Jul 072020
 

ವೀಣಾರವರ ಪರಿಹಾರ:
ಕ್ಷಿತಿಗಾ ಸಗ್ಗದಿನಿಳಿದೀ
ರತಿಪತಿಯೂಡೆ ಘೃತಸಿಕ್ತಭೋಜ್ಯಂಗಳಮೋ!
ಸುತನೋ ಬೆಣ್ಣೆಯ ಮುದ್ದೆಯೊ!
ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
ಭೂಮಿಗಿಳಿದ ಮನ್ಮಥನಂತಿರುವ ಸುತನಿಗೆ ಚೆನ್ನಾಗಿ ಘೃತಭೋಜನವನ್ನು ಮಾಡಿಸಲು ಅವನು ಗುಂಡುಗುಂಡಗೆ ಬೆಣ್ಣೆಮುದ್ದೆಯಂತಾದ..

ಕಾಂಚನಾರವರ ಪರಿಹಾರ:
ಸುತನಿಂ ಕೊಂಡಾಯುಷ್ಯಮ
ನತಿಯಾಶೆಯೊಳಾ ಯಯಾತಿವಡೆವಂತೆಳಸಂ|
ಕೈತವಮಾದೊಡೆ ನೋಡೌ!
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ||

ಉಷಾರವರ ಪರಿಹಾರ-೧:
ಅತಿಶಯದಾಲೋಡನದೀ
ಗತಿಯೊಳ್ ಬೆಳ್ಪುಂಡೆಯೋಲುಗಲ್ ತೆರೆಯುಲಿಯೊಳ್|
ಕ್ಷಿತಿಜದೆ ತಾಂ ಕಡಲಣುಗಂ
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!!
ಘೃತ = ನೀರು, ಕಡಲಣುಗ = ಚಂದ್ರ, ಕಡೆದ ಸಾಗರದ ನೀರಿನಿಂದ ಬಂದ ಚಂದ್ರನು ಬೆಣ್ಣೆಯಂತ ಬಿಳಿಯ ಉಂಡೆ

ಉಷಾರವರ ಪರಿಹಾರ-೨:
ಕೃತಕೃತ್ಯಮಾದ ಚೌರ್ಯದ
ಕತದಿಂ ಗಡಮಬ್ಬೆಗಂತು ಜಗಮಂ ತೋರ್ದಾ-|
ಸುತಗಂ ಕಟುವಾಯ್ ಲಾಲಾ-
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!!
*ಲಾಲಾಘೃತ=ಲಾಲಾರಸ (ಸಾಮಾನ್ಯವಾಗಿ ಮಕ್ಕಳ ಜೊಲ್ಲನ್ನು ’ತುಪ್ಪ’ ವೆನ್ನುವ ವಾಡಿಕೆ ಅಲ್ಲವೇ?) ಕದ್ದುಮೆದ್ದ ಕಳ್ಳ ಕೃಷ್ಣನ ಬಾಯಿ ಬೆಣ್ಣೆಯಾದ ಕಲ್ಪನೆ

ರವೀಂದ್ರಹೊಳ್ಳರ ಪರಿಹಾರ:
ಜಿತದಿಂದಶ್ವಿನಿಗಳ್ ಪ-
ನ್ನತಿಕೆಯಿನೂಡಿಸೆ, ತ್ರಿಶಂಕುದೇಹಂ ದಿವ್ಯಾ-|
ಮೃತಸಂಪೋಷಿತದೈವೀ-
ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
(ನವನೀತಮಪ್ಪ = ನವನ್+ಈತಂ+ಅಪ್ಪ ಎಂದೂ ಪದಚ್ಛೇದ ಮಾಡಬಹುದು)

  6 Responses to “ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್”

  1. ಖತಿಗೊಳ್ಳಲ್ ತ್ವಚೆ ವ್ರಣದಿಂ
    ’ಶತಧೌತಘೃತ’ದುಪಲೇಪದಿಂ ಮಾಯ್ತಯ್ ತಾಂ|
    ಸಿತಶರಜದೊಲಾಗಳ್ ತ್ವಕ್ (ಶರಜ=ಬೆಣ್ಣೆ)
    ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
    (ಶತಧೌತಘೃತ ಎಂಬುದೊಂದು ಆಯುರ್ವೇದೀಯ ಲೇಪನೌಷಧ)

  2. ಗಣಪನಿಗೆ ಬೆಣ್ಣೆ ಅಲಂಕಾರ:
    ಘೃತ=Illuminated (ಅಪ್ರಸಿದ್ಧಾರ್ಥ 🙁 ). ಅಪ್ಪ=ಇರುವ, not ಆಗುವ

    ಅತಿಶಯದೆ ಗಣಪನಿಗಲಂ-
    ಕೃತಿಯಂ ಪರ್ಣ-ಸುಮ-ಧಾನ್ಯದಿಂದುರೆ ಮಾಳ್ಪರ್|
    ಸಿತವರ್ಣನಾಗೆ ಗಣಪಂ
    ಘೃತದಿಂ, ನವನೀತಮಪ್ಪ ಪರಿಯೇ ಸೊಗಸಯ್||

  3. ಚತುರತೆಯಿಂ ಮಾನವನಿಂ
    ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್|
    ಸೃತಿಯೇಂ ಗಹನಮೆ! ಒಯ್ಯದೆ
    ಅತಿಶಯದಿಂ ಭೂತ-ಭವ್ಯಕೆ ಸಮಯಯಂತ್ರಂ?

  4. ಶರಜಂ=Butter. Watch, in reverse order, a video recording of butter boiled to make ghee
    ಕೊತಕೊತನ ಕ್ವಥನದಿಂ ಹಿಂ-
    ಗುತೆ ಶರಜಂ ತುಪ್ಪಮಾದುದಂ ಸವ್ಯದೆ ಕಾಣ್|
    ಕುತಕದೊಳು ಚಲಚ್ಚಿತ್ರದೆ
    ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||

  5. ಭಕ್ತನ ಬೇಡಿಕೆಯನ್ನು ಭಗವಂತನು ಯಾವುದೋ ರೀತಿಯಲ್ಲಿ ಸಲ್ಲಿಸುತ್ತಾನೆ.

    ಘೃತಮಂ ನೈವೇದ್ಯವಿರಿಸಿ
    ಜಿತದಿಂ ಬೇಡಿಹೆ ಮಹೇಶನಂ ಬೆಣ್ಣೆಯನೇ|
    ಹಿತದಿಂದಿತ್ತಂ ವರಮಂ!
    ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||

  6. ಘೃತಮಂ ತಂದಪೆನೆ ಅಜಾ-
    ಗೃತಿಯಿಂದಾಪಣದೆ! ಪುಣ್ಯದಿಂ ಶ್ರೇಷ್ಠಿಯು ತಾಂ|
    (White butter)ಸಿತಶರಜವೀಯೆ ವಿಮಯದೆ (=ವಿನಿಮಯದೆ)
    ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)