Feb 202017
 

ವಿಮಾನದ ಪ್ರಯಾಣವನ್ನು ಅಥವಾ ವಿಮಾನವನ್ನು ವರ್ಣಿಸಿ ಪದ್ಯ ರಚಿಸಿರಿ

  19 Responses to “ಪದ್ಯಸಪ್ತಾಹ ೨೪೩: ವರ್ಣನೆ”

 1. ಋಣಂ ವೈಶ್ರವಣಂ ದೇಯಂ ಇತಿ ಮತ್ವಾsಸುರಾಧಿಪಃ
  ಕುರುತೇsಕಾಧಿಕಂ ಪೀಠಂ ವಿಮಾನೇ ಪ್ರತಿಪೌರುಷೇ

  ಕುಬೇರನಿಗೆ ಕೊಡಬೇಕಾದ ಸಾಲವನ್ನು ತೀರಿಸುವುದಕ್ಕೋಸ್ಕರ ರಾವಣನು ಪುಷ್ಪಕವಿಮಾನದಲ್ಲಿ ಒಬ್ಬೊಬ್ಬರೂ ಏರಿದಂತೆ ಇನ್ನೊಂದು ಅಧಿಕ ಆಸನವನ್ನು ಸೃಷ್ಟಿಸುತ್ತಾನೆ.

  ನಾನು ಪಾನದಲ್ಲಿ ಇನ್ನೂ ಪಳಗಿಲ್ಲ. ತಪ್ಪಿದ್ದರೆ ಸೂಚಿಸಿ.

 2. ಪಾರುತ್ತಿರ್ದೊಡಮೇನು ನಿನ್ನ ಛವಿಯೈ ನೀಲಾಗಸಕ್ಕೊಪ್ಪುತುಂ
  ಭೋರೆನ್ನುತ್ತೆ ವಿಘಾತಿಸುತ್ತೆ ಶರದೋಲ್ ಮತ್ತೇಭಸಾದೃಶ್ಯರಂ
  ಕೋರೈಸಿರ್ದು ವಿರಾಜಿಸಿರ್ಪ ಧನಿಕರ್ ಮೆಚ್ಚ್ವಂದದೋಲ್ ಸಾಗಲೇo
  ಜಾರುತ್ತುಂ ನೆಲಕಾಗೆ ಸೂರೆಗೆಡೆವರ್ ನಿನ್ನೆಲ್ಲ ದ್ವಾರಂಗಳಿಂ

  [ವಿಮಾನ ಕೆಳಗೆ ಬಂದ ಕೂಡಲೇ ಎಲ್ಲಾ ದ್ವಾರಗಳನ್ನೂ ತೆರೆದು ಮುಂದಿನ ಪ್ರಯಾಣಕ್ಕೆ ಅಣಿಗೊಳಿಸುವುದನ್ನು ಕುರಿತು]

  • ದ್ವಾರಂಗಳ್ ನವಮಿರ್ಪುವೇನುಮೆನುತುಂ ನೋಡೈ(ಏಣ್ಸೈ) ವಿಮಾನಕ್ಕೆ ನೀಂ
   ಆರಾಧ್ಯರ್ ಜನರಾಗುವರ್ (Brahma)ದ್ರುಹಿಣನೊಲ್! ತತ್ತುಲ್ಯಕಾರ್ಯಂ ಗಡಾ!!

  • ನೀಲಾಗಸ – arisamaasa. ಮೆಚ್ಚ್ವಂದ – mechchuvanda. mechva is not right it seems. ನಿನ್ನೆಲ್ಲ ದ್ವಾರಂಗಳಿಂ – ninnella baagilgaLim

 3. ಭರದಿಂ ಸಾಗುತೆ ಸೀಳುತುಂ ಗಗನದೊಳ್ ಕಾದಂಬಿನೀಸೈನ್ಯಮಂ
  ಮುರಿಯುತ್ತುಮ್ ತವೆ ಬಾನಿನಿಂ ಪೊರಮಡುತ್ತಿರ್ಪಾಹ್ನಿ ವಾರಾಸ್ತ್ರಮಂ/
  ಚರಿಸುತ್ತಿರ್ಪುದು ಮೀರ್ವೆನೆನ್ನುತೆ ಮಹಾಕರ್ಷತ್ವಮಂ ವಾಹನಂ(ಪುಷ್ಪಕಂ ?)
  ನರನೇಮ್ ಬಿಟ್ಟನೆ ಸೃಷ್ಟಿಯಂ ಜಯಿಸಲೀ ಲೋಹಾಸ್ತ್ರಮಂ ಗರ್ವದಿಂ?//

  ಆಕಾಶದಲ್ಲಿ ವೇಗವಾಗಿ ಮೋಡಗಳ ಸೈನ್ಯವನ್ನು ಸೀಳುತ್ತಲೂ, ಬಾನಿನಿಂದ ಹೊರಬರುತ್ತಿರುವ ಆಗ್ನೇಯ, ವರುಣ ಮೊದಲಾದ ಅಸ್ತ್ರಗಳನ್ನು ಮುರಿಯುತ್ತಲೂ(ತಡೆಯುತ್ತ), ಗುರುತ್ವಾಕರ್ಷಣ ಶಕ್ತಿಯನ್ನು ಮೀರಿ ಹಾರುತ್ತಿರುವ ಈ ಲೋಹದ ಅಸ್ತ್ರವನ್ನು ಮನುಷ್ಯ ಪ್ರಕೃತಿಯನ್ನೇ ಗೆಲ್ಲುತ್ತೇನೆಂಬ ಗರ್ವದಿಂದ ಬಿಟ್ಟಿರಬಹುದೇ?

  • Imagination and diction are good. ಬೆಂಕಿಗೆ ವಹ್ನಿ ಎಂಬ ಪರ್ಯಾಯಪದವಿದೆ; ’ಅಹ್ನಿ’ ಇದೆಯೆ? ಅಹ್ನಿ>ಅಹಸ್. (I am not sure about this: ವಾರಿ+ಅಸ್ತ್ರ=ವಾರ್ಯಸ್ತ್ರ. ವಾರಾಸ್ತ್ರ=ವಾರ+ಅಸ್ತ್ರ)

   • ‘ಅಹ್ನಿ’ ಪದ ಇಲ್ಲವೆಂದು ತೋರುತ್ತದೆ. ಅದನ್ನು ಅಗ್ನಿ ಎಂದಾಗಿಸಿದ್ದೇನೆ. ಇನ್ನು ‘ವಾರ್’ ಎಂಬ ಶಬ್ದಕ್ಕೆ ನೀರು ಎಂಬರ್ಥವಿದೆ. ವಾರ್ಧರ.… ವಾರ್+ಅಸ್ತ್ರ =ವಾರಸ್ತ್ರ ಮಾಡಿದರೆ ಸರಿಹೋಗುತ್ತದೆಯೇ? ಇಲ್ಲವೆಂದಾದಲ್ಲಿ ನೀವೆಂದಂತೆ ವಾರ್ಯಾಸ್ತ್ರ ಎಂದಾಗಿಸಿದರಾಯಿತು. Thanks for appreciation and corrections

  • tumba chennaagide kalpane 🙂

 4. ಯಾನಮೇನ್? ಆ ವಿಮಾನಸ್ವರೂಪಮದೇನು?
  ಬೇನೆಯೇಂ ವರ್ಣಿಪುದುಮದನೊ ಇದನೋ!
  ಏನೆಂದುಮಾಯ್ಕೆಯನು ನೀಡಿದೆಯೊ ಕಾಣೆನಾಂ
  ನಾನೆರಡನುಂ ಬಲ್ಲೆ, ಸೂಜಿಯಿಕ್ಕು(tell precisely which)!!

  ಇದುಮಾತ್ರಮಲ್ಲಮೊಂದಿಹುದಿಲ್ಲಿ ಸಂದೇಹ
  (ಅರ್ಥ)ವಿದಿತಮೆಂತೊ ’ವಿಮಾನದ ಪ್ರಯಾಣಂ’?
  ಬೆದರಿರ್ಪ ಯಾತ್ರಿಕನನುಭವಮೋ ಮೇಣಿನ್ನು
  ಹದವರಿತು ಯಾನಿಸುವ ’ಜನರಹಿತ’ಮೊ(unmanned aircraft)??

 5. ಉಕ್ಕ ಹಕ್ಕಿಯು ಬಾನನೇರುತ
  ಸೊಕ್ಕಿ ಬೊಬ್ಬಿರಿಯುತ್ತ ಹಾರಿರೆ
  ಮಕ್ಕಳೆಲ್ಲರು ಬಯಲಿಗೋಡುತ ನಗುತಲಾಡಿದರೈ
  ಸಿಕ್ಕ ಕಲ್ಲುಗಳನ್ನೆ ಕೈಯಿಂ
  ಹೆಕ್ಕಿ ಬೀಸಿದ ಗುರಿಯು ತಪ್ಪಿರ
  ಲಕ್ಕನನು ಕರೆಯುತ್ತಲಳುತಲಿ ಮನೆಯನೈದಿದರೈ

  Attempt to depict what children(used to) do when they see an aeroplane

 6. ವಿಮಾನದ ಮೊದಲ ಬಳಕೆಯೇ ಅಪಹರಣಕ್ಕಾಗಿ!
  ಮತ್ತಮಯೂರಮ್||
  ಇಂತಿಷ್ಟೇಂ ಮಾತ್ರಂ (Airplane)ನಭಯಾನಂಗಳುಮಿಂದುಂ?
  ಎಂತೆಷ್ಟೋ ದೃಷ್ಟಾಂತಗಳುಂಟುಂ ಹರಣಕ್ಕಂ(hijack)|
  ಪಿಂತಂದುಂ ಸೀತಾಪಹರಂ ರಾವಣನಲ್ತ-
  ತ್ಯಂತಾಚಾರ್ಯಂ* ತಾನಪಹಾರ್ಯಕ್ಕಮದಾದ್ಯಂ||
  *ಪರಮಾಚಾರ್ಯ

  • ರಾವಣನಲ್ತತ್ಯಂತಾಚಾರ್ಯಂ – what sandhi is this? raavananaltu atyantaachaaryam. Whereas what is intended supposedly is raavananalte atyantaachaaryam – raavananalteyatyantaachaaryam

   • ಕರೆಕ್ಟ್. ಇಲ್ಲಿದೆ ತಿದ್ದಿದ ಪದ್ಯ:
    ಇಂತಿಷ್ಟೇಂ ಮಾತ್ರಂ ನಭಯಾನಂಗಳುಮಿಂದುಂ?
    ಎಂತೆಷ್ಟೋ ದೃಷ್ಟಾಂತಗಳುಂಟುಂ ಹರಣಕ್ಕ-|
    ತ್ಯಂತಾಚಾರ್ಯಂ ತಾನಪಹಾರ್ಯಕ್ಕಮದಾದ್ಯಂ
    ಪಿಂತಂದುಂ ಸೀತಾಪಹರಂ ಗೈದಿಹ ರಾವಂ||
    (Raoಶಬ್ದದ ನಿಷ್ಪತ್ತಿಯು ಹೀಗೆಯೇ ಇರಬಹುದೆ?)

 7. ಲಾಗಾಯ್ತಿನಿಂದೆ ಹೊತ್ತುo
  ಲೋಗರ ಸಾಗಿರ್ಪುದಂತರಿಕ್ಷದಯಾನಂ ।
  ಭೂ ಗೋಲ ವಿಮಾನಂ ಮೇಣ್
  ವೇಗಾವೇಗಮದು ಸೂರ್ಯಚಂದ್ರಾಧೀನಂ ।।

  ಭೂಮಿಯೇ ಒಂದು “ದುಂಡಾದ” ವಿಮಾನ ಎಂಬ ಕಲ್ಪನೆಯ ಪದ್ಯ.
  (ಮಾನವ ಜೀವನವೇ “ಭೂವಿಮಾನ ಯಾನ” ಅಲ್ಲವೇ ?!!)

  • hahhaa..
   fuelilla restilla bEreDege pOguvoDe
   chaalanege piloTTu taanillavay

   • ಇದು ರಿಮೋಟ್ ಕಂಟ್ರೋಲ್ ವಿಮಾನ ಅಂತ ನಮ್ಮ ರೈಟ್ ಬ್ರದರ್ ಗೆ ಗೊತ್ತಿಲ್ಲವೇ ? ಅದೂ ಲೇಡಿ ಪೈಲೆಟ್ ನಡೆಸುತ್ತಿರೋದು !!
    ಎಲ್ಲರಿಗೂ ಲ್ಯಾಂಡಿಂಗೂ ಇದೆ,ಜೊತೆಗೆ ಬ್ಲಾಕ್ ಬಾಕ್ಸೂ ಇದೆ !!

 8. ಬಸ್ಸನ್ನು ಕುರಿತು ಬಸ್ಸಿನೊಳು ಪದ್ಯವನು ಛಂ-
  ದಸ್ಸಿನೊಳು ರಚಿಸಲಾಗದು; ರೈಲೊಳುಂ|
  ನಿಸ್ಸರಣಮೆಂಬಂತೆ ಚಲಿಸುವ ವಿಮಾನದೊಳು
  ನಿಸ್ಸೀಮದಿಂದದನೆ ವರ್ಣಿಸುಗುಮೈ||

 9. ನೆಲದೊಳ್ ಬೃಹದಾಕೃತಿಯಿಂ
  ಗೆಲೆ, ಮೇಲ್ಪೋಗಲ್ಕೆ ಕೃಷತೆಯಿಂ ಮರೆಯಾಗಳ್
  ಚಲಿಕುಂ ಗಗನದೊಳಿಂದಂ
  ಕೆಲಚಣದೀ ಭುವಿಯ ಚೆಂಡಿನೊಲ್ ತೋರ್ದುದಲಾ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)