Jul 042020
 

ಶಶಿಕಿರಣ್ ರವರ ಪದ್ಯ:
क्रीडोद्भवेन रजसा तरुणस्य रुष्टः
केदारकर्दमजुषा कृषकस्य दिग्धः।
लोकत्रयप्रसृमरप्रभवस्य पुंस-
स्त्रैविक्रमोऽस्तु जगतां प्रशमाय पादः।।

ರಾಘವೇಂದ್ರ ಹೆಬ್ಬಳಲುರವರ ಪದ್ಯ
जीवमलीमसमानसमन्दिर-
खेलनतत्पर बाल हरे।
तामसराजसपङ्किलपादं
क्षालय मे नयनोष्णजलैः।।
O Hari, O child who is engrossed in playing in the dirty mind-abodes of the jIvas, wash your feet dirtied by rajas & tamas with my hot tears.

ಸಂದೀಪರ ಪದ್ಯ
ಮುನಿಯ ದರ್ಪಪಾದನೇತ್ರ
ಮಣಿಸೆ ಸರ್ಪಶಾಯಿಯಂ|
ಹಣಿಯೆ ಮಂದಹಾಸದಲ್ಲಿ
ಮುನಿಗಾಯ್ತು ತಪಃಫಲಂ||

ರವೀಂದ್ರಹೊಳ್ಳರ ಪದ್ಯ
ಊರ್ಮಿಮಧ್ಯದ ಸಮುದ್ರಮಂಥನಂ
ಮಾರ್ಮಿಕಂ ಗಡ ಮುಳುಂಗೆ ಮಂದರಂ|
ಕೂರ್ಮನಾಧರಿಸೆ ಬಾಗಿ ವಂದಿಪೆಂ
ಧರ್ಮಕೆಂದೆ ಕೊಳಕಾದ ಕಾಲಿಗಂ||

  2 Responses to “ಕೊಳಕಾದ ಕಾಲು”

  1. ಗಾದೆ: ಅಂಗಾಲಿಗೆ ಹೇಸಿಗೆಯಿಲ್ಲ, ಕರುಳಿಗೆ ನಾಚಿಕೆಯಿಲ್ಲ
    ಕೆಂಗಣ್ಣಽನಾದೊಽಡೇಂ ಮಗನಽ ನಾ ಬಿಡಲಾರೆಽ
    ಪೆಂಗೂಸಽ ಕರುಳ್ಗಿಲ್ಲಽ ಸಿಗ್ಗುಽ|
    ಪಾಂಗಿಂದೆಽ ನಡೆವಾಗಽ ಹಾದಿಽಯೊಽಳೆಲ್ಲೆಲ್ಲುಽ
    ಅಂಗಾಲ್ಗೆಽ ಹೇಸಿಽಗೆಽಯುಂಟೆಽ|| ಸಾಂಗತ್ಯ

  2. कर्दमितं शिशुपादं
    तोयेनोष्णेन सिञ्चती माता।
    पङ्किल-पङ्कजमन्तर्-
    ध्यायन्तीषज्जहास वात्सल्यात्॥

    ತಾಯಿಯು ತನ್ನ ಮಗುವಿನ ಕೊಳಕಾದ ಕಾಲಿಗೆ ಬಿಸಿನೀರನ್ನು ಸಿಂಪಡಿಸುತ್ತಾ, ಕೆಸರು ಮೆತ್ತಿಕೊಂಡ ಕಮಲವನ್ನು ನೆನೆದು ವಾತ್ಸಲ್ಯದಿಂದ ಸ್ವಲ್ಪವೇ ನಕ್ಕಳು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)