Jun 202016
 

ಪಾಮರನರಿವಿಂಗೆ ಮಣಿದಪಂ ಪಂಡಿತನುಂ

  49 Responses to “ಪದ್ಯಸಪ್ತಾಹ ೨೦೭: ಸಮಸ್ಯಾಪೂರಣ”

  1. ಗ್ರಾಮೀಣಮಪ್ಪ ಗದುಗಿನ
    ಭಾಮಿನಿಯಪರೂಪಶಬ್ದದರ್ಥವನೊರೆಯಲ್
    ಕ್ಷೇಮದೆ ಪಳ್ಳಿಗನೊರ್ವಂ
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ

    • ನೀಲಕಂಠರೇ – ಚೆನ್ನಾಗಿದೆ ನಿಮ್ಮ ಪರಿಹಾರ. ಸಮಸ್ಯೆ ಸಾಲಿನ ಛಂದಸ್ಸು ಯಾವುದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿ.

  2. ನೇಮದಿನೆಲ್ಲದರೊಳ್ ದಿಟ
    ವೂ ಮನಮಿಡುತಂತೆ,ತಿಳಿದುಕೊಂಬ ಗುಣಮಿರಲ್
    ಸಾಮಾನ್ಯನಂದದೆ,ನಿಜಮೆ!
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ!

  3. ವಾಮಪಥದೆ ಸಾಗುತುಮೀ
    ಭೂಮಿಯನುಧ್ಧರಿಸೆ ಬರ್ಪರಂ ದೂರದಿನಾ
    ಗ್ರಾಮಜನರಾದರಿಪವೊಲ್,
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ!

    (ಭೂಮಿಯನ್ನೆ ಉಧ್ಧರಿಸುವ ತೆರದಿಂದ ಬರುವವರನ್ನು(ರಾಜಕಾರಣಿಗಳನ್ನು) ಗ್ರಾಮಸ್ಥರು ದೂರದಿಂದಲೇ ಆದರಿಸುವಂತೆಯೇ,ಪಾಮರರನ(ನೀಚನ) ಅರಿವನ್ನೂ ಪಂಡಿತನು ದೂರದಿಂದಲೇ ಮೆಚ್ಚುತ್ತಾನೆ(ಹತ್ತಿರಕ್ಕೆ ಬರಗೊಡದೇ))

  4. ರಾಮರಹೀಮನೆನುತೆ,ಬಲ್
    ಪ್ರೇಮದೆ ತಾಯ್,ಬಯಸುವೊಲ್ ಮಗುವಿನುಚ್ಚ್ರಾಯಂ,
    ತಾಮಸಮಿರದಿರೆ,ಲೋಕದ
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ

    (ದುಷ್ಟತನವು ಪಂಡಿತನಲ್ಲಿ ಇರದಿದ್ದರೆ, ಪಾಮರನರಿವಿಗೆ ಪಂಡಿತನೂ ಮಣಿಯುತ್ತಾನೆ!ರಾಮ,ರಹೀಮನೆನ್ನುತ್ತಾ ಕಂದನ ಏಳ್ಗೆಯನ್ನೇ ಬಯಸುವ ತಾಯಂತೇ(ಪಾಮರನ ಹಿತವನ್ನೇ ಬಯಸುತ್ತಾ ..(ಉತ್ತೇಜಿಸುತ್ತಾ) ) )

  5. ಪ್ರೇಮಸ್ವರೂಪಿಯಾದ
    ಶ್ರೀಮಹಿಮಾನ್ವಿತಸುರೇಶನಂ ದೃಢಮನದೊಳ್|
    ನಾಮಸ್ಮರಣೆಯಿನೊಲಿಸಲ್,
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ ||

  6. ಧೀಮತಿಯಿರದಿರ್ಪೊಡನುಂ,
    ಸಾಮಕೊಲಿದವೋಲೆ,ಸಕಲ ಧೀಮಂತ ಜನ
    ಸ್ತೋಮಮನನುಕರಿಪ,ಸರಲ
    ಪಾಮರನರಿವಿಂಗೆ,ಮಣಿದಪಂ ಪಂಡಿತನುಂ!

    ( ಹೆಚ್ಚಿನ ಅರಿವು ಇರದಿದ್ದರೂ,ಬುಧ್ಧಿವಂತರು ತುಳಿದ ಹಾದಿಯಲ್ಲೇ ನಡೆಯಬೇಕೆನ್ನುವ ತಿಳುವಳಿಕೆಯನ್ನು ಪಂಡಿತನೂ ಆದರಿಸುತ್ತಾನೆ)

  7. ನೇಮದಿನೊಡೆಯನನೋವುವ
    ಪಾಮರನರಿವಿಂಗೆ,ಮಣಿದಪಂ ಪಂಡಿತನುಂ
    ಹಾ!ಮಹಿಯೊಳ್,ನಂದರಿಗಾ
    ದಾಮಾತ್ಯನನೊಪ್ಪಿ,ನುಡಿವ ಚಾಣಕ್ಯನವೊಲ್!

    (ಅಮಾತ್ಯ ರಾಕ್ಷಸನು ನಂದರಲ್ಲಿಟ್ಟ ಸ್ವಾಮಿಭಕ್ತಿಯನ್ನು ಚಾಣಕ್ಯನೂ ಕೊಂಡಾಡುತ್ತಾನೆ(ತನ್ನ ಒಡೆಯನನ್ನು ರಕ್ಷಿಸಿಕೊಳ್ಳಬೇಕೆಂಬ ಸೇವಕನ ತಿಳುವಳಿಕೆಯನ್ನು ಪಂಡಿತನೂ ಒಪ್ಪುತ್ತಾನೆ))

  8. ಕಾಮಿಸಿ ವಿದ್ಯೆಯನೊಂದಲ್,
    ನೇಮದಿನೋದುತ್ತೆ ಛಲದೆ, ಗೆಲ್ಲಲ್ ವೃಧ್ದಂ,|
    ಧೀಮಂತನ, ಗತಕಾಲದ
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ ||

  9. ರಾಮನ ಸುಮುಖವ ನೋಡುತ
    ಪ್ರೇಮದಿ ಶಬರೀ ಸುಮಧುರಫಲನೈವೇದ್ಯಂ
    ಧರ್ಮದೊಳವನಿಗೆ ಕೊಡುತುಂ
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ

    • ಗುರುದತ್ತರೆ, ಒಳ್ಳೆ ಕಲ್ಪನೆ, ಹಾಗೂ ಪ್ರಯತ್ನ. ಆದರೆ ಕೆಲವು ತಿದ್ದುಗೆಗಳು ಬೇಕು. ಇದೇ ತಾಣದಲ್ಲಿ ಕಂದಪದ್ಯದ ನಿಯಮಗಳನ್ನು ನೋಡಿಕೊಳ್ಳಿ. ಅದಲ್ಲದೇ ಒತ್ತಕ್ಷರಗಳ ಹಿಂದಿನ ಅಕ್ಷರ ಗುರುವಾಗುವೆಡೆಗಳಲ್ಲಿ ಜಾಗರೂಕರಾಗಿರಬೇಕು. ಶಬರೀ ಎಂಬುದು ಕನ್ನಡದಲ್ಲಿ ಸ್ವತಂತ್ರಪದವಾದಾಗ ಶಬರಿ ಆಗುತ್ತದೆ. ಧರ್ಮ ಎಂಬುದು ಪ್ರಾಸಕ್ಕೆ ಹೊಂದುವುದಿಲ್ಲ. ತಾಣದ ಪ್ರಾಸನಿಯಮಗಳ ಅಧ್ಯಾಯವನ್ನೂ ಗಮನಿಸಿ. ಇಷ್ಟಲ್ಲದೇ ಪಾಮರ ಎಂಬುದು ಪುಲ್ಲಿಂಗವಾದ್ದರಿಂದ ಶಬರಿಗೆ ಅನ್ವಯಿಸುವುದು ಅಸಾಧ್ಯ. ಪಂಡಿತ ಯಾರು? ರಾಮನೇ? ಗಮನಿಸಿದ ಒಬ್ಬಾತನೇ? ಭಾಷೆಯಲ್ಲಿ ಹಳಗನ್ನಡ ಹೊಸಗನ್ನಡದ ನಮೂನೆಗಳು ಮಿಶ್ರಗೊಂಡಿವೆ. ಅದನ್ನೂ ಗಮನಿಸಿಕೊಳ್ಳಿ.

      • ನೀಲಕಂಠರೆ – ನಿಮ್ಮ ಸಲಹೆಗಳಿಗೆ ಧನ್ಯವಾದಗಳು. ಇದು ಕಂದದಲ್ಲಿ ನನ್ನ ಪ್ರಥಮ ಪ್ರಯತ್ನ. ಕ್ಷಮಿಸಿ!! ಅನೇಕ ದೋಷಗಳಿಗೆ!! ನಿಯಮಗಳ ಓದಿಕೊಂಡು, ಬೇರೆ ಪದ್ಯವ ರಚಿಸಲು ಯತ್ನಿಸುವೆ.

      • ತಾಮಸಕುಲಚಂಡಾಲಂ
        ಶ್ರೀಮದ್ಗುರುಶಂಕರರ್ಗಮಾತ್ಮನ ತಿಳಿವಂ
        ಧೀಮಂತ ಮನದಿ ಪೇಳಲ್,
        ಪಾಮರನರಿವಿಂಗೆ ಮಣಿದಪಂ ಪಂಡಿತನುಂ

        • Ohh, really nice one!! 🙂

        • Now also …ಶಂಕರಂಗೆ ಜ್ಞಾನಾದ್ವೈತಂ assumes shithiladvitva for its validity.

        • ಶಂಕರರ್ಗಮಾತ್ಮನ ತಿಳಿವಂ .. ಎಂದು ಮಾಡಬಹುದು. ವಿಭಕ್ತಿಯೂ ಸರಿಹೋಗುತ್ತದೆ.

          • ಧನ್ಯವಾದಗಳು ಸಲಹೆಗೆ. 2ನೇ ಸಾಲನ್ನು ಹೀಗೆ ಮಾಡಿದ್ದೇನೆ, ಸರಿ ಆಗುತ್ತಾ?
            ಶ್ರೀಮದ್ ಶಂಕರಗೆ ಸುಲಭದದ್ವೈತವನುಂ

          • ಇಲ್ಲ. ಶಂಕರಗೆ ಎಂದು ಹಳಗನ್ನಡ ವ್ಯಾಕರಣಕ್ಕೆ ಸರಿಹೋಗದು. ಶಂಕರಂಗೆ ಆಗಬೇಕು. ಅದ್ವೈತವನುಂ ಆಗದು. ಅದ್ವೈತವನ್ನೂ ಎಂಬ ಅರ್ಥ ಕೊಡುತ್ತದೆ. ಅದ್ವೈತಮಂ ಸರಿ.
            ಅಷ್ಟಕ್ಕೂ ಚಾಂಡಾಲನಿಂದ ಶಂಕರರಿಗೆ ಉಂಟಾಗಿದ್ದು ಆತ್ಮನ ಅರಿವು. ಅದ್ವೈತದ್ದಲ್ಲ. ಚಾಂಡಾಲನು “ನೀನು ಆಚೆ ಸರಿ ಎಂದದ್ದು ಈ ದೇಹಕ್ಕೋ, ಆತ್ಮಕ್ಕೋ?” ಎಂದು ಕೇಳುತ್ತಾನಲ್ಲವೇ? 🙂

          • ಧನ್ಯವಾದಗಳು ಸವರಣೆಗೆ. ನಿಮ್ಮ ಮಾತು ಸರಿಯಾದುದು..ಪದ್ಯವನ್ನು ತಿದ್ದಿದೇನೆ, ನಿಮ್ಮ ಸಾಲಿನಂತೆ.. 🙂

        • fine

  10. ನೇಮದ ನೈಜ ನಡೆನುಡಿಯ
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ I
    ಕಾಮಿನಿ ಕಾಂಚಾಣವೆನದ
    ಕಾಮಾರಪುಕುರದ ಸಿರಿಯಿದೆನುತೆ ನರೇಂದ್ರಂ II

    ಶ್ರೀ ರಾಮಕೃಷ್ಣರನ್ನು ಹಲವು ತರದಲ್ಲಿ ಪರೀಕ್ಷಿಸಿ ನಿರ್ಣಯಕ್ಕೆ ಬಂದ ಯುವಕ ನರೇಂದ್ರ.

    • Good idea. Even I thought of Ramakrishna, somehow could not manage to bring in padya. ನೈಜ ನಡೆನುಡಿಯ is arisamaasa. ಕಾಮಿನಿ ಕಾಂಚಾಣವೆನದ – could better be kaamini kaanchanavennada. ಕಾಮಾರಪುಕುರದ ಸಿರಿಯಿದೆನುತೆ ನರೇಂದ್ರಂ – as I learnt from Ganesh sir, if the third gaNa is sarva-laghu, then fourth cannot be sarvalaghu. So we can make it …da sirideMdu narEndram

      • ೩ ಮತ್ತು ೪ ನೇ ಗಣಗಳು ಸರ್ವಲಘುವಾದರೆ, ಹಿತವಾಗುವದಿಲ್ಲವೆಂದಿರಬಹುದೇನೋ ಅಲ್ಲವೇ?

      • ನೀಲಕಂಠರೇ , ನಿಮಗೆ ತಿದ್ದಲು ಅವಕಾಶವನ್ನಿಟ್ಟು ನನಗೆ ಬರೆಯಲು ಅನುಗ್ರಹಿಸಿದ್ದಾರೆ ಅಷ್ಟೇ . 🙂

        ನೇಮದ ಸಹಜ ನಡೆನುಡಿಯ
        ಪಾಮರನರಿವಿಂಗೆ ಮಣಿದಪಂ ಪಂಡಿತನುಂ I
        ಕಾಮಿನಿ ಕಾಂಚನವೆನ್ನದ
        ಕಾಮಾರಪುಕುರದ ಸಿರಿಯಿದೆ೦ದು ನರೇಂದ್ರಂ II

        • 🙂 ಸಹಜ ನಡೆನುಡಿಯ – is also ari!!

          • ಈಗ ಅರಿ ಸಮಸ್ಯೆ ತೊಲಗಿತೆ? ಧನ್ಯವಾದಗಳು .

            ನೇಮದ ಸರಲ ನಡೆನುಡಿಯ
            ಪಾಮರನರಿವಿಂಗೆ ಮಣಿದಪಂ ಪಂಡಿತನುಂ I
            ಕಾಮಿನಿ ಕಾಂಚನವೆನ್ನದ
            ಕಾಮಾರಪುಕುರದ ಸಿರಿಯಿದೆ೦ದು ನರೇಂದ್ರಂ II

          • ಕನ್ನಡದಿಂದ ಸಂಸ್ಕೃತ ಪದಗಳನ್ನು ಬಳಸುವುದೇ ಸುಲಭವೆನಿಸುತ್ತದೆ. ಇದು ಸರಿಯಾಗಿದೆ ತಾನೇ ?

            ನೇಮದ ನಿಷ್ಕಪಟ ಮನದ
            ಪಾಮರನರಿವಿಂಗೆ ಮಣಿದಪಂ ಪಂಡಿತನುಂ I
            ಕಾಮಿನಿ ಕಾಂಚನವೆನ್ನದ
            ಕಾಮಾರಪುಕುರದ ಸಿರಿಯಿದೆ೦ದು ನರೇಂದ್ರಂ I

          • hahaa, ಸರಲ ನಡೆನುಡಿಯ is also ari 🙂 🙂

          • We could use nEmada nEra-naDenuDiya 🙂

        • Great information…This is often really good. That is why we looked at on gratify and we are shocked. We are most certainly interested in this kind of anything. Scientists appreciate human place, and cost the effort while in this. Please keep cutting. These are substanti…

  11. ಸಾಮಜಮಿರೆ ಮದಯುಕ್ತಂ,
    ನೇಮದೊಳೊಂದಿಸಿರೆ,ಮಾವುತಂ ಕಠಿಣತೆಯಿಂ,|
    ಶ್ಯಾಮಲವರ್ಣಶರೀರದ
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ ||

    • enartha madam?

      • ಆನೆಯು ಮದಭರಿತವಾಗಿರಲು, ಕಷ್ಟಪಟ್ಟು ನಿಯಮಕ್ಕೆ ಹೊಂದಿಸಿದ ಶ್ಯಾಮಲವರ್ಣಶರೀರದ ಮಾವುತನ (ಪಾಮರನ) ಅರಿವಿಗೆ ಪಂಡಿತನೂ ಮಣಿಯುತ್ತಾನೆ.

  12. ಸಾಮಾನ್ಯನಂಬಿಗನ ಪರಿ-
    ಣಾಮವನರಿತೀಸಲಾಗದಿರೆ ನೆರೆಯೊಳ್ ನಿ-
    ಸ್ಸೀಮನುಳಿಗಾಲಮಿಲ್ಲದೆ
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ ||

    • Good one. Again, missed this too to get into versification.

      • ಧನ್ಯವಾದಗಳು ನೀಲಕಂಠ, ಕಥೆಯನ್ನು ಸಂಪೂರ್ಣವಾಗಿ ತರಲಾಗಲಿಲ್ಲ. ಸಂದರ್ಭ ವಿವರಣೆ ಕೊಡಬೇಕೆಂದಿದ್ದೆ. ಬಹಳ ತಡವಾಗಿದ್ದುದರಿಂದ ಸಾಧ್ಯವಾಗಲಿಲ್ಲ. (ಇದರ ಜೊತೆಗೆ ಮತ್ತೊಂದು ಕಂದಪದ್ಯದಲ್ಲಿ ಪ್ರಯತ್ನಿಸುವೆ)

  13. Scientist: ಎಲ್ಲವನ್ನೂ ಕರಗಿಸುವ ದ್ರವವನ್ನು ಕಂಡುಹಿಡಿದುಬಿಟ್ಟೆ!
    Lab assistant: ಅದನ್ನು ಯಾತ್ರಾಗೆ ಆಕಿಡ್ತೀರಿ ಬುದ್ದಿ?
    ತೇಮಾನಗೈವುದೆಲ್ಲವ
    ಸಾಮಿಂದೀ ದ್ರವವುಮೆನ್ನೆ ವಿಜ್ಞಾನಿಯದಂ (ವಿಜ್ಞಾನಿಯು, ಅದಂ)|
    ತಾಮೆಲ್ಲಿಕ್ಕುವಿರೆಂದಾ (ಎಂದ ಆ)
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ||

  14. ಸೋಮನೆಣೆಯಾಗೆ,ನೀಡಲ್
    ಭೂಮಿಯೊಳುಂ ತಂಪನಾದಿ ಕಾಲದಿನಹ!ನಿ
    ಷ್ಕಾಮದ ಮನಮಂ ಪೊಂದಿ-
    ರ್ಪಾ ಮರನರಿವಿಂಗೆ ಮಣಿದಪಂ ಪಂಡಿತನುಂ!

    (ಚಂದ್ರನಂತೇ,,ಭೂಮಿಯಲ್ಲೂ ತಂಪನ್ನು ನೀಡಬೇಕೆಂಬ ಹಂಬಲವಿರುವ, ಮರದ ಅರಿವಿಗೆ…)

  15. ಗೇಮೆಯೊ? ಕುಲಾಲನಿವನೈ
    ನೇಮದಿ ವಿಠ್ಠಲಪುರಂದರನ ಪೊಂದಿದನೈ|
    (ಗರ್ವಭಂಗ ಹೊಂದಿದ ನಾಮದೇವ)ನಾಮೇಶ ಶರಣು ಗೋರಗೆ!
    ಪಾಮರನರಿವಿಂಗೆ ಮಣಿದಪಂ ಪಂಡಿತನುಂ||

  16. ಸಾಮಾನ್ಯಂ ತಾನೆನ್ನುತೆ
    ಪಾಮರನು+ಅರಿವಿಂಗೆ ಮಣಿದಪಂ. ಪಂಡಿತನುಂ
    ಮೈಮರೆಯುತೆ ಮದದಿಂದಂ
    ಸಾಮಿಂದರಿವಾನೆ! ಎನ್ನುತೆ ಮೆರೆದನೆಂದುಂ||

Leave a Reply to Usha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)