May 172021
೧. ಸುಂದರಸ್ವಪ್ನದಿಂದ ಎಚ್ಚೆತ್ತಾಗ
೨. ಕರವಸ್ತ್ರ ಮತ್ತು ಮುಂಡಾಸುಗಳ ಸಂವಾದ
೩. ಯುವಕನ/ಯುವತಿಯ ಪ್ರೇಮಪ್ರಸ್ತಾವ
ಸಮಸ್ಯೆ:
ಕನ್ನಡ- ವ್ಯಾಕರಣಂ ಸುವೇದ್ಯಮೆನುತುಂ ಕಲಿತಿರ್ಪುದು ಕಾಗೆಯೊಂದು ತಾಂ
ಸಂಸ್ಕೃತ- ವ್ಯಾಕರಣಂ ಸುವೇದ್ಯಮಿತಿ ಶಿಕ್ಷಣಮಂಚತಿ ವಾಯಸೋ ಮುದಾ
೧. ಸುಂದರಸ್ವಪ್ನದಿಂದ ಎಚ್ಚೆತ್ತಾಗ
೨. ಕರವಸ್ತ್ರ ಮತ್ತು ಮುಂಡಾಸುಗಳ ಸಂವಾದ
೩. ಯುವಕನ/ಯುವತಿಯ ಪ್ರೇಮಪ್ರಸ್ತಾವ
ಸಮಸ್ಯೆ:
ಕನ್ನಡ- ವ್ಯಾಕರಣಂ ಸುವೇದ್ಯಮೆನುತುಂ ಕಲಿತಿರ್ಪುದು ಕಾಗೆಯೊಂದು ತಾಂ
ಸಂಸ್ಕೃತ- ವ್ಯಾಕರಣಂ ಸುವೇದ್ಯಮಿತಿ ಶಿಕ್ಷಣಮಂಚತಿ ವಾಯಸೋ ಮುದಾ
ಸಿಹಿಗನಸಿನಿಂದ ಎಚ್ಚೆತ್ತಾಗ:
ಕನಸಿನೊಳು ಕಂಡದ್ದು ನನಸಾಗದೆಂದಿಗುಂ
ಬಿನದದೇಂ ಕಹಿಯದಿದ್ದೊಡಮೇನದು|
ಮನಕಿನಿತೆ ದುಃಖವೈ ಕನಸುಗಳ್ ಕೊನೆಯಾಗ-
ಲೆನಿತೊ ಹಾಳಾದುದೆನ್ನುತೆ ನಿದ್ದೆಯು||1
ಕೊನೆಗೇನು ಕಾದಿತ್ತೊ ಕನಸಿನೊಳು ಬಲ್ಲೆಯೇಂ
ಎನಿತೊ ತಿರುವನು ಪೊಂದಬಹುದು ಕತೆಯು|
ಇನಿತು ದುಃಖವೆ ಅರ್ಧವೇ ಸಿಹಿಯು ಸಂದಿರ್ಪು-
ದೆನುತೆ, ಸಾಲದೆ ಅರ್ಧ ದುಃಖ ನಿನಗೈ||2
———
ಮುಂಡಾಸು ಕರವಸ್ತ್ರಕ್ಕೆ ಹೇಳುವುದು:
ಸ್ಥಿರದಿಂದಿರೆ ಶೀರ್ಷಮಾತ್ರಮಂ
ಭರಿಸಲ್ ಸಾಕಲೆ ಕಷ್ಟಮಿಲ್ಲಮೈ|
ಕರದೊಳ್ ತಿರುಗೇಂ, ಲಲಾಟಮಂ
ಒರೆಸಲ್ಕಾದಪೆ ನಾಸಿಕಗ್ರಮಂ||
———-
ತರುಣ ಒಬ್ಬಳಿಗೆ ಪ್ರೊಪೋಸ್ ಮಾಡಿದ. ಅವನು ಅವಳ ಗೆಳತಿಗೂ ಪ್ರೊಪೋಸ್ ಮಾಡಿದ್ದು, ಅದು ಇವಳಿಗೆ ತಿಳಿದಿದೆ. ಆದರೂ ಸಮಂಜಸವಾದ ಪ್ರತಿಕ್ರಿಯೆಯನ್ನು ನೀಡುತ್ತಾಳೆ:
ನನ್ನಽಯಽ ಗೆಳತಿಽಯಽತಂತ್ರಽಳುಽ ತಾನಿನ್ನೂ
ನಿನ್ನಽಯಽ ಪ್ರಸ್ತಾವಽದೊಳ್ ಕೇಳ್|
ಇನ್ನೊಂದುಽ ವಾರಽದೆಽ ನಿರ್ಧಽರಿಽಸುವಳಂತೆಽ
ಅನ್ನೆಽಗಽಮಿರು ನೀನುಽ ಸುಮ್ನೆಽ||
———
ಸಮಸ್ಯೆ:
ಮೇಕೆಯು ಜಿಂಕೆ-ಹಾವು-ಕರುಗಳ್ ಹಯಗಳ್ ಕ್ರಿಮಿ-ಪಕ್ಷಿ-ದಂತಿಗಳ್
ಕೇಕೆಯ ಗೈಯವೈ ಕರೆಯೆ ಬಂಧುಗಳಂ ಸಮಭಾಗದಶ್ನಕಂ|
ಸಾಕಹುದಲ್ಪಮಾತ್ಮಕೆ, ಸಖರ್ಗೆ ವಿಭಾಗವಿಧಾನಮೆನ್ನುತೀ
ವ್ಯಾ-ಕರಣಂ ಸುವೇದ್ಯಮೆನುತುಂ ಕಲಿತಿರ್ಪುದು ಕಾಗೆಯೊಂದು ತಾಂ||
(ವ್ಯಾ ಎಂದು ಬಾಯಿ ತೆಗೆದು ಕಾಗೆ ತನ್ನವರನ್ನು ಕೂಗುತ್ತದೆ)