Mar 192011
ಉತ್ತರಕೆ ಪ್ರತ್ಯುತ್ತರಗಳಿರೆ
ಮತ್ತೆ ಪದ್ಯಗಳೋಡಿ ಬರುತಿರ –
ಲೆತ್ತಿ ನಲಿದುದು ಪ್ರತಿಭೆ ಕಾವ್ಯ ಕುತೂಹಲಿಗರೆದೆಯೊಳ್ ||
ಸುತ್ತ ಭಾಮಿನಿ ಷಟ್ಪದಿಗಳಲಿ
ಮುತ್ತಿ ಬರುತಿಹುದೀಸುಹಾಸವು
ತುತ್ತ ಮರೆಸುತಲಿದ್ದುದಲ್ಲದೆ ನಿದ್ರೆಯನು ಕಾಡಿ || ||
ಮತ್ತೆ ಪದ್ಯಗಳೋಡಿ ಬರುತಿರ –
ಲೆತ್ತಿ ನಲಿದುದು ಪ್ರತಿಭೆ ಕಾವ್ಯ ಕುತೂಹಲಿಗರೆದೆಯೊಳ್ ||
ಸುತ್ತ ಭಾಮಿನಿ ಷಟ್ಪದಿಗಳಲಿ
ಮುತ್ತಿ ಬರುತಿಹುದೀಸುಹಾಸವು
ತುತ್ತ ಮರೆಸುತಲಿದ್ದುದಲ್ಲದೆ ನಿದ್ರೆಯನು ಕಾಡಿ || ||
"ತುತ್ತ ಮರೆಸುತಲಿದ್ದುದಲ್ಲದೆ ನಿದ್ರೆಯನು ಕಾಡಿ" 🙂 chennagide
ನಿತ್ಯವಿಂಥಹ ಪದ್ಯ ಪಥ್ಯವು
ಸ್ತುತ್ಯ, ಮತಿ ಜಡ ರುಜಿನ ವಳಿಯುತ
ಕತ್ತಿಯಲಗಾಗುವುದು, ಥ್ಯಾಂಕ್ಯೂ ರಾಮಚಂದ್ರಾಖ್ಯ.
ನಿಮ್ಮ ಪದ್ಯದ ಪದಗರ್ಭ, ಪ್ರಾಸದ ಬೀಸು, ಲಯ ಚೆನ್ನಾಗಿದೆ. ಇನ್ನೂ ಸೊಗಸಾಗಲು ಮೂರನೇಸಾಲಿನಲ್ಲಿ ಅಲ್ಪ ಪರಿಷ್ಕಾರವಾದರೆ ಸಾಕು.
ಲೆತ್ತಿ ನಲಿದುದು ಕಾವ್ಯ ರಂಜನೆ ಕುತೂಹಲಿಗಳಲಿ = ಇಲ್ಲಿ ’ಕಾವ್ಯ ರಂಜನ’ ವರೆಗೆ ಛಂದವಾಗಿದೆ. ನಂತರ ಬರಬೇಕಾದ್ದು ೩, ೪, ಮತ್ತು ಕೊನೆಯ ಗುರು. ’ಕುತೂಹಲಿಗಳಲಿ’ ಯಲ್ಲಿ, ಮಾತ್ರಾಗಣನೆ ನಿಖರವಾಗಿದ್ದರೂ, ಕುತೂಹ, ಜಗಣವಾಗಿ, ಭಾಮಿನಿಯ ಅಡಿಗಳಿಗೆ ಕೊಂಚ ತೊಡರಾಗಬಹುದೇನೊ.
"ಲೆತ್ತಿ ನಲಿದುದು ಕಾವ್ಯ ರಂಜನೆ ಕುತುಕವಿಮ್ಮಡಿಸಿ" ಅಥವಾ "ಲೆತ್ತಿ ಕೊರಳನು ನರ್ತಿಪಳು ಭಾಮಿನಿ ನವ ಮಯೂರಿ" , ಅಥವಾ "ಲೆತ್ತಿ ನಲಿದುದು ಕಾವ್ಯ ರಂಜನೆ ಭಾವುಕರ ಮನದಿ (ಭಾವಕವಿಗಳಲಿ).
ಮೂಡಿಬರಲುಳಿದೆಲ್ಲನೀಡುಗರಿಂದಭಾಮಿನಿಗಳ್…
ಮೌಳಿ – ನಿಮ್ಮ ಮೆಚ್ಚುಗೆ ಮತ್ತು ಸಲಹೆಗಳಿಗೆ ಬಹಳ ಧನ್ಯವಾದಗಳು.
ಮೂರನೇ ಸಾಲಿನಲ್ಲಿ "ಕಾವ್ಯ ಕುತೂಹಲ" ತರಬೇಕೆಂದು ಕೊಂಚ ತೊಡಕಾದರೂ ಹಾಕಿಬಿಟ್ಟೆ 🙂
ಸರಿಯೇ. "ಕಾವ್ಯ ಕುತೂಹಲ" ತರಲೇಬೇಕೆಂದರೆ ಹೀಗೆ ಮಾಡಬಹುದೇನೋ..
ಲೆತ್ತಿ ನಲಿದುದು ಪ್ರತಿಬೆ ಕಾವ್ಯ ಕುತೂಹಲಿಗರೆದೆಯೊಳ್ ||
ಈ ದಿನದ ಇತರ ನೀಡುಗರ ಪದ್ಯಗಳನ್ನು ನೋಡಿದೆ. ಪರಿಷ್ಕಾರಗಳನ್ನು ಬ್ಲಾಗಿನಲ್ಲೇ ಸೂಚಿಸುವಷ್ಟು ಸರಳವಾಗಿಲ್ಲ. ಅವರಿಗೆ ಗುರುಮುಖೇನ ಮನವರಿಕೆಯಾದರೆ ಸರಿಯೆನಿಸಿ,ಅವುಗಳಬಗ್ಗೆ ನಾನು ಬರೆಯುತ್ತಿಲ್ಲ.
ನಮನ.
ಮೌಳಿ – ನಿಮ್ಮ ಪರಿಷ್ಕಾರ ಬಹಳ ಚೆನ್ನಾಗಿ ಹೊಂದುತ್ತದೆ. ಅದನ್ನು ಅಳವಡಿಸಿದ್ದೇನೆ.