Mar 272011
 
ಮೊದಲು ಬರೆದ ೪ ಮತ್ರಾಗಣದ ಪದ್ಯಗಳು (ಬಾಳೆಯ ತೋಟದ ಪಕ್ಕದ ಕಾಡಲಿ …. ತರಹದ್ದು) ::

ಭಾಮಿನಿ ಮೋಹದ ಸುಧಾಲಹರಿಯಲಿ ಮೀಯುತ ಬೇರೆಲ್ಲವ ಮರೆತೆ ||
ಕಾಮಿನಿ ಸುಖದಲಿ ಮುಳುಗೇಳುತನಾ ಜೀವನದಾಕರ್ಷಣೆ ಅರಿತೆ || ೧ ||

ಕೋಮಲ ರಾಗದಿ ಭೋಗ ಕುಸುಮಗಳು  ಅಕ್ಕರೆಯಲಿ ಕರೆಯುತಲಿಹವು ||
ಸೋಮದ ಸೊಗಸನು ಮಂದಾನಿಲ ತರೆ ಕಂದವನೇ ಲಲಿತದಿ ತಹವು || ೨ ||

ಭಾಮಿನಿ ಸೆರೆಯಿಂ ಬಿಡುಗಡೆ ಪಡೆಯದೆ ಗದಗಿನ ಕವಿ ಕೊನೆಯುಸಿರೆಳೆದ ||
ಆಮಹನೀಯನಿತರ ಚಂಚಲೆಯರ ಸೈರಿಸದೆಯೆ ಜನುಮವ ಕಳೆದ || ೩ ||

ರಾಮನ ಒಂದೇ ಪತ್ನೀ ವ್ರತವೋ ಕಾಮನ ಬಹುಮಯ ಚಪಲತೆಯೋ ||
ಸಾಮಸಮಾಸಮ ಭಾವಗಳೆಲ್ಲವ ಹೊರಹೊಮ್ಮುವ ಮೇಣ್ ಚದುರತೆಯೋ || ೪ ||

ಇದೇ ಭಾವವನ್ನು ಭಾಮಿನಿಯಲ್ಲಿ ನಂತರ ಬರೆದದ್ದು ::

ಮರೆತೆ ಮೀಯುತ ಭಾಮಿನಿಯ ಸುಧೆ
ಸರಸಿಗಳಲುಳಿದೆಲ್ಲ ಛಂದಗ
ಳರಿತೆ ರಸಗಳ ಭಾವ ಸೆಳೆತವ ಮುಳುಗುತೇಳುತಲಿ ||
ತೆರೆದ ಕುಸುಮದ ಭೋಗರಾಗಗ
ಳೆರೆದ ಸೋಮದ ಸೊಗಸು ಲಲಿತದ
[ಕರೆದ ಕಂದಾ ಮಂದಾನಿಲದಲ್ಲೆಲ್ಲ ನಿರ್ಲಕ್ಷ್ಯ]
ಝರಿಯ ಮಂದಾನಿಲಕೆ ಕಂದಕೆ ದಿವ್ಯನಿರ್ಲಕ್ಷ್ಯ || ೧ ||

ಬಾಮಿನಿಯ ಸೆರೆಯಲ್ಲಿ ಸಿಲುಕಿರೆ
ಕಾಮದಿಂಬಿಡುಗಡೆಯ ಪಡೆಯೆನೆ
[ಜನ್ಮ ಸಾಲದೆ ಹೋಯಿತಾ ಗದಗಿನ ಮಹಾಶಯಗೆ]
ನೇಮಜನ್ಮಾದ್ಯಂತ ಗದಗಿನ ಕವಿಮಹಾಶಯಗೆ ||
ಸಾಮಭಾವವ ಚಿಮ್ಮೊ ಚದುರತೆ
ಕಾಮ ಚಪಲತೆಯಂತೆ ವಿವಿಧತೆ
ರಾಮನವ್ರತದೇಕತೆಯೊ ಮೇಣ್ ರಾಗ ಪರಿಕರವೋ || ೨ ||

– ರಾಮಚಂದ್ರ

  3 Responses to “ಭಾಮಿನಿಯ ಆಕರ್ಷಣೆ”

  1. ಚೆನ್ನಾಗಿದೆ. ಮೊದಲ ಭಾಮಿನಿಯ ಕೊನೆಯ ಪಾದವನ್ನು ಗಮನಿಸಿ..ಕಂದಾ ಮಂದಾ..೪+೪….ಝರಿಯ ಮಂದಾನಿಲಕೆ ಕಂದಕೆ ದಿವ್ಯನಿರ್ಲಕ್ಷ್ಯ…ಆಗಬಹುದೇ?.. ಹಾಗೆಯೇ.. ಭಾಮಿನಿಯಸೆರೆಯಲ್ಲಿ … ಈ ಪದ್ಯ ಸಲಕ್ಷಣ. ಮೂರನೇಸಾಲಿನ ಪ್ರಾಸವನ್ನು ತಿದ್ದಲು ಸಾಧ್ಯವೇ ನೋಡಿ. ನೇಮಜನ್ಮಾದ್ಯಂತ ಗದುಗಿನ ನಾರಣಪ್ಪಂಗೆ..

  2. cool… chenda barediddeera raamacandrare..

  3. ಮೌಳಿ – ಎಂದಿನಂತೆ ನಿಮ್ಮ ಸಲಹೆ, ಪರಿಷ್ಕಾರ ಅತಿ ಸೂಕ್ತವಾಗಿದೆ. ಅನೇಕ ಧನ್ಯವಾದಗಳು. ಇವನ್ನು ಅಳವಡಿಸಿದ್ದೇನೆ.

    ಕಣಾದ – ಮೆಚ್ಚುಗೆಗೆ ಧನ್ಯವಾದಗಳು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)