Apr 222011
 

ಸಕ್ಕರೆಸವಿಯನು ಪೂರ್ವಾಶ್ರಮದಲಿ
ಯಕ್ಕರೆಸೂಸುತ ತವರಿಗೆ ನೀಡಲು
ಉಕ್ಕಿದ ಅಮ್ಮನ ಪ್ರೀತಿಗೆ ನೀನೇ ಪೂರಣೆಯಾಗಿರುವೆ |
ಬಿಕ್ಕುತಯೊಳಗಡಿಯಿರಿಸುತ ನಲ್ಮೆಯ-
ಸಿಕ್ಕಲಿ ಸಿಲುಕಿಸಲೆಮ್ಮಯ ಮನಗಳ
ಹೊಕ್ಕುತಲಣ್ಣನ ಹೃದಯವ ನೀನೇ ವಿಜಯವ ಪಡೆದಿರುವೆ ||
(*ಅತ್ತಿಗೆ – ಅನ್ನಪೂರ್ಣೆ, ಅಣ್ಣ – ವಿಜಯ)
-ರಜನೀಶ

  5 Responses to “ಒಂದು ಶುಭಾಶಯಪತ್ರ”

  1. ರಜನೀಶ – ಬಹಳ ಚೆನ್ನಾಗಿದೆ. ಇನ್ನೂ ಒಂದೆರಡು ಪದ್ಯಗಳನ್ನು ಇದೇ ಜಾಡಿನಲ್ಲಿ ಸೇರಿಸಬಹುದು ಅನ್ನಿಸುತ್ತದೆ

  2. ರಾಮಚಂದ್ರ – ಧನ್ಯವಾದಗಳು. ಪದ್ಯವನ್ನುಬೆಳೆಸಲು ಪ್ರಯತ್ನಿಸುವೆ.

  3. ಚೊಕ್ಕವೆ ಪದ್ಯವದೆರಡನೆಸಾಲಲಿ
    ಚಿಕ್ಕಲಘುಬೆರೆಯೆ "ತವರಿಗೆ ನೀಡಲು"
    ಮಿಕ್ಕವು ಸರಿಯಿದೆ ರಜನೀಶರೆ ಭಾವಕ್ಕಿದೆ ಬಲಸೆಳೆತ

  4. ರಜನೀಶ,

    ಬಹಳ ಚೆನ್ನಾಗಿದೆ :).

    ಒಂದಂಶವನ್ನು ನೀವು ಮುಂದಿನ ಪದ್ಯಗಳಲ್ಲಿ ಗಮನಿಸಕೊಳ್ಳಬಹುದು ಎಂದು ನನ್ನ ಅನಿಸಿಕೆ. ಸಂಧಿಯಾಗುವ ಕಡೆಯೆಲ್ಲ ಸಂಧಿ ಮಾಡಿದರೆ ಇನ್ನು ಸೊಗಸಿರುತ್ತದೆ.
    ಉದಾ:
    ಉಕ್ಕಿದ ಅಮ್ಮನ -> ಉಕ್ಕಿದಮ್ಮನ
    ಸಿಲುಕಿಸಿ ಎಮ್ಮಯ -> ಸಿಲುಕಿಸೆಮ್ಮಯ
    ಹೊಕ್ಕುತ ಅಣ್ಣನ -> ಹೊಕ್ಕುತಣ್ಣನ

    ಮತ್ತು ಈರೀತಿ ಸಂಧಿ ಮಾಡಿದ ಮೇಲೆ. ಛಂದೋಗತಿ ಗಮನಿಸಬೇಕಾಗುತ್ತದೆ

  5. ರಜನೀಶ – ಅದ್ಭುತವಾದ ಸಾಲುಗಳು….ನಿನ್ನ ಅಭಿಮಾನಪೂರ್ವಕ ಶುಭಾಶಯಕ್ಕೆ ನಮ್ಮ ಹೃದಯಪೂರ್ವಕ ವಂದನೆಗಳು…

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)