Mar 282011
 

ಬಂದವನಾ ರೇ ಮನದಲಿ
ಚಂದದಿ ನುಡಿಸುತ ಸುಮಧುರ ವೇಣು ನಿನಾದವ
ನಂದ ಕುಮಾರನೆ ಮನದಾ
ನಂದವ ನೀಡುತ ಮರೆಯದೆ ಪೊರೆಯಲು ಬಂದವ

-venkataraghavan
an attempt to write an kanda padya : a gopikas expression

  5 Responses to “kanda padya”

  1. sundara praytna. jaganagalige jaaga kottu halegannadada ammugalannu serisidare padyakke mattu olleya bimmu baruvudaa anta annistade.

    cool…

  2. ವೆಂಕಟ್,
    ಕಂದದಲ್ಲಿ ಮೊದಲನೇ ಪದ್ಯ… ಚೆನ್ನಾಗಿದೆ.

  3. ವೆಂಕಟರಾಘವನಿರ್ಮಿತಿ
    ಶಂಕೆಯಿರದ ’ಕಂದ’ ನಂದಕಂದನ ಗಾನಾ
    ಲಂಕಾರವಿಜೃಂಭಿಸೆ ಸಾ
    ಲಂಕೊನೆಗಾಣಿಸಲು ಗುರುವಿನಕ್ಕರಸಲಿಸಿಂ

    ಪದ್ಯ ಚೆನ್ನಾಗಿದೆ.
    ಮನವಿ:
    ಎರಡು-ನಾಲ್ಕನೇಸಾಲಿನ ಕೊನೆಯ ಅಕ್ಷರ ಎಳೆದು ಗುರ್ವಾಂತವಾಗುವುದರಿಂದ ’ನಿನಾದವಾ’ ’ಬಂದವಾ’ ಆಗುವುದನ್ನು ತಪ್ಪಿಸಲು ’ನಿನಾದಂ ಅಥವಾ ನಿನಾದ’ (ಸಾಲುಎರಡು), ’ಬಂದಾ ಅಥವಾ ಬಂದಂ’ (ಸಾಲು ನಾಲ್ಕು) ಮಾಡಬಹುದೇನೋ. ವಂದನೆ,

  4. ನಾನು ಓದಿದ್ದು ಇಂಗ್ಲೀಷ್ ಮೀಡಿಯಂ ಮತ್ತು ಹೈಸ್ಕೂಲಿನಲ್ಲಿ ತೆಗೆದುಕೊಂಡದ್ದು ಸಂಸ್ಕೃತ; ಹಾಗಾಗಿ ನನಗೆ ಕನ್ನಡದ ಕಾವ್ಯ ರಚನೆಯ ಸ್ವರೂಪ ತಿಳಿದಿಲ್ಲ. ಆದರೂ ನಿಮ್ಮ ಕವನ ಸ್ವಾರಸ್ಯತೆಯನ್ನು ಕಾಪಡಿಕೊಂಡಿದೆ. ನನ್ನ ಕಳಕಳಿ ಇಷ್ಟೇ ಕನ್ನಡದ ವಿವಿಧ ಚಂದಸ್ಸು ಮತ್ತು ಪದ್ಯ ರೂಪಕಗಳ ಬಗ್ಗೆ ನನ್ನಂಥವರಿಗಾಗಿ ಒಂದು ಸಂಕ್ಷಿಪ್ತ ಲೇಖನವನ್ನು ಬರೆಯುವ ಪ್ರಯತ್ನ ನಿಮ್ಮ ಕಾವ್ಯ ಕುತೂಹಲ ಬಳಗ ಮಾಡಲಿ.

  5. ಮಕರ -ನೀವು ಕೇಳಿರುವಂತೆ ಛಂದಸ್ಸಿನ ಬಗ್ಗೆ, ಪದ್ಯ ಬರೆಯುವ ಬಗ್ಗೆ, ಲೇಖನಗಳನ್ನೂ, ಕಲಿಕಾ ಸಾಮಗ್ರಿಯನ್ನೂ ಒದಗಿಸುವ ಪಯತ್ನ ಶುರುವಾಗಿದೆ. ಸ್ವಲ್ಪ ಸಮಯ ಕಾದು ನೋಡಿ.:-)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)