ಕಲ್ಪನೆ ಚೆನ್ನಾಗಿದೆ. ತ್ರಿಪದಿಯನ್ನು ಮಾತ್ರಾಸೀಸದಂತೆ ಪಂಚಮಾತ್ರಕ್ಕೆ ಅಳವಡಿಸಬಹುದೆ ಎಂದು ನನಗೆ ತಿಳಿಯದು. ಅಂಶದ ವಿಷ್ಣುಗಣದಲ್ಲಿ ನನನನನ ಕೂಡದು. (ನಾನನನ is also not permissible) /ತರಿಯೆ/ ಎಂಬ ಗಣ ತುಸು ಊನವಾಗಿದೆ. ಕರಿಯೆಽ ನಾ/ಮೆಂತೋ/ ಅರಿಯೆಽನುಽ ಎಂದು ಸವರಬಹುದು.
ವರುಷಽವಽ/ರುಷಕೆಽ ನೆಽ/ನೆದು ಕಽರೆಽ/ದೆಮ್ಮಗಿಕ್ಕಿರುವ – ಕೊನೆಯ ಗಣದಲ್ಲಿ ಎಂಟು ದೃಶ್ಯಮಾತ್ರೆಗಳಾದವು; ಆರು ಶ್ರವ್ಯಮಾತ್ರೆಗಳು ಮಾತ್ರ ಇರಬೇಕು (ದೃಶ್ಯಮಾತ್ರೆಗಳ ಬಗೆಗೆ ಈಗಾಗಲೇ ಹೇಳಿರುವೆ). ವರುಷಽವಽ/ರುಷಕೆಲ್ಲಽ/ ಕರೆದುಽನೀ/ಮಿಕ್ಕುಽವಽ ಎಂದು ತಿದ್ದಬಹುದು. ಬರಿಯ ಬಿಳಿ ~ ಬರಿಬಿಽಳಿಽ. ನೀವು ಬೇರೆ ರೀತಿಯಲ್ಲಿ ಪ್ರಯತ್ನಿಸಿ.
“ಪಿಂಡವನ್ನು ತಿನ್ನುತ್ತಿರುವ ಕಾಗೆಯ ಸ್ವಗತ ”
ವರುಷವರುಷಕೆ ನೆನೆದು ಕರೆದೆಮ್ಮಗಿಕ್ಕಿರುವ
ಬರಿದೆ ಬಿಳಿಯನ್ನದುಂಡೆಯs। ನುಂಡsರು
ಕರಿಯೆ ನಾವಿsರುದೆಂತರಿಯೆ ?!

ಧನ್ಯವಾದಗಳು ಪ್ರಸಾದ್ ಸರ್ , (ನಿಮ್ಮ ಕಲ್ಪನೆಯನ್ನೇನಾದರು ಕದ್ದಿರುವೆನೇ ?!)
ತಿದ್ದಿದ ಪದ್ಯ :
ವರುಷವರುಷಕೆ ನೆನೆದು ಕರೆದೆಮ್ಮಗಿಕ್ಕಿರುವ
ಬರಿದೆ ಬಿಳಿಯನ್ನದುಂಡೆಯs। ನುಂಡsರು
ಕರಿಯೆಽ ನಾ/ಮೆಂತೋ/ ಅರಿಯೆಽನು !?
ವರುಷಽವಽ/ರುಷಕೆಽ ನೆಽ/ನೆದು ಕಽರೆಽ/ದೆಮ್ಮಗಿಕ್ಕಿರುವ – ಕೊನೆಯ ಗಣದಲ್ಲಿ ಎಂಟು ದೃಶ್ಯಮಾತ್ರೆಗಳಾದವು; ಆರು ಶ್ರವ್ಯಮಾತ್ರೆಗಳು ಮಾತ್ರ ಇರಬೇಕು (ದೃಶ್ಯಮಾತ್ರೆಗಳ ಬಗೆಗೆ ಈಗಾಗಲೇ ಹೇಳಿರುವೆ). ವರುಷಽವಽ/ರುಷಕೆಲ್ಲಽ/ ಕರೆದುಽನೀ/ಮಿಕ್ಕುಽವಽ ಎಂದು ತಿದ್ದಬಹುದು. ಬರಿಯ ಬಿಳಿ ~ ಬರಿಬಿಽಳಿಽ. ನೀವು ಬೇರೆ ರೀತಿಯಲ್ಲಿ ಪ್ರಯತ್ನಿಸಿ.
“ಪಿಂಡವನ್ನು ತಿನ್ನುತ್ತಿರುವ ಕಾಗೆಯ ಸ್ವಗತ ”
ವರುಷವರುಷಕೆ ನೆನೆದು ಕರೆದೆಮ್ಮಗಿಕ್ಕಿರುವ
ಬರಿದೆ ಬಿಳಿಯನ್ನದುಂಡೆಯs। ನುಂಡsರು
ಕರಿಯೆ ನಾವಿsರುದೆಂತರಿಯೆ ?!
“ಪಿಂಡವನ್ನು ತಿನ್ನುತ್ತಿರುವ ಕಾಗೆಯ ಸ್ವಗತ ”
ವರುಷವರುಷಕೆ ನೆನೆದು ಕರೆದೆಮ್ಮಗಿಕ್ಕಿರುವ
ಬರಿದೆ ಬಿಳಿಯನ್ನದುಂಡೆಯs। ನುಂಡsರು
ಕರಿಯೆ ನಾವಿsರುದೆಂತರಿಯೆ ?!
ನೀವು ಅಸಲುಬ್ರಾಹ್ಮಣರು. ನಿಯಮದಂತೆ ಒಂದೇಪ್ರಮಾಣದ ಮೂರು ಪಿಂಡಗಳನ್ನು ಇಟ್ಟಿರುವಿರಿ 🙂
ಅಂತೂ ಎಣಿಸಿಬಿಟ್ಟಿರಲ್ಲ !!
ಪದ್ಯಪಾನದ ಮಧ್ಯೆ ನಕ್ಕು ನೆತ್ತಿಹತ್ತಿಸಿಕೊಂಡು ನೀರುಕುಡಿದು ಬಹಳದಿನವಾಗಿತ್ತು !!
ಮೇಲೆ ನೋಡಬೇಕಾಗಿತ್ತು. ಆ ಮೂರೂ ಜನರು ಆಶೀರ್ವದಿಸುತ್ತಿದ್ದರು 🙂
ಕೋಲಾಟ
ಸೀಸ|| ಕೋಲಾಟಽಮೆನಲಾಗಽ ಮನಕೆಽ ಬಪ್ಪುದುಮಲ್ತೆಽ ಆ ಕೋಲಽ ಈ ಕೋಲಽ ಘಟ್ಟಽಣೆಽಯುಽ
ಚೆನ್ನಿಽಹುಽದೆಂಬೆಽಯೇಂ ನೀನುಽಮಾ ನಾದಽವಽ, ಕಣ್ಣಽ ಮುಚ್ಚುತ್ತಽಲಿಽ ಕೇಳಿಽ ನೋಡೈ|
ಟಕಟಽಕಽಮೆನ್ನುಽವಽ ಸದ್ದಽದುಽ ಕಿವಿಗಳ್ಗಽಮೇಕಽತಾನದವೋಲುಽ ಬಡಿವುಽದಲ್ತೆಽ
ಕಣ್ಣಽ ಬಿಟ್ಟೊಡಮಽದೇ ಆಟಽವುಽ ರಂಜಿಪ್ಪುಽದೇಕೆಂದುಽ ತಿಳಿಯಯ್ಯಽ ಜಾಣಽ ನೀನುಽ||
ತೇಟಗೀತಿ|| ಪಂಚೇಂದ್ರಿಯದೊಽಳುಽ ಕರ್ಣಽಕ್ಕಿಂ ಕಣ್ಣೇ ಮೇಲೈ
ಕೋಲಾಟದೊಳಂಗೆಽ ನಾದಕ್ಕಿಂ ನೋಟಽ ಲೇಸೈ|
ಅಂತೇಕೆಂಬುಽದಽ ತಿಳಿಯೆಽಲೊಽ ಜಾಣಽ ನೀನುಽ
ಕೋಲಾಟವದಲ್ಲಽ ಕಾಲಾಟಽ ದಿಟದಿಂ ನೋಡಲ್||