May 272019
 

  4 Responses to “ಪದ್ಯಸಪ್ತಾಹ ೩೬೦: ಚಿತ್ರಕ್ಕೆ ಪದ್ಯ”

  1. ಪಂಚಚಾಮರ|| ಸಮರ್ಥನಿದ್ದೆ ನೀನುಮೆಲ್ಲದೇಶವಾಸಿಗಳ್ ವಲಂ
    ತಮಿಸ್ರಮಂ ನಿವಾರಿಪರ್ ಪಟೇಲರೆಂದು ನಂಬಿಯೇಂ|
    ಕ್ರಮೇಣಮಾಯ್ತು ಸ್ಪಷ್ಟಮೈ ನಭಕ್ಕಮೇರದಕ್ಕೆ ನೀ-
    ನಮಿತ್ಶಹಾನ ಬೆಂಬಲಂ ಗಡಿಲ್ಲಮೆಂಬ ಕಾರಣಂ||

    समर्थ था तु, देशवासियों में आस यह् तो था
    तमिस्र को निवार् अवश्य् पटेल् करेंगे यूँ मगर्।
    क्रमेण स्पष्ट् हुआ यह् छू गगन् को क्यों न पाए तुम्
    अमित्-शहा के जैसे टेक् मिला न तुमको भाय् पटेल्॥

  2. ನೀನುಸಿರ್ದಿಂಬಿನಿಂ ಭರತಮಾತೆಗಮಿರ್ಕೆಯುಮಂತೆ ಸಯ್ಪು ದಲ್
    ಹೀನರ ಪೊಳ್ಳುಬೀರಮನದೆಂತುಟೊ ಸಾರಿದರಲ್ತೆ ಮೂರ್ತಿಯಿಂ
    ತಾನದ ಕೀರ್ತನಂಗಳಿನಿದೋ ಕಡುನೇಹದವೆಟ್ಟುವೆರ್ಚುತುಂ
    ಬಾನಿನ ಸೀಮೆಯಂ ಪುಗುವ ಪಾಂಗಿನ ಪೆರ್ಮೆಯನಿತ್ತುದೇ ವಲಂ

    ಉಸಿರ್ದ – ಶಿ.ದ್ವಿ.

    • ಉಸಿರ್ದ – ಶಿ.ದ್ವಿ. ಎಂದರೆ ಸ್ವಲ್ಪ ಮೇಲುಸಿರು ಬಂದಂತೆ 🙂

  3. ಸಾಕಾರಮಾಗಿರಲ್ ಭಾರತದೊಳಾದರ್ಶ
    “ಚೌಕಿದಾರ”ನಪರೂಪದಭಿ(ಮಾ)ಯಾನವುಂ
    ಕಾಕತಾಳೀಯಮಿದನಾವರಣಗೊಂಡುದೀ
    ಏಕೀಕರಣದಪೂರ್ವ ಪ್ರತಿಕೃತಿಯುಂ !!

    ಮಾಡೆಲ್ ಚೌಕಿದಾರನ ಮಾಡೆಲ್ !!

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)