May 042022
೧. ಮಗುವನ್ನು ಕಂಡ ಗೊಂಬೆಯ ಸ್ವಗತ
೨. ಏಕಮುಖ-ಚಲನೆ (Oneway)
೩. ವಾಲ್ಮೀಕಿಯು ಮೊದಲ ಬಾರಿ ಸೀತೆಯನ್ನು ಕಂಡಾಗ
ಉಪೇಂದ್ರವಜ್ರದ ಸಮಸ್ಯೆ:
कलंकहीनो रजनिश आसित्
ಕಳಂಕಹೀನಂ ರಜನೀಶನಾದಂ
೧. ಮಗುವನ್ನು ಕಂಡ ಗೊಂಬೆಯ ಸ್ವಗತ
೨. ಏಕಮುಖ-ಚಲನೆ (Oneway)
೩. ವಾಲ್ಮೀಕಿಯು ಮೊದಲ ಬಾರಿ ಸೀತೆಯನ್ನು ಕಂಡಾಗ
ಉಪೇಂದ್ರವಜ್ರದ ಸಮಸ್ಯೆ:
कलंकहीनो रजनिश आसित्
ಕಳಂಕಹೀನಂ ರಜನೀಶನಾದಂ
ಮಗುವನ್ನು ಕಂಡ ಗೊಂಬೆಯ ಸ್ವಗತ:
ಎನಗಿಂ ದನಿಮಾಳ್ಪುದದೇ-
ನೆನಗಿಂ ಚೆನ್ನಿರ್ಪುದಾಹೊಳಪದೇನ್ ಕಣ್ಣೊಳ್
ಜನಕೆಲ್ಲಮದೇಂ ಬಿನದಂ
ಕನವರಿಪುದು ಬೊಂಬೆ ಮತ್ಸರದಿಮೀತೆರದೊಳ್
ವಾಲ್ಮೀಕಿಯು ಮೊದಲ ಬಾರಿ ಸೀತೆಯನ್ನು ಕಂಡಾಗ:
ಜನರ ಮಾತಿಗೆ ಬೆಲೆಯನಿತ್ತಾ
ಜನಕಸುತೆಯನು ಕಾಡಿಗಟ್ಟಿದ
ಘನರಘುಕುಲೋತ್ತಮನ ಚಿತ್ತದೊಲು ವಲ್ಮೀಕಭವ
ಮುನಿಗೆ ಕಂಡಳು ದೇವಿ ಸೀತೆ ವಿ-
ಪಿನದಿ ಮಾವಿನಮರದ ನೆರಳಲಿ
ಕನವರಿಸುತೆ ರಮಣನ ರಾಮಾಯಣಕಥೆಯ ತೆರದೊಳ್