Apr 072012
Trunk (ಟ್ರಂಕ್), Belt (ಬೆಲ್ಟ್), Belly (ಬೆಲ್ಲಿ), Tusk (ಟಸ್ಕ್) – ಈ ಪದಗಳನ್ನುಪಯೋಗಿಸಿ, ಹಳ್ಳಿ ಜೀವನದ ಸೊಗಸಿನ ಬಗ್ಗೆ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ
Trunk (ಟ್ರಂಕ್), Belt (ಬೆಲ್ಟ್), Belly (ಬೆಲ್ಲಿ), Tusk (ಟಸ್ಕ್) – ಈ ಪದಗಳನ್ನುಪಯೋಗಿಸಿ, ಹಳ್ಳಿ ಜೀವನದ ಸೊಗಸಿನ ಬಗ್ಗೆ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ
ತಮಾಷೆಗಾಗಿ ಹೀಗೆ ಬರೆದಿದ್ದು [ನೋ ಬಾಲ್ ]:
ಹಳ್ಳಿಯ ಬಡರೈತನ ಮಗನೊಬ್ಬ ಪಟ್ಟಣದಲ್ಲಿರುವ ಕಾಲೇಜಿಗೆ ಸೇರಿ, ನಿತ್ಯ ಎರಡು ಮೈಲಿ ನಡೆದು, ಪದವಿಗಾಗಿ ಓದುವಾಗ ಪಡುವ ಬವಣೆಯಲ್ಲಿ ದತ್ತಪದಗಳನ್ನು ಆಂಗ್ಲದಲ್ಲೇ ಸೇರಿಸಿ ಮಜಾ ಉಡಾಯಿಸಿದ ಕಂಗ್ಲೀಷ್ ಪದ್ಯ ! [ನಮ್ಮಲ್ಲಿ ಟ್ರಂಕು ಎಂದರೆ ಆ ಕಾಲದಲ್ಲಿ ಹಣ/ಒಡವೆ ಇಡುವ ಕಬ್ಬಿಣದ ಪೆಟ್ಟಿಗೆಯಾಗಿತ್ತು, ಅಂದಕಾಲತ್ತಿಲ್ ಅದನ್ನು ಬಳುವಳಿಯಾಗಿ ಹುಡುಗಿಗೆ ಮದುವೆಯಲ್ಲಿ ನೀಡುತ್ತಿದ್ದುದೂ ಇತ್ತು!ಈಗ ಕಾಲ ಬದಲಾಗಿದೆ, ವಿ.ಆಯ್.ಪಿ ಸೂಟ್ ಕೇಸ್ ಕೂಡ ನಮಗೆ ಯಾವ ಲೆಕ್ಕ? 🙂 ]
ಪಡೆದೊಂದ್ ಬೆಲ್ಟನೆ ಎತ್ತಿ ಕೊಡವಿ ಸಿಗಿಸಲ್ ಬೆಲ್ಲಿಯದೂಂ ಚಿಕ್ಕದು
ಬಡರೈತನ ಮಗನಾದೊಡೇಂ ಬೇಡವೇಂ ಪದವಿಗಪ್ಪನ ಟ್ರಂಕದು ?
ನಡುಬಿಸಿಲೋಳ್ ನಡೆದೆರಡು ಮೈಲಿ ಬಸ್ಸು ಪಿಡಿದುಂ ಟಸ್ಕರ್ ತರದಿ ನುಗ್ಗುತಂ !
ಕಡೆಗಂತೂ ಕಾಲೇಜು ಮುಗಿದ್ಹರಹರಾ ಹರ್ಕಂಗಿ ಮಾಬ್ಲೇಶ್ವರಾ
ಬಿ೦ಕದಿ ನೀರೆಯರೊಗೆತದ ಪಟಪಟ್,
ರ೦ಕಿಸಲೆತ್ತದು ಕಬ್ಬೆಲ್ಲಿ
ವೆ೦ಕನಬೆಳ್ಟಗರದುತಾನೋಡಿತು
ಸ೦ಕವನಿಟ್ಟಸ್ಕ೦ದದೆಡೆ
ಬಹಳ ಯೋಚಿಸಿದರೂ ಏನೂ ತೋಚಲಿಲ್ಲ, ಕಡೆಗೆ… ಹಳ್ಳಿಯಲ್ಲಿ ನದಿಯಬಳಿ ದಾರಿಹೋಕರಿಗೆ ಕಾಣಬಹುದಾದ ೩ ಪ್ರತ್ಯೇಕವಾದ ಘಟನೆಗಳನ್ನು ತರಲೆತ್ನಿಸಿದೆ.
ರ೦ಕೆ – grunt
ಬೆಳ್ಟಗರು – ಬಿಳಿಯ ಟಗರು
ಸ್ಕ೦ದ – ದಡ
ಗೌಡ ತನ್ನ ಮಗ ’ಓಬುಂ’ಗೆ ಕೆಲವು ಕೆಲಸ ವಪ್ಸಿದ್ದ ಮುಂಜಾನೆನೆಯ – ಮಾಲಯ ಅಮಾಸೆಗೆ ಬಟ್ಟ್ರಿಗೆ ಯೋಳೋದು, ಜೀವ-ದನಕ್ಕೆ ಮೇವು ಆಕೋದು ಇತ್ಯಾದಿ. (ಸಂ)ಚಂಜೆಗೆ ಬಂದು ನೋಡ್ತಾನೆ, ಮಗ ಯಾತರದೂ ಮಾಡ್ನಿಲ್ಲ!
ಲೋ ಭಟ್ರಂ ಕರೆದೆಯಾ?
ನೀ ಬೆಳ್ ಟೋಪಿ ತೊಡುತುಂ ಕುಳಿತೆಯ ವ್ಯರ್ಥಂ?
ಓಬಾ, ಉಂಬೆಲ್ಲಿ ದನಕೆ?
ಓಬ ಕಿರುಚಿ ಕಿತ್ತ ಟಸ್ಕು-ಪುಸ್ಕೆಂದೋಟಂ|
ಮೊದಲನೆಯ ಪಾದದಲ್ಲಿ ಮಾತ್ರಾದೋಷವಿತ್ತು.
ಲೋ ಭಟ್ರಂ ಕರೆದಪೆಯಾ?
ನೀ ಬೆಳ್ ಟೋಪಿ ತೊಡುತುಂ ಕುಳಿತೆಯ ವ್ಯರ್ಥಂ?
ಓಬಾ, ಉಂಬೆಲ್ಲಿ ದನಕೆ?
ಓಬ ಕಿರುಚಿ ಕಿತ್ತ ಟಸ್ಕು-ಪುಸ್ಕೆಂದೋಟಂ|
ಹಳ್ಳಿಯ ಸೊಗಡನ್ನು ಚಿತ್ರಿಸಲರಿಯದೆ, ಬಾಲ್ಯದ ದಿನಗಳಲ್ಲಿ ಹಳ್ಳಿಯ ಶಾಲೆಯಲ್ಲಿ ಕಳೆದ ಕ್ಷಣವೊ೦ದನ್ನು ಬರೆಯಲು ಪ್ರಯತ್ನಪಟ್ಟೆ.
ಗಣಿತದೊಳು ಮೇಷ್ಟ್ರ೦ಕ ನೀಡದೆ
ದಣಿಸೆ ಬೆಳ್ಟೊಣಪಾದಿ ಜೀವದ
ಗೆಣೆಯರನು ಕಾ೦ಬೆಲ್ಲಿ ನಾನೆನುತನ್ನೆಗ೦ ಪೊರಟು
ಸಣಕಲಾಕೃತಿ ಪೊತ್ತು ತಸ್ಕರ
ಗುಣವ ತೋರುತ ಮಾಮರಕೆ ಕೂ
ರ್ಗಣೆಯ ತೆರದಲಿ ಕಲ್ಲ ಬಿಸುಡುವ ಕಾಯಕಕೆ ನಡೆದೆ
ಬೆಳ್ : ದಡ್ಡ
ತಸ್ಕರ : ಕಳ್ಳ