Mar 152011
ಸರಳ ರಗಳೆ:
ಅತಿ ಸುಲಭವಾದ ಛ೦ದೋಬ೦ಧ. ೫ ಮಾತ್ರೆಗಳ ೪ ಗಣಗಳು ಪ್ರತಿ ಸಾಲಿನಲ್ಲಿ…ಆದಿ-ಅ೦ತ್ಯ ಪ್ರಾಸದ ರಗಳೆ ಇಲ್ಲವಾದ್ದರಿ೦ದ…ಇದು ಸರಳ ರಗಳೆ 🙂
ಹೊದೆದ ಕ೦ಬಳಿಸರಿದು ಹಿಮದಹನಿ ಕರಗಿರಲು
ಎಲೆರಾಶಿಯೆಲ್ಲೆಲ್ಲು ಭೂಗವಚದ೦ತಿರಲು
ಕೊರಳ ಕೋಗಿಲೆ ಕೊಡವಿ ದು೦ಬಿ ಮೈಮುರಿದಿರಲು
ಕಳೆಯುತಿದೆ ಮಾಘ ಜಗಕಾದಿಹುದು ಹೊಸತನಕೆ.
> ಕೊರಳ ಕೋಗಿಲೆ ಕೊಡವಿ ದು೦ಬಿ ಮೈಮುರಿದಿರಲು
ಈ ದೃಶ್ಯಾವಳಿ ಬಹಳ ಚೆನ್ನಾಗಿದೆ.
imagination ಚೆನ್ನಾಗಿದೆ 🙂
ಎಲೆರಾಶಿಯೆಲ್ಲೆಲ್ಲು ಭೂಗವಚದ೦ತಿರಲು….. ಹೊಲಿಕೆ ಚೆನ್ನಾಗಿದೆ
ನಮಸ್ಕಾರಗಳು
ರಗಳೆಗಳಲ್ಲಿ ಒಂದು ಪಾದದಲ್ಲಿ ನಾಲ್ಕು ಗಣಗಳು ಬರುವುದು.. ಎಂಟು ಗಣಗಳಿರುವ ಉತ್ಸಾಹ ರಗಳೆ ಇದೆಯೇ? ಬರೆಯಬಹುದೇ?
ದಯಮಾಡಿ ತಿಳಿಸಿ.
http://padyapaana.com/wp-content/uploads/2011/12/final-chandas.pdf
ತಮ್ಮ ಆಸಕ್ತಿಗಾಗಿ ಧನ್ಯವಾದಗಳು. ನಿಯತವಾಗಿ ಇಲ್ಲಿ ವಾರವಾರವೂ ಪದ್ಯರಚನೆಯಲ್ಲಿ ತೊಡಗಿಕೊಳ್ಳಿ. ಶುಭಾಶಯ.