Aug 082011
 

ಉತ್ತರನ ತಂಗಿ ಗಂಡನ ಪಿತನು ಯುಧ್ಧದಲಿ

ಕುತ್ತಿಗೆಯ ತೆಗೆದವನ ಹೆಂಡತಿಯದಾರು? || ೧ ||

ಮತ್ಸರದೆ ತಲೆ ಕೊಯ್ದವನ ತಂಗಿ ಮಕ್ಕಳನು

ಕತ್ತಲೊಳು ಮಲಗಿರಲು ಶಿರವುರುಳಿಸಿದನಾರ್? || ೨ ||

ಚಿತ್ರಾಂಗದನ ನಲ್ಲೆಯರ ಗೆದ್ದ ಮಹಿಮನಾ

ಮಾತೃವನು ತಲೆಯಮೇಲಿರಿಸಿದವನಾರು? || ೩ ||

ಕ್ಷಾತ್ರತನವನುಬಿಟ್ಟು ತೀರ್ಥಯಾತ್ರೆಯಗೈದು

ಭ್ರಾತೃ ಸಂವೇದನೆಗೆ ಅಪವಾದನಾರು? || ೪ ||

  39 Responses to “ಒಗಟು: ಯಾರಿವರು ಹೇಳಿರೈ?”

  1. sorry for commenting in english.. some problem with unicode in my browser

    1) dushyalA : uttarA is uttara kumara's sister her husband is abhimanyu his father is arjuna who killed jayadratha whose wife is dushyalA
    2) ashwatthAma : drishtadyumna killed drona so his sister draupadi's sons were killed by ashwatthAma
    3) not sure 🙁
    4) balarAma : during mahabharata war he went to pilgrimage

  2. Hi Incognito,

    Your answers 1, 2 and 4 are correct 🙂

  3. 3) shiva : chitrangada's marriage happen due to bhishma attending the swayamvarA instead of him..bhishma's mother is ganga and hence the answer is shiva

    initially got confused with arjuna's wife chitrangadA which didn't make any sense in this context

  4. Shiva is right 🙂

  5. ಹನ್ನೆರಡು ವರುಷಗಳಾದರೂ ಸ್ವಾರಸ್ಯ ಕಡಿಮೆಯಾಗಿಲ್ಲ;ಇದು ನಿತ್ಯ ನವೀನ ಒಗಟೆನ್ನಬಹುದು.

  6. ಕತ್ತರಿದ ಕೊರಳಿನಾಭರಣವಾಗಿದ್ದವಳು
    ಉತ್ತರೆಯ ಮಾವನಾ ತಂಗಿ ದುಶ್ಶಲೆಯು ||

  7. ಚುಂಚಿನಿಂದಲೆ ಮಲಗಿದಕ್ಕಿಗಳ ಕೊಂದಿರುವ
    ಸಂಚು ಗೂಗೆಯ ಕಂಡ ಭಂಡನಶ್ವತ್ಥಾಮ ||
    ಪಾಂಚಾಲಿಯಾ ಪಂಚ ಮಕ್ಕಳನ್ನೂ‌ ಸೇರಿ
    ಹೊಂಚಿನಲಿ, ಮಲಗಿರುವ ಬಹುಜನರ ಕೊಂದ ||

  8. ಸಿಂಗಾರಕೆಂದು ಕೊರಳಲ್ಲಿ ಹಾವನು ಸುತ್ತಿ
    ಗಂಗೆಯಾ ರಭಸವನು ಜಟೆಯಲ್ಲೆಯಿಳಿಸಿ ||
    ಕಂಗೊಳಿಸುತಲಿ ಕುಣಿವ ಜಗದ ಲಯಕಾರಕನು
    ಲಿಂಗಮೂರುತಿ, ಶಕ್ತಿದಾ[ಮಾ]ತೆಯಾ ಗಂಡ ||

  9. Ram, nimma padya roopada parihaara chennagide 🙂

  10. Ram,

    ಕೆಳಗಿನ ಸಾಲುಗಳು ಬಹಳ ಚೆನ್ನಾಗಿವೆ 🙂

    ಕತ್ತರಿದ ಕೊರಳಿನಾಭರಣವಾಗಿದ್ದವಳು

    ಚುಂಚಿನಿಂದಲೆ ಮಲಗಿದಕ್ಕಿಗಳ ಕೊಂದಿರುವ
    ಸಂಚು ಗೂಗೆಯ ಕಂಡ ಭಂಡನಶ್ವತ್ಥಾಮ

  11. ಮಕರ,
    ನೀವು ಹೇಳುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ, ಇದೆ ಒಗಟನ್ನು ನೀವು ಮುಂಚೆಯೇ ಕೇಳಿದ್ದೀರಾ? ಅದು ೧೨ ವರ್ಷ ಮುಂಚೆ? ಆಶರ್ಯ!!! ನನಗೆ ಗೊತ್ತಿರಲಿಲ್ಲ. ಇದನ್ನು ನಾನು ನೆನ್ನೆಯೇ ಬರೆದದ್ದು 🙂
    > ಹನ್ನೆರಡು ವರುಷಗಳಾದರೂ ಸ್ವಾರಸ್ಯ ಕಡಿಮೆಯಾಗಿಲ್ಲ;ಇದು ನಿತ್ಯ ನವೀನ ಒಗಟೆನ್ನಬಹುದು.

  12. ಸೋಮ – ಇಲ್ಲಿ ೨೦೧೧ (2011) ಕೆಲವೊಂದು ಬ್ರೌಸರ್ ಗಳಲ್ಲಿ ೨೦೦೧ (2001) ತರಹ ಕಣುತ್ತದೆ. ಆದ್ದರಿಂದ, ಮಕರರಿಗೆ confuse ಆಗಿರಬಹುದು

  13. ರಾಮ್,

    ಹೌದಲ್ಲ ೨೦೦೦, ೨೦೧೧ ಸ್ವಲ್ಪ ಒಂದೇ ತರಹ ಕಾಣತ್ತೆ.
    ಈಗ ಈ ಒಗಟೂ ಪರಿಹಾರ ಆಯ್ತು 🙂

  14. ಮೊದಲನೆಯದಾಗಿ ಸುಂದರವಾದ ಒಗಟುಗಳನ್ನು ಕೊಟ್ಟಿದ್ದಕ್ಕೆ ಸೋಮರವರಿಗೆ ಧನ್ಯವಾದಗಳು ಮತ್ತು ಅದಕ್ಕೆ ಸುಂದರವಾದ ಕವನರೂಪದ ಉತ್ತರವನ್ನು ಹೊಸೆದ ರಾಮಚಂದ್ರರವರು ನಿಜಕ್ಕೂ ಅಭಿನಂದಾರ್ಹರು. ೨೦೧೧ ನನಗೆ ೨೦೦೦ದಂತೆ ಕಂಡಿದ್ದರಿಂದ ೧೨ ವರ್ಷಗಳ ನಂತರವೂ ಈ ಒಗಟು ನವೀನವೆಂದೆನಿಸಿತು; ಇದು ರಾಮಚಂದ್ರರ ಉತ್ತರದಿಂದ ತಮಗೆ ಸ್ಪಷ್ಟವಾಗಿದೆ ಎಂದು ತಿಳಿಯಿತು. ಸಂಪದದಲ್ಲಿ "ಕನ್ನಡ ಬರ್ದೊನು ಕೋಡಂಗಿ" ಎಂಬ ಸಮಸ್ಯಾಪೂರಣ ಲೇಖನ ಓದಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಚಿಕ್ಕಂದಿನಲ್ಲಿ ನನ್ನ ಸ್ನೇಹಿತನಿಂದ ಕೇಳಿ ತಿಳಿದಿದ್ದ ಒಂದು ನಿಮ್ಮಂಥಹ ಒಗಟಿನ ರೂಪದ ಪದ್ಯವನ್ನು ಉಲ್ಲೇಖಿಸಿದ್ದೆ. ಅದನ್ನು ವಾಚಕರ ಅವಗಾಹನೆಗಾಗಿ ಮತ್ತೆ ಕೊಡುತ್ತಿದ್ದೇನೆ.
    ಹರನ ಹಾರನ ಆಹಾರನ ಸುತನ ಸ್ವಾಮಿ ಅಥವಾ ಅದನ್ನು ಸ್ವಲ್ಪ ಬೆಳೆಸಬೇಕೆಂದರೆ:
    ಹರನ ಹಾರನ ಆಹಾರನ ಸುತನ ಸ್ವಾಮಿಯ ಹೆಂಡತಿ ಯಾರು?

  15. ಮಕರ ಅವರೇ,

    ಧನ್ಯವಾದಗಳು

    ನಾನು ಚಿಕ್ಕಂದಿನಲ್ಲಿ ಕೇಳಿದೀನಿ, ನಾನು ಕೇಳ್ಪಟ್ಟದ್ದೇನನ್ದರೆ:
    "ಹರನ ಹಾರನ ಆಹಾರನ ಸುತನ ಸ್ವಾಮಿಯ ವೈರಿಯ ತಮ್ಮನ ಹೆಂಡತಿಗೆ ಶರಣು"

    ಇದು ತುಂಬಾ ಚೆನ್ನಾಗಿದೆ 🙂

    ಉತ್ತರ ಯಾರು ಹೇಳ್ತೀರಾ

  16. is the answer tAra?

  17. ಹೆಂಡತಿಗೆಗಿಂತ ಹೀಗೆ ಮಾಡಬಹುದು 🙂
    "ಹರನ ಹಾರನ ಆಹಾರನ ಸುತನ ಸ್ವಾಮಿಯ ವೈರಿಯ ತಮ್ಮನ ಪ್ರೇಯಸಿಗೆ ಶರಣು"

  18. ಸೋಮರವರೇ, ಒಗಟಿನ ಪೂರ್ಣಪಾಠವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ತಮ್ಮನ ಹೆಂಡತಿಯೇ ಸರಿ ಏಕೆಂದರೆ ತಮ್ಮನಾದ ಸುಗ್ರೀವನ ಹೆಂಡತಿಯನ್ನು ಬಲವಂತವಾಗಿ ಇರಿಸಿಕೊಂಡಿದ್ದವನು ಅಣ್ಣನಾದ ವಾಲಿ.

  19. ಸೋಮ – ಇದೇ ಜಾಡಿನ ಇನ್ನೊಂದು ಒಗಟು ::

    ಹತ್ತು ತಲೆ ಕೆಂಪಾಗಿಹುದು ಆರು ತಲೆ ಕಪ್ಪಾಗಿಹುದು
    ಇವನ ಸಖನ ಸುತನ ಒಡೆಯನ ವೈರಿಯ ತಮ್ಮನ
    ಹೆಂಡತಿಯೆನಗೆ ಒಲಿದಳ್

  20. ರಾಮ್ :),

    ಚೆನ್ನಾಗಿದೆ, ಶರಣು ಗಿಂತ ಎನಗೆ ಒಲಿದಳ್

    ಮಕರ ಅವರೇ, incognito ,

    ಇದಕ್ಕೆ ಬೇರೆ ಅರ್ಥ ಇದೆ, ಇನ್ನು ವಿಶೇಷವಾಗಿದೆ . ಯೋಚನೆ ಮಾಡಿ. ರಾಮಚಂದ್ರರ ಒಗಟನ್ನು ನೋಡಿ clue ಸಿಗತ್ತೆ

  21. ಸೋಮರವರೇ, ಈ ಪದ್ಯಕ್ಕೆ ಬೇರೆ ಅರ್ಥವನ್ನು ಬಹುಶಃ Incognito ಅವರು ಕೊಡಬಹುದೆನಿಸುತ್ತದೆ. ಹಾಗೆಯೇ ರಾಮಚಂದ್ರರವರು ಮಂಡಿಸಿದ ಒಗಟಿನ ಬಗ್ಗೆ ತಲೆ ಕೆರೆದುಕೊಳ್ಳುತ್ತಿದ್ದೇನೆ. ಶೀಘ್ರವೇ ಯಾರಾದರು ರಸಿಕರು ಉತ್ತರಿಸಿಯಾರೆಂದು ಕಾತರಿಸುತ್ತಿದ್ದೇನೆ.

  22. ಸೋಮರವರೇ,
    ಸುಮ್ಮನೆ ಕರ್ಣಾಟ ಭಾರತ ಕಥಾಮಂಜರಿಯ ಮೇಲೆ ಕಣ್ಣಾಡಿಸುತ್ತಿದ್ದವನಿಗೆ ಈ ಕೆಳಗಿನ ಪದ್ಯಗಳು ಕಣ್ಣಿಗೆ ಬಿದ್ದವು. ಆದ್ದರಿಂದ ನಿಮ್ಮ ಮೂರನೆಯ ಒಗಟಿನಲ್ಲಿ ಚಿತ್ರಾಂಗದನ ನಲ್ಲೆಯರ ಎನ್ನುವ ಬದಲು ವಿಚಿತ್ರವೀರ್ಯನ ನಲ್ಲೆಯರು ಎನ್ನುವುದು ಹೆಚ್ಚು ಸೂಕ್ತವೆನಿಸುತ್ತದೆ. ಬೇರೇಯೇನಾದರೂ ವಿವರಣೆ ಇದ್ದರೆ ದಯವಿಟ್ಟು ತಿಳಿಸಿ.

    ಇರಲಿರಲು ಶಂತನು ಮಹೀಪತಿ
    ಸುರರೊಳಗೆ ಸೇರಿದನು ಬಳಿಕೀ
    ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ
    ಅರಸ ಕೇಳೈ ಕೆಲವು ಕಾಲಾಂ
    ತರದಲಾತನು ಕಾದಿ ಗಂಧ
    ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ ೩೧

    ರಾಯ ಕೇಳೈ ಸಕಲ ರಾಜ್ಯ
    ಶ್ರೀಯನಾತಂಗಿತ್ತು ಭೀಷ್ಮನು
    ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ
    ರಾಯ ಕುವರನ ಮದುವೆಗಬ್ಜದ
    ಳಾಯತಾಕ್ಷಿಯರನು ವಿಚಾರಿಸಿ
    ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ ೩೨

    ಅಲ್ಲಿ ನೆರೆದಾ ಕ್ಷತ್ರವರ್ಗವ
    ಚೆಲ್ಲಬಡಿದು ವಿವಾಹ ಶಾಲೆಯ
    ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು
    ಘಲ್ಲಣೆಯ ಖಂಡೆಯದ ಚೌಪಟ
    ಮಲ್ಲ ಭೀಷ್ಮನು ಪುರಕೆ ತಂದವ
    ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ ೩೩

  23. ರಾಮಚಂದ್ರರವರೇ,
    ನನ್ನ ಊಹೆ ಸರಿಯಾಗಿದ್ದರೆ; ಹತ್ತು ತಲೆ ಕೆಂಪಾಗಿಹುದು ಆರು ತಲೆ ಕಪ್ಪಾಗಿಹುದು ಎಂದರೆ ಅಗ್ನಿ, ಅವನ ಸಖ ಎಂದರೆ ವಾಯು, ಅವನ ಸುತನ ಸ್ವಾಮಿಯ ವೈರಿಯ ತಮ್ಮನ ಹೆಂಡತಿಯೆಂದರೆ ತಾರ ಅಂದರೆ ನನಗೆ star = ಅದೃಷ್ಟ ಒಲಿಯಿತೆಂದು ತಿಳಿಯಬಹುದೇ?

  24. ಮಕರ ಅವರೇ,

    ಸ್ವಲ್ಪ confuse ಆಗ್ಬಿಟ್ಟೆ, ನೀವು ಹೇಳಿದ್ದು ಸರಿ:
    "ಚಿತ್ರಾಂಗದನ ನಲ್ಲೆಯರ ಗೆದ್ದ ಮಹಿಮನಾ" ಬದಲು
    "ವಿಚಿತ್ರವೀರ್ಯನ ನಲ್ಲೆಯರ ಗೆದ್ದ ಮಹಿಮನ" ಅಂತ ಮಾಡ್ಬೇಕು.

    ಆಮೇಲೆ, ಅದೃಷ್ಟ ಒಲಿಯಿತು ತಪ್ಪು ಉತ್ತರ 🙂

  25. ಸೋಮ ಅವರೇ,
    ತುಂಬಾ ಯೋಚನೆ ಮಾಡಿದ್ರು ಸಿಕ್ತಿಲ್ಲ.
    ಒಲಿಯುವುದು ಅಂದ್ರೆ ಲಕ್ಷ್ಮಿ (ರುಕ್ಮಿಣಿ ) ಇರಬಹುದು ಅಂತ ಸ್ವಲ್ಪ ಹಿಂದೆ ಬಂದ್ರೆ ಕೃಷ್ಣ ಅವನ ಅಣ್ಣ ಬಲರಾಮ ಅಂತ ಬಂದು ನಿಲ್ಲುತ್ತೆ ಅದಕ್ಕಿಂತ ಹಿಂದೆ ಏನು ಸಿಕ್ತಿಲ್ಲ
    ಈ ಕಡೆ ಇಂದ ವಾಯುಪುತ್ರ ಹನುಮಂತನ ಬದಲಿಗೆ ಭೀಮ ಅಂದುಕೊಂಡರೂ ಮುಂದಕ್ಕೆ ಏನೂ ಸಿಕ್ತಿಲ್ಲ 🙁
    ಸ್ವಲ್ಪ ಕ್ಲಿಷ್ಟ ಅನ್ಸ್ತಿದೆ ಬೇರೆ ಏನಾದ್ರು ಕ್ಲೂ ಇದ್ರೆ ಕೊಡಿ

  26. Incognito, ಮಕರ ಅವರೇ

    ಅದೃಷ್ಟ ಒಲಿಯಿತು ಅನ್ನುವ ಉತ್ತರ ತಪ್ಪೇನಲ್ಲ ಅದು ಚೆನ್ನಾಗಿದೆ, ಆದರೆ ಅದೇ ರೀತಿ ಲಾಕ್ಷಣಿಕವಾದ(ತಾರೆ -> star -> ಅದೃಷ್ಟ ಎನ್ನುವ ರೀತಿ) ಜಾಡು ಹಿಡಿಯಿರಿ. ಇನ್ನೊಂದು ಉತ್ತರವೂ ಹೊಳೆಯುತ್ತದೆ 🙂

    ವಾಲಿಯೋಬ್ಬನೆ ರಾಮನ ಶತ್ರುವೇ? ಯೋಚನೆ ಮಾಡಿ…

  27. ಸೋಮರವರೇ, ನಿಜ ರಾಮನ ಇನ್ನೊಬ್ಬ ಶತ್ರು ರಾವಣ ಅವನ ತಮ್ಮ ವಿಭೀಷಣ ಆದರೆ ಅವನ ಹೆಂಡತಿ ಯಾರೆಂದು ನನಗೆ ತಿಳಿಯದು. ಅದಕ್ಕೆ ಉತ್ತರವನ್ನು ನೀವೆ ಒದಗಿಸಬೇಕು. ನಿಮ್ಮ ಆಸಕ್ತಿಯನ್ನು ನೋಡಿ ನನಗೂ ಒಂದು ಒಗಟಿನ ಪದ್ಯ ಸ್ಪುರಿಸಿದೆ. ಅದು ಹೀಗಿದೆ: ಕಪ್ಪೆಯಾ ಉದರದಿಮ್ ಜನಿಸಿದವಳ ಪತಿಯ ವೈರಿಯ ಅನುಜನ ದೇಶದವನ್ಯಾರು; ಬಲ್ಲಿದರು ಪೇಳಿರೈ!

  28. ಮಕರ, Incognito,
    ಉತ್ತರ ಹೀಗಿದೆ ::

    ಹತ್ತುತಲೆ ಕೆಂಪಾಗಿಹುದು ಆರುತಲೆ ಕಪ್ಪಾಗಿಹುದು (ಅಗ್ನಿ). ಇವನ ಸಖನ (ವಾಯು) ಸುತನ (ಹನುಮಂತ) ಒಡೆಯನ (ರಾಮ) ವೈರಿಯ (ರಾವಣ) ತಮ್ಮನ (ಕುಂಭಕರ್ಣ) ಹೆಂಡತಿ (ನಿದ್ರಾದೇವಿ) ಯೆನಗೆ ಒಲಿದಳ್.
    ನನಗೆ ನಿದ್ರೆ ಬಂತು ಎಂದು ಸುತ್ತು ಬಳಸಿ ಹೇಳೋದು ಅಷ್ಟೆ 🙂

  29. ಮಕರ ಅವರೇ,

    "ಕಪ್ಪೆಯಾ ಉದರದಿಮ್ ಜನಿಸಿದವಳ ಪತಿಯ ವೈರಿಯ" ಎಂದರೆ 'ಕಲಿ'ಯೇ? ಸರಿಗಾಗಿಗೊತ್ತಿಲ್ಲ. ಇದಕ್ಕಿಂತ ಮುಂದೆ ಹೋಗುವುದಕ್ಕೆ ಆಗುತ್ತಿಲ್ಲ

  30. ಕುಂಭಕರ್ಣನ ಬಗ್ಗೆ ಯೋಚಿಸಲಿಲ್ಲ ವಾಲೀ ಆದಮೇಲೆ ವಿಭೀಷಣ ಖರ ದೂಷಣ ಮಾರೀಚ ಸುಬಾಹು ಎಲ್ಲರ ಬಗ್ಗೆ ಯೋಚಿಸಿದೆ
    "ಕಪ್ಪೆ" ಒಗಟು ಏನು ಹೊಳೆಯುತ್ತಿಲ್ಲ 🙁
    ನಾನು ಕೇಳಿದ್ದ ಒಂದೆರಡು ಒಗಟುಗಳು ಪದ್ಯರೂಪದಲ್ಲಿಲ್ಲ ಆದರೂ ಕೇಳುತ್ತಿದ್ದೇನೆ. ಸ್ವಲ್ಪ ಸುಲಭವೂ ಸಹ ಇದೆ.
    "ಸಹೋದರರಲ್ಲಿ ವಿರಸವುಂಟು ಮಾಡಲೆಂದೇ ಸೃಷ್ಟಿಸಲ್ಪಟ್ಟ ಸುಂದರೀ" ಯಾರು?
    ಇದು ತುಂಬಾ ಪ್ರಸಿದ್ಧವಾದುದು "ಉತ್ತರೆಯ ತಾಯಿ ತಮ್ಮನ ಕತ್ತಲೆಯಲ್ಲಿ ಕತ್ತರಿಸಿದಾತನ ಅಣ್ಣನ ಅಪ್ಪನ ವಾಹನ"

  31. ಮಕರ,
    "ಕಪ್ಪೆಯಾ ಉದರದಿಮ್ ಜನಿಸಿದವಳ" ಎನ್ನುವುದನ್ನ ಮಂಡೋದರಿಗೆ ಹೊಲಿಸಿಲ್ಲ ಎಂದುಕೊಳ್ಳುತ್ತೇನೆ. ಹಾಗೆ ಒಂದುವೇಳೆ ಹೋಲಿಸಿದ್ದಾರೆ ಅದು ಸರಿಯೇ?

    incognito,
    "ಉತ್ತರೆಯ ತಾಯಿ ತಮ್ಮನ ಕತ್ತಲೆಯಲ್ಲಿ ಕತ್ತರಿಸಿದಾತನ ಅಣ್ಣನ ಅಪ್ಪನ ವಾಹನ" ಇದನ್ನು ಬೈಗುಳವಾಗಿ ಬಲೆಸಬಹುದು 🙂

  32. ರಾಮಚಂದ್ರರವರೇ,
    ವಾಲಿಯ ಹೆಂಡತಿ ಒಲಿಯದಿದ್ದವನಿಗೆ ಕುಂಭಕರ್ಣನ ಹೆಂಡತಿ ತಾನೇ-ತಾನಾಗಿ ಒಲಿಯುತ್ತಾಳೆ. ಉತ್ತರವನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.
    ಸೋಮರವರೇ,
    ಕಪ್ಪೆಯ ಉದರದಿಮ್ ಜನಿಸಿದವಳ= ಮಂಡೋದರಿ ಸರಿ; ಮುಂದಿನದನ್ನು ನೀವು ಅನಾಯಾಸವಾಗಿ ಊಹಿಸುವಿರೆಂದು ಗೊತ್ತು!
    Incognito ಅವರೇ,
    ಉತ್ತರೆಯ ತಾಯಿಯ ಅಣ್ಣನ ಕತ್ತಲಲಿ ಕತ್ತರಿಸಿ ಕೊಂದವನ ಅಣ್ಣನ ಅಪ್ಪನ ವಾಹನ – ಇದನ್ನು ಬೈಗುಳವಾಗಿ ಬಳಸಬಹುದೆಂದು ಸೋಮರವರು ಬಹಳ ಸೂಚ್ಯವಾಗಿಯೇ ತಿಳಿಸಿಕೊಟ್ಟಿದ್ದಾರೆ. ಈಗಿನ ಮೈಸೂರಿಗರು ಅದೇ ವಂಶಕ್ಕೆ ಸೇರಿದವರಲ್ಲವೆ ಏಕೆಂದರೆ ಅದರ ಮೂಲ ಹೆಸರು ಮಹಿಷೂರು!
    ಶುಂಭ-ನಿಶುಂಭರೊಳಗೆ ಒಡಕು ಮೂಡಿಸಲು ಸೃಷ್ಟಿಸಲ್ಪಟ್ಟವಳು=ಎಳ್ಳೋತ್ತಮೆ (?) – ಉತ್ತರ ಸರಿಯೆಂದುಕೊಳ್ಳುತ್ತೇನೆ.

  33. ಮಕರ ಅವರೇ,
    'ತಿಲೋತ್ತಮೆ' ಮತ್ತು 'ಕೋಣ' ಎರಡೂ ಉತ್ತರಗಳು ಸರಿಯಿದೆ 🙂

  34. Incognito ಅವರೇ ನಿಮ್ಮ ಒಗಟು ಮತ್ತು ಉತ್ತರಕ್ಕೆ ಧನ್ಯವಾದಗಳು. ನಾನು ಮಂಡಿಸಿದ ಒಗಟನ್ನು ನೀವು ಬಹಳ ಸುಲಭವಾಗಿ ಬಿಡಿಸುತ್ತೀರೆಂದು ತಿಳಿದಿದ್ದೆ. ಇರಲಿ ನಾಳೆ ಅದರ ಉತ್ತರ ಕೊಡುತ್ತೇನೆ.

  35. ಕಪ್ಪೆಯ ಉದರಿದಿಮ್ ಜನಿಸಿದವಳು ಎಂದರೆ "ಮಂಡೋದರಿಯ"ನ್ನು ಕುರಿತು ಕನ್ನಡದಲ್ಲಿ ಹೇಳಿದ್ದು. ಅವಳ ಪತಿಯ ವೈರಿಯ ಅನುಜನೆಂದರೆ; ರಾವಣನ ವೈರಿಯ ತಮ್ಮ = ರಾಮನ ತಮ್ಮ ಭರತ; ಆದ್ದರಿಂದ ಅವನು ಭಾರತ ದೇಶದವನು ಅಥವಾ ಭಾರತೀಯ. ಸುಮ್ಮನೆ ಹೊಳೆದದ್ದಕ್ಕೆ ಒಂದು ಕಾವ್ಯ ರೂಪ ಕೊಡುವ ಪ್ರಯತ್ನ ಮಾಡಿದ್ದೆನಷ್ಟೆ. ಎಲ್ಲರಿಗೂ ಧನ್ಯವಾದಗಳು; ನಿಮ್ಮಿಂದ ಹೊಸ ಒಗಟುಗಳನ್ನು ನಿರೀಕ್ಷಿಸುತ್ತಿದ್ದೇನೆ.

  36. ನಿಮ್ಮ ಚರ್ಚೆಗಳಿಂದಲೇ ಒಗಟುಗಳು ಬಿಡಿಸಿಕೊಳ್ಳುತ್ತವೆ.
    ನಿಮಗೆಲ್ಲರಿಗೂ ಧನ್ಯವಾದಗಳು

    ನೀವು ನನಗೆ ಇಂತಹ ಪ್ರಶ್ನೆ ,ಕಥೆಗಳನ್ನು ಕಳುಹಿಸಬಹುದೇ

    ಕಳುಹಿಸುವುದಾದರೆ ಈ ಸಂಖ್ಯೆಗೆ watsaap ಮಾಡಿ

    8904042171

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)