Aug 222016
 

ಆರೇ ಮೂರಾಗಲೆಣಸೆ ಮೆರುಗಿದ ಸೊಬಗಯ್

  45 Responses to “ಪದ್ಯಸಪ್ತಾಹ ೨೧೬: ಸಮಸ್ಯಾಪೂರಣ”

  1. ಕಳೆದ ವಾರದ ಗೋಷ್ಠಿಯಲ್ಲಿ ನನ್ನ ಪರಿಹಾರವಿಂತಿತ್ತು..

    ಚಾರು ಸ್ವರಕಲ್ಪನೆಯಂ
    ನೂರಾರು ತೆರದೆ ವಿಶೇಷ ಗತಿಯೊಳ್ ಪಾಡಲ್|
    ದೋರಲ್ಪೊಸನಡೆಗಳನಿಂ
    ತಾರೇ ಮೂರಾಗಲೆಣಸೆಮೆರುಗಿದ ಸೊಬಗಯ್ |

    ಇಲ್ಲಿ ಒಬ್ಬ ಸಂಗೀತಗಾರನು ಮಾಡಿದ ಚಮತ್ಕಾರವನ್ನು ಹೇಳಲಾಗಿದೆ

  2. ಇನ್ನೊಂದು ಕ್ರಿಕೆಟ್ ಆಟದ ಪರಿಹಾರ..

    ಭಾರೀ ಮಳೆ ಸುಯ್ದಿರಲಿ-
    ನ್ನಾರಂ, ನಾಲ್ಕೆಸೆತದಿಂದೆ ಬೇಕಿರೆ ಕಡೆಗಾ
    ಧಾರವೆ ಡಕ್ವರ್ತ್ಲೂಯಿಸೊ
    ಳಾರೇ ಮೂರಾಗೆಲೆಣಸೆ ಮೆರುಗಿದ ಸೊಬಗಯ್

  3. ದೂರಕೆ ಸಾರಿರ್ಪಿನಿಯನ
    ದಾರಿಯನೀಕ್ಷಿಸುತುಮಂತೆ ಮಿಡುಕುತ್ತಿರ್ಪಾ
    ನಾರಿಯ ಮೊಗಮರರೇ!ಪೊ
    ತ್ತಾರೇ ಮೂರಾಗಲೆಳೆಸೆ,ಮೀರಿದ ಮೆರುಗೈ!
    (ಆರು ಹೊತ್ತು ,ಮೂರಾಗಲೆಂಬಾಸೆ)

  4. ಸೋಮರೇ, ಸಮಸ್ಯೆಯ ಪಾದ “ಆರೇ ಮೂರಾಗಲೆಳಸೆ ಮೀರಿದ ಮೆರುಗಯ್” ಎಂದಿತ್ತು. ಅರ್ಥವ್ಯತ್ಯಾಸ ಏನೂ ಇಲ್ಲವಾದರೂ, ಇಲ್ಲಿ ಕಂದಪದ್ಯದ ಒಂದು ನಿಯಮವನ್ನು ಪಾಲಿಸಬೇಕಾಗುತ್ತದೆ. ಮೂರನೆಯ ಗಣ ಸರ್ವಲಘುವಾದರೆ ನಾಲ್ಕನೇಯದ್ದೂ ಸರ್ವಲಘುವಾಗಬಾರದು.

    • ಧನ್ಯವಾದ ,ನೀಲಕಂಠರಿಗೆ.

    • ಅಲ್ಲದೆ, ಮೂರಾಗಲೆ’ಣ’ಸೆ ಹಾಗೂ ಮೂರಾಗಲೆ’ಳ’ಸೆಗಳ ನಡುವೆ ತುಸು ವ್ಯತ್ಯಾಸವಿದೆ.

  5. ತೂರಿಸೆ ಬಲವಂ ಯೋಗಿಯು
    ಧೀರನವೋಲರಿಗಳೊಳ್ ಹೆಣಗುತಿರ್ದಾಗಳ್ /
    ಏರಲ್ಕೆ ಬಲಂ ಮಣಿಪುರಕ
    ದಾರೇ ಮೂರಾಗಲೆಣಿಸಿ ಸೊಬಗಿದ ಪರಿಯೈ //
    ಯೋಗಿಯೊರ್ವನು ಕುಂಡಲಿನೀ ಶಕ್ತಿಯನ್ನು ಅರಿ(ಚಕ್ರಗಳಲ್ಲಿ ) ತೂರಿಸಲು ಹೆಣಗುತ್ತಿರುವಾಗ ಅದು ಮಣಿಪುರದ(೩ನೇ ಚಕ್ರ) ವರೆಗೇರಿತು . ಖಾಲಿ ಚಕ್ರಗಳ ಸಂಖ್ಯೆ ಆರರಿಂದ ಮೂರಾಗಿದ್ದುದ್ದರಿಂದ ಸೊಬಗಾಯಿತು .
    ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ.

    • ಕೊನೆಯ ಸಾಲು “ದಾರೇ ಮೂರಾಗಲೆಳೆಸಿ ಮೀರಿದ ಮೇರುಗೈ //

    • ಮೂರನೇ ಸಾಲಲ್ಲಿ ಗಣ ತಪ್ಪಿದೆ.
      ನಾನಿಲ್ಲಿ ವೇದಾಂತಿಯೆಂದೆನಿಸಿಕೊಂಡೆ. ನಿಮಗೆ ಯಾವ ಪಟ್ಟವೋ ನೋಡಬೇಕು, ಅಷ್ಟಾಂಗಯೋಗಿ, ತಾಂತ್ರಿಕ, ವಾಮಾಚಾರಿ, ವಾಮಪಂಥಿ ಇತ್ಯಾದಿ 🙂

    • ಅದು ಮಣಿಪೂರ (ನಾಭಿದೇಶ). ಮಣಿಪುರ ಅಲ್ಲ.

      • ತೂರಿಸೆ ಬಲವಂ ಯೋಗಿಯು
        ಧೀರನವೋಲರಿಗಳೊಳ್ ಹೆಣಗುತಿರ್ದಾಗಳ್ /
        ಏರಲ್ಕದು ಮಣಿಪೂರಕ
        ದಾರೇ ಮೂರಾಗಲೆಳಸಿ ಮೆರುಗಿದ ಸೊಬಗೈ //
        ಈಗ ಸರಿಹೋಯಿತೇ ?
        ವಾಮಾಚಾರಿ , ತಾಂತ್ರಿಕ ಶಬ್ದಗಳು ಭೀಕರವಾಗಿವೆ . ಹಠಯೋಗಿ ಎನ್ನಲು ನಾನೇನೂ ಸಾಧನೆ ಮಾಡಿಲ್ಲ . ಬೇರೇನಾದರೂ ಇದ್ದರೆ ಹೇಳಿ ನೀಲಕಂಠರೆ.

      • I kept wondering why the naabhidesha shifted from the central plains to the hilly terrain of northeast!

  6. ಕಾರಾಗ್ರಹದೊಳಗಂ ಸಂ
    ಸಾರಿಯ ನಡತೆಯನು ಮೆಚ್ಚಿ ಶಿಕ್ಷೆಯು ಕಡೆಯಲ್
    ಪಾರಾಗಲ್ ಮುನ್ನಮೆ ತಾ
    ನಾರೇ ಮೂರಾಗಲೆಳಸೆ  ಮೀರಿದ ಮೆರುಗೈ

  7. ತೀರುತುಮಿರಲ್ಕವಧಿಗೆ ಕು-
    ಮಾರವ್ಯಾಸವರಕಾವ್ಯವಾಚನಕಥನಂ
    ಮೂರರಿನಾರರ ವೇಳೆಯೊ-
    ಳಾರೇ ಮೂರಾಗಲೆಳಸೆ ಮೀರಿದ ಮೆರುಗಯ್

    (ಮಧ್ಯಾಹ್ನ) ಮೂರರಿಂದ ಆರರವರೆಗೆ ಕುಮಾರವ್ಯಾಸಭಾರತದ ವಾಚನ ವ್ಯಾಖ್ಯಾನ ವೇಳೆಗೆ ಮುಗಿಯುತ್ತ ಬಂದಾಗ, ಆ ಆರೇ (ಗಡಿಯಾರದ ಆರು ಗಂಟೆ) ಮೂರಾಗೆ ಸಂತಸಕ್ಕೆ ಪಾರವೆಲ್ಲಿ?

    • ಚೆನ್ನಾಗಿದೆ. ಸೊಗಸಾದ ಅಲಂಕಾರ. ಗಡಿಯಾರವೇ ಮೂರಾಗಲೆಳಸುವುದು – ಸುಂದರ ಕಲ್ಪನೆ.

  8. ಸಾರಲ್ಕೆ ತ್ರಿಜಗಮನುಂ
    ಧಾರೆಯ ತೆರದಿಂದೆ ನಲಿದುವಂದಾಪಗೆಗಂ
    ಮಾರುಪುಗದಿರ್ಪ ಮಾನಸ
    ರಾರೇ?-ಮೂರಾಗಲೆಳೆಸೆ ಮೀರಿದ ಮೆರುಗೈ!!

  9. ಮೋರೆ ,ತಲೆಗಳೊಳ್ ಭಾಸಿಪ
    ನೂರೆಂಟು ಬಗೆಬಗೆಯಂದದೋಕುಳಿ ಬಣ್ಣಂ,
    ಸೋರಿದ ಬರ್ದುಕಿನ ದಶಕ
    ಮಾರೇ ಮೂರಾಗಲೆಳೆಸೆ ಮೀರಿದ ಮೆರುಗೈ!!

  10. ಏರುತುಮಿಳಿದು ಸ್ಫರ್ದಿಸಿ
    ಸಾರಿ ಜವದೆ ಬಂದು,ಕೂಡುತೊಂದಾಗುತ್ತುಂ
    ತೀರವ ಸೇರ್ಪಾಗ, ತೆರೆಗ
    ಳಾರೇ ಮೂರಾಗಳೆಳೆಸೆ,ಮೀರಿದ ಮೆರುಗೈ!!

    • A fine imagination that opens up a new line of possibilities.
      ನೀರಿಗೆ ಸೇರಿಸೆ ಪೊಸದೀ
      ಚೀರವು ಕುಗ್ಗಿರೆ, ಉಣಂಗಿಹದನುಂ ತೊಡುತುಂ|
      ನಾರಿಯು ಪಿಡಿಯಲ್ ನೆರಿಗೆಗ-
      ಳಾರೇ ಮೂರಾಗಲೆಳಸೆ ಮೀರಿದ ಮೆರುಗೈ||
      (ಉಣಂಗು=ಒಣಗು)
      ————
      ತಾರುಣ್ಯಾವಸ್ಥೆಯಳಿಯೆ
      ತೀರಿರಲೊಂದಾಗುತೊಂದು ಕಾಮಾರಬ್ಧಂ|
      ಭಾರದರಿವರ್ಗಗಳುಮಾ-
      ಗಾರೇ ಮೂರಾಗಲೆಳಸೆ ಮೀರಿದ ಮೆರುಗೈ||
      ———
      ಪೋರಂ ಕಲಿತಂ ಕಳೆವುದ,
      ನೂರಕೆ ಕೂಡಲರವತ್ತ, ಗುಣಿಸಲ್ ಮೇಣ್ ತಾಂ|
      ಸ್ಮೇರದೆ ಭಾಗಿಸೆರಡರಿಂ-
      ದಾರೇ ಮೂರಾಗಲೆಳಸೆ ಮೀರಿದ ಮೆರುಗೈ||

  11. ಸೇರುತ್ತುಮಾವುದುಮಿರದೆ
    ನೈರೋಧ್ಯಂ, ತಡಮದೇಕೆ ಸಂತತಿಯೆಂದುಂ|
    ಸಾರುತ್ತೆ ದಂಪತಿಗಳದು-
    ಮಾರೇ ಮೂರಾಗಲೆಳಸೆ ಮೀರಿದ ಮೆರುಗೈ||
    (ದಂಪತಿಗಳದುಂ ಆರೇ=ಯಾರೇ)
    —–
    Same in direct speech. Just for the heck of a different keelaka!
    “ಸೇರೋಣುಮಾವುದುಮಿರದೆ
    ನೈರೋಧ್ಯಂ, ಪೊಂದುವೆಂ ಪ್ರಜೆಯನಾಮೊಂದಂ|
    ನೀರೇ, ತಡಮೀಗಳೆ ಕೇಳ್
    ಬಾರೇ, ಮೂರಾಗಲೆಳಸೆ ಮೀರಿದ ಮೆರುಗೌ”||
    (ಪ್ರಜೆ=progeny)

  12. ಸ್ವಾರಸ್ಯಮಿಹ ರಹಸ್ಯಮ
    ದೀರೇಳು ಜನುಮದ ಬಂಧದಿಂದಿಮ್ಮಡಿಸಿಂ
    ನೀರೆ ಹ(ವ)ರುಷದೊಳ್ ಮನ-
    ಸಾರೇ, ಮೂರಾಗಲೆಳೆಸೆ ಮೀರಿದ ಮೆರುಗಯ್ !!

    ಇಮ್ಮಡಿಸು = ಎರಡಾಗಿ (ಮನಸಾರೆ) ಮೂರಾಗುವ ಬಯಕೆ = ಮದುವೆಯ ನಂತರ ಮಗುವಿನ ಬಯಕೆ !!

  13. ಚಾರುತನಮಪ್ಪುದಿಳಿಮುಖ-
    ಮೇರೆ ವಯಸ್ಸದು ಕಿಶೋರರುಗಳಿಂಗೆಂದುಂ|
    ತೀರಿತು ಬಾಲ್ಯವದೆಂಬರ-
    ದಾರೇ (ವರ್ಷ)ಮೂರಾಗಲ್! ಎಳಸೆ ಮೀರಿದ ಮೆರುಗೈ||
    (ಆರೇ=ಯಾರೇ=ಯಾವುದೇ ಮಗುವು. ಎಳಸೆ=ಎಳೆತನವೆ)

  14. ಧಾರೆಯೊಳಮರನದಿಯವೋಲ್
    ಮೀರುವ ಕಲ್ಪನೆಯೊಳಾದಿಕರ್ತೃವಿನೋಲ್ ಮೇಣ್
    ಧಾರಣೆಯೊಳ್ ಮೇಘದ ವೋ
    ಲಾರೇ ಮೂರಾಗಲೆಳಸೆ ಮೀರಿದ ಮೆರುಗಯ್||

  15. ಇದು ಹಳಗನ್ನಡದಲ್ಲೂ, ಕಂದ ಪದ್ಯ ರಚನೆಯಲ್ಲೂ ನನ್ನ ಮೊದಲ ಪ್ರಯತ್ನ. ನನ್ನ ಭಾಷಾಜ್ಞಾನದ ಪರಿಮಿತಿಯಿಂದಾಗಿ ಬಹಳಷ್ಟು ತಪ್ಪುಗಳಾಗಿರಬಹುದು.ಎಂದಿನಂತೆ ತಿದ್ದಿ ತಿಳಿಹೇಳುವಿರೆಂದು ಭಾವಿಸಿದ್ದೇನೆ.
    ಅಮ್ಮನು ಆರು ಚಕ್ಕುಲಿಗಳನ್ನು ಮಾಡಲು ಸಹಾಯಕ್ಕಾಗಿ ಕರೆದರೂ ಬಾರದ ತುಂಟ ಪುಟ್ಟ, ಚಕ್ಕುಲಿ ಮಾಡಿ ಆದಮೇಲೆ ಮೂರು ಚಕ್ಕುಲಿಗಳನ್ನು ಕದ್ದು ತಿಂದಾಗ(ಇದ್ದ ಆರು ಚಕ್ಕುಲಿಗಳು ಮೂರಾದಾಗ) ಅವನಿಗಾದ ಖುಷಿಯನ್ನು ವರ್ಣಿಸಲು ಪ್ರಯತ್ನಿಸಿದ್ದೇನೆ.

    ಆರೇ ಚಕ್ಕುಲಿ ಮಾಡಲು
    ಬಾರೆಲೊ ಪುಟ್ಟನೆಯೆನುತ್ತ ಕರೆಯಲ್ ತಾಯುಮ್
    ಬಾರದೆ ಮೂರಂ ತಿಂದಿರ
    ಲಾರೇ ಮೂರಾಗಲೆಳೆಸೆ ಮೀರಿದ ಮೆರುಗಯ್

    • ಚೆನ್ನಾಗಿದೆ. ತಾಯುಮ್ ಆಗದು. ತಾಯ್ ಸರಿ.

      • ತಾಯ್ ಎಂದರೆ ಎರಡು ಮಾತ್ರೆ ಕಮ್ಮಿಯಾಗುತ್ತದಲ್ಲವೇ? ಬಹುಶಃ ಹೀಗೆ ತಿದ್ದಬಹುದೆನಿಸುತ್ತದೆ. ತಪ್ಪಿದ್ದರೆ ತಿಳಿಸಿ.(ಅಂಬಿಕೆ= ತಾಯಿ ಎನ್ನುವ ಅರ್ಥದಲ್ಲಿ ಬಳಸಿದ್ದೇನೆ)

        ಆರೇ ಚಕ್ಕುಲಿ ಮಾಡುಗೆ
        ಬಾರೆಲೊ ಪುಟ್ಟನೆಯೆನುತ್ತಲಂಬಿಕೆ ಕರೆಯಲ್
        ಬಾರದೆ ಮೂರಂ ತಿಂದಿರ
        ಲಾರೇ ಮೂರಾಗಲೆಳೆಸೆ ಮೀರಿದ ಮೆರುಗಯ್

        • ಮಾಡಲು~ಮಾಡುಗೆ. ಉಳಿದೆಲ್ಲ ಚೆನ್ನಾಗಿದೆ.

          • ತಿದ್ದಿದ್ದೇನೆ. ಧನ್ಯವಾದಗಳು ನೀಲಕಂಠ,ಹಾದಿರಂಪ ಸರ್

  16. *

    • ನಿಮ್ಮೀ ಪದ್ಯ ಮಾತ್ರ ನಭೋಮಂಡಲದ ಧ್ರುವತಾರೆಯಂತೆ ಕಂಗೊಳಿಸುತ್ತಿದೆ!

      • 🙂 🙂 ಮೇಲಿನ comment ಅನ್ನು ತಪ್ಪಿ ಇಲ್ಲಿ ಹಾಕಿದ್ದೆ. ಇಲ್ಲಿಂದ ಮೇಲೆ ಸಾಗಿಸುವಾಗ ಇಲ್ಲಿಂದ ಡಿಲೀಟ್ ಮಾಡಲಾಗದೆ ಈ ತಾರೆಯನ್ನು ಇಲ್ಲಿಡಬೇಕಾಗಿ ಬಂತು .(ಯಾರಿಗಾದರೂ ಇದರಿಂದ ಏನಾದರೂ ಐಡಿಯಾ ಬಂದರೆ ಈ ತಾರೆಗೂ ಸಾರ್ಥಕ್ಯ ಬಂದೀತು 🙂 )

        • “ಯಾರಿಗಾದರೂ ಐಡಿಯಾ ತಾರೇ” ಎಂದು ನೀವು ಆ ಐಡಿಯಾ ತಾರೆಯನ್ನು ಅಲ್ಲಿ ಇಟ್ಟಿರಿ. ಆದರದು ನನ್ನನ್ನು ನೋಡಿ “ನಿನಗೆ ನಾನು ಐಡಿಯಾ ತಾರೆ” ಎನ್ನುತ್ತಿದೆಯಲ್ಲ ?

    • ಬಂದುದೊ ಐಡಿಯ ಅಹಹಾ!
      ಒಂದನ್ನೊರೆಯೆನ್ನೆ ಪದ್ಯಮನಿದನ್ನೇನೈ|
      ಬಾಂದಳದೊಳಗಿರ್ಪಂತೊಲು
      ಚಂದದೆ ತಿರುವಿರ್ಪೆ ಕರವ – ತಾರಮ್ಮಯ್ಯಂ||

  17. ಸೈರಿಸದಸೂಯೆಯಿಂದಿರ-
    ಲಾರೇಂ? ಊರಾಗಲೆಳಸೆ ಮೀರಿದ ಮೆರುಗೈ|
    ತೋರಿದವೋಲಲ್ಲವೆ ಪೇ-
    ಳೂರೂರಂ ತೊಳಗೆ ಮೋದಿಗಾಲಂಬವನುಂ||

    • ಏನರ್ಥ? ಆರೇಂ ಊರಾಗಲೆಳಸೆ ಇದನ್ನು ಸಂಧಿ ಮಾಡಿದಾಗ ಆರೇನೂರಾಗಲೆಳಸೆ ಆಗ್ತದೆ, ಆರೇ ಮೂರಾ…. ಎಂದಾಗದು.

      • ಯಾರೇನು ಸೈರಣೆಯಿಂದರಿರದಿದ್ದರೆ ತಾನೆ ಏನು? ಊರು ಚೆನ್ನಾಗಿ ಹೊಳೆಯಲು ಬಯಸೆ (ಊರನ್ನು ಸ್ವಚ್ಛವಾಗಿಡಲು ಊರವರು ಬಯಸೆ), ಅದು ಮೋದಿಯವರ ಸಂಕಲ್ಪಕ್ಕೆ ಇಂಬಲ್ಲವೆ?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)