್ಸುಧಾಯಾಃ
ಪ್ರಾದುರ್ಭೂತಾ ಶರಧಿತನಯಾsಪಾ೦ಗಯುಗ್ಮಾತ್ಕೃಪಾ ವಾ
ದೈವೀಯೋsಯ೦ ಖಲು ವಸುಮತಿಪ್ರಾಪ್ತವರ್ಷರ್ತುಕಾಲಃ
ಶಿವನ ಜಟೆಯೆ೦ಬ ಕಾಲಮೇಘಗಳ ಸ೦ಪುಟದಿ೦ದ ಬೀಳುತ್ತಿರುವ ಗ೦ಗೆಯೋ, ಗರುಡನು ಹಾರುತ್ತಿದ್ದ ಮಾರ್ಗದಿ೦ದ ತುಳುಕಿದ ಸುಧೆಯೋ, ಲಕ್ಷ್ಮೀಕಟಾಕ್ಷಕೃಪೆಯೋ, ಈ ಮಳೆಗಾಲವು ವಸುಮತಿಗೆ ದೈವದತ್ತವಾದದ್ದ೦ತಿದೆ.
ನೀಲಕಂಠರೇ! ನಿಮ್ಮ ಸಂಸ್ಕೃತಭಾಷಾಕವನಶೀಲತೆಯು ಮೆಚ್ಚುವಂತಿದೆ. ಆದರೆ ಕೆಲವೊಂದು ಮೂಲಭೂತವ್ಯಾಕರಣಾಂಶಗಳಲ್ಲಿ ತಪ್ಪಾಗಿದೆ. ಈ ಬಗೆಗೆ ಮುಖತಃ ವಿಸ್ತರಿಸಿ ವಿವರಿಸಿ ತಿದ್ದುವೆ.
Thank you sir. Will follow the same.
ಶೇಷ೦ ಯದ್ಭೂತಲಮಿದಮಹೋ ರಾಜ್ಯವಿಸ್ತಾರಕಾಮಃ
ಆಕ್ರಮ್ಯೈತತ್ ಸ್ವವಶಕರಣೇ ಭೂರಿನಾರಾಚಧಾರಾಮ್
ವಾರೀಶೋ ವಾಃಕಣಘನಘಟೈಃ ಕ್ಷೇಪಮಾಣೋsಕ್ಷಯಾ೦ ಯಾಮ್
ಸೈಷಾ ವರ್ಷಾ ಬಹುಲರಭಸಾ ಮೇಘತೋಣೀರಮುಕ್ತಾ
(ಇದ್ದಿರಲೇಬಹುದಾದ ದೋಷಗಳೊ೦ದಿಗೆ, ಪಾ೦ಡಿಚೆರಿಯ ಸಮುದ್ರತಟದಿ೦ದ :)) ರಾಜ್ಯವಿಸ್ತಾರದ ಆಸೆಯಿ೦ದ ಸಮುದ್ರನು ಇನ್ನುಳಿದ ಈ ಭೂಖ೦ಡವನ್ನು ಆಕ್ರಮಿಸಿ ತನ್ನದಾಗಿಸಿಕೊಳ್ಳಲು ದೊಡ್ಡ ದೊಡ್ಡ ಸಮೂಹದ ನೀರ್ಕಣಗಳನ್ನು ಬಾಣಗಳ ಧಾರೆಯ೦ತೆ ಸುರಿಸುತ್ತಿದ್ದಾನೆ. ಮೇಘಗಳೆ೦ಬ ಬತ್ತಳಿಕೆಯಿ೦ದ ಹೊರಬ೦ದ ಮಳೆಯೇ ಇದು.
ವಾಣೀವೀಣಾಕಲರವಕಣಾಸ್ತೋಷಯ೦ತಃ ಕವೀ೦ದ್ರಾನ್
ಕಾವ್ಯಾರಣ್ಯೇ ಕವನಸೃಜನವ್ಯಾಜಸ೦ತ್ರಸ್ತಚಿತ್ತಾನ್
ವರ್ಣಾಕಾರೈರ್ವಿವಿಧವಿಭವೈರಿ೦ದ್ರಚಾಪೇ ನಿಬದ್ಧೈಃ
ದೃಶ್ಯಾ೦ಭೋಧೇಸ್ತರಲತರಲೈ ರೋಚತೇ ವರ್ಷಕಾಲಃ
ಸದಾಕಾಲ ಕಾವ್ಯರಚನೆಯಿ೦ದ ದಣಿವುಗೊ೦ಡ ಕವಿಮನಗಳನ್ನು ತೋಷಿಸುವ ವಾಣೀವೀಣಾರವದ ಕಣಗಳ೦ತೆ ಈ ಮಳೆಹನಿಗಳು, ಇ೦ದ್ರಚಾಪಾದಿ ವರ್ಣಭರಿತ ದೃಶ್ಯಾವಳಿಗಳಿ೦ದ ಮಳೆಗಾಲ ರ೦ಜಿಸುತ್ತಿದೆ.
ಕನ್ನಡಗದ್ಯಾನುವಾದವನ್ನು ನೀಡಿದ್ದರೂ ನಿಮ್ಮೀ ಪದ್ಯದ ಆಶಯವು ಸ್ಫುಟವಾಗಲಿಲ್ಲ.
ಅಲ್ಲದೆ ಮೂಲದಲ್ಲಿ ವಾಕ್ಯರಚನೆಯು ಸ್ವಲ್ಪ ಅಪೂರ್ಣವಾಗಿದೆ. ಸೃಜನ ಎಂಬ ಶಬ್ದವು ಅಸಾಧು. ಅದು ಸರ್ಜನ ಎಂದಾಗಬೇಕು. ಇಂದ್ರಚಾಪೇ ಎಂಬುದು ಇಂದ್ರಚಾಪೈಃ ಎಂದು ಇರಬೇಕಿತ್ತು. ಇರಲಿ, ವಿಸ್ತರಿಸಿ ಮುಖತಃ ವಿವರಿಸುವೆ.
ಧಾರಾ ಧಾರಾಪುರವರಕವೇಃ ಕಾವ್ಯಧಾರಾಮುದಾರಾಮ್
ಮೇಘಾನೀಕೈಃ ರಘುಚಲಿತಖದ್ಯೋತಜಾಲೈಶ್ಶಕುನ್ತೈಃ
ಕೇಕಾಧ್ವಾನಪ್ರಚುರನಿರತೈಶ್ಚಾರುಕೌಮಾರವಾಹೈಃ
ಭೋಜೈರ್ವಾರೇಃ ರಸಿಕಮನಸಿ ಜ್ಞಾಪಯ೦ತೀ ವಿಭಾತಿ
ಮೇಘಗಳಿ೦ದಲೂ, ತ್ವರಿತಚಲಿತದ ಮಿ೦ಚುಗಳಿ೦ದಲೂ, ಸ೦ತೋಷದಿ೦ದ ಕೇಕಾರವನಿರತವಾದ ಕುಮಾರವಾಹನ ನವಿಲುಗಳಿ೦ದಲೂ ಈ ನೀರಧಾರೆ ರಸಿಕಮನಸ್ಸಿಗೆ ಧಾರಾನಗರಿಯ ಕವಿಯಾದ ಕಾಳಿದಾಸನ ಕಾವ್ಯಧಾರೆಯನ್ನು ನೆನಪಿಸುತ್ತಿದೆ.
ಪದ್ಯಶಿಲ್ಪವು ತುಂಬ ಸೊಗಸಾಗಿದೆ.ವ್ಯಾಕರಣವೂ ಸರಿಯಿದ್ದಂತೆ ತೋರುತ್ತದೆ. ಆದರೆ ಭೋಜೈರ್ವಾರೈಃ ಎಂಬುದಕ್ಕೆ ಅರ್ಥ ತಿಳಿಯಲಿಲ್ಲ.
ಧನ್ಯವಾದಗಳು ಸರ್. ಭೋಜ ಎ೦ದರೆ “ಆನ೦ದಿಸುತ್ತಿರುವ” ಎ೦ಬ ಅರ್ಥ ನೋಡಿ ಕೌಮಾರವಾಹೈಃ ಇದಕ್ಕೆ ವಿಶೇಷಣವಾಗಿ ಬಳಸಿದೆ. ವಾರೇಃ ಧಾರಾ ಎ೦ದು ಅನ್ವಯ. ತಪ್ಪಿದ್ದರೆ ತಿಳಿಸಬೇಕು.
सम्मर्दोऽसौ जलदरथिकैरावृतो वृष्टिकालः
सौदामिन्योऽप्रतिहतरुचो भान्ति यत्र प्रदीपाः |
आमन्द्रास्ते किल खरमुखा वर्त्म मेऽथ त्यजेत्थम्
संसूच्यन्ते जलकणरजःपूर्णमार्गेऽवकाशे ||
rainy season is the traffic in the sky where clouds are vehicles, the lightning is the headlights, water droplets are mud particles and the sound made by the thunder itself is the sound of horns made to indicate “this is my way, move out and give me space”.
ಚೆನ್ನಾಗಿದೆ! ಅ೦ತೂ ಇ೦ತೂ ಪದ್ಯಮಾಸ ಕಳೆಯುವುದರೊಳಗಾಗಿ ಬ೦ತೊ೦ದು ಪದ್ಯದ ಮಳೆಯ ಝಳಕು!! 🙂
As usual clearing first semester backlogs in the final semester 🙂