Jul 122020
 

ಶಶಿಕಿರಣ್ ರವರ ಪರಿದ್ಯಗಳು:
ಪರಾನುಭವಸಾಕಲ್ಯಮಪರೋಕ್ಷತಯಾ ಯಯಾ|
ಪ್ರಸ್ತುತೀಕ್ರಿಯತೇ ಸ್ತೌಮಿ ತಾಮೂಹಾಂ ಪ್ರತಿಭಾತ್ಮಿಕಾಮ್||
ಪ್ರತಿಭಾರೂಪದ ಊಹೆಗೆ ನಮ್ಮ ವಂದನೆ. ಅದರಿಂದ ಪರತತ್ತ್ವದ ಅನುಭವವು (ಅಥವಾ ಬೇರೆಯವರ ಅನುಭವಗಳು) ಸಂಪೂರ್ಣವಾಗಿ, ಅಪರೋಕ್ಷವಾಗಿ ಪ್ರಸ್ತುತವಾಗುತ್ತವೆ.

ಶ್ರೇಯಸೇ ಭೂಯಸೇ ಭೂಯಾದಿಭವಕ್ತ್ರಸ್ಯ ಪೀನಸಃ /
ಜಗತಃ ಪಿತರೌ ಯೇನ ಸಮಭೂತಾಂ ಸಸಾಧ್ವಸೌ //
ಜಗನ್ಮಾತಾಪಿತೃಗಳ ಕಳವಳಕ್ಕೆ ಕಾರಣವಾದ ಗಣಪತಿಯ ಶೀತ ನಮ್ಮಗೆ ಶ್ರೇಯಸ್ಸನ್ನು ತರಲಿ.

ಭಗವಾನ್ನಿಜಭಕ್ತಾನಾಂ ಸ್ವಯಂ ರಕ್ಷಾಂ ಚಿಕೀರ್ಷತಿ /
ಇತ್ಯೇವಂ ಬೋಧಯಿತ್ರೇ ತೇ ಬಿಡಾಲಶಿಶವೇ ನಮಃ //
ಭಗವಂತ ತನ್ನ ಭಕ್ತರನ್ನು ತಾನೇ ಸ್ವಯಂ ರಕ್ಷಿಸುತ್ತಾನೆಂದು ತಿಳಿಸಿಕೊಟ್ಟ ಬೆಕ್ಕಿನ ಮರಿಗೆ ನಮಸ್ಕಾರ. (ಇಲ್ಲಿ ಮಾರ್ಜಾಲಕಿಶೋರನ್ಯಾಯ ವಿವಕ್ಷಿತ. ಹೇಗೆ ಬೆಕ್ಕು ತನ್ನ ಮರಿಗಳನ್ನು ತಾನೇ ಬಾಯಲ್ಲಿ ದೃಢವಾಗಿ–ಆದರೆ ಮೃದುವಾಗಿ–ಹಿಡಿದು ಅವುಗಳನ್ನು ಸುರಕ್ಷಿತಸ್ಥಳಕ್ಕೆ ಕೂಂಡೊಯ್ಯುವುದೋ ಹಾಗೆ ಭಗವಂತ ಭಕ್ತರನ್ನು ರಕ್ಷಿಸುತ್ತಾನೆ.)

ವೀಣಾ ಉದಯನರ ಪದ್ಯಗಳು:
विकल्पशतसामग्रीमब्धिबुद्धिषु विस्तृताम् ।
चातुरङ्गीमिमामूहामूहे कोहा भवद्गता? ।
ನೂರಾರು ವಿಕಲ್ಪಗಳೆಂಬ ಸಾಮಗ್ರಿಗಳನ್ನು(pawns), ಅಬ್ಧಿ(10^9)ಬುದ್ಧಿಗಳೆಂಬ ವಿಸ್ತಾರದಲ್ಲಿ(ಹಾಸು) ಹೊಂದಿರುವ ಈ ಊಹೆಯು ಚತುರಂಗವೇನೋ ಎಂದು ನನ್ನ ಊಹೆ, ನಿಮ್ಮದೇನು?

गजवक्त्रक्षुतं श्रुत्वा भीताः कैलासवासिनः।
करोनाशंकया माता कषायमकरोत् भृशम्।।

  One Response to “ಊಹೆ, ಗಣೇಶನ ಸೀನು, ಬೆಕ್ಕಿನ ಮರಿ”

  1. ನೈಶಿತ್ಯಮೇ ವೇಳ್ಕುಮುಕ್ತಿವೈದಗ್ಧ್ಯಕ್ಕೆ
    ರಾಶಿಲೇಖದಿನೇನು ಫಲವಹುದು ಪೇಳ್|
    ಲೇಶಮಿದ್ದೊಡಮೂಹೆ, ಕಾಪಟ್ಯ, ಶಂಕೆಗಳು
    ಕೇಶವಂ ಶ್ಲಾಘಿಪನೆ – ಹಾದಿರಂಪ||

    ಮುಂಡಮಾತ್ರಂ ಕರಿಯದಲ್ತೆ ಲಂಬೋದರಗೆ
    ರುಂಡದುರಶಕ್ತಿಯದು ಮುನ್ನವೋಲೇ|
    ಸೊಂಡಿಲೊಳೆ ಮುಗಿದು ಸೇಚನವೆಲ್ಲ ಸೀನೆಂತೊ
    ಖಂಡವಪ್ಪುದು ಹಾಯದಾಚೆಗೆಂದುಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)