Jan 082012
 

ನಾನಾ, ನೀನೀ, ನುನು, ನೆನೆ ಪದಗಳನ್ನು ಬಳಸಿ, ನಿಮ್ಮಿಷ್ಟದ ಛಂದಸ್ಸಿನಲ್ಲಿ ಸಂಕ್ರಾಂತಿಯ ಬಗ್ಗೆ ಪದ್ಯ ಬರೆಯಿರಿ

  22 Responses to “ಪದ್ಯ ಸಪ್ತಾಹ – ೨ – ೨೦೧೨ :: ದತ್ತ ಪದಿ”

  1. ನಾನಾ ತೆರನುತ್ಸವದೊಳ್
    ನೀನೀಕ್ಷಿಸುವೊಡೆ ವಿಶಾಲದನ್ವಯಮರ್ಥಂ|
    ಜಾನುವನು ನುಲಿಸಿ ಗೇವನು
    ತಾನಹ ಸಂಕ್ರಾಂತಿ ನಾಯಕನ್ ನೆನೆ ರೈತಂ||

    • ಅರ್ಥ ಸ್ಪಷ್ಟವಾಗಲಿಲ್ಲ. ದಯಮಾಡಿ ವಿವರಿಸುವಿರಾ?

      ಎನ್ನಯ ಪದ್ಯಂಗಳ ಪುರು-
      ಳನ್ನರಿಯಲ್ ಕಷ್ಟಮೆನಗುಮಪ್ಪುದೆನಲ್ ಮೇ-
      ಣಿನ್ನಪ್ಪುದೆ ಪೆರರ್ಗೆ ಸೊಗಂ?
      ಖಿನ್ನಂ ನಾನಲ್ತು ರಂಗನಾಥ! ಮಲಂಗಯ್!!

      • ರಂಗನಾಥ ಮಲಂಗಯ್… ಸೂಪರ್ರು 🙂

        ಅದು ಸರಿ, ನಿಮ್ಮೀ ಪದ್ಯ ರಂಗನಾಥರ ಈ ಪದ್ಯಕ್ಕೆ ಪ್ರತಿಕ್ರಿಯೆಯೋ ಅಥವಾ ಹಿಂದಿನ ಚಿತ್ರಕವಿತೆಯ ಥ್ರೆಡ್ಡಿನಲ್ಲಿ ಅವರು ತಮ್ಮನ್ನು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯೋ? Confused…

        • ಒಳ್ಳೆಯ ಪ್ರಶ್ನೆ! ನಿಮ್ಮ ಸಂದೇಹ ಸರ್ವಥಾ ಸಲ್ಲುವಂಥದ್ದು; ನಾನಿಲ್ಲಿ ಏಕಕ್ರಿಯಾ ದ್ವರ್ಥಕರೀ ಬಭೂವ ಎಂಬಂತೆ ಮಾಡಿದ್ದೇನೆ:-)
          ಮಾಮರನ ತೋಟದೊಳ್ ತರ್ಪಣವನೆರೆದಿರ್ದನೊರ್ವ ಪಾರ್ವಂ ಜಾಣ್ಮೆಯಿಂ|
          ಮಾಮರಕೆ ನೀರಾಯ್ತು, ಪಿತೃಗಳ್ಗೆ ಮುದಮಾಯ್ತು ಲೋಕೋಕ್ತಿಯಿದು ವಿಶ್ರುತಂ||

  2. ಮಲಂಗಯ್. LoL.
    ಹಬ್ಬಗಳನ್ನು ಬ್ರಾಹ್ಮಣ, ಕ್ಷಾತ್ರ, ವೈಶ್ಯ, ಶೂದ್ರ ಎಂದು ವಿಂಗಡಿಸಿ ತಿಳಿಸಿರುವಿರಿ. ಶಂಕ್ರಾಂತಿಯು ವೈಶ್ಯನ ಹಬ್ಬ. ಮಂಡಿಯನ್ನು ಚೆನ್ನಾಗಿ ದುಡಿಸಿ ದುಡಿಯುವ ರೈತನಿಗೆ ಶರಣು. ಪದ್ಯದಲ್ಲಿ ಅಖಂಡತೆ (continuity) ಸೊರಗಿದೆ ನಿಜ. ಇನ್ನೂ ತುಂಬ ಕಲಿಯುವುದಿದೆ ನಾನು!

    • ಆಹ! ಪ್ರಸಾದರ ಪ್ರೌಢಹಾಸ್ಯದ ಪರಿಗೆ
      ಮೋಹಿತಳ್ ಪದ್ಯಪಾನದ ಶಾರದೆ|
      ಗಾಹಿಸಿ ಗಣೇಶಭಾಷಣವನಲ್ಲಿಂದಲೇ
      ಸ್ವೇಹಿತದ ಸಾಕ್ಷ್ಯಗಳ ತರುತಿರ್ಪಿರಯ್!!

      ಕತ್ತೆಯು ಬೆನ್ನೊಳ್ ಭರದಿಂ
      ಪೊತ್ತಿರ್ಪ ಬಲಿಷ್ಠಮಪ್ಪ ದೊಣ್ಣೆಗಳಿಂದಂ|
      ಧುತ್ತನೆ ಸೆಳದೊಂದಂ ಮೇಣ್
      ಕತ್ತೆಯನೇ ಬಡಿವ ಬಣಜಿಗನ ಜಾಣ್ ನಿಮ್ಮಾ!!

      • ಬಡಿತಂ ತಿಂಬುವನಾರೈ
        ತಡೆಯದೆ ಸಾಮಗ್ರಿ ನೀಡ್ಪ ಗೆಳೆಯಂ ರಂಗಂ |
        ಬಡಿಯುತಲೆ ಯವರ ಮೇಲೀ
        ಕಡುವಾರೋಪ ಸರಿಯೇಂ ಮುಗುದಂ ಪಾಪಂ ||
        🙂

  3. ಅಯ್ಯೋ! ಶಾಂತಂ ಪಾಪಂ.
    ನಿಮ್ಮ ಏಕಕ್ರಿಯಾ ‘ಕಾರ್ಯ’ಕ್ಕೆ ಧನ್ಯವಾದಗಳು!

  4. “ಕಾವ್ಯ ಪ್ರಾಕಾರದ ಹಿಂದು ಮುಂದನ್ನರಿಯದಲೆ ನಡೆಸಿದ ಪ್ರಯತ್ನವಿದು…..ದಾರಿ ತೋರುವಿರೆಂದು ನಂಬಿರುವೆ”

    ನಾನಾರೆಂಬುದನರಿಯದೆಲೆ
    ಬರದುದೀ ಪದ್ಯವನೀನೀಕ್ಷಿಸಿ
    ತಪ್ಪನುನುಂಗಿ ಹಂಸದಂತೆ
    ದಾರಿ ತೋರಿಸು ನೆನೆವೆನು ನಿನ್ನ….

    • ರಮೇಶ ಜೋಯಿಸರೆ,
      ಪದ್ಯಪಾನಕ್ಕೆ ಸ್ವಾಗತ. ಈ ಪದ್ಯವು ಸಂಕ್ರಾಂತಿಯ ವರ್ಣನೆಯಾಗಬೇಕೆಂದಿತ್ತು. 🙂
      ಕಾವ್ಯ ಪ್ರಕಾರಗಳ ಬಗ್ಗೆ ತಿಳಿಯಲು, ಸಕಷ್ಟು ಸರಕು ಇಲ್ಲಿದೆ. ಪುಟದ ಮೇಲ್ಬಾಗದಲ್ಲಿ, “Learn Prosody – ಪದ್ಯ ವಿದ್ಯೆ” ಎಂಬ ಕೊಂಡಿಯ ಕೆಳೆಗೆ ವಿಡಿಯೊ ಹಾಗು ಓದಲು ಸಾಮಗ್ರಿಗಳಿವೆ. ದಯವಿಟ್ಟು ಪರಿಶೀಲಿಸಿ.

      • ನಿಯಮಗಳನ್ನು ಅನುಸರಿಸದೇ……….ಅವಸರದಲ್ಲಿ…….ರಚಿಸಿದ್ದು. ತಮ್ಮ ಸೂಚನೆಗಳನ್ನು ಗಮನಿಸುವೆ……..ಅನುಸರಿಸಲು ಪ್ರಯತ್ನಿಸುವೆ……….ದಾರಿ ತೊರಿಸಿ…..

        • ಜೋಯಿಸರೆ – ಏನು ತೊಂದರೆಯಿಲ್ಲ. ನಿಮ್ಮ ಇಚ್ಛೆಯ ಛಂದಸ್ಸೊಂದನ್ನು ಆಯ್ದುಕೊಳ್ಳಿ. ಅದರ ಗಣಗಳ ವ್ಯವಸ್ಥೆಯನ್ನು ಗಮನಿಸಿರಿ. ಆ ಛಂದಸ್ಸಿನ ಓದುವ ಧಾಟಿ ಅಭ್ಯಾಸ ಮಾಡಿಕೊಳ್ಳಿ. ನಂತರ ಪದಗಳನ್ನು ಧಾಟಿಗೆ ಕೂಡಿಸುವುದಷ್ಟೇ ಕೆಲಸ.
          ಪದ್ಯ ರಚನೆಗೆ ತೀರ ಹೊಸಬರಾಗಿದ್ದರೆ, ಗೊತ್ತಿರುವ ಪದ್ಯಗಳನ್ನು ತೆಗೆದುಕೊಂಡು, ಅದೇ ಛಂದಸ್ಸಿಗೆ ಬೇರೆ ಪದಗಳನ್ನು ಜೋಡಿಸಬಹುದು. ಉದಾ :: “ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ …”, “ಬಾಳೆಯ ತೋಟದ ಪಕ್ಕದ ಕಾಡಲಿ …”, ಗೋವಿನ ಹಾಡು, ಮಂಕುತಿಮ್ಮನ ಕಗ್ಗದ ಪದ್ಯಗಳು ಇತ್ಯಾದಿ.
          ಒಮ್ಮೆ ಇಲ್ಲಿರುವ ಎಲ್ಲ ಕಲಿಕಾ ವಿಡಿಯೊಗಳನ್ನು ನೋಡಿ. ಬಿಡದೆ ಪ್ರಯತ್ನ ಮಾಡುತ್ತಿರಿ. ಅದರಿಂದಲೇ ಸಫಲತೆ. ಒಂದು ವರ್ಷದ ಕೆಳಗೆ ಒಂದೂ ಪದ್ಯ ಬರೆಯದೆ ಇದ್ದು ಈಗ ಇಲ್ಲಿ ಬರೆಯುತ್ತಿರುವವರು ಸುಮಾರು ಜನರಿದ್ದೇವೆ 🙂

    • ಕಾವ್ಯ ಪ್ರಾಕಾರದ ಹಿಂದು ಮುಂದನ್ನರಿಯದಲೆ…..
      jOyisarige padyapAnakke svAgata. I do not know much about padya. I will reflect on a word in that entry of yours. prAkAra means compound/ periphery. It should rather be ‘prakAra’, which mean type, variety etc.

      • yes u r absolutely right……..but the word is derived as Thadditha of PrakAra. (derivation of the word prAkara)..Any how I will make it a point to note in my mind..Thanks a lot

  5. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು 🙂

    ಹಳ್ಳಿಗಳಲ್ಲಿ ವಿಶೇಷವಾಗಿ ಗೋವುಗಳನ್ನು ಸಿಂಗರಿಸಿ ಬೆನ್ಕೊಯಮೇಲೆ ಹಾಯಿಸಿ ಸಂಕ್ರಾಂತಿಯನ್ನು ಆಚರಿಸುತ್ತಾರೆ, ಅದರಬಗ್ಗೆ ಪ್ರಯತ್ನ

    ಸಿಂಗರಿಸುವೆನಾನಾಕಳ ಹರುಷದಿ
    ಸಂಗವ ನೀನೀವೆಯೆಯೆಂದು
    ಪೊಂಗುಡುಪನುನುಂದಿಸೆಶ್ರಮವುಡಸುತ
    ಛಂಗನೆನೆಗೆಸುತಲಗ್ನಿಯನು

    ನುಂದು = ನೊಂದು = ಆರಿಸು => ನುಂದಿಸೆಶ್ರಮ = ಶ್ರಮವನ್ನು ಆರಿಸು/ಕಡಿಮೆ ಮಾಡು

  6. ನಾನಾ ತೆರನೊಳು ಭಾರತ ನೆಲದೊಳ-
    ದೇನೀ ನೀಗದ ಸಂಭ್ರಮವು!
    ಬಾನಂಗಳದೊಳು ರವಿಜಯ ನೆನೆದುಂ
    ಜ್ಞಾನದ ಗತಿವನು ನುತಿಸುತಿವೆ
    [ಇನ್ನು ಹಗಲು ಜಾಸ್ತಿ, ಕತ್ತಲೆ ಕಡಿಮೆ.]

    • good versification. But bhaaratnela is an arisamaasa:-) should it not be gatiyanu?

      • ಗಣೇಶರೆ, “ನೆಲ ಜಲ” ದಲ್ಲಿ ನೆಲ ಕನ್ನಡಪದ ಎಂದು ತಿಳಿದು ಆಶ್ಚರ್ಯವಾಯ್ತು. ಸರಿಪಡಿಸಿದ್ದೇನೆ:
        ನಾನಾ ತೆರನೊಳು ಭಾರತಮನದೊಳ-
        ದೇನೀ ನೀಗದ ಸಂಭ್ರಮವು!
        ಬಾನಂಗಳದೊಳು ರವಿಜಯ ನೆನೆದುಂ
        ಜ್ಞಾನದ ಗತಿಯನು ನುತಿಸುತಿವೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)