May 032011
 

ಭಾಮಿನಿ:
——–

ಆರ ಮಹಿಮೆಯ ಬಲದಿ ಬಾಳಿನ
ಸಾರ ಬೆಳಗಿತೊ ಜಗದಿ ಮತ್ತಿ
ನ್ನಾರ ಮೋಡಿಯು ಜೀವ ಚಲನಕೆ ತೈಲ ವೆರೆದಿಹುದೋ|
ಮೂರು ಲೋಕದ ಜೀವ ಸ೦ಕುಲ
ಸೇರಿ ಭಜಿಸುವ ಧರುಮ ನೆಲ್ಲವ
ಮೀರಿ ನಿ೦ದಿರುವಾಸೆಗಪ್ಪಗೆ ನಮಿಪೆ ತಲೆಬಾಗಿ ||

ಶರ:
—-

ಹುಟ್ಟಿಸಿ ಬಯಕೆಯ
ಹುಟ್ಟಿಸಿದಪ್ಪಗೆ
ತಟ್ಟಿತು ಶಾಪವು ಭೋಣಿಗೆಗೇ || (ಮೊದಲ ಪ್ರಯೋಗಕ್ಕೇ)
ಗಟ್ಟಿಗ ನೀನೇ
ಮೆಟ್ಟಿಬರುತಲಿಹೆ
ಸುಟ್ಟರು ಸುಡದೆಯೆ ಸರ್ವರಲೀ ||

ಕುಸುಮ:
=====
ನೀನಿರಲು ಸ೦ಸಾರ
ನೀನಿರದೆ ದುಸ್ಸಾರ
ಬಾನಿನಲಿ ರವಿಕಾಣದ ದಿನದ೦ತೆ |
ಏನಿಲ್ಲದ ಬದುಕೂ
ನೀನಿರಲು ಬೆಳಗುವುದು
ನೀನತಿಯೆನಲೊಡೆವುದು ಸ೦ಬ೦ಧವು ||

  2 Responses to “ಕಾಮ(,) ನ ಮನ”

  1. ಶ್ರೀಶ,

    ಚೆನ್ನಾಗಿದೆ ಪ್ರಯೋಗಗಳು :),

    * ಮೂರು ಲೋಕದ ಜೀವ ಸ೦ಕುಲ ಸೇರಿ ಭಜಿಸುವ ಧರುಮ ನೆಲ್ಲವ ಮೀರಿ ನಿ೦ದಿರುವಾಸೆಗಪ್ಪಗೆ
    * ಹುಟ್ಟಿಸಿದಪ್ಪಗೆ ತಟ್ಟಿತು ಶಾಪವು
    * ಸುಟ್ಟರು ಸುಡದೆಯೆ
    * ನೀನತಿಯೆನಲೊಡೆವುದು ಸ೦ಬ೦ಧವು

    ಎಲ್ಲವು ಚೆನ್ನಾಗಿದೆ

  2. bhaamini claasssss!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)