ಹೌದು. ನ೦ ಬಳಕೆಯೇ ಸರಿ ಅನ್ನಿಸುತ್ತಿದೆ.
ಅಮ್ ಅಥವಾ ಅನ್ ಎ೦ಬ ದ್ವಿತೀಯದ ಪ್ರತ್ಯಯ, ವ೦ ಆಗಿ ಬಳಕೆಯಾಗುವುದು ನಪು೦ಸಕಕ್ಕೆ ಹೆಚ್ಚು. ಪುಲ್ಲಿ೦ಗಕ್ಕೆ ನ೦ ಅಥವಾ ನನ್ ಆಗಬೇಕಿತ್ತು ಅನ್ನಿಸುತ್ತಿದೆ. ಇನ್ನೊಮ್ಮೆ ಪರಿಶೀಲಿಸುವೆ.
ಎರಡನೆ ಪದ್ಯದಲ್ಲಿದ್ದ ವ್ಯಾಕರಣ ದೋಷ ಸರಿಪಡಿಸುವ ಯತ್ನ ::
ತನ್ನ ಜೀವನಕದನ್ನ ನೀಡುವಂ
ಬೆನ್ನ ಮೇಲೆ ಬಿಗಿದಾಗ ಪೆಟ್ಟುಗಳ್
ಕುನ್ನಿ ಭಾಷೆಯೊಳು, ನೋವ ತಿಂದವಂ
ತನ್ನ ಘಾತಿಸಿದನಂ ಪೊಗಳ್ದನಯ್
[ ಶ್ವಾನಕ್ಕೆ ಪುಲ್ಲಿಂಗ ಉಪಯೋಗಿಸಿದ ತೊಡಕು, ಸಮಸ್ಯೆ ಹಾಗು ಈ ಪರಿಹರದ ಪ್ರಾಕಾರದಲ್ಲಿ, ಉಳಿಯುತ್ತದೆ]
ಸೋಮ, ರಾಮ್, ಕಾಂಚನ ಮುಂತಾದವರುಗಳ ಪರಿಹಾರಗಳೆಲ್ಲ ಸೊಗಸಾಗಿವೆ. ರಾಮ್ ಸ್ವಲ್ಪ ವ್ಯಾಕರಣವನ್ನು ಗಮನಿಸಿಕೊಂಡರೆ ಒಳಿತು:-) ಪ್ರಸಾದರಲ್ಲಿ ಅರ್ಥಸ್ಪಷ್ಟತೆ ತಗ್ಗಿದೆ.
ಈ ಸಮಸ್ಯೆಗೆ ನನ್ನ ಪರಿಹಾರವಿಂತಿದೆ:
ಅವಧಾನದಲ್ಲಿ ಸಮರ್ಥನಾದ ಅವಧಾನಿಯು ತನ್ನನ್ನು ಕಾಡುವ ಪ್ರಶ್ನೆಗಳನ್ನೊಡ್ಡುವ ಪೃಚ್ಛಕನನ್ನು ಸಮುಚಿತವಾಗಿ ಉತ್ತರಿಸುತ್ತಲೇ ಅವನನ್ನು ಮೆಚ್ಚುವ ಸಂದರ್ಭವನ್ನು ಗಮನಿಸಿ ಈ ಪರಿಹಾರ ಮೂಡಿದೆ.
ಮುನ್ನಮೈನಕನುನೀರಲೆದ್ದುದ೦
ಭಿನ್ನಭಾವಿಸಿಕಪೀ೦ದ್ರ ಘಾತಿಸಲ್
ತನ್ನಪೂರ್ವಋಣಜಾನಿಸುತ್ತಲು೦
ತನ್ನ ಘಾತಿಸಿದನ೦ಪೊಗಳ್ದನಯ್
[ಹನುಮ೦ತನ ಸಾಗರೋಲ್ಲ೦ಘನದ ಸಮಯದಲ್ಲಿ, ಸಮುದ್ರರಾಜನು ತನ್ನ ಮತ್ತು ಮೈನಾಕ ಪರ್ವತನಿಗಿರುವ ಇಕ್ಷ್ವಾಕು ವ೦ಶದ ಋಣವನ್ನು ನೆನೆದು, ಮೈನಾಕನಿಗೆ, “ಸಾಗರದಿ೦ದ ಮೇಲೆದ್ದು, ನೂರು ಯೋಜನವನ್ನು ಒಮ್ಮೆಗೇ ಹಾರುತ್ತಿರುವ ಹನುಮ೦ತನಿಗೆ ನಿನ್ನಲ್ಲಿ ವಿಶ್ರಾ೦ತಿ ತೆಗೆದುಕೊಳ್ಳಲು ಸಹಾಯಮಾಡು ಎನ್ನುತ್ತಾನೆ”. ಆಗ, ಇದ್ದಕ್ಕಿದ್ದ ಹಾಗೆಯೇ ಸಮುದ್ರದಿ೦ದ ಮೇಲೆಬ೦ದ ಪರ್ವತವನ್ನು ನೋಡಿದ ಹನುಮ೦ತ, ವೈರಿಯೆ೦ದು ತಿಳಿದು ಮೈನಾಕನನ್ನು ಹೊಡೆಯುತ್ತಾನೆ. ಆದರೆ, ಅದಕ್ಕೆ ಕೋಪಗೊಳ್ಳದೇ ಮೈನಾಕನು ಹನುಮ೦ತನ ತ೦ದೆಯ ಋಣವನ್ನು ನೆನೆದು, ಅವನನ್ನು ಹೊಗಳುತ್ತಾನೆ]
ಹೌದು 🙂 ಈ ಛ೦ದಸ್ಸಿನಲ್ಲಿ, “ನ್ನ” ಆದಿಪ್ರಾಸದೊ೦ದಿಗೆ, ಮೈನಾಕನನ್ನು ತರಲಾಗುವುದೇ ಇಲ್ಲವಲ್ಲ….ಹಾಗಾಗಿ ’ನಾಕ’ ವನ್ನು ’ನಕ’ ವಾಗಿಸಿದ್ದೇನೆ….. ಕುಮಾರವ್ಯಾಸನ “ನಾರಯಣ” ತರಹ :-)….ಆದರೆ, ಅವನು ಇಲ್ಲಿ ಕಳೆದದ್ದನ್ನು ತನ್ನ ಪ್ರತಿಭೆಯಿ೦ದ ನೂರುಪಟ್ಟು ತು೦ಬಿದ್ದಾನಷ್ಟೆ…
ಹಳೆಗನ್ನಡದ ಓದು ಮತ್ತಷ್ಟು ನಡೆಸಿ ಮತ್ತಷ್ಟು ಒಪ್ಪವನ್ನು ಸಾಧಿಸುವ ಪ್ರಯತ್ನಮಾಡುತ್ತೇನೆ…
ಚೆನ್ನದಿ೦ ಸೆಣಸಿ ಯುದ್ಧಮ೦ ಜಿತ೦
ಸನ್ನಿವಿಷ್ಟಮನದಿ೦ ವಿರಾಗಸ೦-
ಪನ್ನನಾಗಲವನಗ್ರಜ೦ ಸ್ವತಃ
ತನ್ನ ಘಾತಿಸಿದವ೦ ಪೊಗಳ್ದನಯ್
ಬಾಹುಬಲಿಯ ಬಗ್ಗೆ
ಚೆನ್ನಾಗಿದೆ. ಬಾಹುಬಲಿ-ಭರತರ ಯುದ್ಧದ ಸನ್ನಿವೇಶ ಔಚಿತ್ಯವಾದದ್ದು.
1.ತನ್ನ ಕೌರವಪಕ್ಷದಿಂದ ತಾಂ
ಮುನ್ನ ಭೀಷ್ಮ ಸಮರಕ್ಕೆ ಪೊಕ್ಕನೈ
ಬನ್ನಮಂ ತರುವನಾ ಧನಂಜಯಂ
ತನ್ನ ಘಾತಿಸಿದವಂ ಪೊಗಳ್ದನಯ್|
2.ಜೊನ್ನದೊಳ್ ವಿರಹದಿಂದ ತಪ್ತನಾ-
ತನ್ನ ಪೀಡಿಸುವನಂ ಮೃಗಾಂಕನಂ
ಮುನ್ನ ವೀಕ್ಷಿಸಿನಿಯೆದೃಷ್ಟಿ ಕಂಡವಂ
ತನ್ನ ಘಾತಿಸಿದವಂ ಪೊಗಳ್ದನಯ್|
(“ಧೂಮದೂತ”ದಲ್ಲಿ ಗಣೇಶ್ ಅವರು ಹೇಳಿದ ಕವಿಸಮಯ “ವಿರಹಿಗಳಾದವರು, ‘ಚಂದ್ರನನ್ನು ನೋಡಿದಾಗಲಾದರೂ ತಮ್ಮ ಪ್ರಿಯರ ದೃಷ್ಟಿಯನ್ನು ಸೇರಬಹುದು’ ಎಂಬುದರ ಆಧಾರದಿಂದ.)
ಗಣೇಶರೇ, ಎರಡೂ ಪೂರಣಗಳು ಚೆನ್ನಾಗಿವೆ. ಶೃ೦ಗಾರದ ಪೂರಣ ವಿಭಿನ್ನವಾದದ್ದು. ಕಾಡುವ ಚ೦ದ್ರನನ್ನೇ ಮತ್ತೆ ಹೊಗಳುವ ಸನ್ನಿವೇಶ ಸೃಷ್ಟಿ ತು೦ಬ ಸೊಗಸಾಗಿದೆ.
ಧನ್ಯವಾದಗಳು
ಗಣೇಶರೇ,
ನಿಮ್ಮ ಪರಿಹಾರಗಳು ಬಹಳ ಚೆನ್ನಾಗಿದೆ. ಎರಡನೆಯ ಪರಿಹಾರದ ಕಲ್ಪನೆ ಅದ್ಭುತ!
“ತನ್ನ ಕೌರವರಪಕ್ಷದಿಂದ ತಾಂ” ಎ೦ದು ಮಾಡಿದರೆ ಛ೦ದಸ್ಸು ಸರಿಯಾಗುವುದು ಅನಿಸುತ್ತದೆ
ಧನ್ಯವಾದಗಳು,
“ತನ್ನ ಕೌರವರ ಪಕ್ಷದಿಂದ ತಾಂ” ಎಂದೇ ಮಾಡಿಕೊಂಡಿದ್ದೆ. ಟೈಪು ಮಾಡುವಾಗ ವ್ಯತ್ಯಾಸವಾಯಿತಿರಬೇಕು.
ಸೊಗಸಾದ ಪೂರಣ
ಧನ್ಯವಾದಗಳು ಸರ್:-)
ಶಿಷ್ಟ ಏಳು ಜನ್ಮ ಬೇಡ, ದುಷ್ಟ ಮೂರೇ ಸಾಕು ಬೇಗ ನಿನ್ನೆಡೆಗೆ ಬರುವುದಾದರೆ ಎಂದ ವಿಜಯನು:
ಬನ್ನದೇಳು ಜನುಮಂಗಳೇತಕೈ
ಖಿನ್ನ ಮೂರರೊಳಗೆನ್ನನುಂ ಜಯಂ|
ಭಿನ್ನಗೈಯೆನಲು ದೇವನೊಪ್ಪಿರಲ್
ತನ್ನ ಘಾತಿಸಿದವ೦ ಪೊಗಳ್ದನಯ್||
ಎನ್ನನುಂ ಜಯಂ – ನನ್ನನ್ನು ಮತ್ತು ಜಯನನ್ನು ಎಂದು ಅರ್ಥ ಬರುತ್ತದೆಯೆ? ಅಥವ ’ಜಯನುಂ’ ಎಂದಾಗಬೇಕೆ?
ಜಯ೦ – ಪ್ರಥಮಾ ಆಗಿಬಿಡುತ್ತದೆ. ಜಯನ೦/ನನ್ ಆದರೆ ಸರಿ.
’ತನ್ನ ಘಾತಿಸಿದನಂ ಪೊಗಳ್ದನಯ್’ ಎಂದಿದ್ದರೆ ಅರ್ಥಸ್ಪಷ್ಟತ್ವೆ ಇರುತ್ತಿತ್ತಲ್ಲವೆ?
ಹೌದು. ನ೦ ಬಳಕೆಯೇ ಸರಿ ಅನ್ನಿಸುತ್ತಿದೆ.
ಅಮ್ ಅಥವಾ ಅನ್ ಎ೦ಬ ದ್ವಿತೀಯದ ಪ್ರತ್ಯಯ, ವ೦ ಆಗಿ ಬಳಕೆಯಾಗುವುದು ನಪು೦ಸಕಕ್ಕೆ ಹೆಚ್ಚು. ಪುಲ್ಲಿ೦ಗಕ್ಕೆ ನ೦ ಅಥವಾ ನನ್ ಆಗಬೇಕಿತ್ತು ಅನ್ನಿಸುತ್ತಿದೆ. ಇನ್ನೊಮ್ಮೆ ಪರಿಶೀಲಿಸುವೆ.
೧.
ಇನ್ನು ಜೀವನದೊಳಾಸೆ ಕುಂದಿರಲ್
ಭಿನ್ನ ಕಾರಣವದಶ್ವಕಾಗಿಯೇಂ
ತನ್ನ ರೂಪದವರಲ್ಲೆ ಹೋರಿರಲ್
ತನ್ನ ಘಾತಿಸಿದನಂ ಪೊಗಳ್ದನಯ್
ರಾಮ ಹಾಗು ಲವಕುಶರ ನಡುವಿನ ಯುದ್ಧದ ಸಂದರ್ಭ
೨.
ತನ್ನ ಜೀವನಕದನ್ನ ನೀಡುವಂ
ಬೆನ್ನ ಮೇಲೆ ಬಿಗಿದಾಗ ಪೆಟ್ಟುಗಳ್
ಕುನ್ನಿ ಭಾಷೆಯೊಳು ಚಿನ್ನ ರನ್ನವೆಂ
ತನ್ನ ಘಾತಿಸಿದನಂ ಪೊಗಳ್ದನಯ್
ಒಂದು ನಾಯಿಯ ಬಗ್ಗೆ – ಶ್ವಾನಕ್ಕೆ ಪುಲ್ಲಿಂಗದ ಬಳಕೆಯ ಬಗ್ಗೆ ಕ್ಷಮೆಯಿರಲಿ 🙂
Ram chennagide :)..
ಎರಡನೆ ಪದ್ಯದಲ್ಲಿದ್ದ ವ್ಯಾಕರಣ ದೋಷ ಸರಿಪಡಿಸುವ ಯತ್ನ ::
ತನ್ನ ಜೀವನಕದನ್ನ ನೀಡುವಂ
ಬೆನ್ನ ಮೇಲೆ ಬಿಗಿದಾಗ ಪೆಟ್ಟುಗಳ್
ಕುನ್ನಿ ಭಾಷೆಯೊಳು, ನೋವ ತಿಂದವಂ
ತನ್ನ ಘಾತಿಸಿದನಂ ಪೊಗಳ್ದನಯ್
[ ಶ್ವಾನಕ್ಕೆ ಪುಲ್ಲಿಂಗ ಉಪಯೋಗಿಸಿದ ತೊಡಕು, ಸಮಸ್ಯೆ ಹಾಗು ಈ ಪರಿಹರದ ಪ್ರಾಕಾರದಲ್ಲಿ, ಉಳಿಯುತ್ತದೆ]
ಮುನ್ನ ಬಾಲ್ಯದೊಳಗೇಟು ಕೊಟ್ಟನುಂ
ಚಿನ್ನನೆಂದು ಬಲು ಮುದ್ದು ಮಾಳ್ದನುಂ
ಎನ್ನ ಪೆತ್ತವನೆ ಸರ್ವನೆನ್ನುತಂ
ತನ್ನ ಘಾತಿಸಿದನಂ ಪೊಗಳ್ದನಯ್
ಸೋಮ, ರಾಮ್, ಕಾಂಚನ ಮುಂತಾದವರುಗಳ ಪರಿಹಾರಗಳೆಲ್ಲ ಸೊಗಸಾಗಿವೆ. ರಾಮ್ ಸ್ವಲ್ಪ ವ್ಯಾಕರಣವನ್ನು ಗಮನಿಸಿಕೊಂಡರೆ ಒಳಿತು:-) ಪ್ರಸಾದರಲ್ಲಿ ಅರ್ಥಸ್ಪಷ್ಟತೆ ತಗ್ಗಿದೆ.
ಈ ಸಮಸ್ಯೆಗೆ ನನ್ನ ಪರಿಹಾರವಿಂತಿದೆ:
ಬನ್ನಮಾಗದೆ ವಧಾನದೊಳ್ ಸಮು-
ತ್ಪನ್ನಪೃಚ್ಛೆಗವಲೀಲೆಯಿಂದೆ ಸಂ-
ಪನ್ನನುತ್ತರಿಸುತುಂ ವಧಾನಿ ಮೇಣ್
ತನ್ನ ಘಾತಿಸಿದನಂ ಪೊಗಳ್ದನಯ್||
ಅವಧಾನದಲ್ಲಿ ಸಮರ್ಥನಾದ ಅವಧಾನಿಯು ತನ್ನನ್ನು ಕಾಡುವ ಪ್ರಶ್ನೆಗಳನ್ನೊಡ್ಡುವ ಪೃಚ್ಛಕನನ್ನು ಸಮುಚಿತವಾಗಿ ಉತ್ತರಿಸುತ್ತಲೇ ಅವನನ್ನು ಮೆಚ್ಚುವ ಸಂದರ್ಭವನ್ನು ಗಮನಿಸಿ ಈ ಪರಿಹಾರ ಮೂಡಿದೆ.
ಮುನ್ನ ಬೇಡಿ ನೆಲಬಾನ ಮುಟ್ಟಿ ಪ್ರ-
ಚ್ಚನ್ನ ವಿಷ್ಣು ತುಳಿಯಲ್, ಬಲೀಂದ್ರ ನಿ-
ರ್ಭಿನ್ನ ಭಾವದಲಿ, ಸನ್ನುತಾಂಗನಂ,
ತನ್ನ ಘಾತಿಸಿದನಂ ಪೊಗಳ್ದನಯ್||
ಮೌಳಿಯವರೆ,
ನಿಮ್ಮ ಪರಿಹಾರ ಬಹಳಚೆನ್ನಾಗಿದೆ
truly lovely poem; apt solution too!!
(find the metre in a vague-method here:-)
ಮುನ್ನಮೈನಕನುನೀರಲೆದ್ದುದ೦
ಭಿನ್ನಭಾವಿಸಿಕಪೀ೦ದ್ರ ಘಾತಿಸಲ್
ತನ್ನಪೂರ್ವಋಣಜಾನಿಸುತ್ತಲು೦
ತನ್ನ ಘಾತಿಸಿದನ೦ಪೊಗಳ್ದನಯ್
[ಹನುಮ೦ತನ ಸಾಗರೋಲ್ಲ೦ಘನದ ಸಮಯದಲ್ಲಿ, ಸಮುದ್ರರಾಜನು ತನ್ನ ಮತ್ತು ಮೈನಾಕ ಪರ್ವತನಿಗಿರುವ ಇಕ್ಷ್ವಾಕು ವ೦ಶದ ಋಣವನ್ನು ನೆನೆದು, ಮೈನಾಕನಿಗೆ, “ಸಾಗರದಿ೦ದ ಮೇಲೆದ್ದು, ನೂರು ಯೋಜನವನ್ನು ಒಮ್ಮೆಗೇ ಹಾರುತ್ತಿರುವ ಹನುಮ೦ತನಿಗೆ ನಿನ್ನಲ್ಲಿ ವಿಶ್ರಾ೦ತಿ ತೆಗೆದುಕೊಳ್ಳಲು ಸಹಾಯಮಾಡು ಎನ್ನುತ್ತಾನೆ”. ಆಗ, ಇದ್ದಕ್ಕಿದ್ದ ಹಾಗೆಯೇ ಸಮುದ್ರದಿ೦ದ ಮೇಲೆಬ೦ದ ಪರ್ವತವನ್ನು ನೋಡಿದ ಹನುಮ೦ತ, ವೈರಿಯೆ೦ದು ತಿಳಿದು ಮೈನಾಕನನ್ನು ಹೊಡೆಯುತ್ತಾನೆ. ಆದರೆ, ಅದಕ್ಕೆ ಕೋಪಗೊಳ್ಳದೇ ಮೈನಾಕನು ಹನುಮ೦ತನ ತ೦ದೆಯ ಋಣವನ್ನು ನೆನೆದು, ಅವನನ್ನು ಹೊಗಳುತ್ತಾನೆ]
ಒಳ್ಳೆಯ ಪರಿಹಾರ.ಈ ಚಿಕ್ಕ ವೃತ್ತದಲ್ಲಿ ಇಷ್ಟೆಲ್ಲ ವಿವರಗಳನ್ನು ಅಡಗಿಸಿದ ಪರಿ ಸ್ತುತ್ಯ. ಆದರೆ ಹಳಗನ್ನಡದ ಒಪ್ಪವು ಮಿಗಿಲಾದರೆ ಒಳಿತು.
ಮತ್ತೊಂದು ಮಾತು; ಮೈನಾಕನು ಮೈನಕನಾಗಿಬಿಟ್ಟಿದ್ದಾನಲ್ಲ!! ಛಂದಸ್ಸಿಗಾಗಿ ಈ ಹ್ರಸ್ವೀಕರಣವೋ?:-)