Jul 052020
ಸಂದೀಪರ ಪದ್ಯ:
ಕುಟ್ಟಿದಳು ಹೊಟ್ಟೆಯನು ಸಿಟ್ಟಿನಲ್ಲಕಟಾ
ಕಟ್ಟಿತದು ಖಳಕೂಟ ನರಕದಲಿ ನಗುತ|
ಹೆಟ್ಟುವೊಲೆ ತಾಯ್ತನವ ಮತ್ಸರವ ಹಡೆಯೆ
ಚಟ್ಟದೆಡೆ ಹೋಗಿತ್ತು ಭರತಕುಲದೊಡಲು||
ಸಂದೀಪರ ಪದ್ಯ:
ಕುಟ್ಟಿದಳು ಹೊಟ್ಟೆಯನು ಸಿಟ್ಟಿನಲ್ಲಕಟಾ
ಕಟ್ಟಿತದು ಖಳಕೂಟ ನರಕದಲಿ ನಗುತ|
ಹೆಟ್ಟುವೊಲೆ ತಾಯ್ತನವ ಮತ್ಸರವ ಹಡೆಯೆ
ಚಟ್ಟದೆಡೆ ಹೋಗಿತ್ತು ಭರತಕುಲದೊಡಲು||
ಕುಲವೃತ್ತಿಯೆಲ್ಲರ್ಗಮೊಂದೆ, ಮನೆಯೊಂದಾಗ
ಫಲಿತಮೆನಿತೆನ್ನುತೆಲ್ಲರ್ ತಿಳಿವರೈ|
ಸಲೆ ಬೇರೆಯಾಗೆ ಜೀವಿಕೆಯಾಗಲೆಲ್ಲರ್ಗೆ
ತಿಳಿಪುದೇತಕೊ ತನ್ನ ಗಳಿಕೆಯಿನ್ನು||
(ಎನ್ನುತ್ತ ಕುಲೇತರವೃತ್ತಿ ಹಿಡಿದವನು ಬೇರೆ ಹೋಗುತ್ತಾನೆ)