May 062011
 

ಪುಷ್ಪವಿಲಾಪ

(ಮೂಲ ತೆಲುಗು ಕವನ: ಕರುಣಶ್ರೀ : ಕನ್ನಡ ಪದ್ಯಾನುವಾದ : ಚಂದ್ರಮೌಳಿ)

(English Translation by Sri Kandregula Amba Prasada Rao)

ನಿನ್ನ ಪೂಜೆಗೆ ಪ್ರಭೂ ಹೂಗೊಯ್ಯಲೆಂದು

ಮುಂಬೆಳಗಿನಲಿ ತೋಟದೊಳಬಂದು ನಿಂತೆ

ಎಳೆನೇಸರೆಳೆಗೆಂಪು ಬೆಳಗಿಸಿತು ಹೂಬನವ

ಪುಷ್ಪಬಾಲಕರೆಲ್ಲ ತಾಯ ಮಡಿಲನ್ನು

ಅಪ್ಪಿ ಮುದ್ದಾಡಿ ತೂಗಾಟ ನಡೆಸಿರೆ ಆಗ

Pushpa Vilapam

nEnoka poolamokkakaDa nilci civa’luna kommavamci gO
ra’neDunamtalOna virulanniyu ja’liga nOLLu vippi “ma’
pra’Namu diituva’?” yanucu ba’vuru mannavi – kRumgipOti, na’
ma’nasamamdedO taLuku mannadi “pushpavila’pa” ka’vyamai.

Standing at a flowering plant Nimbly pulling a stalk aslant, Ere I, to pluck, putforth my nail,
All flowers raised a piteous wail. “Takest thou our life?” – Abashed Was I Something then flashed In my mind – a weird figment, As a poem – “The Flowers’ Lament”.

ನಾನೊಂದು ಮಲ್ಲಿಗೆಯ ಗಿಡದ ಬಳಿ ಹೋದೆ

ಮೆಲ್ಲನೆಯೆ ಹೂರಂಬೆ ಒಂದ ಹಿಡಿದೆಳೆದೆ

ಹೂತೊಟ್ಟಿಗುಗುರಿಟ್ಟೆ, ಅಷ್ಟರಲೆ ಸಣ್ಣ ದನಿ..

ಮಾತು ಮೂಡಿತೊ? ಹೌದು. ಹೂಗಳೆಲ್ಲಾ ಏನೊ ನುಡಿಯುತಿವೆ:

ಅಯ್ಯೊ ಹಿಂಸಿಪೆ ಏಕೆ? ಕೊಲ್ಲದಿರು, ತಾಳ್ ನಿಲ್ಲು’,

ಆರ್ತಗೀತೆಯ ಕೇಳಿ, ಹಾಗೆ ನಿಂತೆನು ಅಲ್ಲೆ,

ಮನಮಿಡಿದು, ಎದೆ ಕರಗಿ, ಏನೊ ಮನ ಮಿಂಚಿತ್ತು

ಹೊಳೆದು, ಪುಷ್ಪವಿಲಾಪ ಕಾವ್ಯ ಮೈತಳೆದಿತ್ತು.

ಆಗ ಒಂದು ಸಣ್ಣ ಜಾಜಿ

ತೂಗಿ, ಆಡಿ, ನನ್ನ ನೋಡಿ

ಸಣ್ಣದನಿಯಲೇನೋ ನುಡಿಯೆ

ಕಣ್ಣು ತೇವ, ಅಶ್ರು ಮೂಡಿ

a’yuvugalgu na’lgu gaDiyal kani pemcina tiive talli ja’
tiiyata diddi tiirtumu, tadiiya karmmulalOna svEcCamai
nooyalaloogucun muriyucumdumu – a’yuvu diirinamtanE
ha’yiga kamDlu moosedamu a’yama callani ka’li vrELLapai.

During our short span of Life we have embellished The species of mother – creeper that
bore and cherished – Swinging in her arms with gay abandon, shut eyes – When end comes – happily fade away at her cool toes.

ಬಾಳು ನಮಗೆ ನಾಲ್ಕು ಗಳಿಗೆ,

ಬಳ್ಳಿ ತಾಯಿ ಹೆತ್ತು ಇಳೆಗೆ

ನಮ್ಮ ಜನ್ಮಕರ್ಥ ಕೊಡಲು

ನಿಮ್ಮ ಕೈಗಳಲ್ಲಿ ಇಡಲು

ಹಾರದ ಉಯ್ಯಾಲೆ ಆಡಿ

ಮೆರೆವೆವು ಮೈಮರೆತು ಕೂಡಿ

ಆಯು ತೀರಿದಷ್ಟರಲ್ಲಿ

ತಾಯ ತಂಪು ಪಾದದಲ್ಲಿ

ಮೆಲ್ಲನುದುರಿ ಕೆಳಗೆ ಬಿದ್ದು

ಹಾಯೆನುತ ಕಣ್ಣುಗಳ ಹೊದ್ದು

g’lini gouravimtumu sugamdhamu poosi, sama’Srayimcu Brum
ga’laku vimdusEsedamu kammani tEnelu, mimmu bOmTla nE
tra’laku ha’yi goortumu, svatamtrula mammula sva’rdhabuddhitO
ta’Lumu! tRumpabOvakumu talliki biDDaku vEru sEtuvE!

We smear perfume and welcome breeze, Feast with tasty honey the visiting bees, Cause comfort and joy to the eye – Of people like you – free tho’ are we – Tarry! pluck us not with selfish intent, Would you tear the child from its parent!

ಗಾಳಿಗೆ ಗೌರವವ ನೀಡಿ

ಗಂಧ ಲೇಪ ವನ್ನು ಮಾಡಿ

ಆಶ್ರಯಿಸಿದ ದುಂಬಿಗಳಿಗೆ

ಜೇನಿನುಣಿಸು ನಮ್ಮ ಒಸಗೆ

ನಿಮ್ಮೆಲ್ಲರ ಕಣ್ಗೆ ತಂಪು

ಹಾ.. ಯೆನಿಸುವಂತ ಸೊಂಪು

ನಿಸ್ವಾರ್ಥದ ಸ್ವೇಚ್ಛೆಯವರು

ನಾಲ್ಕು ಕ್ಷಣವೆ ಬಾಳುವವರು

ತಾಳು, ನಿಲ್ಲು, ಸ್ವಾರ್ಥಿಯಾಗಿ, ಅಯ್ಯೊ ಬೇಡ, ಕೀಳಬೇಡ

ತಾಯಿ ಯೊಡಲಿನಿಂದ ನಮ್ಮ ಕಿತ್ತು ಬೇರೆ ಮಾಡಬೇಡ

Ulu da’ra’latO gomtu kuri bigimci
gumDelOnumDi soodulu grucci koorci
muDucu komduru muccaTa muDula mammu
akaTa! dayalEniva’ru mii ya’Duva’ru!

Strangling us with wool and rings, Piercing bosoms with needles and strings, Adorn with us your braids fancy- Alas! ye women are sans mercy.

ದಾರದಿಂದ ನಮ್ಮ ಮೃದುಲ

ಕೊರಳಿಗೆ ನೇಣನ್ನು ಬಿಗಿದು

ಸಾಲದೆ, ಹೃದಯಕ್ಕೆ ಸೂಜಿ

ಹಾಕಿ, ಚುಚ್ಚಿ, ಎಳೆದು, ಹೆಣೆದು

ಮೈಯ ಮರೆತು ಮೆರೆವರಲ್ಲ ನಿಮ್ಮ ಹೆಣ್ಗಳು !

ಅಯ್ಯೊ ! ನಿಮಗೆ ದಯೆಯೆ ಇಲ್ಲ

ಎಂದುದೊಂದು ಕೆಂಗುಲಾಬಿ

ಕೋಪದಿ ಮುಖ ಕೆಂಪಾಗಿ

ಆಹ: ನೀವು ದಯೆ ಧರ್ಮವೆ

ಮೂರ್ತಗೊಂಡ ಮಾನವರೇ

ಎಂದು ನೋಡಿ ನನ್ನತ್ತ

ಹೀಗೆಂದಿತು ಪಾರಿಜಾತ

ma’ velalEni mugdha sukuma’ra sugamdha maramda ma’dhurii
jiivitamella miikai tyajimci kRuSimci naSimcipOva ma’
yauvanamella kollagoni a’ pai ciipurutODa cimmi ma
mma’vala pa’ravaiturugada’! naraja’tiki niiti yunnada’?

While our priceless and innocent, Delicate, nectarean and fragrant – Life, for you is sacrificed and frayed – Withered and laid utterly destroyed – Ravishing our youth, sweep with broom – Alas ! Is there morality among the Human Race ?

ಅಮೂಲ್ಯತೆಯ ನಮ್ಮ ಮುಗ್ಧ

ಸೌಕುಮಾರ್ಯ, ಮಧು, ಸುಗಂಧ

ನಿಲುವೆಲ್ಲಾ ನಿಮಗಾಗಿಯೆ

ಅರ್ಪಿಸುವೆವು ಕೃಶಿಸಿ, ನಶಿಸಿ

ನೀವು ನಮ್ಮ ಯೌವನವನೆ

ಕೊಳ್ಳೆಹೊಡೆದು, ಬಾಡಿದೊಡನೆ

ಚಿಮ್ಮಿ ಹೊರಗೆ ಎಸುಯುವಿರೇ

ನಿಮಗೆ ನೀತಿ ಇರುವುದೇ ?

buddha dEvuni BoomilO puTTina’vu
sahajamou prEma niilOna caccenEmo?
amdamunu hatyajEseDi hamtakumDa !
mailapaDipOye nOyi ! nii manuja jama.

In the land of the Buddha thou art born – of innate love thou, perhaps, art shorn – Oh, murderer, who slayeth beauteous charm, – Defiled is thy birth in human form.

ಬುದ್ಧದೇವ ಅವತರಿಸಿದ

ಭೂಮಿಯಲ್ಲಿ ಜನ್ಮ ತಳೆದೆ

ಸಹಜವಾದ ನಿನ್ನ ಪ್ರೇಮ

ಸತ್ತು ಹೋದುದೇನು ಕೊನೆಗೆ

ಸೌಂದರ್ಯವ ಕೊಂದು ಕುಣಿವ

ಕೊಲೆಪಾತಕ ಪಾಪಿ, ನೀನು

ತೊಲಗು ನಮ್ಮ ಮುಟ್ಟಬೇಡ

ನಿನ್ನ ಬಾಳು ಮೈಲಿಗೆ

ಹೀಗೆ ಹಿಯ್ಯಾಳಿಸುವ ಹೂಗಳನು ತಾಕದೆ

ಬರಿಗೈಲಿ ಬಂದೆ ಪ್ರಭು ಹೂವಿಲ್ಲ ನಿನಗೆ

ಬರಿಗೈಯಲೇ ಹೋದೆ, ಎದೆತುಂಬಿ ಬಂದೆ

ಹೃದಯ ಕುಸುಮವನಷ್ಟೆ ಅರ್ಪಿಸುವೆ ನಿನಗೆ.

  3 Responses to “ಪುಷ್ಪವಿಲಾಪ”

  1. Thanks Sir,

    Very beautiful verses, heartrending…

  2. aahaaa! mUlavathiramya.

    engleeshu ramya.

    nimma anuvaadavadu ramyaathiramya.

    karuna rasa chennaagi sphuriside.

    bahala dinagala nanthara ondu olle padyavannodida anubhava.

    chennagide.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)