ಪದ್ಯಸಪ್ತಾಹ ೨೦೯: ಸಂಭಾಷಣೆಯ ಪದ್ಯರಚನೆ ಪದ್ಯ ಕಲೆ, ಸಂಭಾಷಣೆ Add comments Jul 032016 ಸಂಭಾಷಣೆಯ ಪದ್ಯರಚನೆಯ ಉದಾಹರಣೆಗೆ, ಈ ಕೊಂಡಿಯನ್ನು ಬಳಸಿ ಉದಾಹರಣೆ 15 Responses to “ಪದ್ಯಸಪ್ತಾಹ ೨೦೯: ಸಂಭಾಷಣೆಯ ಪದ್ಯರಚನೆ” ಹಂಸಾನಂದಿ says: July 4, 2016 at 3:29 am ಒಂದು ಸಂಭಾಷಣಾ ಪದ್ಯ. ಇದು ಅಮರುಕ ಶತಕದ ಪ್ರಸಿದ್ಧ ಪದ್ಯವೊಂದರ (ಕ್ವ ಪ್ರಸ್ಥಿತಾಸಿ ಕರಭೋರು ಘನೇ ನಿಶೀಥೇ) ಛಾಯಾನುವಾದ. ಈ ಹಿಂದೊಮ್ಮೆ ಪ್ರಾಸವನ್ನು ಬಿಟ್ಟು ಮಾಡಿದ್ದ ಛಾಯೆಯನ್ನು ಪದ್ಯಪಾನಕ್ಕೆಂದು ಪ್ರಾಸ ಸಹಿತವಾಗಿ ಸವರಿದ್ದೇನೆ. ಮಾತ್ರಾ ಮಲ್ಲಿಕಾ ಮಾಲೆ. “ಎಲ್ಲಿ ಹೋಗುವೆ ಕಾರಿರುಳಿನಲಿ ತೋರತೊಡೆಯವಳೆ?” “ನಲ್ಲನಿರುವೆಡೆ! ನನ್ನುಸಿರಿಗೂ ಮಿಗಿಲವನು ಕಾಣೇ! “ಇಲ್ಲವೇನೇ ಗೆಳತಿ ಒಬ್ಬಳೆ ಹೋಗಲಿಕೆ ಭಯವು?” “ಸಲ್ಲುತಿರುವನು ಮದನನೆನ್ನಯ ನೆರವು ನೀಡಲಿಕೆ” ಸಂಸ್ಕೃತ ಮೂಲ: क्व प्रस्थिताहि करभोरु घने निशीथे प्राणाधिको वसति यत्र जनः प्रियो मे । एकाकिनी वद कथं न बिभेषि बाले नन्वस्ति पुंखितशरो मदनः सहायः ॥ Reply ಗುರುದತ್ತ says: July 4, 2016 at 12:10 pm ತುಂಬಾ ಚೆನ್ನಾಗಿದೆ ಮೂಲ ಪದ್ಯ ಮತ್ತು ನಿಮ್ಮ ಪದ್ಯಾನುವಾದ. Reply Neelakanth says: July 4, 2016 at 7:28 pm Good one. It could have been better if पुंखितशरो is brought in kannada also. Reply Kanchana says: July 4, 2016 at 6:58 pm “ಅಮ್ಮ,ದೂರುವರೆಲ್ಲರೆನ್ನನು ಚಿಮ್ಮಿ ಕೇಳಿ ಪ್ರಶ್ನೆಗಳನುಂ, ಸುಮ್ಮನಪ್ಪುದೆ ಬಳಿಯ ಪಕ್ಷವನೊಬ್ಬನೆತ್ತುವುದು!” “ತಮ್ಮ,ನಿಟಲಿಗಳಾಗಿ ಸೀರೆಯ ನೆಮ್ಮುತುದ್ದಣ ಸೆರಗನಿಟ್ಟುದೆ ನಿಮ್ಮಗಳ ಮೊಗಮರೆಸಲೋಸುಗವಲವೆ?ಭಯಮೇಕೈ!!” Reply ANKITA HEGDE says: July 7, 2016 at 1:50 pm (ಹುಣ್ಣಿಮೆಯ ದಿನ ಅಡ್ಡವಾದ ಮೋಡ ಮತ್ತು ಚಂದ್ರರ ಸಂಭಾಷಣೆ) “ವಂದನೆಗಳೈ ಮೇಘರಾಜನೆ ಬಂದು ಜನರುಂ ನನ್ನ ಚೆಲುವಂ ಕಂಡು ದೃಷ್ಟಿಯನಿಡುವರೆನುತಲಿ ಮರೆಯಮಾಚುವೆಯೇಂ?” “ಚೆಂದ ಶಶಿನೀನೆನ್ನ ಮನ್ನಿಸು ಸುಂದರನು ನೀನೆಂಬ ಕಿಚ್ಚಿಗೆ ನಿಂದಿರುವೆ ನಾನಡ್ಡವಾಗಿಯೆ ಜನರ ನೋಯಿಸುತ” Reply ಹಾದಿರಂಪ says: July 7, 2016 at 10:44 pm ಒಳ್ಳೆಯ ಕಲ್ಪನೆ, ರಚನೆ. Reply ಭಾಲ says: July 7, 2016 at 4:19 pm ಗಂಡ ಹೆಂಡಿರ ಮಧ್ಯೆ ನಡೆಯುವ ಸಂಭಾಷಣೆ … ತಿಂಡಿಗೇನನು ಮಾಡಿರುವೆ ಕಣೇ ನೀನಿಂದು ? ಗ೦ಡನೊಲವಿನ ತಿಂಡಿ ಹೇಳಿಯೇನೆಂದು I ಹೆಂಡತಿಗು ಮಿಗಿಲಾಗಿಹುದೆ ತಿಂಡಿಯೊಲವೆನಗೆ ? ಖಂಡಿಸೆನು,ತರುವೆನುಪ್ಪಿಟ್ಟು ನಿಮಗೆ II Reply ಹಾದಿರಂಪ says: July 7, 2016 at 10:46 pm ಧಾರವಾಡದ ’ತಿಂಡಿ’! ಅಬ್ಬ, ಎಂಥ ಧ್ವನಿ! Reply ಭಾಲ says: July 8, 2016 at 11:16 am ಏನೋ ಹೊಗಳಿಕೆ ಇರಬೇಕು ಅಂದುಕೊಂಡು ” ಧನ್ಯವಾದ ” ಹೇಳ್ತೇನೆ . ”ಧ್ವನಿ ” ಅನ್ನೋದು ಏನು ? ನನಗೆ ಅರ್ಥವಾಗಿಲ್ಲ . ನಿಮಗೆ ಅರ್ಥವಾದಂತೆ ತಿಳಿಸಿ ”ಧಾರವಾಡದ ’ತಿಂಡಿ’!” ಅ೦ದ್ರ ನಂಗೇನು ತಿಳೀತದ ? ನಾನು ಕಾಸರಗೋಡು , ದ . ಕನ್ನಡದಾಗ ಬೆಳಿದಾಕಿ ಇದೀನಿ . ಎಲ್ಲಾನೂ ಒಂಚೂರು ಬಿಡಿಸಿ ಹ್ಯಾಳ್ರಿ ಪ್ರಸಾದ್ ಸರ Reply ನೀಲಕಂಠ says: July 8, 2016 at 6:50 pm ಹಹ್ಹಾ… ರಂಪರ ತಿಂಡಿ ರುಚಿಕಟ್ಟಾಗಿರುವಂಥದ್ದು! Reply ANKITA HEGDE says: July 7, 2016 at 6:44 pm (ಒಂದೇ ವೃಕ್ಷದ ಫಲ-ಪುಷ್ಟಗಳ ಸಂಭಾಷಣೆ) “ಎಲೆ ಸುಮವೆ ಚೆಂದವಿರೆ ಬಲಹೀನ, ಶಿವ ದೇವ- -ರಲರಿಸಲ್ ಕೊಯ್ದಿಡುವಳುಂ ಲಲನೆ, ಕೊಯ್ಯದಿರೆ ನೆಲಸೇರ್ವೆ, ಜೇನಂದ ದೋಚುವುದು, ಮುಗಿದೆ ನೀಂ ! ನೋಡೆನ್ನ ಬಹು ಬಲಿಷ್ಠಂ” ” ಎಳೆ ಫಲವೆ ನೀನರಿಯೆ, ನಾ ಮರಕೆ ಶೃಂಗಾರ ಬಲುಸೊಬಗು, ಕಡೆಗಾಲದಿ ಧರೆಯೊಳ್ ಮುಕ್ತಿಯೈ ನೆಲೆ ಜೇನ್ಗೆ, ತೃಪ್ತಿಯೈ, ಕೆಳನೋಡು ಕಲ್ಪಿಡಿದಿಹರ್ ಬಾಲರು ಪಡೆಯಲ್ ನಿನ್ನ ನೀಗಳ್” Reply ಹಾದಿರಂಪ says: July 7, 2016 at 10:52 pm ಕಲ್ಪನೆಯು ತುಂಬ ತುಂಬ ಚೆನ್ನಾಗಿದೆ. ಭಾಷೆಯನ್ನು ರಿದಮಿಕ್ ಆಗಿಸಬೇಕು. Reply ಹಾದಿರಂಪ says: July 7, 2016 at 10:37 pm ಗಂಡನು ಅಡುಗೆಯ ಬಗೆಗೆ ವಿಚಾರಿಸಿದರೆ, ಮನೆಯಲ್ಲಿ ಸೇರಿಕೊಂಡಿದ್ದ ಇಲಿಯನ್ನು ಹಿಡಿಯುವ ವಿಚಾರವಾಗಿ ಕೇಳಿದನೇನೋ ಎಂದುಕೊಳ್ಳುತ್ತಾಳೆ ಹೆಂಡತಿ. ಗಂಡ: ಏನು ಮಾಡಿಹೆ (ಅಡುಗೆ) ಹೆಂಡತಿ: ಬೋಂಡ (ಇಲಿಗಾಗಿ) ಗ: ಅಷ್ಟೆಯೆ? ಅದರ ಜೊತೆಗೆ ವ್ಯಂಜನ (ಅನ್ನ ಸಾರು ಇಲ್ಲವೋ)? ಹೆ: ಮಾರಕವಾದ ವಿಷವ ಸೇರಿಸಿಹೆ ಅದಕ್ಕೆ ಗ: ಹಾ! ನೀನೇ ಮುಕ್ಕು ಹೆ: ಈ ಪ್ರಣಯಿನಿಗೆ ಇದೇಯೆ ನೀವು ಕೊಡುವ ಬಹುಮಾನ? ಗ: ವಿಷದ ಬೋಂಡವ ತಿಂದು ನಾನು ಸಾಯಬೇಕೆ? ಹೆ: ಹಯ್ಯೋ! ನಿಮಗಲ್ಲ ರೀ! ಅದು ಆಖುವಿಗೆ(ಇಲಿ). ಹ್ಹಹ್ಹಹ್ಹ —————– ಧವಳ=ಸಂತುಲಿತದ್ರುತಾವರ್ತಗತಿ|| ಏಂ ಮಾಡಿಹೆ/ ಬೋಂಡಂ/ ಬರಿಯಷ್ಟಲ್ಲದೆ ವ್ಯಂಜಂ? ತಾಂ ಮಾರಕಮಿರ್ಪೀ ವಿಷಮಂ ಸೇರಿಸಿದೆಂ ಕೇಳ್!/ ನೀಂ ಮುಕ್ಕ್/ಎನಗೇನೀ ಬಹುಮಾನಂ ಪ್ರಣಯಕ್ಕಂ?/ ನಾಂ ಮೃತ್ಯುವನೊಂದೆಂ/ ನಿಮಗಲ್ತಾಖುವಿಗಂ ಹೋ!!/ Reply ಶೈಲಜಾ says: July 8, 2016 at 1:38 pm ಟೀಚರು ಮತ್ತು ಗು೦ಡನ ನಡುವಿನ ಸ೦ಭಾಷಣೆ 🙂 “ಏಳಬೇಕಿನ್ನೆಲ್ಲ ಬೆಳಗು ಜಾವದಿ ಬೇಗ ಕೋಳಿ ಕೂಗುವ ತನಕ ಕಾಯಬೇಡಿ ” “ಹೇಳಿ ಕಲಿಸಿದ್ದ೦ದು, ಮತ್ತೆ ತಿದ್ದುವಿರೇಕೆ ತಾಳಿದವನಲ್ಲವೇ ಬಾಳುವವನು?” Reply ANKITA HEGDE says: July 9, 2016 at 10:00 am (ಕಾಗದ ಮತ್ತು ಲೇಖನಿಗಳ ಸಂಭಾಷಣೆ) “ಬಿಳಿಯ ಬಣ್ಣ ಹಾಳೆ ನಾನು, ನನ್ನ ಮೇಲೆ ನೀಲಿ ಬಳಿದೆ ಹೊಳೆವ ಚರ್ಮವುಂ ಕುರೂಪಿಯಾಗಿ ಹೋಗಿದೆ” “ಅರರೆ! ನಿನಗೆ ನನ್ನ ಮೇಲೆ ಯಾಕೆ ಕೋಪ ಬೇಕು ಹೇಳು ಭರಭರದಲಿ ಚೆಲುವಿನಕ್ಕರಗಳ ಜೋಡಿಪೆ” “ನೀನು ಪದಗಳನ್ನು ಜೋಡಿಸೇನುಲಾಭವುಂಟು ತಿಳಿಯೆ ನಾನು ಬಹಳ ಹೆಡ್ಡನೆಂದು ಜನರು ಪೇಳ್ವರು” “ಶ್ವೇತ ಕಾಗದದಲಿ ಜ್ಞಾನವಿರಲು ಜನರು ನಿನ್ನ ಪಡೆದು ದಾತನೆಂದು ಹಣೆಗೆ ನಿನ್ನ ಒತ್ತಿಕೊಂಬರು” Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಒಂದು ಸಂಭಾಷಣಾ ಪದ್ಯ. ಇದು ಅಮರುಕ ಶತಕದ ಪ್ರಸಿದ್ಧ ಪದ್ಯವೊಂದರ (ಕ್ವ ಪ್ರಸ್ಥಿತಾಸಿ ಕರಭೋರು ಘನೇ ನಿಶೀಥೇ) ಛಾಯಾನುವಾದ.
ಈ ಹಿಂದೊಮ್ಮೆ ಪ್ರಾಸವನ್ನು ಬಿಟ್ಟು ಮಾಡಿದ್ದ ಛಾಯೆಯನ್ನು ಪದ್ಯಪಾನಕ್ಕೆಂದು ಪ್ರಾಸ ಸಹಿತವಾಗಿ ಸವರಿದ್ದೇನೆ.
ಮಾತ್ರಾ ಮಲ್ಲಿಕಾ ಮಾಲೆ.
“ಎಲ್ಲಿ ಹೋಗುವೆ ಕಾರಿರುಳಿನಲಿ ತೋರತೊಡೆಯವಳೆ?”
“ನಲ್ಲನಿರುವೆಡೆ! ನನ್ನುಸಿರಿಗೂ ಮಿಗಿಲವನು ಕಾಣೇ!
“ಇಲ್ಲವೇನೇ ಗೆಳತಿ ಒಬ್ಬಳೆ ಹೋಗಲಿಕೆ ಭಯವು?”
“ಸಲ್ಲುತಿರುವನು ಮದನನೆನ್ನಯ ನೆರವು ನೀಡಲಿಕೆ”
ಸಂಸ್ಕೃತ ಮೂಲ:
क्व प्रस्थिताहि करभोरु घने निशीथे
प्राणाधिको वसति यत्र जनः प्रियो मे ।
एकाकिनी वद कथं न बिभेषि बाले
नन्वस्ति पुंखितशरो मदनः सहायः ॥
ತುಂಬಾ ಚೆನ್ನಾಗಿದೆ ಮೂಲ ಪದ್ಯ ಮತ್ತು ನಿಮ್ಮ ಪದ್ಯಾನುವಾದ.
Good one. It could have been better if पुंखितशरो is brought in kannada also.
“ಅಮ್ಮ,ದೂರುವರೆಲ್ಲರೆನ್ನನು
ಚಿಮ್ಮಿ ಕೇಳಿ ಪ್ರಶ್ನೆಗಳನುಂ,
ಸುಮ್ಮನಪ್ಪುದೆ ಬಳಿಯ ಪಕ್ಷವನೊಬ್ಬನೆತ್ತುವುದು!”
“ತಮ್ಮ,ನಿಟಲಿಗಳಾಗಿ ಸೀರೆಯ
ನೆಮ್ಮುತುದ್ದಣ ಸೆರಗನಿಟ್ಟುದೆ
ನಿಮ್ಮಗಳ ಮೊಗಮರೆಸಲೋಸುಗವಲವೆ?ಭಯಮೇಕೈ!!”
(ಹುಣ್ಣಿಮೆಯ ದಿನ ಅಡ್ಡವಾದ ಮೋಡ ಮತ್ತು ಚಂದ್ರರ ಸಂಭಾಷಣೆ)
“ವಂದನೆಗಳೈ ಮೇಘರಾಜನೆ
ಬಂದು ಜನರುಂ ನನ್ನ ಚೆಲುವಂ
ಕಂಡು ದೃಷ್ಟಿಯನಿಡುವರೆನುತಲಿ ಮರೆಯಮಾಚುವೆಯೇಂ?”
“ಚೆಂದ ಶಶಿನೀನೆನ್ನ ಮನ್ನಿಸು
ಸುಂದರನು ನೀನೆಂಬ ಕಿಚ್ಚಿಗೆ
ನಿಂದಿರುವೆ ನಾನಡ್ಡವಾಗಿಯೆ ಜನರ ನೋಯಿಸುತ”
ಒಳ್ಳೆಯ ಕಲ್ಪನೆ, ರಚನೆ.
ಗಂಡ ಹೆಂಡಿರ ಮಧ್ಯೆ ನಡೆಯುವ ಸಂಭಾಷಣೆ …
ತಿಂಡಿಗೇನನು ಮಾಡಿರುವೆ ಕಣೇ ನೀನಿಂದು ?
ಗ೦ಡನೊಲವಿನ ತಿಂಡಿ ಹೇಳಿಯೇನೆಂದು I
ಹೆಂಡತಿಗು ಮಿಗಿಲಾಗಿಹುದೆ ತಿಂಡಿಯೊಲವೆನಗೆ ?
ಖಂಡಿಸೆನು,ತರುವೆನುಪ್ಪಿಟ್ಟು ನಿಮಗೆ II
ಧಾರವಾಡದ ’ತಿಂಡಿ’! ಅಬ್ಬ, ಎಂಥ ಧ್ವನಿ!
ಏನೋ ಹೊಗಳಿಕೆ ಇರಬೇಕು ಅಂದುಕೊಂಡು ” ಧನ್ಯವಾದ ” ಹೇಳ್ತೇನೆ .
”ಧ್ವನಿ ” ಅನ್ನೋದು ಏನು ? ನನಗೆ ಅರ್ಥವಾಗಿಲ್ಲ . ನಿಮಗೆ ಅರ್ಥವಾದಂತೆ ತಿಳಿಸಿ
”ಧಾರವಾಡದ ’ತಿಂಡಿ’!” ಅ೦ದ್ರ ನಂಗೇನು ತಿಳೀತದ ? ನಾನು ಕಾಸರಗೋಡು , ದ . ಕನ್ನಡದಾಗ ಬೆಳಿದಾಕಿ ಇದೀನಿ . ಎಲ್ಲಾನೂ ಒಂಚೂರು ಬಿಡಿಸಿ ಹ್ಯಾಳ್ರಿ ಪ್ರಸಾದ್ ಸರ
ಹಹ್ಹಾ… ರಂಪರ ತಿಂಡಿ ರುಚಿಕಟ್ಟಾಗಿರುವಂಥದ್ದು!
(ಒಂದೇ ವೃಕ್ಷದ ಫಲ-ಪುಷ್ಟಗಳ ಸಂಭಾಷಣೆ)
“ಎಲೆ ಸುಮವೆ ಚೆಂದವಿರೆ ಬಲಹೀನ, ಶಿವ ದೇವ-
-ರಲರಿಸಲ್ ಕೊಯ್ದಿಡುವಳುಂ ಲಲನೆ, ಕೊಯ್ಯದಿರೆ
ನೆಲಸೇರ್ವೆ, ಜೇನಂದ ದೋಚುವುದು, ಮುಗಿದೆ ನೀಂ ! ನೋಡೆನ್ನ ಬಹು ಬಲಿಷ್ಠಂ”
” ಎಳೆ ಫಲವೆ ನೀನರಿಯೆ, ನಾ ಮರಕೆ ಶೃಂಗಾರ
ಬಲುಸೊಬಗು, ಕಡೆಗಾಲದಿ ಧರೆಯೊಳ್ ಮುಕ್ತಿಯೈ
ನೆಲೆ ಜೇನ್ಗೆ, ತೃಪ್ತಿಯೈ, ಕೆಳನೋಡು ಕಲ್ಪಿಡಿದಿಹರ್ ಬಾಲರು ಪಡೆಯಲ್ ನಿನ್ನ ನೀಗಳ್”
ಕಲ್ಪನೆಯು ತುಂಬ ತುಂಬ ಚೆನ್ನಾಗಿದೆ. ಭಾಷೆಯನ್ನು ರಿದಮಿಕ್ ಆಗಿಸಬೇಕು.
ಗಂಡನು ಅಡುಗೆಯ ಬಗೆಗೆ ವಿಚಾರಿಸಿದರೆ, ಮನೆಯಲ್ಲಿ ಸೇರಿಕೊಂಡಿದ್ದ ಇಲಿಯನ್ನು ಹಿಡಿಯುವ ವಿಚಾರವಾಗಿ ಕೇಳಿದನೇನೋ ಎಂದುಕೊಳ್ಳುತ್ತಾಳೆ ಹೆಂಡತಿ.
ಗಂಡ: ಏನು ಮಾಡಿಹೆ (ಅಡುಗೆ)
ಹೆಂಡತಿ: ಬೋಂಡ (ಇಲಿಗಾಗಿ)
ಗ: ಅಷ್ಟೆಯೆ? ಅದರ ಜೊತೆಗೆ ವ್ಯಂಜನ (ಅನ್ನ ಸಾರು ಇಲ್ಲವೋ)?
ಹೆ: ಮಾರಕವಾದ ವಿಷವ ಸೇರಿಸಿಹೆ ಅದಕ್ಕೆ
ಗ: ಹಾ! ನೀನೇ ಮುಕ್ಕು
ಹೆ: ಈ ಪ್ರಣಯಿನಿಗೆ ಇದೇಯೆ ನೀವು ಕೊಡುವ ಬಹುಮಾನ?
ಗ: ವಿಷದ ಬೋಂಡವ ತಿಂದು ನಾನು ಸಾಯಬೇಕೆ?
ಹೆ: ಹಯ್ಯೋ! ನಿಮಗಲ್ಲ ರೀ! ಅದು ಆಖುವಿಗೆ(ಇಲಿ). ಹ್ಹಹ್ಹಹ್ಹ
—————–
ಧವಳ=ಸಂತುಲಿತದ್ರುತಾವರ್ತಗತಿ||
ಏಂ ಮಾಡಿಹೆ/ ಬೋಂಡಂ/ ಬರಿಯಷ್ಟಲ್ಲದೆ ವ್ಯಂಜಂ?
ತಾಂ ಮಾರಕಮಿರ್ಪೀ ವಿಷಮಂ ಸೇರಿಸಿದೆಂ ಕೇಳ್!/
ನೀಂ ಮುಕ್ಕ್/ಎನಗೇನೀ ಬಹುಮಾನಂ ಪ್ರಣಯಕ್ಕಂ?/
ನಾಂ ಮೃತ್ಯುವನೊಂದೆಂ/ ನಿಮಗಲ್ತಾಖುವಿಗಂ ಹೋ!!/
ಟೀಚರು ಮತ್ತು ಗು೦ಡನ ನಡುವಿನ ಸ೦ಭಾಷಣೆ 🙂
“ಏಳಬೇಕಿನ್ನೆಲ್ಲ ಬೆಳಗು ಜಾವದಿ ಬೇಗ
ಕೋಳಿ ಕೂಗುವ ತನಕ ಕಾಯಬೇಡಿ ”
“ಹೇಳಿ ಕಲಿಸಿದ್ದ೦ದು, ಮತ್ತೆ ತಿದ್ದುವಿರೇಕೆ
ತಾಳಿದವನಲ್ಲವೇ ಬಾಳುವವನು?”
(ಕಾಗದ ಮತ್ತು ಲೇಖನಿಗಳ ಸಂಭಾಷಣೆ)
“ಬಿಳಿಯ ಬಣ್ಣ ಹಾಳೆ ನಾನು, ನನ್ನ ಮೇಲೆ ನೀಲಿ ಬಳಿದೆ
ಹೊಳೆವ ಚರ್ಮವುಂ ಕುರೂಪಿಯಾಗಿ ಹೋಗಿದೆ”
“ಅರರೆ! ನಿನಗೆ ನನ್ನ ಮೇಲೆ ಯಾಕೆ ಕೋಪ ಬೇಕು ಹೇಳು
ಭರಭರದಲಿ ಚೆಲುವಿನಕ್ಕರಗಳ ಜೋಡಿಪೆ”
“ನೀನು ಪದಗಳನ್ನು ಜೋಡಿಸೇನುಲಾಭವುಂಟು ತಿಳಿಯೆ
ನಾನು ಬಹಳ ಹೆಡ್ಡನೆಂದು ಜನರು ಪೇಳ್ವರು”
“ಶ್ವೇತ ಕಾಗದದಲಿ ಜ್ಞಾನವಿರಲು ಜನರು ನಿನ್ನ ಪಡೆದು
ದಾತನೆಂದು ಹಣೆಗೆ ನಿನ್ನ ಒತ್ತಿಕೊಂಬರು”