Jul 072020
 

ರವೀಂದ್ರಹೊಳ್ಳರ ಪದ್ಯ:
ಅಚ್ಚರಸಿತಟ್ಟೆಯಿದೊ ನೆಲ
ಗಚ್ಚಿರೆ ಸುರಶಾಪದಿಂದೆ ಟೆಂಠಣಿಸುತೆ ಬಂ
ದೊಚ್ಚಯದಿಂ ವರ್ತಿಸುತಿಳೆ
ಮೆಚ್ಚುವವೋಲ್ ನರ್ತಿಸುತ್ತೆ ನಭಕೇರ್ದಪಳಯ್||

ತಟ್ಟೆ ಎಂಬ ಅಪ್ಸರೆ ಸುರಶಾಪದಿಂದ ನೆಲ ಕಚ್ಚಿರೆ, ಟೆಂಠಣಿಸುತೆ(ವಿರೋಧಿಸು – ಈ ಪದ ತಟ್ಟೆ ಬಿದ್ದಾಗಿನ ಸದ್ದನ್ನು ಹೋಲುತ್ತದೆ) ಒಚ್ಚಯದಿಂದ (ಸ್ನೇಹದಿಂದ) ಸುತ್ತುತ್ತ, ಜಗ ಮೆಚ್ಚುವಂತೆ ನರ್ತಿಸುತ್ತ ಮತ್ತೆ ಆಕಾಶಕ್ಕೇರುತ್ತಾಳೆ)

  One Response to “ತಟ್ಟೆ”

  1. ಉಣ್ಣಲೂಟಕ್ಕಾದೆ, ಬಡಿಯೆ ತಾಳಕ್ಕಾದೆ
    ಹೆಣ್ಣು ಗೈಯಲ್ ಕೂಚಿಪೂಡಿಗಾದೆ|
    ಬೆಣ್ಣೆತುಪ್ಪದ ಮಡಕೆಗಳಿಗೆ ಮುಚ್ಚಳವಾದೆ
    ಬಣ್ಣಿಸಿರೊ ನಿಮ್ಮೆಸಕ ಚೊಂಬು-ಲೋಟ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)