Aug 292016
 

Jail, cow, elegant, war ಪದಗಳನ್ನು ಬಳೆಸಿ ಶ್ರೀಕೃಷ್ಣನನ್ನು ಕುರಿತು ಪದ್ಯ ರಚಿಸಿರಿ

  37 Responses to “ಪದ್ಯಸಪ್ತಾಹ ೨೧೭: ದತ್ತಪದಿ”

 1. ರಯಿಪ ಚಿತ್ತದೆ ಕವಿದ ಮಂಜಯ್!
  ಲಯಗೊಳಿಸುತದನೆಸೆವ ಬೆಳೆಕೆಂ
  ಬಯ ವಿಚಾರಂಗಳೊಳು ಕೌತುಕಮೆನಗೆ ,ಹರಿ ನಿನ್ನಾ!
  ದಯಿತೆ ನಿರ್ಮಲೆಗೆಂಟರವನಾ
  ಗಿಯುಮಮಾ!ತೋಳಂ ತ್ಯಜಿಸಿ ನೀಂ
  ದಯೆಯ ಗೈದೀ ಬುವಿಯ ವಾರ್ತೆಗೆ ಸಲ್ಡೆಯೆನ್ನಲ್ಕೆ!

  (ಶೋಭಿಪ ಚಿತ್ತದಲ್ಲಿ ಕವಿದ ದು:ಖ,ಬೆಳಕು ಎಲ್ಲವೂ ನೀನೇ ಎಂಬ ವಿಚಾರವು ನಿಜಕ್ಕೂ ಕೌತುಕಮಯ!ಎಂಟನೆಯವನಾಗಿ ಹುಟ್ಟಿ ,ತಾಯನ್ನು ತಜಿಸಿ ಬಂದು ಭುವಿಯ ಆಗುಹೋಗು(ವಾರ್ತೆ)ಗಳಿಗೂ ಸಲ್ಲುವೆಯೆಂಬುದು(ಕೌತುಕಮಯ)!

 2. ಜೈಲಿನಲಿ ಜನಿಸಿದರ್ ಕೃಷ್ಣನು
  ವಾಲುಕಾಬಿ್ಧಯೊಳಂಬು ಕಾಣುವ
  ವೋಲು, ದಾನವ ಭೂಮಿ ಭಾರಕರಿಪರ್ ಕಾಲದಲಿ/
  ಕಾಲಯವನಾದಿಗಳ ಕೌಮುದ
  ನೀಲಲೋಚನ ಪೊಯು್ಯವಾಗಳ್
  ಮೇಲೆ ಗಂಟೆಗಳಾಗ ವಾರ್ಧಕ ಕಾಲದೊಳ್ ನುಡಿದವ್//

  ಭೂಮಿಯಮೇಲೆ ದಾನವಾದಿಗಳು ತುಂಬಿದಾ್ದಗ ಮರುಭೂಮಿಯಲಿ್ಲ ನೀರು ಸಿಗುವಂತೆ ಕೃಷ್ಣ ಜನಿಸಿದನು. ಅವನು ಕಾಲಯವನಾದಿಗಳನ್ನು ಕತ್ತರಿಸುವಾಗ ಸ್ಟಗರ್ದಲ್ಲಿ ಗಂಟೆಗಳು (ಮಂಗಳ ವಾದೄಗಳು) ಮೊಳಗಿದವು
  ತಪ್ಪಿದ್ದಲ್ಲಿ ತಿದ್ದುಪಡಿ ಮಾಡಬೇಕಾಗಿ ವಿನಂತಿ.

  • ಛಂದಸ್ಸಿನ ಕಡೆಗೆ ಗಮನಿಸಿ. ಭಾಮಿನಿಯಲ್ಲಿ ಲಗಂ ಬರಬಾದದು. ವಿವರಕ್ಕೆ ಫೋನ್ ಮಾಡಿ ೯೯೦೨೨೦೮೦೮೫

   • ಪಾನಿಗಳನ್ನು ಹೀಗೆ ನೀವು ಅಡ್ಡದಾರಿಗೆ ಎಳೆಯಬಾರದು, “ಛಂದಸ್ಸನ್ನು ಕಡೇಗೆ ಗಮನಿಸಿ” ಎಂದು ಹೇಳಿ 😉

    • ಪಾನಿಗಳು ಹೋಗುವುದೇ ಅಡ್ಡದಾರಿಯಲ್ಲಿ. ಅಷ್ಟಾದರೂ ವಕ್ರೋಕ್ತಿಜೀವಿತರಲ್ಲವೇ?

     • ಏನೂ ತೊಂದರೆಯಿಲ್ಲ. ಹೀಗೊಂದು ಅಡ್ಡದಾರಿ ಹಿಡಿಯಬಹುದೆಂಬುದು ಅಲ್ಪಾನುಭವಿ ಪಾನಿಯಾದ ನನಗೆ ಗೊತ್ತಿರಲಿಲ್ಲ.

 3. ನಿಜದೆ ಜೈ ಲಕ್ಷ್ಮೀಶನೆನಲು ಸಾಕೌ!ಪುಟಿವ-
  ಬಿಜಯ ಸೆಲೆಗೆಂಟು ಮಡಿ ಬಲಮೀವನೈ!
  ಭಜಿಸಲನಿಶಂ, ಸಿತಕ್ಷೀರ ವಾರಾಶಿಯಂ
  ತ್ಯಜಿಸಿ ,ನೆಲೆಗೊಂಬನೈ ಹೃದಯದೊಳಗಂ!!

  (ಒಮ್ಮೆ ಸ್ತುತಿಸಿದರೆ, ವಿಜಯದ ಸೆಲೆಗೆ ಎಂಟರಷ್ಟು ಬಲವನ್ನ ಕೊಡುವ ಹರಿಯು, ಸದಾ ಧ್ಯಾನಿಸುತ್ತಿದ್ದರೆ ಹೃದಯದಲ್ಲೇ ನೆಲೆಸುತ್ತಾನೆ)

 4. ಕಗ್ಗದ ಶೈಲಿಯಲ್ಲಿ (5 5 5 5
  5 5 5 3
  5 5 5 5
  5 5 5 1) ಈ ಪದ್ಯ ಬರೆಯಲು ಯತ್ನಿಸಿದ್ದೇನೆ.
  ಪದಗಳನ್ನು ತುಂಬಿಸಿ,ಪ್ರಾಸವನ್ನು ಹೊಂದಿಸುವ ಭರದಲ್ಲಿ ವಿಶೇಷವಾದ ಅರ್ಥ, ಭಾವಗಳನ್ನು ತರಲು ಸಾಧ್ಯವಾಗಲಿಲ್ಲ 🙁
  ಎಂದಿನಂತೆ ತಪ್ಪುಗಳನ್ನೂ, ಯೋಚನಾ ವಿಧಾನವನ್ನೂ ತಿದ್ದಿ, ಸಹಕರಿಸುವಿರೆಂದು ಭಾವಿಸಿದ್ದೇನೆ.

  ಜಯಬಾಲ ಗೋಪಾಲ ಜೈ ಲ(jail)ಕುಮಿಯೊಡೆಯನೇ
  ಭಯವನೀಗುತಲಿ ಪಾಂಡವರ(war)ಕಾಯ್ದವನೆ
  ನಯವಾದ ಹಸಿರಾಲದೆಲೆಗಂಟಿ (elegant) ಪವಡಿಸುತ
  ದಯೆದೋರಿ ಕೌಂ(cow)ತೇಯನನು ಪೊರೆದನೆ

  वटस्य पत्रस्य पुटे शयानम् ಎಂಬ ಕೃಷ್ಣ ಕರ್ಣಾಮೃತದ ಪದ್ಯವೊಂದರ ಪಾದದಿಂದ ಸ್ಫೂರ್ತಿ ಪಡೆದು “ನಯವಾದ ಹಸಿರಾಲದೆಲೆಗಂಟಿ (elegant) ಪವಡಿಸುತ” ಎಂದು ಮಾಡಿದಲ್ಲಿ, ಶಬ್ದವನ್ನು ತರುವ ಭರದಲ್ಲಿ ಆಲದ ಎಲೆಯ ಮೇಲೆ ಮಲಗಿದ್ದ ಕೃಷ್ಣನನ್ನು ಎಲೆಗೆ ಅಂಟಿಸಬೇಕಾಗಿ ಬಂತು 🙁

  • ಚೆನ್ನಾಗಿದೆ 🙂

  • Very nice verse… 🙂

  • ಹಾಗಾದರೆ ಆಲದ ಹಾಲು ತೊಟ್ಟಿಕ್ಕಿರುವ ಎಲೆಯನ್ನೇ ಆಯ್ದುಕೊಂಡಿರುತ್ತೀರಿ 😉 ಪದ್ಯವು ಚೆನ್ನಾಗಿದೆ.
   ಅಂಟೇ ಅಲ್ಲವೆ ಕೃಷ್ಣನ ರೀತಿಯು
   ಅಂಟಿರಬಲ್ಲನು ನಮ್ಮನ್ನು|
   ಅಂಟಿಕೊಳ್ಳಲುಬಲ್ಲನು ಎಲ್ಲರ
   ಅಂಟನು ಬಿಡಿಸಲು ಬಲ್ಲನಲೆ||

   ಅಂತೂ ಇಂತೂ ತಾನಿರಬಲ್ಲನು
   ಕಾಂತೆಯರೆಂತನೊ ತೂಗಿಸುವಂ|
   ಶಾಂತಿಯಿನಿರ್ಪನುಮಾವಗಮವನುಮ-
   ನಂತಂ ತಿಳಿಯನೆ ಗುಟ್ಟನಿದಂ||

 5. ಕೌಣಪ=ರಾಕ್ಷಸ (ಇಲ್ಲಿ ಕಂಸ)
  ಎರಡನೆಯ ಪಾದ: ಅರ್ಜುನನು ಕಡೆಗೆ ಭಗವದ್ಗೀತೆಯನ್ನೇ ಮರೆತ ಎಂಬುದನ್ನು ಆಧರಿಸಿದೆ
  ದೇವಾರ್ಹನೀ=ದೇವಾರ್ಹನ+ಈ
  —–
  ಕೌಣಪನ ಕಣ್ಣತಪ್ಪಿಸಿ ಬೆಳೆದು ನಂದರೊಳು!
  ಮಾಣಿಯರ್ಜುನನೊಡನೆ ಕೆಲೆಗಂಟಹೋ!
  ಊಣಜೂಜೇ ಲೌಕಿಕವನಾಡಿಸೀತನಿಂ!
  ಮಾಣೆಂಬೆ ದೇವಾರ್ಹನೀ ಪಾಡನುಂ||

 6. ಯುವಕಂಸಾರಿಗೆ ಜೈ ಕೌ-
  ರವಕುಟಿಲಕುಠಾರಗಿದುವೆ ಜೈ ಲಾಘವಯಾ-
  ದವಗುಣವಾರ್ಧಿಗೆ ಜೈ ಜೈ
  ಜಯಭಾರತದ ಸೆಲೆಗೆಂಟೆದೆಯ ಬಂಟಗೆ ಜೈ||

 7. ಎಲ್ಲರೂ ಬರೆದಿದ್ದಾರೆ, ನಾನೂ ಒಂದು ಕೈ ನೋಡಿಬಿಡುವ…

  ಸರಸಿಜೇ ಲಂಪಟದ ಚಾರಿಯ
  ಹರಿಯದೆಲ್ಲಿಹನೆಂದು ಪೇಳೇ
  ಕರೆಯೆ ಬಾರದೆ ಬರಿದೆ ಕೌತುಕವಿತ್ತು ಕಾಡುವನೇ
  ಮರೆದು ಮೈಯನೆ ವಾರಿಧಿಯ ಮೇ-
  ಲೊರಗಿದನೆ ಕೇಳಾ ಮುರಾರಿಯ
  ಸೆರಗಿನಿಂದೆಲೆ ಗಂಟ ಬಿಗಿಯುತೆ ಸೆಳೆದು ತಾರವನ

  • ನೀಲಕಂಠರ ಮತಿಕೈಲಾಸದಿಂದ ಕವಿತಾಗಂಗೆ ಈ ವಾರ ಹುಟ್ಟಲೇ ಇಲ್ಲವೇ ಎಂದು ಯೋಚಿಸುತ್ತಿದ್ದೆ. ಯಾವತ್ತಿನಂತೆ ಮನಸ್ಸಿಗೆ ತಂಪನ್ನೀಯುವಂತೆಯೇ ಉಕ್ಕಿದ್ದಾಳೆ.

  • ಅವಳ ಬಳಿಗೇ ಹೋಗದನ ನೀಂ
   ಜವದೆ ಬಾರೆಂದೊಡನೆ ಬಹನೇಂ
   ಅವನ ಬಿಟ್ಟ್ ಅವಳನ್ನು ಬೇಡಿರೆ
   ಬವಣೆ ತೀರದೆ ನಿಮ್ಮದೈ||

   • ರಾಮ ರಾಮ.. ಅದು ನನ್ನ ಮಾತಲ್ಲ. ಒಬ್ಬ ಗೋಪಿ ಇನ್ನೊಬ್ಬಳಿಗೆ (ಸರಸಿಜಾ ಎಂಬಾಕೆಗೆ) ಹೇಳಿದ್ದು. 🙂

 8. ಎಲೆಗಂಟಿದೆದುಕುsಲ ತಿಲಕನವನೀತ ಗೋ-
  ಕುಲವಾಸಿ ಕೃಷ್ಣ ಕದಿವ ನವನೀತಾ !
  ಭಲೆs ಕೌತುಕವಿವನ ಹಲವಾರು ವೇಷಾ
  ನೆಲೆಗಂಟದಾ ಗೆಜ್ಜೆ ಲೀಲಾ ವಿಶೇಷಾ !!

  (ಆಲದೆಲೆಯಮೇಲೆಮಲಗಿದ ಕೃಷ್ಣನ ಲೀಲೆ !!)

 9. ಎಲ್ಲ ಮಿತ್ರರಿಗೂ ಗೌರಿ – ಗಣಪತಿ ಹಬ್ಬದ ಶುಭಾಶಯಗಳು.

  ಜೈ ಲವಪಿತ, ವಾರಿಜ ಮುಖ,
  ನೀಲ ವಿವರ್ಣ ಘನ ದೇಹಿ, ಕೌಸ್ತುಭ ಧರಣಂ |
  ಬಾಲಂ, ಮಣಿರತ್ನಖಚಿತ
  ಪೀಲೀ ಮಕುಟಂ, ಸುಭಕ್ತ ತಾಂ ಗೆಲೆ ಗೆಂಟೇಂ……? ||

  ಜೈ ಲವ – jail
  ವಾರಿಜ ಮುಖ – war
  ಕೌಸ್ತುಭ – cow
  ಭಕ್ತ ತಾಂ ಗೆಲೆ ಗೆಂಟೇಂ – elegent (ಭಕ್ತ ತಾನು ಗೆಲ್ಲಲು ದೂರವೇನು.?)

  ಗೆಂಟು – ದೂರ….

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)