Feb 272017
 

ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ

ಶ್ಮಶ್ರು = ಮೀಸೆ

  33 Responses to “ಪದ್ಯಸಪ್ತಾಹ ೨೪೪: ಸಮಸ್ಯಾಪೂರಣ”

  1. ಅಶ್ರುಕ್ಲೇದನದಿಂದೆ ತೊಯ್ದ ಮೊಗದಿಂ ತಾಂ ಭಾರ್ಯೆಯಂ ತಬ್ಬುತುಂ
    ವಿಶ್ರಾಮಕ್ಕೆಡೆಯಿರ್ಪುದಾಜಿವಿಜಯಶ್ರೀಪಂಗೆನಲ್ ಬೀರಕೇ-
    ನಾಶ್ರೇಯಂ ಗಡ ಮೀಸೆಯೆಂದಣುಕಿಸಲ್ ಶೃಂಗಾರಕುಂ ಸಲ್ವವೊಲ್
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ

    ವಿಜಯಶ್ರೀಯುತನಾದ ಯೋಧನು ಭಾರ್ಯೆಯನ್ನು ತಬ್ಬಿದಾಗ, ಅವಳು ವೀರಕ್ಕೆ ಮೀಸೆಯು ಆಶ್ರಯವೇ ಎಂದು ಅಣುಕಿಸಿದಾಗ ಶೃಂಗಾರಕ್ಕೂ ಸಲ್ಲುವಹಾಗೆ ಮೀಸೆತೆಗೆದನು

  2. ವಿಶ್ರಾಂತಾಲಯದೊಳ್ ಪ್ರವೇಶಿಸುತೆ ಮೇಣ್ ಗುಟ್ಟೆಲ್ಲಮಂ ಸೋವುತಂ
    ದಶ್ರುಸ್ಪರ್ಶಿತವೈರಿಯೋಷಿತೆಯರೊಳ್ ತಾನೋರ್ವಳಂತೊಪ್ಪುತುಂ
    ಸುಶ್ರಾವ್ಯಂಗೊಳಿಸುತ್ತೆ ಕಂಠಮನೆ ಹಾ! ಸ್ತ್ರೀವೇಶಮಂ ತೊಟ್ಟು ಸು-
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟನುಂ ವೀರೋತ್ತಮಂ ಸರ್ವಥಾ!!

    (ವೈರಿಗಳ ಗುಟ್ಟನ್ನು ಬೆನ್ನಟ್ಟಿ, , ವೈರಿವನಿತೆಯರ ಕೋಣೆಯನ್ನು ಪ್ರವೇಶಿಸಲೋಸುಗ, ಮೀಸೆಯನ್ನು ತೆಗೆದು….!!)

    • Aahaa, tubmma chennagide! sushmashru endu su serisuvudakkinta
      ……………………. streevEsamam koLLutum
      shmashrutyaaga…………….

      endu aadabahudu

  3. ಮಿಶ್ರಂ ಜೀವನಮೆಂದು, ಸೋಲುಗೆಲುವಂ ಬೇರಲ್ಲಮೆಂದೊಪ್ಪುತುಂ
    ಅಶ್ರುಪ್ರೇಂಖಿತನಾಗದೇ ಸುಲಭದೊಳ್ ,ಸೋಲುಂಡೊಡಂ ತತ್ಕ್ಷಣಂ
    ಹಾ!ಶ್ರೀರಾಮನೆ!ಅಂಜೆನಾನೆನುತೆ ಪಿಂದಾವೇಶದಿಂದಾಡಿದೊಲ್
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ!!

    (ಸೋಲು ಗೆಲುವನ್ನು ಸಮವೆಂದು ನೋಡುವನೀತನು , ಮೊದಲಾಡಿದ ಮಾತಿನಂತೆಯೇ ಸೋತ ಮರು ಘಳಿಗೆಯಲ್ಲೇ ಮೀಸೆಯನ್ನೂ ತೆಗೆದ)

    • ಹಹ್ಹಾ.. ಅವನು ವೀರೋತ್ತಮ ಹೇಗಾದ?!

      • ಆತನು ವೀರಾವೇಶದಿಂದ ಹೋರಾಡಿಯೇ ಸೋಲನ್ನಪ್ಪಿದ್ದಾನೆ ಮತ್ತು ತಾನು ಮಾಡಿದ ಪ್ರತಿಜ್ಞೆಯನ್ನು ಹಿಂಜರಿಕೆಯಿಲ್ಲದೇ ಕೈಗೊಂಡು ಉತ್ತಮನೂ ಆಗಿದ್ದಾನೆ 🙂

    • ಒಪ್ವ ಸರಿಯಲ್ಲ. ಶ್ರೀರಾಮೆನುತುಂ. ನೀವು ಮಾಡಿದ್ದು ಶ್ರೀರಾಮಂ ಎನುತ್ತೆ ಎಂದಾಗುವುದು.

  4. ವಿಶ್ರಾಮೇಚ್ಛೆ ಕರಂಗಿದಂತೆ ರಣದೊಳ್ ಪೋರುತ್ತುಮಾ ಯೋಧರೊಳ್
    ನಿಶ್ರೇಯಃಪದವಾಂತಪಂ ತ್ಯಜಿಪುದಯ್ ಪೆರ್ಮೀಸೆಯಂ ಭಾಷೆಯಿಂ,
    ಸುಶ್ರಾವ್ಯಂ ಗಡಮಾಗೆ ಗೆಲ್ಮೆ ತನಗಂ, ಸೋಲ್ತಾ ಪ್ರತಿಸ್ಪರ್ಧಿಯ
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ

    ಸೋತವರು ತಮ್ಮ ಮೀಸೆಯನ್ನು ತೆಗೆಯತಕ್ಕದ್ದು ಎಂಬ ಪಣ. ಇಬ್ಬರು ಸಾಕಷ್ಟು ಹೋರಾಡಿ, ಕೊನೆಗೆ ಗೆಲುವು ಒಬ್ಬ ಭಟನಿಗೆ ದಕ್ಕಲು ಸೋತ ಪ್ರತಿಸ್ಪರ್ಧಿಯ ಮೀಸೆಯ ತ್ಯಾಗದಿಂದ ಇವನು ವೀರನೆನಿಸಿಕೊಂಡ.

  5. ವಿಶ್ರಾಂತಂ ಚಿರನಿದ್ರೆಯೊಳ್ ರಣದೊಳಂ ವೀರತ್ವಮಂ ತೋರ್ದಪಂ
    ಮಿಶ್ರಮ್ ದಲ್ ತವೆ ರಕ್ತಮಾಜಿಯೊಳಗಂ ವಂದ್ಯಮ್ ದಿಟಂ ಮೃತ್ಯುವೊಳ್ /
    ಶುಶ್ರೂಷಾದಿಗಳಂ ಗಡಾ ಪಡೆದನೇಮ್? ಸಂಸ್ಕಾರದೊಳ್ ಪುತ್ರನಾ
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಮ್ ವೀರೋತ್ತಮಂ ಸರ್ವಥಾ //

    ವೀರಾವೇಶದಿಂದ ಹೋರಾಡಿ ಮಡಿದ ಯೋಧನು ಪುತ್ರನು ಮೀಸೆ ತೆಗೆದುಕೊಂಡಾಗ (ಸಂಸ್ಕಾರದಲ್ಲಿ) ವೀರೋತ್ತಮನಾದನು.

    • chennagide! ದಲ್, ತವೆ, ದಿಟಂ, ಗಡಾ inathavella tumba aaduvu ansutte 🙂
      ಮೃತ್ಯುವೊಳ್ is not so fine usage. It should be mRtyuvinoL. Rather we can use here, mittinoL.

    • ಮಾತ್ರಂ ಮೀಸೆಯ ಬೋಳಿಪಾತ ಮಿಗೆ ಕೇಳ್ ಮ್ಲೇಚ್ಛಂ ಗಡೆಂದೆಂದಿಗುಂ
      ನಾತ್ರಂ (ಮ್ಲೇಚ್ಛ)ಕರ್ಮಿಗಮನ್ವಯಂ ಶಿವನೆ(ಮಂಜ) ಕೇಳ್, (ವೈದಿಕ)ಅಂತ್ಯೇಷ್ಟಿಕಲ್ಪಂಗಳೈ|

      • Hahhaaa

      • ……………….daaDhikaa-kuntala
        shmashrutyaaga…………

        heege maadabahudu 🙂

      • ಅವನು ಮೊದಲೇ bald ಆಗಿದ್ದ. ಗಡ್ಡವನ್ನು ಯಾವಾಗಲೂ ತೆಗೆದು ಮೀಸೆಯನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದ ಎಂದು ಅನ್ವಯ ಮಾಡಿಕೊಳ್ಳಿ. 🙂

  6. (ಸಮಸ್ಯಾಪೂರಣವನ್ನುನಾನು ಬೆಳಿಗ್ಗೆಯೇ ಬರೆದಿದ್ದರೂ ಪದ್ಯಪಾನಕ್ಕೆ ಟಂಕಿಸಲಾಗಲಿಲ್ಲ. ಈಗ ನೋಡಲು ,ಮಂಜರೂ ಅಂತ್ಯಸಂಸ್ಕಾರದ ಕಲ್ಪನೆಯಿಂದ ಸಮಸ್ಯಾಪೂರಣವನ್ನು ಮಾಡಿದ್ದಾರೆ. ಆದರೂ ನನ್ನ ಪದ್ಯವನ್ನು ಪ್ರಕಟಿಸುತ್ತಿರುವೆ. ಮನೆಯಲ್ಲಿ ಬರೆದದ್ದು ಇಲ್ಲಿಗೆ ಬಾರದೆ ವ್ಯರ್ಥವಾಗಬಾರದಲ್ಲ! 🙂 )

    ವಿಶ್ರಾಂತಂ,ಘನವೈದ್ಯನಾಗಿ ಕೆಲಸಂಗೈದಿರ್ದು (ನಿವೃತ್ತಿಯೊಳ್-ತಪ್ಪು) ವೃದ್ಧಾಪ್ಯದೊಳ್,
    ಸುಶ್ರಾವ್ಯಾತ್ಮಕಗೀತಮಂ ಸುಖಿಪ ಪೊರ್ತೊಳ್ ಪ್ರಾಣಮಂ ನೀಗೆ, ದುಃ – |
    ಖಶ್ರದ್ಧಾಭರಿತಾಗ್ರಪುತ್ರನರಿವಿಂ ಕೈಗೊಳ್ಳುತಂತ್ಯೇಷ್ಟಿಯಂ ,
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ ||

    • chennagide madam 🙂
      ನಿವೃತ್ತಿಯೊಳ್ – idu illi bekaada maatregaLannu koDuvudillavalla. ನಿವೃತ್ತಿ idu jagaNa aaguttade.

      • ಹೌದಲ್ಲ ನೀಲಕಂಠರೆ. ಕ್ಷಮಿಸಿರಿ.”ನಿವೃತ್ತಿಯೊಳ್” ಎಂಬುದನ್ನು” ವೃದ್ದಾಪ್ಯದೊಳ್” ಎಂದು ಸವರಿದ್ದೇನೆ. ಮೆಚ್ಚುಗೆಗಾಗಿ ಧನ್ಯವಾದಗಳು. 🙂

  7. ಆ ಶ್ರೀಗಂಧದ ಚೋರನಂ ಪಿಡಿಯಲೆಂದೆನ್ನುತ್ತಲಾ ವ್ಯೂಹಮಂ
    ವಿಶ್ರಾಂತಂ ಗಡ ಸೈನಿಕಂ ರಚಿಸಿದಂ ಮತ್ತೇಭಕಂ ಖೆಡ್ಡದೊಲ್
    ಆ ಶ್ರಾಂತಂ ತಿರಿಯಲ್ಕೆ ಮೀಸೆಯದನೇ ತಾನೊಪ್ಪಿರಲ್ಕಂಜುತುಂ
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ

    ಗಿರಿಜಾ ಮೀಸೆಯನ್ನು ಹೊಂದಿದ ಶ್ರೀಗಂಧ ಚೋರನನ್ನು ನಿವೃತ್ತ ಚತುರ ಸೈನಿಕನ ಉಪಾಯದಿಂದ ಬಂಧಿಸುವ ಸಮಯ ಬಂದಾಗ, ಹೆದರಿದ ಕಳ್ಳ ತಪ್ಪಿಸಿಕೊಳ್ಳಲೋಸುಗ ಮೀಸೆಯನ್ನು ಬೋಳಿಸಿಕೊಂಡಾಗ, ಅದಕ್ಕೆ ಕಾರಣನಾದ ಸೈನಿಕ/ಆರಕ್ಷಕನು ವೀರೋತ್ತಮನೆನಿಸಿದ(inspired from real life incidents :))

  8. Here ಶ್ಮಶ್ರು=ದಾಡಿ, not ಮೀಸೆ! Wherefore ಶ್ಮಶ್ರುತ್ಯಾಗ=ದಾಡಿಯನ್ನು ಬೋಳಿಸಿ ಮೀಸೆಯನ್ನು ಹುಲುಸಾಗಿ ಹುರಿಮಾಡುವುದು!
    ವಿಶ್ರಾಮಂ ತರಮಲ್ತು ಯೋಧವರಗಂ, ಹೋರ್ವಂ ಮಹಾವೀರ್ಯದಿಂ
    ನಶ್ರಾವ್ಯಂ ಗಡಮೀತನಾಹವರವಂ, ಶತ್ರುರ್ಭಷದ್ಭೇದಕಂ (ಭಷತ್=heart)|
    ನಶ್ರಾಂತಂ ತಡಗೈಯೆ ನಾಪಿತನು ತಾಂ ಕ್ಷೌರಾದಿಕರ್ಮ್ಮಕ್ಕಮಂ
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ||

  9. ವಿನೋದವಾಗಿ :
    ಹಾ! ಶ್ರದ್ಧಾಲವ ವೃತ್ತಿಜೀವನದೆ ಮೇಣ್ ವೃದ್ಧಾಪ್ಯದಿಂದಾವೃತಂ
    ಮಿಶ್ರoಗೊಂಡಿಹ ಮೀಸೆಗಡ್ಡದೊಳಿನಾ ಬೆಳ್ಗೂದಲಿಂದೊಪ್ಪನೈ
    ಶುಶ್ರೂಷo ಗಡ, ಸಾಧ್ಯಮಾಗದೆನೆ ತಾಂ ಕಪ್ಪಾಗಿಸಲ್ಕೆoದದಂ
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ !!

    ಶಿಸ್ತಿನ ಸಿಪಾಯಿ ಅವ, ಗಡ್ಡಮೀಸೆ ಬೆಳ್ಳಗಾಗಲು – ಡೈ ಮಾಡಲು ಅಸಾಧ್ಯವೆಂದು – ಅದನ್ನೇ ತೆಗೆದುಹಾಕಿ ಸರ್ವೀಸ್ ಪೂರ್ತಿ “ಫಿಟ್” ಆದ !!

  10. Moustache is fine in teenage only. As the facial vegetation gets rougher and greyer by age, clean shave is desirable. So do most all military officers (male!) worldwide.

    ಅಶ್ರಾಂತರ್ಗದೊ(cavalier teenagers) ಭೂರಿಯೌವನದೆ ಕೇಳ್ ಸೂಕ್ತಂ ಹನೂಕುಂತಲಂ (facial hair)
    ಸಮ್ಮಿಶ್ರಂ ಕಚಕಾಲ-ಶುಕ್ಲಗಳು ಮೇಣ್ ರೂಕ್ಷಂ ಗಡಾನಂತರಂ|
    ವಿಶ್ರಂಭಂ ತವೆ ಪ್ರೌಢಸತ್ಪುರುಷರೊಳ್ ಪೂರ್ಣಾನನಕ್ಷೌರಮೈ
    (ದಾಡಿ-ಮೀಸೆ)ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ||

  11. This man fanatically belongs in the shavers school vis-a-vis the hippies!
    (Daily)ವಾಶ್ರಂ-ವಾಶ್ರಮುಮಾರು ಬೋಳಿಸುವರೆಂದೆಂಬರ್ ಮಹಾಲಸ್ಯರೆಂ-
    ತೋ ಶ್ರದ್ಧಾಲುಗಳೆಂಬರಲ್ತೆ ದಿನಮುಂ ಕ್ಷೌರಂ ಗಡೆಂದುಂ ತರಂ|
    ಶ್ರೀಶ್ರೀಮಂತನಿವಂ ಸದಾಧ್ವನಿಪುದೇನುಚ್ಚಂಡ(vehemently)ವಾಪಂಮತಂ!
    ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ(fanatic) ಸರ್ವಥಾ||

  12. One pursuing law developed aversion towards it, switched to warfare and excelled in the military.

    ಅಶ್ರದ್ಧಾಲುವದಾದನಂದರುಚಿಸಲ್(ಅರುಚಿಸಲ್) ಸ್ಮೃತ್ಯಾದಿಪಾಠಾಂಗಗಳ್
    (Confidence)ವಿಶ್ರಂಭಂ ಗಡಮೀತನಿಂಗೆ ರಣತಂತ್ರಾಂತರ್ಯಸೂಕ್ಷ್ಮಂಗಳೈ|
    (To get apprenticed to a)ಸಂಶ್ರಿಷ್ಟಂಗೊಳೆ ವೀರವರ್ಯನಿಗೆ(Commander), ರಾಜಾಜ್ಞಾದಿಶಾಸ್ತ್ರಜ್ಞವೇ- (ರಾಜಾಜ್ಞೆ=Law; ರಾಜಾಜ್ಞಾದಿಶಾಸ್ತ್ರ= Law and related sciences; ರಾಜಾಜ್ಞಾದಿಶಾಸ್ತ್ರಜ್ಞವೇಶ್ಮ= An institution where are Law teachers)
    ಶ್ಮ-ಶ್ರು-ತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ|| (Distancing himself from hearing/ಶ್ರು what it taught in a law school)

    • ಈ ‘ಶ್ರ’ ಪ್ರಾಸಮೆ ಕಷ್ಟಕಷ್ಟಮೆನುತುಂ ನಾನಾಗಿರಲ್ ವ್ಯಗ್ರ ನೀ
      ವಾ ಶ್ರೀಗಂಧದವೋಲದೆಂತು ಬರೆವಿರ್?ಕೋಶಂಗಳಂ ತೇಯುತುಂ/
      ಆಹ್! ಶ್ರೀಮಂತವು ನೈಕ ಕಲ್ಪನೆಗಳಿಂ ರಂಪೋಕ್ತ ಪದ್ಯಂಗಳೊಳ್
      ಶ್ಮಶ್ರು ತ್ಯಾಗದಿನಾದರಲ್ತೆ ಸುಭಟರ್ ವೀರೊತ್ತಮರ್ ಸರ್ವಥಾ! 🙂

      • ನನ್ನ ಪದ್ಯದಲ್ಲಿ ದೋಷವಿದೆ ಎಂದು ಬರೆಯುವಷ್ಟರಲ್ಲೇ ನೀನು ಹೊಗಳಿಬಿಟ್ಟೆ! ಇರಲಿ. ’ಶ್ರು’ ಎಂಬ ಪ್ರಾತಿಪದಿಕರೂಪದಲ್ಲಿ ’ಶ್ರುತ್ಯಾಗ’ ಎಂದೆಲ್ಲ ಸಮಾಸಮಾಡುವಂತಿಲ್ಲ ಎಂಬುದನ್ನು ಈಗಷ್ಟೇ ಅರಿತುಕೊಂಡೆ. ಶ್ರವಣತ್ಯಾಗ, ಶ್ರುತಿತ್ಯಾಗ ಎಂದಾಗಬೇಕು. ಪದ್ಯವನ್ನು ಡಿಲೀಟ್ ಮಾಡೋಣವೆಂದುಕೊಂಡೆ. ’ಹೇಗೆ ಮಾಡಬಾರದು’ ಎಂಬುದಕ್ಕೆ ಉದಾಹರಣೆಯಾಗಿ ಇರಲಿ ಎಂದು ಹಾಗೆಯೇ ಬಿಡುವೆ.

        • ಈ ಪದ್ಯವಲ್ಲದಿದ್ದರೂ ಉಳಿದ ಪದ್ಯಗಳಿವೆಯಲ್ಲ! ಅಂದಹಾಗೆ 3 ನೇ ಸಾಲಿನಲ್ಲಿ ಛನ್ಧಸ್ಸು ತಪ್ಪಿದೆ.

          • ಛಂದೋದೋಷವನ್ನು ತೊರಿಸಿಕೊಟ್ಟುದಕ್ಕಾಗಿ ಧನ್ಯವಾದಗಳು. ಮೂಲದಲ್ಲೇ ತಿದ್ದಿದ್ದೇನೆ.

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)