(ಅನ್ನದಾತುರಕಿ೦ತ ಚಿನ್ನದಾತುರ ಮೇಲು, ಚಿನ್ನದಾತುರಕಿ೦ತ ಹೆಣ್ಣುಗ೦ಡೊಲವು… ಎ೦ಬ೦ತೆ ಈ ಭಿಕ್ಷುಕನ ಆಸೆ ಅನ್ನ ಸಾರು ಪೂರಿ ಸಾಗುಗಳನ್ನು ‘ಬಳಸಿಕೊ೦ಡು’ ಅತಿಕ್ರಮಿಸಿದೆ. ಆ ಭಿಕ್ಷುಕನಾದ ಶಿವನಿಗೆ ಪಾರ್ವತಿ ದಕ್ಕಿರುವಾಗ, ನನಗೆ ಯಾರಾದರೂ ದಕ್ಕುವರೇ? ಇಲ್ಲ ಈ ಕೆಟ್ಟ ಜನ್ಮ ಹೀಗೆಯೇ ಕಳೆಯುವುದೋ ಎ೦ದು ಚಿ೦ತಿಸುತ್ತಿದ್ದಾನೆ 🙂 )
ತಾರೆಯಲೋಕಮಂ ಪುಗುತೆ ತನ್ನಯ ಬನ್ನಮನೆಲ್ಲರೊಳ್ ಸದಾ
ಸಾರುತೆ ನೀಡಿ ನೀಡಿ ಬಡ ಜೀವಕೆ ತಿನ್ನಲು ಕೂಳನೆನ್ನುತುಂ
ತೋರುತಲಂಬು ಪೂರಿತದಕಂಗಳಿನಿಂದಲೆ ಕಳ್ತಲಾಗಿರಲ್
ದಾರಿಯೆ ಕಾಣದಾಗೆ ವಳಕಂ ಪುಡುಕುತ್ತಲಿ ಸಾಗುತಿರ್ದಪಂ
ತಾನು ಕನಸಿನಲ್ಲಿ ತಾರೆಯ ಲೋಕಕ್ಕೆ ಹೋದರೂ ಸಹ, ಭಿಕ್ಷೆಯನ್ನೇ ಬೇಡುವನು ಹೊರತು ಸುಖದ ಜೀವನವನ್ನು ಕಲ್ಪಿಸಲಾರ..
ಅನ್ನ ಸಾರುಗಳನೆನಗಿ೦ದು ಮನವಿತ್ತುಕೊಡು-
ವನ್ನಪೂರ್ಣೆಯನಾವ ಬೀಡಿನೊಳು ಕಾಂಬೆ ?
ನಿನ್ನೆ ಮಾಡಿದ ಪೂರಿ ಸಾಗುಗಳನೀಯುತ್ತ
ತಿನ್ನು ತಿನ್ನೆಂದುಲಿವ ಮನೆಯೊಡತಿಯೊ ?
ಭಿಕ್ಷೆಗೆ ಹೋಗುವ ಮೊದಲೇ ತನಗೆ ಸಿಗುವ ಆಹಾರದ ಬಗ್ಗೆ ಕನಸು ಕಾಣುವವನು …
ಖಂಡಿತವಾಗಿಯೂ ಹೌದು . ಅದಕ್ಕಾಗಿಯೇ ನಾನು ಪದಗಳನ್ನು ಅದೇ ರೀತಿಯಲ್ಲಿ ಉಳಿಸಿಕೊಂಡು ಭಿಕ್ಷುಕರಿಬ್ಬರ ದೃಷ್ಟಿಯಿಂದ ಮನೆಯಾಕೆಯ ಮೇಲೆ ಅವರ ಭಾವನೆಗಳನ್ನು ಬಿಂಬಿಸಿವ ಪ್ರಯತ್ನವನ್ನು ಕೈಗೆತ್ತಿಕೊಂಡಿದ್ದೆ . ಒಬ್ಬ ಶ್ರೇಷ್ಟ ಪರಿವ್ರಾಜಕ ಸನ್ಯಾಸಿ : ಇನ್ನೊಬ್ಬ ಬೀದಿ ಬಿಕಾರಿ .
ಪರಿವ್ರಾಜಕನಿಗೆ, ಪಾಲಿಗೆ ಬ೦ದದನ್ನು ತಿನ್ನುವುದು ಧರ್ಮ . ಬೀದಿಬಿಕಾರಿಗೆ ಅದು ಅನಿವಾರ್ಯ . ಪರಿವ್ರಾಜಕ ಗೊಣಗಿದರೆ ಅದು ಅವನು ಆಶ್ರಯಿಸಿಕೊಂಡ ಧರ್ಮಕ್ಕೆ ವಿರುದ್ಧವಾಗುತ್ತದೆ . ಬೀದಿ ಬಿಕಾರಿಗೆ ಆ ಹಂಗೇನೋ ಇಲ್ಲ .
ಆದರೂ ಆಹಾರ ಕೊಡುವ ಮನೆಯಾಕೆಯನ್ನು ಇಬ್ಬರೂ ಅವರವರ ಅಗತ್ಯ ,ಅನಿವಾರ್ಯತೆಗೆ ಅನುಗುಣವಾಗಿ ಮೆಚ್ಚುತ್ತಾರೆ . ಮಾತ್ರವಲ್ಲ ಇಬ್ಬರಿಗೂ ಆ ಹೊತ್ತಿನ ಊಟದ ಚಿಂತೆ ಮಾತ್ರವಿರುತ್ತದೆ ಎಂಬುದು ಆ ಸಮಯದಲ್ಲಿ ಅವರಿಗಿರುವ ಸಮಾನತೆ—-ಎಂಬುದು ನನ್ನ ಭಾವನೆ . ಪರಿವ್ರಾಜಕ ಏನೂ ಗೊಣಗದೆ ಸಮಾಜಕ್ಕೆ ತನ್ನ ಋಣ ತೀರಿಸುವ ಕಾಯಕದಲ್ಲಿ ತೊಡಗುತ್ತಾನೆ . ಸಾಮಾನ್ಯ ಭಿಕ್ಷುಕ ಸಮಾಜಕ್ಕೆ ಋಣಭಾರವಾಗಿ ಬದುಕುತ್ತಾನೆ . ಈ ರೀತಿಯ ಸಾಮ್ಯತೆ ಮತ್ತು ವೈಪರೀತ್ಯದ ವ್ಯಕ್ತಿತ್ವಗಳನ್ನು ಬಿಂಬಿಸುವುದು ಇಲ್ಲಿ ನನ್ನ ಉದ್ದೇಶವಾಗಿತ್ತು . ಇಷ್ಟು ವಿವರಗಳನ್ನು ಆಗ ಹಾಕುವುದು ಸಾಧ್ಯವಾಗಿರಲಿಲ್ಲ . ಕ್ಷಮಿಸಿ
ಈಗ( ಪದ್ಯದ ಕತೆ ) ಕುತೂಹಲಕಾರಿಯಗಿದೆಯೇ? ತಿಳಿಸಿ..
ಅಯ್ಯಯ್ಯೋ, ಕ್ಷಮಿಸುವುದಕ್ಕೇನೂ ಇಲ್ಲ. ನಿಮ್ಮ ಕಲ್ಪನೆ ತು೦ಬಾನೆ ಹಿಡಿಸಿತು. ಹಿ೦ದೊಮ್ಮೆ ನಾನೂ ಹೀಗೆಯೇ ಪದ, ಅರ್ಥಗಳನ್ನು ಉಳಿಸಿಕೊ೦ಡು ಪೂರೈಸಿದ್ದಾಗ ಗಣೇಶ ಸರ್ ಅದು ಅಷ್ಟು ಸರಿ ಅಲ್ಲ ಎ೦ದಿದ್ದರು. ಅದಕ್ಕೇ ನಾನೂ ಕೇಳಿದೆ, ಅಷ್ಟೆ 🙂
ಸದ್ಯ ನೀಲಕ೦ಠರು ಖಂಡಿಸಲ್ಪಡ ಬೇಕಾದ ಕಾವ್ಯವೆನ್ನಲಿಲ್ಲವಲ್ಲ , ಅಷ್ಟು ಸಾಕು 🙂
ನಾನು ಬರೆಯಲು , ಯೋಚಿಸಲು ಜಿಪುಣತನದಿಂದ ಹಾಗೆ ಮಾಡಿದೆನೆಂದು ಕಂಡು ಬಂದಲ್ಲಿ ಗಣೇಶ್ ಸರ್ ನನನ್ನೂ ಆಕ್ಷೆಪಿಸ ಬಹುದು . ..
ಭಿಕ್ಷುಕ ಎಣಿಸುತ್ತಿದ್ದಾನೆ, “ಚತುರೋಕ್ತಿಗಳಲ್ಲಿ ಸ೦ಪನ್ನನಾದವನೂ, ತ೦ಪಾದ ನುಡಿಯಿ೦ದ ದೈನ್ಯದಿ೦ದ ಜನರ ಬಳಿ ಹೋಗಬಲ್ಲವನೂ, ಆರಾರ ಮನೆಯಲ್ಲಿ ಆರಾರು ತನಗೆ ರ೦ಪಮಾಡದೆಯೇ ಸವಿಗೂಳನಿಕ್ಕುವರೆ೦ದು ನೆನಪಿಟ್ಟುಕೊಳ್ಳುವವನೂ ಆದ ಮಗನೊಬ್ಬ ಹುಟ್ಟಿದರೆ ಬಾಳು ಚೆನ್ನಾಗುತ್ತದೆ” ಎ೦ದು.
ಅಮೋಘವಾದ ಕಲ್ಪನೆ, ಕವನಿಕೆ. ಎರಡನೆಯ ಪಾದದಲ್ಲಿ ’ತಾ೦ ಸಾರುವ೦’ ಬದಲು ’ಸಾರ್ವಾತನುಂ’ ಎಂದರೆ uniformity of tense ಇರುತ್ತೆ.
ಕೊನೆಯ ಪಾದದ ’ರಂಪಂ’ – ಅಂತೂ ಕುಲಕರ್ಣಿಕುಚೋದ್ಯವನ್ನು ಮೆರೆದೇಬಿಟ್ಟಿರಿ!
ಕರಂಭಜಾತಿ|| “ಅನನ್ನಮಂ (unpalatable) ನೀನುಣುವಂಥ ಪಾಡಿದೇಂ?
ಅನಾರ್ಯಹಿಂಸಾರು(Tiger)ವದಾಗದಿರ್ದು ಮೇಣ್|
ನೀನೆಂತೊ ಲೇಸಾಗು ಹಿರಣ್ಯಪೂರಿತಂ …….”
Having appeared in a beggar’s dream, God was uttering blessings thus when…
ಸುನಾಮಿಯಿಂದೆಚ್ಚರಗೊಂಡ ಭಿಕ್ಷುಕಂ||
Instead of ಸಾರು, you have used ಸಾರಿ (sorry). It is okay. both those suffixes are feminine: ವಿಶಾಲ್+ಉ = ವಿಶಾಲ್+ಇ.
Our ಸಾರು is ರಸಂ to the Tamils. If rather they had done a ತದ್ಭವ of ಸಾರು, then they would call it ಸಾರಿs
ಇರಲೌ, ಸಾರುM-sorryಗ
ಳೆರಡೂ ಸ್ತ್ರೀಲಿಂಗರೂಪಿ ಪ್ರತ್ಯಯಗಳ್ ಕಾಣ್|
ಕರೆಯದೆ ಪೋದೊಡನದ ತಮಿ-
ಳರು ರಸಮೆಂದಾಗ ’ಸಾರಿ’ ಎಂಬರು ದಿಟದಿಂ||
ಬಗೆಯೊಳಡರ್ದ ಭಾವದಲೆಗಳ್ ಮಿಗೆ ಸಾಗುವವೋಲೆ ತೋರ್ದುದುಂ,
ಸೊಗಯಿಪ ತಲ್ಪದೊಳ್ ಸಲಲೆ ಕೂರ್ಮೆಯ ಸಾರುವೆಯನ್ನೆ ನೇವುದುಂ,
ಜಗಮಗಿಪಂದದೊಂದಳಿದ ಬನ್ನದ ,ಬಾಳ್ತೆಯನಾಂತು ಕಾದುದುಂ,
ಮಗುಚಿರೆ ಪೂರಿಸಲ್,ಕನಸೊಳಾಳುವ ಭಿಕ್ಷುಕನಾಗೆ ಸಂದೆನೇಂ!
ಸಾಗುವ=ನೆರವೇರುವ
ಸಾರುವೆ=ಸೇತುವೆ
ಹಳಗನ್ನಡದ ಜಾಡನ್ನು ದಯಮಾಡಿ ಗಟ್ಟಿಯಾಗಿ ಹಿಡಿಯಿರಿ. ಸಪ್ನ ಎಂಬುದು ಅಪಶಬ್ದ. ಅದು ಹಿಂದಿಯ ಪ್ರಭಾವದಿಂದ ಬಂದದ್ದು.
ಕ್ಷಮಿಸಿ.ಸುಧಾರಣೆಯನ್ನು ಮಾಡಲು ಯತ್ನಿಸಿದ್ದೇನೆ.
ಶ್ರೀಮನ್ನಗಾಧಿಪತನೂಭವೆ ಭಿಕ್ಷುಕ೦ಗಾ
ಕಾಮಾರಿಗ೦ ನಿಜಮನ೦ಗುಡೆ, ಸಾರುತು೦ ತ-
ನ್ನಾಮೋದದಾಸೆಯನೆ ಪೂರಿಸಲಾವಳೆನ್ನ೦
ಹಾ ಮೋಹಿಪಳ್! ಸಮೆದು ಸಾಗುವುದೇ೦ ಕುಜನ್ಮ೦?!!
(ಅನ್ನದಾತುರಕಿ೦ತ ಚಿನ್ನದಾತುರ ಮೇಲು, ಚಿನ್ನದಾತುರಕಿ೦ತ ಹೆಣ್ಣುಗ೦ಡೊಲವು… ಎ೦ಬ೦ತೆ ಈ ಭಿಕ್ಷುಕನ ಆಸೆ ಅನ್ನ ಸಾರು ಪೂರಿ ಸಾಗುಗಳನ್ನು ‘ಬಳಸಿಕೊ೦ಡು’ ಅತಿಕ್ರಮಿಸಿದೆ. ಆ ಭಿಕ್ಷುಕನಾದ ಶಿವನಿಗೆ ಪಾರ್ವತಿ ದಕ್ಕಿರುವಾಗ, ನನಗೆ ಯಾರಾದರೂ ದಕ್ಕುವರೇ? ಇಲ್ಲ ಈ ಕೆಟ್ಟ ಜನ್ಮ ಹೀಗೆಯೇ ಕಳೆಯುವುದೋ ಎ೦ದು ಚಿ೦ತಿಸುತ್ತಿದ್ದಾನೆ 🙂 )
ತುಂಬ ತುಂಬ ಸೊಗಸಾದ ಪದ್ಯ. ವೃತ್ತನಿರ್ವಾಹ, ಭಾಷೆ, ಕಲ್ಪನೆ, ಪದಪದ್ಧತಿ ಮುಂತಾದ ಎಲ್ಲ ಅಂಶಗಳಲ್ಲಿಯೂ ಬಲುಚೆಲುವಾಗಿದೆ. ಅಭಿನಂದನೆಗಳು.
ಧನ್ಯವಾದಗಳು ಸರ್!
ತಾರೆಯಲೋಕಮಂ ಪುಗುತೆ ತನ್ನಯ ಬನ್ನಮನೆಲ್ಲರೊಳ್ ಸದಾ
ಸಾರುತೆ ನೀಡಿ ನೀಡಿ ಬಡ ಜೀವಕೆ ತಿನ್ನಲು ಕೂಳನೆನ್ನುತುಂ
ತೋರುತಲಂಬು ಪೂರಿತದಕಂಗಳಿನಿಂದಲೆ ಕಳ್ತಲಾಗಿರಲ್
ದಾರಿಯೆ ಕಾಣದಾಗೆ ವಳಕಂ ಪುಡುಕುತ್ತಲಿ ಸಾಗುತಿರ್ದಪಂ
ತಾನು ಕನಸಿನಲ್ಲಿ ತಾರೆಯ ಲೋಕಕ್ಕೆ ಹೋದರೂ ಸಹ, ಭಿಕ್ಷೆಯನ್ನೇ ಬೇಡುವನು ಹೊರತು ಸುಖದ ಜೀವನವನ್ನು ಕಲ್ಪಿಸಲಾರ..
ಸಾಗುತಲಿರ್ಪೆಂ ಲೋಕದ ಜೊತೆಗಂ
ಮಾಗಿದ ರನ್ನದ ಬದುಕಿನ ಮೆದೆಗಂ |
ಬೀಗುತೆ ದುಡಿಮೆಯ ಸಾರುವರತ್ತಂ,
ನೀಗುತುಮೀ ವಿಷಪೂರಿತವೃತ್ತಂ ||
(ಭಿಕ್ಷೆಯ ಕಾಯಕವನ್ನು ತ್ಯಜಿಸಿ …)
ಕಡೆಯಸಾಲಿನಲ್ಲಿ 2 ಮಾತ್ರೆ ಹೆಚ್ಚಾಗಿದೆಯಲ್ಲವೆ
yaava chhandassu?
೨ ಮಾತ್ರೆಗಳನ್ನು ನೀಗಿಸಿದ್ದೇನೆ 🙂
Madam, idu yaava chhandassu?
ಇದನ್ನು ಹೆಚ್ಚಾಗಿ ಮಂದಾನಿಲ ರಗಳೆಯೆಂದು ವರ್ಗೀಕರಿಸಬಹುದೇನೋ. 🙂
ತಿರುಪೆಯನೆತ್ತುತೆ ಬಳಿ ಸಾ-
ರಿರೆ ಸಾಗೆಂದಟ್ಟುತಿರ್ದ ಜನತಾಂ ತಿರುಗಂ-
ದಿರುಳೊಳ್ ಮಲಗಿರ್ಪನ್ನಂ
ಕರೆದುಂ ಜೋಳಿಗೆಯ ಪೂರಿಸುದು ಬರಿಗನಸೈ ।।
ಸಾರದು ಸಾಲೊಳೆ ಸಾಲದೆ
ಮೀರುತೆ ಚೆಲ್ಲಿರೆ ಜನರ್ಗೆ ಚಣದೊಳೆ ನೀಳ್ದರ್
ಧಾರೆಯೊಳೆ ಸಾಗುವ೦ ನೀ-
ಮಾರೊಳ್ ಕಲಿತಿರ್ಪಿರೌ ಬಲುಬಲುಹುತನಮ೦?!
ಸಾರನೆ ಸಾಗೆಂದು ಬಗೆಯು-
ತಾರವ ಬಾಯಾರೆ ಪೊಗಳೆ ಕಲಿತೆನೊಲುಮೆಯಿಂ !!
ಕಾರಣವಿತ್ತನ್ನಂ ಸಾ-
ಧಾರಣಮಾಗೆ ಭರಪೂರ ಪೂರಣಮಾಯ್ತೈ !!
ಸಾರುತಿರೆ ಡಂಗುರಮನೆತ್ತಲೊ
ಭಾರಿಯುಡುಗೊರೆ ಪಡೆಯಿರೆಂಬುವ,
ತೂರಿ ಪೋದಂ,ಪೂರಿಸುಗುಮೆಂದಾಸೆ,ಬಲುದಿನದಾ |
ಸಾರಿ ಪೇಳ್ದೊಡೆ,ಸಾಗುವಳಿಯಿಂ
ಜಾರಿ,ಬೇಡಲು ಬಂದಗಿಲ್ಲಂ-
ಭೂರಿ ಮನ್ನಣೆ,ಹಾರಿಯೆದ್ದಂ ಕನಸಿನಿಂದಾತಂ||
(ಕೃಷಿಯನ್ನು ತೊರೆದು,ಭಿಕ್ಷುಕನಾದವನನ್ನು ಕಾಡುತ್ತಿರುವ ಕನಸು)
ಬಸವಳಿದಿರ್ದವ ತಾನುಂ
ಪಸಿವಿನ ಪೂರಕದೊ ನಿದಿರೆಯಾ ಸಾರಂಗ-
ಟ್ಟಿ, ಸಪನದೊಳ್ ಕೂಡಸನಕೆ
ದೆಸೆಗೆಟ್ಟುಂ ಸಾಗುದನ್ನಯಂ ತಿರುಕುಳಿಗಂ ।।
ತಿರುಕುಳಿ = ಯಾಚಕ – ದಣಿದು ಹಸಿವಿನ ಪ್ರವಾಹಕ್ಕೆ ನಿದಿರೆಯ ಸೇತುವೆಕಟ್ಟಿದವ, ಕನಸಿನಲ್ಲೂ ಅನ್ನಕ್ಕಾಗಿ ಅಲೆಯುತ್ತಿದ್ದುದು ನಿಜಕ್ಕೂ ಅನ್ಯಾಯ
ಅನ್ನ ಸಾರುಗಳನೆನಗಿ೦ದು ಮನವಿತ್ತುಕೊಡು-
ವನ್ನಪೂರ್ಣೆಯನಾವ ಬೀಡಿನೊಳು ಕಾಂಬೆ ?
ನಿನ್ನೆ ಮಾಡಿದ ಪೂರಿ ಸಾಗುಗಳನೀಯುತ್ತ
ತಿನ್ನು ತಿನ್ನೆಂದುಲಿವ ಮನೆಯೊಡತಿಯೊ ?
ಭಿಕ್ಷೆಗೆ ಹೋಗುವ ಮೊದಲೇ ತನಗೆ ಸಿಗುವ ಆಹಾರದ ಬಗ್ಗೆ ಕನಸು ಕಾಣುವವನು …
seeda seeda ave padagaLannu ade arthadalli baLasuvudu kutoohalakaariyaagi sogasuvudilla allave?
ಖಂಡಿತವಾಗಿಯೂ ಹೌದು . ಅದಕ್ಕಾಗಿಯೇ ನಾನು ಪದಗಳನ್ನು ಅದೇ ರೀತಿಯಲ್ಲಿ ಉಳಿಸಿಕೊಂಡು ಭಿಕ್ಷುಕರಿಬ್ಬರ ದೃಷ್ಟಿಯಿಂದ ಮನೆಯಾಕೆಯ ಮೇಲೆ ಅವರ ಭಾವನೆಗಳನ್ನು ಬಿಂಬಿಸಿವ ಪ್ರಯತ್ನವನ್ನು ಕೈಗೆತ್ತಿಕೊಂಡಿದ್ದೆ . ಒಬ್ಬ ಶ್ರೇಷ್ಟ ಪರಿವ್ರಾಜಕ ಸನ್ಯಾಸಿ : ಇನ್ನೊಬ್ಬ ಬೀದಿ ಬಿಕಾರಿ .
ಪರಿವ್ರಾಜಕನಿಗೆ, ಪಾಲಿಗೆ ಬ೦ದದನ್ನು ತಿನ್ನುವುದು ಧರ್ಮ . ಬೀದಿಬಿಕಾರಿಗೆ ಅದು ಅನಿವಾರ್ಯ . ಪರಿವ್ರಾಜಕ ಗೊಣಗಿದರೆ ಅದು ಅವನು ಆಶ್ರಯಿಸಿಕೊಂಡ ಧರ್ಮಕ್ಕೆ ವಿರುದ್ಧವಾಗುತ್ತದೆ . ಬೀದಿ ಬಿಕಾರಿಗೆ ಆ ಹಂಗೇನೋ ಇಲ್ಲ .
ಆದರೂ ಆಹಾರ ಕೊಡುವ ಮನೆಯಾಕೆಯನ್ನು ಇಬ್ಬರೂ ಅವರವರ ಅಗತ್ಯ ,ಅನಿವಾರ್ಯತೆಗೆ ಅನುಗುಣವಾಗಿ ಮೆಚ್ಚುತ್ತಾರೆ . ಮಾತ್ರವಲ್ಲ ಇಬ್ಬರಿಗೂ ಆ ಹೊತ್ತಿನ ಊಟದ ಚಿಂತೆ ಮಾತ್ರವಿರುತ್ತದೆ ಎಂಬುದು ಆ ಸಮಯದಲ್ಲಿ ಅವರಿಗಿರುವ ಸಮಾನತೆ—-ಎಂಬುದು ನನ್ನ ಭಾವನೆ . ಪರಿವ್ರಾಜಕ ಏನೂ ಗೊಣಗದೆ ಸಮಾಜಕ್ಕೆ ತನ್ನ ಋಣ ತೀರಿಸುವ ಕಾಯಕದಲ್ಲಿ ತೊಡಗುತ್ತಾನೆ . ಸಾಮಾನ್ಯ ಭಿಕ್ಷುಕ ಸಮಾಜಕ್ಕೆ ಋಣಭಾರವಾಗಿ ಬದುಕುತ್ತಾನೆ . ಈ ರೀತಿಯ ಸಾಮ್ಯತೆ ಮತ್ತು ವೈಪರೀತ್ಯದ ವ್ಯಕ್ತಿತ್ವಗಳನ್ನು ಬಿಂಬಿಸುವುದು ಇಲ್ಲಿ ನನ್ನ ಉದ್ದೇಶವಾಗಿತ್ತು . ಇಷ್ಟು ವಿವರಗಳನ್ನು ಆಗ ಹಾಕುವುದು ಸಾಧ್ಯವಾಗಿರಲಿಲ್ಲ . ಕ್ಷಮಿಸಿ
ಈಗ( ಪದ್ಯದ ಕತೆ ) ಕುತೂಹಲಕಾರಿಯಗಿದೆಯೇ? ತಿಳಿಸಿ..
ಅಯ್ಯಯ್ಯೋ, ಕ್ಷಮಿಸುವುದಕ್ಕೇನೂ ಇಲ್ಲ. ನಿಮ್ಮ ಕಲ್ಪನೆ ತು೦ಬಾನೆ ಹಿಡಿಸಿತು. ಹಿ೦ದೊಮ್ಮೆ ನಾನೂ ಹೀಗೆಯೇ ಪದ, ಅರ್ಥಗಳನ್ನು ಉಳಿಸಿಕೊ೦ಡು ಪೂರೈಸಿದ್ದಾಗ ಗಣೇಶ ಸರ್ ಅದು ಅಷ್ಟು ಸರಿ ಅಲ್ಲ ಎ೦ದಿದ್ದರು. ಅದಕ್ಕೇ ನಾನೂ ಕೇಳಿದೆ, ಅಷ್ಟೆ 🙂
ಸದ್ಯ ನೀಲಕ೦ಠರು ಖಂಡಿಸಲ್ಪಡ ಬೇಕಾದ ಕಾವ್ಯವೆನ್ನಲಿಲ್ಲವಲ್ಲ , ಅಷ್ಟು ಸಾಕು 🙂
ನಾನು ಬರೆಯಲು , ಯೋಚಿಸಲು ಜಿಪುಣತನದಿಂದ ಹಾಗೆ ಮಾಡಿದೆನೆಂದು ಕಂಡು ಬಂದಲ್ಲಿ ಗಣೇಶ್ ಸರ್ ನನನ್ನೂ ಆಕ್ಷೆಪಿಸ ಬಹುದು . ..
ನಿಮ್ಮ ಬೃಹದ್ವ್ಯಾಖ್ಯಾನದಿ೦ದ ನನ್ನ ಧೈರ್ಯವೆಲ್ಲ ಉಡುಗಿಹೋಯಿತು. ಇನ್ನು ಖ೦ಡಿಸುವುದೆಲ್ಲಿ ಬ೦ತು 🙂
ನೀಲಕಂಠ, ಬೇಕಿತ್ತ (ಭಾಗ್ಯಲಕ್ಷ್ಮಿಯವರಿಂದ)
ಈ ಪಾಟಿ verbal assaultಉ?
ಧನಾತ್ಮಕವಾಗಿ ತೆಗೆದುಕೊಳ್ಳಿ. ಭಾಗ್ಯಲಕ್ಷ್ಮಿಯವರು ಕರುಣಿಸಿದ್ದು ಒ೦ದು ಚೌಪದಿ ಮತ್ತು ಒ೦ದು ಗದ್ಯಖ೦ಡಕಾವ್ಯ!
ಪ್ರಸಾದ್ ಸರ್ ,
ಅದು salt ನ ಋಣದ ಬಗ್ಗೆ ಇರುವ mentality ಅಷ್ಟೆ .verbal assault ಎಂದು ತಿಳಿದು ಕೊಂಡರೂ ಸಂತೋಷವೆ .
“ಭಾಲ” (ತಿರುಗಿದಾಗ) “ಲಾಭ” ಅಲ್ಲವೇ ?!!
ಅಂತೂ,
ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯಾ,
“ಪದ್ಯಪಾನ”ದ ಪಾದ ಭಜನೆ ಸುಖವಯ್ಯಾ ….. !!
ಸ೦ಪನ್ನ೦ ಚತುರೋಕ್ತಿಯುಕ್ತಿನಯದೊಳ್, ಲೋಗರ್ಕಳ೦ ತನ್ನ ಬಲ್-
ದ೦ಪಪ್ಪ೦ತಿರುತಿರ್ಪ ಸೊಲ್ಲ ಸಿರಿಯಿ೦ ತಾ೦ ಸಾರುವ೦ ದೈನ್ಯದಿ೦,
ಸೊ೦ಪಿ೦ದ೦ ಸವಿಗೂಳನಾವ ಮನೆಯಾರಾರ್ ಪೂರಿಸಲ್ ದಕ್ಕುವರ್
ರ೦ಪ೦ಗಯ್ಯದಲೆ೦ದು ನೆಪ್ಪನಿಡುವ೦ ಪುಟ್ಟಲ್ಕೆ ಬಾಳ್ ಸಾಗು ಕಾಣ್
ಭಿಕ್ಷುಕ ಎಣಿಸುತ್ತಿದ್ದಾನೆ, “ಚತುರೋಕ್ತಿಗಳಲ್ಲಿ ಸ೦ಪನ್ನನಾದವನೂ, ತ೦ಪಾದ ನುಡಿಯಿ೦ದ ದೈನ್ಯದಿ೦ದ ಜನರ ಬಳಿ ಹೋಗಬಲ್ಲವನೂ, ಆರಾರ ಮನೆಯಲ್ಲಿ ಆರಾರು ತನಗೆ ರ೦ಪಮಾಡದೆಯೇ ಸವಿಗೂಳನಿಕ್ಕುವರೆ೦ದು ನೆನಪಿಟ್ಟುಕೊಳ್ಳುವವನೂ ಆದ ಮಗನೊಬ್ಬ ಹುಟ್ಟಿದರೆ ಬಾಳು ಚೆನ್ನಾಗುತ್ತದೆ” ಎ೦ದು.
ಅಮೋಘವಾದ ಕಲ್ಪನೆ, ಕವನಿಕೆ. ಎರಡನೆಯ ಪಾದದಲ್ಲಿ ’ತಾ೦ ಸಾರುವ೦’ ಬದಲು ’ಸಾರ್ವಾತನುಂ’ ಎಂದರೆ uniformity of tense ಇರುತ್ತೆ.
ಕೊನೆಯ ಪಾದದ ’ರಂಪಂ’ – ಅಂತೂ ಕುಲಕರ್ಣಿಕುಚೋದ್ಯವನ್ನು ಮೆರೆದೇಬಿಟ್ಟಿರಿ!
ಧನ್ಯವಾದಗಳು. ನೀವ೦ದ೦ತೆ ತಿದ್ದಿದರೆ ಸಾರು ಸಿಗುವುದಿಲ್ಲವಲ್ಲ…
ಕುಚೋದ್ಯವೇನಿಲ್ಲ. ನಿಮ್ಮ ನೆನಹಿರದೊ೦ದೂ ಪದ್ಯವಿರದಿದ್ದರೆ ಪದ್ಯಪಾನಕ್ಕೆ ಶೋಭೆಯೆ? ರಸಿಕ ಪಾನಿಗಳು ಮೆಚ್ಚುವರೇ?
ಓಹ್. ದತ್ತಪದವನ್ನು ಗಮನಿಸಲಿಲ್ಲ.
ಕಡುಪಾಪಿ ತಿರುಕನಿರುಳೊಳ್
ಬಿಡಿಗಾಸಿರದೆ ಬರಿಗೈಲಿ ಸಾರಿರ್ಪನ್ನಂ ।
ನಿಡುನಿದ್ದೆಯೊಳಂತವ-ಗಡ
ನಡುವೊಳ್ ಮಡದಿ ಕಡಪೂರಿ ಸಾಗಿರ್ದಂತುಂ !!
ಕಡಪು + ಊರಿ = ಕಡಪೂರಿ (ಮೂತಿ ತಿವಿದು)
ಟೈಪೋ ** ಕದಪೂರಿ
“ಇರದುಂ ಭೇದಮೆ,ನಿನ್ನ-ನನ್ನ ನಡುವೊಳ್ ಸಾರುತ್ತುಮಾಂ ಪೇಳ್ವೆನುಂ!
ಗರಿವಸ್ರಂಗಳನಾಂತು ಠೀವಿಯಿನೆ ನೀಂ,ಸಾಗುತ್ತಿರಲ್ ವಾಹದೊಳ್-
ಮರೆತಯ್, ನಾವ್ ಕ್ಷುಧಪೂರಿಕಾಭರದೊಳೇ ಭಿಕ್ಷಾಟನಂ ಕೊಂಡುದಂ!”
ಇರುಳೊಳ್ ಕೂಗುತುಮಪ್ಪಿ ಬೀಗಿದನಹಾ!ನೇತಾರನಂ ಪ್ರೀತಿಯಿಂ!!
(ಹಸುವಿನ ನಿರ್ವಹಣೆಗಾಗಿ ಇಬ್ಬರೂ ಬೇಡುತ್ತಲಿದ್ದಾರೆ-ಒಬ್ಬರು ಮತದ ಮೂಲಕ,ಇನ್ನೊಬ್ಬರು….ಮೂಲಕ!)
ಕರಂಭಜಾತಿ|| “ಅನನ್ನಮಂ (unpalatable) ನೀನುಣುವಂಥ ಪಾಡಿದೇಂ?
ಅನಾರ್ಯಹಿಂಸಾರು(Tiger)ವದಾಗದಿರ್ದು ಮೇಣ್|
ನೀನೆಂತೊ ಲೇಸಾಗು ಹಿರಣ್ಯಪೂರಿತಂ …….”
Having appeared in a beggar’s dream, God was uttering blessings thus when…
ಸುನಾಮಿಯಿಂದೆಚ್ಚರಗೊಂಡ ಭಿಕ್ಷುಕಂ||
|| ಉಪೇಂದ್ರವಜ್ರವೃತ್ತ ||
ಪ್ರಸನ್ನನಪ್ಪೆಂ ,ಧನಧಾನ್ಯಸಂಪ-
ದ್ಪ್ರಸಿಧ್ದನಾಗಲ್ ,ರಮೆ ಸಾರುತೆನ್ನಂ |
ಪ್ರಸಾದವೀಯಲ್,ಯಶಪೂರಿತಂಗೊಂ-
ಡಸೀಮಸಾಗುಣ್ಯದೆ ಬಾಳಲೆಂದುಂ ||
ಅಹ ಎಷ್ಟು ಸರಳ ಸು೦ದರ! ಉಪೇ೦ದ್ರನ ಪತ್ನಿ ರಮೆಯ ನೆನಸುವಿಕೆ!!
ಧನ್ಯವಾದಗಳು ನೀಲಕಂಠರೆ.
ವಿನೋದವಾಗಿ !!
poorಇವ ಪರದೇಸಿಯಿವಂ,
ಚೂರಿಸುದಾ bunನ ತಿಂದು passಆಗುವ ತಾಂ ।
sorry, ಸ್ವಪ್ನಮದೆಂತುಂ ?!
ಸೋರುವ ಸೂರಡಿಯೆ ವಾಸಿಪ ತಿರುಕಗಂ ಕಾಣ್ ।।
ಮುರುಕಲು ರೊಟ್ಟಿ / ಮುರುಕಲು ಮನೆ – ತಿರುಕನಿಗೆ ಕನಸು ಎಲ್ಲಿಯದು ?!
Instead of ಸಾರು, you have used ಸಾರಿ (sorry). It is okay. both those suffixes are feminine: ವಿಶಾಲ್+ಉ = ವಿಶಾಲ್+ಇ.
Our ಸಾರು is ರಸಂ to the Tamils. If rather they had done a ತದ್ಭವ of ಸಾರು, then they would call it ಸಾರಿs
ಇರಲೌ, ಸಾರುM-sorryಗ
ಳೆರಡೂ ಸ್ತ್ರೀಲಿಂಗರೂಪಿ ಪ್ರತ್ಯಯಗಳ್ ಕಾಣ್|
ಕರೆಯದೆ ಪೋದೊಡನದ ತಮಿ-
ಳರು ರಸಮೆಂದಾಗ ’ಸಾರಿ’ ಎಂಬರು ದಿಟದಿಂ||
ಅಯ್ಯೋ! ಸಾರಿಗೆ ಈ ಪಾಟಿ ಮಸಾಲೆ ಸುರಿದರೆ ಹೇಗೆ ರ೦ಪರೆ?!!
OK ಪ್ರಸಾದು ಸಾರು !!
ತಿದ್ದಿದ್ದೇನೆ,
poorಇವ ಪರದೇಸಿಯಿವಂ,
ಚೂರಿಸುತಾ bunನ ತಿಂದು passಆಗುವ ತಾಂ ।
sirಊ (ಸೋಮಾ) , ಸ್ವಪ್ನಮದೆಂತುಂ ?!
ಸೋರುವ ಸೂರಡಿಯೆ ವಾಸಿಪ ತಿರುಕಗಂ ಕಾಣ್ ।।
ನೀಲಕಂಠ, ಇದು ಕಲಸ್ಮೇಲೋಗರ !!
haha