Apr 232011
ಮಿಂಗೆಡಿವಾಡು ವಿಭುಡನಿ
ಮಿಂಗುಟೆದಿಯು ಗರಳಮನಿಯು ಮೇಲನಿ ಪ್ರಜಕುನ್
ಮಿಂಗಮನೆ ಸರ್ವಮಂಗಳ
ಮಂಗಳ ಸೂತ್ರಂಬುನೆಂತ ಮದಿನಮ್ಮಿನದೋ
ನುಂಗುವನಾರ್ ನಿಜಪತಿಯೆನೆ
ನುಂಗುವುದೇಂ ಗರಳಮೆಂದು, ಜನಹಿತಕೆಂದುಂ
ನುಂಗೆನಲು ಸರ್ವಮಂಗಳೆ
ಮಂಗಳಸೂತ್ರ ವನದೆಷ್ಟು ನೆರೆನಂಬಿದಳೋ
ಮಿಂಗೆಡಿವಾಡು ವಿಭುಡನಿ
ಮಿಂಗುಟೆದಿಯು ಗರಳಮನಿಯು ಮೇಲನಿ ಪ್ರಜಕುನ್
ಮಿಂಗಮನೆ ಸರ್ವಮಂಗಳ
ಮಂಗಳ ಸೂತ್ರಂಬುನೆಂತ ಮದಿನಮ್ಮಿನದೋ
ನುಂಗುವನಾರ್ ನಿಜಪತಿಯೆನೆ
ನುಂಗುವುದೇಂ ಗರಳಮೆಂದು, ಜನಹಿತಕೆಂದುಂ
ನುಂಗೆನಲು ಸರ್ವಮಂಗಳೆ
ಮಂಗಳಸೂತ್ರ ವನದೆಷ್ಟು ನೆರೆನಂಬಿದಳೋ
Message from Ganesh regarding this verse ::
A very beautiful verse and its kannada rendition too is simply marvelous !!
ಚಂದ್ರಮೌಳಿಯವರೇ, ಪೋತಮಾತ್ಯರ ಕೃತಿಯ ಬಗ್ಗೆ ನನಗೆ ಪರಿಚಯವಿಲ್ಲ. ಪದ್ಯದ ಸಂಧರ್ಭವನ್ನು ದಯವಿಟ್ಟು ತಿಳಿಸಿ, ಪದ್ಯದ ಸೊಗಸು ಹೆಚ್ಚು ನಮ್ಮಂಥವರಿಗೆ ಸಿಗುತ್ತದೆ 🙂
ಕೃತಿ: ಪೋತನಮಹಾಕವಿಯ ಭಾಗವತ.
ಸಂದರ್ಭ : ಪರಮೇಶ್ವರ ಹಾಲಾಹಲವನ್ನು ಕುಡಿಯುವ ಘಟ್ಟ. ಶುಕಮಹರ್ಷಿಯನ್ನು ಕುರಿತು ಪರೀಕ್ಷಿತ್ " ಮಹಾತ್ಮಾ, ಮೂರುಲೋಕಗಳನ್ನೂ ಕಲ್ಲೋಲಮಾಡುವ ಹಾಲಾಹಲವನ್ನು ಶಿವ ಕುಡಿಯಲು ಸಿದ್ಢನಾದಾಗ, ಆತನ ಅರ್ಧಭಾಗವಾದ ಆರ್ಯಾದೇವವಿ ಹೇಗೆ ಒಪ್ಪಿದಳು ಎಂಬಪ್ರಶ್ನೆಗೆ ಶುಕಮಹರ್ಷಿಯ ಉತ್ತರ ಈ ಪದ್ಯ. ಸರ್ವಮಂಗಳೆ – ಮಂಗಳಸೂತ್ರ ಈ ಎರಡು ಶಬ್ದಗಳಲ್ಲಿಯ ಧ್ವನಿ ಮಹಾಕವಿಪ್ರಯೋಗವೆನ್ನುತ್ತಾರೆ.
ಸಾರ್,
ತುಂಬಾ ಧನ್ಯವಾದಗಳು, ಧ್ವನಿ ಬಹಳ ಅದ್ಭುತವಾಗಿದೆ!