Jan 012012
 

೨೦೧೨ರ ಮೊದಲ ವಾರದ ಸಮಸ್ಯೆ ::

ಕಂದ ಪದ್ಯದ ಸಾಲು :: ರಾಮಂ ರುಕ್ಮಿಣಿಯನೊಲ್ದು ಭರತನಿಗಿತ್ತಂ
ಪದ್ಯದ ಉಳಿದ ಸಾಲುಗಳನ್ನು ಪೂರೈಸಿರಿ

[ ಪದ್ಯ ಪಕ್ಷವು ಬಹಳ ಪೆಡಸಾಗಿ ಬೆಳೆದು, ಓದುಗರಿಗೆ ಕಷ್ಟವಾಗುವುದರಿಂದ, ಪ್ರತಿಯೊಂದು ವಿಭಾಗವನ್ನೂ ಬೇರೆ ಕವಲುಗಳಲ್ಲಿ ನಿಭಾಯಿಸಬೇಕೆಂದು ತೀರ್ಮಾನವಾಗಿದೆ. ಇದನ್ನು ಕೆಲ ದಿನಗಳು ಪ್ರಯತ್ನಿಸಿ ನೋಡೋಣ. ]

  16 Responses to “ಪದ್ಯ ಸಪ್ತಾಹ – ೧ – ೨೦೧೨ :: ಸಮಸ್ಯೆ”

  1. ಭಾಮೆಯಿಮಾಗ್ರಹಗೊಂಡಿರ-
    ಲಾಮಹರಾಜನುಮಶಕ್ತಭಾವದಿ ಕೊರಗಲ್
    ನೇಮವಿದುಮೆನುತ ನಿಸ್ಪೃಹ-
    ರಾಮಂ ರುಕ್ಮಿಣಿಯನೊಲ್ದು ಭರತನಿಗಿತ್ತಂ

    ಮಹರಾಜ = ಮಹಾರಾಜ
    ರುಕ್ಮಿಣಿ = ರಾಜ್ಯಲಕ್ಷ್ಮಿ
    ರಾಮನಿಗೆ ಮೊದಲು ಪತ್ತಭಿಷೆಕವಾಗಬೇಕಿತ್ತು ಹಾಗಾಗಿ ರಾಜ್ಯಲಕ್ಷ್ಮಿಯು ರಾಮನಿಗೆ ಒಲಿದಿದ್ದಳು ಎಂದು ಅರ್ಥ ಮಾಡಿದ್ದೇನೆ

    • I am out of station, difficult to get the internet connection. Hence pl expect my feedback after 6th. Any way, your haLagannaDa vyaakaraNa has to be mended as some of the usages are wrong. Pl have a fast crash course of the same to the interested in the early future it self:-)

  2. ಸೋಮರಘುಕುಲದೊಳಾರೈ?
    ರುಕ್ಮಿಯ ಛಲಮಂ ಮುರುಂಟಿಸಿರ್ದೆನಿತೆನೆ ಪೇಳ್?
    ಲಕ್ಷ್ಮಿಯ ದುಷ್ಶಂತನಾರಿಗಿತ್ತಂ?
    ರಾಮಂ, ರುಕ್ಮಿಣಿಯನೊಲ್ದು, ಭರತನಿಗಿತ್ತಂ

    ಮುರುಂಟು = ಬಾಗಿಸುವುದು
    ಲಕ್ಷ್ಮಿ = ರಾಜ್ಯಲಕ್ಷ್ಮಿ

    • aadipraasa?????

      • ಗಣೇಶ್ ಸರ್,
        ಸೋಮ, ರುಕ್ಮಿ (ರುಕ್+ಮಿ) ಹೀಗೆ ಆದಿ ಪ್ರಾಸವಾಗಬಹುದೇನೋ ಆಗಬಹುದೇನೋ ಎಂದು ತಿಳಿದಿದ್ದೆ. ತಪ್ಪು ಎಂದು ಗೊತ್ತಾಯಿತು. ಹೀಗೆ ಬಳಸುವುದಿಲ್ಲ

  3. ಭೂಮಿಜೆಯರಸನದಾರ್? ಸಂ-
    ಗ್ರಾಮದಿ ಹರಿಯಾರನೊಲ್ದು ಹರಿಸಿದ, ನಾರ್ಗಂ
    ರಾಮಂ ನೀಡಿದ ಪಾದುಕೆ
    ರಾಮಂ ರುಕ್ಮಿಣಿಯನೊಲ್ದು ಭರತಂಗಿತ್ತಂ

    ಭೂಮಿಜೆಯರಸನದಾರ್? ರಾಮಂ
    ಸಂಗ್ರಾಮದಿ ಹರಿಯಾರನೊಲ್ದು ಹರಿಸಿದನ್? ರುಕ್ಮಿಣಿಯನೊಲ್ದು
    ಆರ್ಗಂ ರಾಮಂ ನೀಡಿದ ಪಾದುಕೆ? ಭರತಂಗಿತ್ತಂ

  4. ರಾಮಂ ನೀಡಿದ ವಾಕ್ಯಮಿ
    ದೀಮಹಿಯೊಳಗಸನ ಕತ್ತೆ ದೊಂಬರಿಗಿತ್ತಂ
    ತಾ ಮನೆ ಮಾತ ನೆನೆಸುಗುಂ
    ರಾಮಂ ರುಕ್ಮಿಣಿಯನೊಲ್ದು ಭರತಂಗಿತ್ತಂ

  5. ಕಾಮಂ ಬಾಲೆಯ ಕಾರಣ
    ತಮ್ಮನ ಸಂಗಡವೆ ಕದ್ದನವಳಂ ಬಲದಿಂ
    ರಾಮನೆ ತಾನೆನ್ನುತ ಬಲ
    ರಾಮಂ ರುಕ್ಮಿಣಿಯನೊಲ್ದು ಭರತನಿಗಿತ್ತಂ

    ತಾನು ರಾಮನೆ ಎಂದು ಆರೋಪಿಸಿಕೊಂಡ ಬಲರಾಮನಿಗೆ, ತಮ್ಮ ಕೃಷ್ಣ ಭರತನೆಂಬ ಭಾವ ಮೂಡಿತು ಎಂಬ ಕಲ್ಪನೆ.

  6. ಕಾಮಿಯಬಲೆಯಿಂ ರಕ್ಷಿಸಿ
    ಭೂಮಿಜೆಯಂ ತಾ ಪವಿತ್ರಳೆಂಬುದನರಿತುಂ
    ನೇಮವನುಂ ಪಾಲಿಸಲ್ಕೆ
    ರಾಮಂ ರುಕ್ಮಿಣಿಯನೊಲ್ದು ಭರತಂಗಿತ್ತಂ

    ರಾಮನಿಗೆ ಸೀತೆಯ ಪಾವಿತ್ರ್ಯತೆಯಬಗ್ಗೆ ತಿಳಿದಿದ್ದರು (ಜಗತ್ತಿನ ಸಂದೇಹ ನಿವಾರಣೆಗೆ) ಸೀತೆಯನ್ನು ಒಲೈಸಿ ಅಗ್ನಿ ಪರೀಕ್ಷೆ ನಿಯಮವನ್ನು ಪಾಲಿಸಿದನು
    ರುಕ್ಮಿಣಿ = ಸೀತೆ (ಹೊಳಪಿಂದ ಕೂಡಿರುವವಳು ಎಂಬ ವಿಶೇಷಣ ಬಳಸಿದ್ದೇನೆ)
    ಭರತ = ಅಗ್ನಿ

  7. ಭಾಮೆಯತಿರಕ್ತಿಯಾಪ-
    ತ್ರಮಂ ಕರುಣೆಯಿಂದಮೋದಿ,ತನ್ನೋಲೆಯೊಳಂ
    ಶ್ಯಾಮಂ ಸಮಸ್ತಲೋಕಾ-
    ರಾಮಂ ರುಕ್ಮಿಣಿಯನೊಲ್ದು, [ಓಲೆಯಂ]ಭರತಂಗಿತ್ತಂ

    • ಕಥೆಯಲ್ಲಿ, ಸುನಂದ ರುಕ್ಮಿಣಿಯ ಪತ್ರವನ್ನು ತರುತ್ತಾನಾದರೂ, ಇಲ್ಲಿ ಭರತ = hired soldier = ಸುನಂದ ಎಂದು ಅರ್ಥೈಸಬಹುದೇ?

  8. ಜಾಮಾತೃಮತಿಚೆಲುವನಂ
    ಸೀಮಂತ ಹೃದಯಿಯನೇ ಬಯಸಿದ ಕುವರಿಗಂ |
    ಸಾಮ್ಯಂ ಕಂಡೀ ಗುಣಗಳ
    ರಾಮಂ ರುಕ್ಮಿಣಿಯನೊಲ್ದು ಭರತನಿಗಿತ್ತಂ ||

    ರಾಮ = ತಂದೆ
    ರುಕ್ಮಿಣಿ = ಮಗಳು
    ಭರತ = ಅನುರೂಪನಾದ ಅಳಿಯ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)