Feb 052012
 

ನಿಮಗಿಷ್ಟವಾದ ವಿಷಯದ ಬಗೆಗೆ,  ಯಾವುದಾದರೂ ವರ್ಣವೃತ್ತದಲ್ಲಿ ಒ೦ದು ಪದ್ಯ ರಚಿಸಿ.

  7 Responses to “ಪದ್ಯಸಪ್ತಾಹ – ೬ – ೨೦೧೨ – ಲಹರಿ”

  1. ಸತ್ಕಾಲ ಬಂದುದು ಕಣಾ ನಮಗಂ ಇದೀಗಳ್
    ಚಿತ್ಕಾವ್ಯರಾಜನಿವಗಂ ಮಹಿಷೂರ ವಾಸನ್|
    ಸತ್ಕಾರಣಂ ಒದಗಿತಯ್ ಬರಲೀ ಶಹರ್ಗಂ (ಬೆಂಗಳೂರು)
    ತತ್ಕಾರದಿಂ ಕುಣಿವೆ ನಾನಿವನಾಗಮಕ್ಕಂ|| (ತತ್ಕಾರ್ = The dance syllables that are produced from stomping)

    Friends, Sri Manjunath Kollegala is relocating to Bengaluru wef 06.02.2012.

    ಶ್ರೀ ಗಣೇಶರೆ,
    ವಸಂತತಿಲಕ ಸಂಸ್ಕೃತದ ವೃತ್ತವಾದರೂ, ಕನ್ನಡದಲ್ಲಿ ರಚಿಸಿದಾಗ ಆದಿಪ್ರಾಸ ಕಡ್ಡಾಯವೆ?
    ಮೇಲಿನ ಪದ್ಯದಲ್ಲಿ ಎರಡನೆ ಪಾದದ ಆದಿಪ್ರಾಸದಲ್ಲಿ ದೋಷವಿದೆಯೆ?

    • aadi praasa is fine on all the lines. but, ನಮಗಂ ಇದೀಗಳ್, a sandhi is possible here but not made… and similarly here – ಸತ್ಕಾರಣಂ ಒದಗಿತಯ್….
      if you are writing in kannada, aadi praasa is mandatory.
      similar to vasantha tilaka there are many varNa vRuttas in which our aadi kavi and co. composed and did not leave aadi praasa…

  2. ಗಣೇಶ್ ಸರ್,

    ನನಗೆ ವಂಶಸ್ಥ ವೃತ್ತದಲ್ಲಿ ಸಂಸ್ಕೃತದಲ್ಲಿ ಬರೆಯುವಾಗ ಆದ ತೊಂದರೆಯನ್ನೆ ವಸ್ತುವಾಗಿಟ್ಟು ಬರೆಯಲು ಯತ್ನಿಸಿದ್ದೇನೆ. ದಯವಿಟ್ಟು ತಿದ್ದಬೇಕು

    विवक्षुरुत्साहप्रचोदितं मा विचिन्त्य वंशस्तनिरूपणार्थी
    विलोलशब्दस्मृतिसंपदेन विविक्तभावे बभूव क्षुब्धः

    • ಗಣೇಶ್ ಸರ್,
      ನಾನು ಬರೆದ್ದು ವಂಶಸ್ಥವೇ ಅಲ್ಲವೆಂದು ತಿಳಿಯಿತು. ಸರಿಪಡಿಸಿದ್ದೇನೆ. ತಿದ್ದಬೇಕು

      विवक्षुरुत्साहप्रचोदितं मा विचिन्त्य पद्यानि निरूपणार्थी
      विलोलशब्दस्मृतिसंपदेन उपेन्द्रवज्रं च बभूव क्लिष्टम्

      • Dear Soma, I am very happy that you are after Sanskrit versification too. There is little difference between the two metres vamshastha and upendravajra. In your versification there are few metrical and grammatical errors. I shall show the corrections and teach you the “secret” of vamshastha in tomorrow’s class.

        • Ganesh Sir,

          Again pardon me, missed this comment and the class too 🙁

          I shall talk to you regarding this in the next raghuvamsha class

  3. ಭರ್ತೃಹರಿ ವೈರಾಗ್ಯ ಶತಕದ ಎರಡು ಪದ್ಯಗಳ ಭಾವಾನುವಾದ. ಅಮೋಘವಾದ ಪದ್ಯಗಳ ಅನುವಾದ ಕಳಪೆಯಾದಲ್ಲಿ ಕವಿಯ ಕ್ಷಮೆ ಕೋರಿ ::

    ಏನಾರಮ್ಯಪುರಂ ಮಹಾನೃಪತಿಯಾ ಸಾಮಂತರಾ ಸಂಭ್ರಮಂ
    ಪೀನಾಂಗೀಸುರಕಾಮಿನೀ ಬಳಗಗಳ್ ಧೀಮಂತ ಮಂತ್ರೀಕುಲಂ
    ಗಾನಾನೃತ್ತಕಲಾಪಗಳ್ ತನುಜರಾ ಕೌಮಾರ್ಯದಾ ಭೋಗಗಳ್
    ಮೇಣಾವೈಭವ ಕೇವಲಂ ನೆನಪಿನೊಳ್ ಸಂದಿರ್ಪ ಕಾಲಂ! ನಮೋ

    [ಮೂಲ ಶಾರ್ದೂಲ ವಿಕ್ರೀಡಿತದಲ್ಲಿದೆ. ಅನುವಾದವೂ ಅದೇ ಛಂದಸ್ಸನ್ನು ಹಿಡಿದಿದೆ]

    ತಿರುಗಲ್ ದೇಶಮನೇಕದುರ್ಗಕಠಿಣಂ ದಕ್ಕಲ್ದದೊಂದೂ ಫಲಂ
    ವರಜಾತೀಕುಲಮಾನಮೆಲ್ಲ ತೊರೆದುಂ ಹೀನಾತ್ಮರಂ ಸೇವಿಸಲ್
    ಪೊರೆಯಲ್ ಪೊಟ್ಟೆಯ ಲಜ್ಜೆಬಿಟ್ಟುಣುತಿರಲ್ ಎಲ್ಲೆಂದರಲ್ ಕಾಗೆಯೊಲ್
    ಮೆರೆವಾತೃಷ್ಣವೆ ನೀ ವಿಜೃಂಭಿಸುವೆಯೇಂ ನಿಂಗಿಲ್ಲಮೇ ತುಷ್ಟಿಯುಂ

    [ಮೂಲ :: ಶಾರ್ದೂಲ ವಿಕ್ರೀಡಿತ; ಅನುವಾದ :: ಮತ್ತೇಭ ವಿಕ್ರೀಡಿತ]
    [ತೃಷ್ಣ – ಅತಿಯಾಸೆ; ತುಷ್ಟಿ – ತೃಪ್ತಿ]

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)