May 112022
 

೧. ಹಾಲು
೨. ದೆವ್ವದ ಹೆಜ್ಜೆ ಮತ್ತು ದೇವರ ಹೆಜ್ಜೆ
೩. ಅಣ್ವಸ್ತ್ರ

ವಂಶಸ್ಥದ ಸಮಸ್ಯೆ:
ಕರೇಣು ದಂತಂಗಳಿನೆಂತೊ ಶೋಭಿಕುಂ
करेणुका दन्तयुगेन शोभते

  5 Responses to “ಪದ್ಯಸಪ್ತಾಹ ೪೫೪”

  1. ಕೊಟ್ಟುದಲ್ತೆ ಪಸುವೆಂಬು ಭಕ್ತಿಯುಂ
    ಗಟ್ಟಿಗೊಂಡಿರುತೆ ನಿನ್ನ ಚಿತ್ತದೊಳ್
    ಬಿಟ್ಟುದಲ್ತೆ ಕರುವೆನ್ನ ಪಾಲಿಗೆಂ-
    ದಿಟ್ಟ ಮಾರ್ದವದೆ ಪಾಲನುಣ್ಣೆಲಯ್

    ಹಸು ಕೊಟ್ಟದ್ದು ಎಂಬ ಭಕ್ತಿ ಮಾತ್ರ ಬೇಡ, ಕರು ನಿನಗೋಸ್ಕರ ಬಿಟ್ಟಕೊಟ್ಟದ್ದು ಎಂವ ಮೃದುತ್ವವೂ ಇರಲಿ.

  2. ಬಂದತ್ತು ದೆವ್ವವು ಬಂದತ್ತು ದೈವವು
    ಹಿಂದುಮುಂದಾದ ಹೆಜ್ಜೇಲಿ | ಸರಸಿಯೊ-
    ಳಂದು ಕೌರವನು ಕೃಷ್ಣನು

    ಅಂದು ಆ ವೈಶಾಂಪಾಯನ ಸರಸ್ಸಿಗೆ ದೆವ್ವವೂ ಬಂತು, ದೈವವೂ ಬಂತು, ಹಿಂದು-ಮುಂದಾದ ಹೆಜ್ಜೆಯಿಂದ. ಕೌರವ ಹಿಮ್ಮೊಗದ ಹೆಜ್ಜೆ ಇಟ್ಟು ಬಂದ, ಕೃಷ್ಣ ನೇರವಾಗಿ.

  3. ಕರೀಂದ್ರನಾ ಪತ್ನಿಯು ಪೆಣ್ಣ ಪೆತ್ತ ಬೇ-
    ಸರಕ್ಕೆ ತಾನನ್ನವನಟ್ಟದಿರ್ಪಳಯ್
    ಸರಕ್ಕನೇ ಬೆಯ್ಯದೆ ತಾಳ್ದುದಾನೆ ತಾಂ
    ಕರೇಣುದಂ ತಂಗಳಿನೆಂತೊ ಶೋಭಿಕುಂ

    ಕರೀಂದ್ರನ ಹೆಂಡತಿಯು ಹೆಣ್ಣನ್ನು ಈದಿತು. ಹೆಣ್ಣು ಮಗುವಾದ ಬೇಸರದಿಂದ ಅಡುಗೆ ಮಾಡಲಿಲ್ಲ. ಒಮ್ಮೆಲೇ ಬೈಯೋದು ಬೇಡ ಎಂದು ತಾಳಿಕೊಂಡ ಕರೇಣುದ (ಹೆಣ್ಣು ಮಗುವನ್ನು ಕೊಟ್ಟ) ಗಂಡಾನೆ ತಂಗಳು ತಿಂದುಡೇ ಹೇಗೋ ಶೋಭಿಸಿತು.

  4. ಅಣ್ವಸ್ತ್ರ (ಸಾಂಗತ್ಯ):

    ಜಗದೊಳಶಾಂತಿಯಂ ನೆಲೆಗೊಳಿಸಲ್ ನರಂ
    ನಗಮೆಲ್ಲಮಂಬೆತ್ತು ಪೊಸದೊಂ-
    ದು ಘನಾಯುಧಮನೇರ್ಪಡಿಸಲದು
    ಜಗಮನೇ ಪೊರೆಯುತಿರ್ಪುದದೇನ್!

Leave a Reply to ಶ್ರೀಹರಿ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)