Jun 272016
 

“ಮುಂಗಾರಿನಾಟೋಪಮಯ್” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು

  46 Responses to “ಪದ್ಯಸಪ್ತಾಹ ೨೦೮: ಪದ್ಯಪೂರಣ”

  1. ಅಂಗಾಂಗಂಗಳನೊತ್ತಿ ಮುತ್ತಿ ಮುಸುಕಿರ್ದಭ್ರಂಗಳೀ ಜಾಡ್ಯಮಂ
    ಭಂಗಂಗೈವ ಛಡಛ್ಛಡಿಲ್ಲೆನೆ ತಡಿತ್ಸೌದಾಮಿನೀತಾಂಡವಂ
    ಮಾಂಗಲ್ಯಂ ಬೆಳಸಪ್ಪೆ ಧಾತ್ರಿಗೆನುತುಂ ದೇವರ್ಕಳಿಂ ಸಂದುದು-
    ತ್ತುಂಗಧ್ವಾನದೆ ಪುಷ್ಪವೃಷ್ಟಿಯೆನಲೀ ಮುಂಗಾರಿನಾಟೋಪಮಯ್

    ಮೋಡ ಮುಸುಕಿದ ಜಾಡ್ಯವನ್ನು ಕಳೆಯುವ ಸೆಳೆಮಿಂಚುಗಳಾರ್ಭಟ. ಇನ್ನುಮುಂದೆ ಭೂಮಿಗೆ ಮಾಂಗಲ್ಯದ ಬೆಳಸು ಎಂದು ದೇವತೆಗಳು ವಾದ್ಯಧ್ವನಿಸಹಿತ ಪುಷ್ಪವೃಷ್ಟಿ ಮಾಡಿದರೋ ಎಂಬಂತಿದೆ ಈ ಮುಂಗಾರಿನಾಟೋಪ.

    • ನೀಲಕಂಠರೆ, ಚೆನ್ನಾಗಿದೆ. ಆದರೆ ಮಾಂಗಲ್ಯದ ಬೆಳಸು ಅಂದರೆ ಅರ್ಥ ಆಗಲಿಲ್ಲ..

      • ಧನ್ಯವಾದಗಳು. ಬೆಳಸು ಅಂದರೆ ಬೆಳೆ (ಭತ್ತದ ಬೆಳಸು ಇತ್ಯಾದಿ). ಮಾಂಗಲ್ಯದ ಬೆಳಸು… ಕುಮಾರವ್ಯಾಸನ ಮಂಗಳದ ಬೆಳೆಗಿಂಗಳಿನ… ಇದರಿಂದ ಪ್ರೇರಿತವಾದದ್ದು 🙂

    • ವಿಶೇಷವಾಗಿ ಎರಡನೆಯ ಪಾದದ ಮೂರ್ಧನ್ಯಗಳು ಹಿತವಾಗಿವೆ. ಧನ್ಯವಾದಗಳು.

      • ಧನ್ಯವಾದಗಳು!

      • ಮೂರ್ಧನ್ಯ ಅಂದರೇನೆಂದು ಮರೆತಿದ್ದೆ. ಜ್ಞಾಪಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು 🙂

        • ನಾನು, ನೀನು, ಅವನು – ಈ ಮೂರೂ ಧನ್ಯ ಎಂದಲ್ಲವೆ!

  2. During monsoons, Autorikshaws are in great demand, and they go about their way by honking excessively: pomaai… pomaai…
    ಭೋರೆಂದು ಸುರಿವಾಗ ಮಳೆಯು ಬೇಡಿಕೆ ಹೆಚ್ಚು
    ಕ್ಯಾರೆ ಎನ್ನಿಸಿಕೊಳದ ಆಟೋವಿಗಂ|
    ತೂರುತ್ತೆ ಮುಂಗಾರಿನಾಟೋ ’ಪಮಯ್-ಪಮಯ್’
    ಬಾರಿಸುತ್ತಿಂತೋಡುವುವು ಗಲ್ಲಿಯೊಳ್||

    • ಆಹಾ..!! ತುಂಬಾ ಚೆನ್ನಾಗಿದೆ ಕಲ್ಪನೆ.. 🙂

      • ಧನ್ಯವಾದಗಳು. ಆದರೆ, ನೀವೂ ವಿಮರ್ಶೆಯನ್ನು ಕಲಿತುಬಿಟ್ಟಿರಿ! ಚೆನ್ನಾಗಿರುವುದು ಕಲ್ಪನೆ ಮಾತ್ರ ಎಂದು ಸೂಚ್ಯವಾಗಿ ಹೇಳಿದಿರಿ 😉

        • ಅಯ್ಯೋ, ಖಂಡಿತ ವಿಮರ್ಶೆ ಅಲ್ಲ ಸರ್.. ;)..ಕಲ್ಪನೆ, ಪದ್ಯ ಎಲ್ಲವೂ ಸೊಗಸಾಗಿದೆ.. !!

          • ಅತ್ತೂಕರೆದೂ ಔತಣಕ್ಕೆ ಕರೆಸಿಕೊಂಡಂತೆ!

    • ಪ್ರಸಾದು, ಪದ್ಯ ಚೆನ್ನಾಗಿದೆ… ಆದರೆ, ಕಡೆಯ ಸಾಲು ತಪ್ಪಿದ್ದಂತಿದೆ.. ನಾನಾನಾ ನಾನಾನಾ ನಾನಾನಾನ ಆಗಬೇಕಲ್ಲವೇ?

      • ಬಾರಿಸು/ತ್ತಿಂತೋಡು/ವುವು ಗಲ್ಲಿ/ಯೊಳ್ – ಸರಿಯಾಗಿದೆಯಲ್ಲ ಪಂಚಮಾತ್ರಾ. ಸಾಂಗತ್ಯ ಎಂದುಕೊಂಡಿರೆ?

        • Oh yes, I thought it was sangatya… Sorry prasadu 🙂

          • ಪಂಚಮಾತ್ರಾಪದ್ಯದ ವಿಷಮಪಾದದ(odd) ೪ ಗಣಗಳನ್ನು ಹಾಗೂ ಸಮಪಾದದ ಮೊದಲೆರಡು ಗಣಗಳನ್ನು ಐದು-ಮಾತ್ರೆಗಳವಾಗಿಯೂ ಭಾವಿಸಬಹುದು, ಕರ್ಷಣದಿಂದ ವಿಷ್ಣುಗಣಗಳಾಗಿಯೂ ಭಾವಿಸಬಹುದು. ಆದರೆ ಸಮಪಾದಗಳಲ್ಲಿ ಮಾತ್ರಾದ ಕೊನೆಯ ೭ ಮಾತ್ರೆಗಳಿಗೆ ಬದಲಾಗಿ ಸಾಂಗತ್ಯದಲ್ಲಿ ೧ ಬ್ರಹ್ಮಗಣವಿರುತ್ತದೆ.

  3. ಕಂಗಾಲಾಗಿರೆ ಭೂಮಿಯಂದು,ಮುನಿದಿರ್ಪಾ ಕಾಂತನಿಂ,ಸೂರ್ಯನಿಂ,
    ದಂಗಾಂಗಂಗಳೊಳೆಲ್ಲ ತೋರ್ದು ಬಹುಲಂ ಸಂಕಷ್ಟಮಂ,ಕ್ಷೋಭೆಯಂ!
    ಪೊಂಗುತ್ತುಂ ಸುರಲೋಕದಿಂದೆ ಹಿತಕಂ, ದೇವರ್ಕಳಾ ಮಾಯೆಯಿಂ
    ಬೆಂಗಾವಲ್ಗೆನೆ ಸಾರಿಬಂದುದಮಮಾ!ಮುಂಗಾರಿನಾಟೋಪಮೈ!!

  4. ಭಾರತದ ದಕ್ಷಿಣದಿ ಮೇಘವಧುವನು ರಾಜ-
    ಮಾರುತನರಸುತಿಹನು ಬಯಸಿ ವರಿಸಲ್|
    ತಾರುಣ್ಯಭಾವದಿಂ ಮುಗಿಲರ್ತಿಯಿಂ ನಲಿದು
    ಜಾರುತಿರೆ ಮುಂಗಾರಿನಾಟೋಪಮಯ್||

    • ಗುರುದತ್ತ, ಕೆಲವೊಂದು ಸವರಣೆ ಬೇಕಿದೆ.. ಮೊದಲನೇ ಸಾಲಿನಲ್ಲಿ ನೈಋತ್ಯ ಆಗಬೇಕು, ಆದರೆ ಆದಿಪ್ರಾಸವೂ ತಪ್ಪಿದೆ.. ಉಳಿದಂತೆ ಪದ್ಯ ಚೆನ್ನಾಗಿದೆ..

      • ಹೌದು ಚೀದಿ. ಪ್ರಾಸ ತಪ್ಪಿದೆ. ತಿದ್ದುತ್ತೇನೆ. ಧನ್ಯವಾದಗಳು.!!

        • ಮೊದಲನೇ ಸಾಲನ್ನು ಸವರಿಸಿದ್ದೇನೆ. ತಪ್ಪಿದರೆ ತಿಳಿಸಿ!!

      • ಹ್ಮ.. ಅದು ನೈಋತ್ಯವೂ ಅಲ್ಲ. ನೈರೃತ್ಯ ಆಗಬೇಕು ಅನಸ್ತದೆ.

        • In shabdkosh.com (kannada dictionary), I saw it as ನೈಋತ್ಯ. But in sanskrit dictionaires, its mentioned as you said – ನೈರೃತ್ಯ.

    • ಪದ್ಯಭಾವವೆಲ್ಲ ಚೆನ್ನಾಗಿದೆ (ರಾಜ- | ತಾರುಣ್ಯಭಾವದಿಂ)

      • ಧನ್ಯವಾದಗಳು ಮೇಷ್ಟ್ರೇ.. 🙂

        • ಈಗ ಎಲ್ಲ ಸರಿಯಾಯಿತು ಎರಡು ದೋಷಗಳನ್ನುಳಿದು 🙁 No space before any punctuation marks . , : ; / | ||

  5. ಬಲದಿಂ ಬೀಗುತಲಿರ್ಪ ಭಾಸ್ಕರನನುಂ ಮೇಘಂಗಳಿಂ ಬಂಧಿಸು
    ತ್ತೆಲರಂ ಸುಯ್ಯನೆ ಸುಯ್ಯಿಸುತ್ತರೆ! ಮಹಾ ವೃಕ್ಷಂಗಳಂ ತಾಡಿಸು
    ತ್ತೊಲವಂ ಕಲ್ಲರೆಯೆರ್ದೆಯೊಳ್ ಸೃವಿಪವೊಲ್ ತಣ್ಪಾಗಿಸುತ್ತುಂ ಮನಂ,
    ಸಲದೀ ಕಾರ್ಯಮನಿಂತು ಗೈವುದೆ ನಿಜಂ,ಮುಂಗಾರಿನಾಟೋಪಮೈ!!

  6. ಮುಸುಕಾಗಿರ್ಪ ವಿಶಾಲನೀಲ ನಭವುಂ ಅಳ್ಕಾಡುತೋಡಿರ್ಪುದೇಂ
    ದಿಸೆಯೇ ತೋರದವೊಲ್ಪ್ರಭಾತಮಿದೊ, ಮೇಣ್ ಮುಸ್ಸಂಜೆಯೆಂಬತಿರಲ್
    ಪಸಿರೇ ಪೊಣ್ಮಿದರೆಲ್ಲಿಯುಂ ಮನದೊಳಾಶಾಭಾವಮೇ ಕುಂದಿರಲ್
    ಕೆಸರಿಂ ಚಿತ್ರಿಸೆ ರಂಗವಲ್ಲಿಯನಿದೇಂ ಮುಂಗಾರಿನಾಟೋಪಮಯ್

    • ನಭವುಂ ಅಳ್ಕಾಡು – ವಿಸಂಧಿ
      ಹಸುರು ಆಶಾಭಾವವನ್ನು ಕುಂದಿಸುತ್ತದೆನ್ನುವುದು (ಮೂರನೆಯ ಪಾದ) ಅನೌಚಿತ್ಯವಲ್ಲವೆ? ಕುವೆಂಪುರವರ ಮಾತಿಲ್ಲಿ ಸ್ಮರಣೀಯ: ನೀ ನೋಡಬಲ್ಲೆಯ ಪಸುರಂ ನೆತ್ತರ್ ಪಸುರ್ಗಟ್ಟುವನ್ನೆಗಂ!
      ಕೊನೆಯ ಸಾಲಂತೂ ಭವ್ಯವಾಗಿದೆ.

      • Houdu prasadu, realised about visandhi… 3rd line meaning… though the outside its all green which is supposed to give a positive energy, because of the rain you feel bored…

  7. ತಾರಾಕಾಂತಿಯದೆಂಬವೊಲ್ ಕೆಲಸಲಂ ಮಂದಸ್ಮಿತಂಚೆಲ್ಲುತುಂ,
    ವೀರಾವೇಶಮುಮಂತುಮಿರ್ಪುದೆನುತುಂ ತಾಂ ಘರ್ಜನಂ ಗೈಯುವಾ
    ಮೇರುಚ್ಛ್ರಾಯಿತದಾರ್ಢ್ಯಸಾರಭರಿತ ವ್ಯೋಮಾತ್ಮನಿಂ, ಸಂತತಂ
    ಧಾರಾಕಾರದಿನಶ್ರುವಂ ಸುರಿಪುದೇ, ಮುಂಗಾರಿನಾಟೋಪಮೈ!!

    • ಮೇರೌನತ್ಯ – what is this? I think some invalid sandhi between mEru and aunnatya.
      4 the line is missing chhandas at 2nd gaNa.

      Please provide the meaning.

      • (ಕೆಲವೊಮ್ಮೆ) ನಕ್ಷತ್ರಗಳ ಕಾಂತಿಯೋ ಎಂಬಂತೇ ಮುಗುಳ್ನಗುತ್ತಿರುವ,(ಕೆಲವೊಮ್ಮೆ)ವೀರನ ತೆರ ಘರ್ಜಿಸುತ್ತಿರುವಾ(ಗುಡುಗುತ್ತ), ದಾರ್ಢ್ಯ ಪರಾಕ್ರಮಗಳು ಹೆಚ್ಚಿನದಾಗಿ ಏಳ್ಗೆಯನ್ನು ಹೊಂದಿದ ಆಗಸದಿಂದ ಅಶ್ರುವನ್ನು ಸುರಿಸುವದೇ ..ಮುಂ..ಮೈ(ಸಂತುಷ್ತನೂ ಬಲಿಷ್ಠನೂ ಆದ ಆಗಸಕ್ಕೇ ಕಣ್ಣೀರು ಬರುವಂತೇ ಮಾಡುವದೇ ಇದರ ಕೆಲಸ!)
        ತಿದ್ದುಗೆಗೆ ಧನ್ಯವಾದಗಳು,ಇನ್ನೂ ಅಸ್ಪಷ್ಟವಾಗಿದ್ದರೆ ದಯವಿಟ್ಟು ಪೇಳಿ.

  8. ಬರವಾಗಮಿಸಲ್ಕೇ ವರ್ಷದಾ ಬರವಿಲ್ಲ
    ತಿರಿಯುತಾಡಿಸಿತದುಂ ಜನರ ಜಲಕೆ
    ಶುರುವಿಡೆ ನಿಲದೆನುತಿದೆ ಚಣವಮಮವೇನಿದೈ
    ಬರುತಿರ್ಪ ಮುಂಗಾರಿನಾಟೋಪಮಯ್

  9. ಬುವಿಯುತಾ ಬೆಂದಿತ್ತು
    ಭವದಲಾಹಾಕಾರ-
    – ವು ವರುಣನ ಪರಿಹಾಸ್ಯ ಮೇದಿನಿಗಿದುಂ
    ಶಿವನೊಲಿದು ಮುಗಿಲಿತ್ತ
    ಕಿವುಡವೇಂ? ಮೋಡವುಂ
    ನವಶಕ್ತಿ ಮುಂಗಾರಿನಾಟೋಪಮಯ್

  10. Encroachment of lakebeds and catchment areas in urban areas…
    ಕಾಡೊಳಾಗದುಮೇನನಾಹುತವು ಸುರಿದೊಡಂ
    ಕೋಡಿಮಳೆ ದಿನಮೆಲ್ಲ, ವಾರಮೆಲ್ಲಂ|
    ನಾಡಮೇಲ್ಮೈಯ ಮಾನವನು ಮಾರ್ಪಡಿಸಿರಲು
    ಪಾಡಾಯ್ತೆ ಮುಂಗಾರಿನಾಟೋಪಮೈ||

  11. ಸಿಟಿಯೊಳಗಿನ ಮಳೆಯಾರ್ಭಟಕ್ಕೆ ಹೆದರುವ ಭಾವ:

    ದಿನ ಪಂಕಿಂದೆ ಕಚೇರಿಗಂ ಪೊಗುವೆನಾನಿಂದೇತಕೋ ಕಾಣೆನೈ
    ಘನಮೇಘಂಗಳವುದ್ಭವಂ ತರಿಸಿರಲ್ಕೆ ಭ್ರಾಂತಿಯಾಕಾಶದಿ
    ರ್ದಿನನಂ ಕಾಣದೆ, ದಾರಿಯಂ ನೆನೆಯುತುಂ – ಧಾರಾಪ್ರವಾಹಂ ಗಡಾ!
    ತನುಪಂಕಿಂದೆತೊಡರ್ಚಿರೆನ್ನವಿದುವೇಂ.. ಮುಂಗಾರಿನಾಟೋಪಮಯ್?!

    ಮೊದಲ ಪಾದದ ಪಂಕ – ಪಂಕ್ – ಆಂಗ್ಲದ್ದು. ‘ಎಷ್ಟು ಪಂಕ್ ಆಗಿ ಬಂದಿದಾನೆ ನೋಡು’ ರೀತಿಯದ್ದು.

Leave a Reply to ANKITA HEGDE Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)