ಹಳದಿ ಬಣ್ಣದ ಉದ್ದ ತೊಳೆಗಳು
ಕಳಿತು ಮಧುರಸ ಒಸರುತಿದ್ದರೆ
ಬೆಳಗು ಬೈಗಿನ ಹಂಗು ತೊರೆಯುತ ತಿನ್ನುವುದೆ ಮೋದ|
ಕಳೆದು ಮೇಣವ ಜಾಣನದಲಿ
ತಳಿಯ ಹಣ್ಣಿನ ಬೀಜ ಬಿಡಿಸುತ
ಗುಳುಗುಳುಮ್ಮನೆ ನುಂಗಿತೇಗುತ ಮರೆಯದಾ ಸ್ವಾದ ||
ರಾಗರಿಗಹಿತವಾದ ಹಲಸೇ
ಮಾಗುವ ಮೊದಲು ಸ್ವಲ್ಪ ಯೋಚಿಸು
ತಾಗಲಾಕಾಯಿಯ ಹುಳಿ ರಸನೆಗೆ ರುಚಿ ಹತ್ತುವುದೇ ,
ಆಗ ಕರೆದಿಹ ಹಪ್ಪಳದ ಜೊತೆ
ಕೂಗಿದ ನೆಪವಿರದೆ ಬರುವರೇ
ವೇಗದಲಿ ಖರ್ಚಾದರಡಿಗೆಯು ಹೆಮ್ಮೆಯು ನಿನಗದು
ರಾಗರಿಗೆ ಹಲಸು (ಹಣ್ಣಿನ ರೂಪದಲ್ಲಿ) ಅಷ್ಟೊಂದು ಇಷ್ಟವಿಲ್ಲೆಂದು ಹೇಳಿದ ನೆನಪು. ಅದರ ಕಾಯಿಯಲ್ಲಿ ಮಾಡಿದ ಹುಳಿ, ಹಪ್ಪಳಗಳಾದರೂ ಇಷ್ಟವಾಗಬಹುದೆಂದು ಭಾವಿಸಿ ಬರೆದಿದ್ದೇನೆ.
ರಾಗರಿಗಹಿತವಾದ ಹಲಸೇ
ಮಾಗುವ ಮೊದಲು ಕೊಂಚ ಯೋಚಿಸು
ತಾಗಲಾಕಾಯಿಯ ಹುಳಿ ರಸನೆಗೆ ರುಚಿ ಹತ್ತುವುದೇ ,
ಆಗ ಕರೆದಿಹ ಹಪ್ಪಳದ ಜೊತೆ
ಕೂಗಿದ ನೆಪವಿರದೆ ಬರುವರೇ
ವೇಗದಲಿ ಖರ್ಚಾದರಡಿಗೆಯು ಹೆಮ್ಮೆಯು ನಿನಗದು
ರಾಗರಿಗಹಿತವಾದ ಹಲಸೇ
ಮಾಗುವ ಮೊದಲು ಕೊಂಚ ಯೋಚಿಸು
ತಾಗಲಾಕಾಯ ಹುಳಿ ನಾಲಗೆಗೆ ರುಚಿ ಹತ್ತುವುದೇ ,
ಆಗ ಕರೆದಿಹ ಹಪ್ಪಳದ ಜೊತೆ
ಕೂಗಿದೊಡನೆಯೆ ಭರದಿ ಬರುವರೆ
ವೇಗದೆ ಮುಗಿಯಲಡಿಗೆ ತೇಗುತ ಹೆಮ್ಮೆ ನಿನಗಾಗ
Ram, good that you posted that earlier blog here. I can’t let my verse be so. Here is the redraft.
In jackfruit it is the petals which become the fruitlings (ತೊಳೆ). The fruit here is the outer thorny shell!
ವಿಸ್ಮಯಂ ಸಸ್ಯಜಗದೊಳಗೆನಿತೊ ನೋಡು ನೀಂ
ದಸ್ಮತಮವೈ ಸಸ್ಯವಿನ್ಯಾಸಗಳ್|
’ಭಸ್ಮಗರ್ಭ(A plant specie)’ದ ಪುಷ್ಪದಳವಹುದು ಕರ್ಷಮಾ-
ತ್ರಸ್ಮೇರ (Pleasing so as to attract attention), ಪಲಸೊಳದೆ(ಪುಷ್ಪದಳ) ತೊಳೆಯಪ್ಪುದೈ||
ಹಳದಿ ಬಣ್ಣದ ಉದ್ದ ತೊಳೆಗಳು
ಕಳಿತು ಮಧುರಸ ಒಸರುತಿದ್ದರೆ
ಬೆಳಗು ಬೈಗಿನ ಹಂಗು ತೊರೆಯುತ ತಿನ್ನುವುದೆ ಮೋದ|
ಕಳೆದು ಮೇಣವ ಜಾಣನದಲಿ
ತಳಿಯ ಹಣ್ಣಿನ ಬೀಜ ಬಿಡಿಸುತ
ಗುಳುಗುಳುಮ್ಮನೆ ನುಂಗಿತೇಗುತ ಮರೆಯದಾ ಸ್ವಾದ ||
ಭಟ್ಟರೇ ನೀವೊರೆದ ಭಾಮಿನಿ
ದಿಟ್ಟೆ ಬಲ್ಚೆನ್ನಿಹಳು; ಹಲಸಿನ
ಕೊಟ್ಟೆಕಡುಬಿನ ಸೀಮೆ ನಿಮ್ಮದು
ಥಟ್ಟನೊರೆದಿಹಿರಿ!!
ಹಲಸಿನಲ್ಲಿಯೆ ನೆಲಸಿದವರಿಗೆ
ಹುಲುಸುಬೆಳೆ ಗಡ ಕವನಿಸುವುದೆನೆ|
ಹಲಸನೊಲ್ಲದ ನಾನದೆಂತಿದ-
ನೊಲಿಸಿಕೊಳ್ಲುವುದು?
ಮೊದಲ ಪಾದದಳೊಂದು ಕಡೆಯೊಳು
ತೊದಲಿಹುದು ಸಂಧಿಯನು ಮಾಡದೆ|
ಬದಲಿಸಿರಿ ನೀವದನು ಬೇಗನೆ
ಹದವಿದಿನ್ನೆಲ್ಲ!!
ರಾಗರಿಗಹಿತವಾದ ಹಲಸೇ
ಮಾಗುವ ಮೊದಲು ಸ್ವಲ್ಪ ಯೋಚಿಸು
ತಾಗಲಾಕಾಯಿಯ ಹುಳಿ ರಸನೆಗೆ ರುಚಿ ಹತ್ತುವುದೇ ,
ಆಗ ಕರೆದಿಹ ಹಪ್ಪಳದ ಜೊತೆ
ಕೂಗಿದ ನೆಪವಿರದೆ ಬರುವರೇ
ವೇಗದಲಿ ಖರ್ಚಾದರಡಿಗೆಯು ಹೆಮ್ಮೆಯು ನಿನಗದು
ರಾಗರಿಗೆ ಹಲಸು (ಹಣ್ಣಿನ ರೂಪದಲ್ಲಿ) ಅಷ್ಟೊಂದು ಇಷ್ಟವಿಲ್ಲೆಂದು ಹೇಳಿದ ನೆನಪು. ಅದರ ಕಾಯಿಯಲ್ಲಿ ಮಾಡಿದ ಹುಳಿ, ಹಪ್ಪಳಗಳಾದರೂ ಇಷ್ಟವಾಗಬಹುದೆಂದು ಭಾವಿಸಿ ಬರೆದಿದ್ದೇನೆ.
ಸ್ವಲ್ಪ ತಪ್ಪಾಗಿದೆ. ತಿದ್ದುತ್ತೇನೆ.
ತಿದ್ದಿದ್ದೇನೆ.
ರಾಗರಿಗಹಿತವಾದ ಹಲಸೇ
ಮಾಗುವ ಮೊದಲು ಕೊಂಚ ಯೋಚಿಸು
ತಾಗಲಾಕಾಯಿಯ ಹುಳಿ ರಸನೆಗೆ ರುಚಿ ಹತ್ತುವುದೇ ,
ಆಗ ಕರೆದಿಹ ಹಪ್ಪಳದ ಜೊತೆ
ಕೂಗಿದ ನೆಪವಿರದೆ ಬರುವರೇ
ವೇಗದಲಿ ಖರ್ಚಾದರಡಿಗೆಯು ಹೆಮ್ಮೆಯು ನಿನಗದು
ಹಲಸು ಹಣ್ಣಾಗಿರಲು ಹಿಡಿಸದು
ಹೊಲಸೆನಿಪ್ಪುದು ಕಾಣೆನೇತಕೊ
ಸಲಿಸೆ ಕಾಯಿಯ ಪಲ್ಯ-ಹಪ್ಪಳಗಳ ವಿಶೇಷಗಳ|
ಮೆಲುವೆನತಿಮುದದಿಂದ, ದಿಟವಿದ-
ನುಲಿದರೌ ನೀವಾದೊಡೀ ಕೃತಿ-
ಯಲಿ ಗಣಂಗಳ ಗತಿಯು ತಪ್ಪಿದೆ, ತಿದ್ದಿರದನೊಲ್ದು||
ತಕ್ಕ ಮಟ್ಟಿಗೆ ತಿದ್ದಿದ್ದೇನೆಂದುಕೊಂಡಿದ್ದೇನೆ.
ರಾಗರಿಗಹಿತವಾದ ಹಲಸೇ
ಮಾಗುವ ಮೊದಲು ಕೊಂಚ ಯೋಚಿಸು
ತಾಗಲಾಕಾಯ ಹುಳಿ ನಾಲಗೆಗೆ ರುಚಿ ಹತ್ತುವುದೇ ,
ಆಗ ಕರೆದಿಹ ಹಪ್ಪಳದ ಜೊತೆ
ಕೂಗಿದೊಡನೆಯೆ ಭರದಿ ಬರುವರೆ
ವೇಗದೆ ಮುಗಿಯಲಡಿಗೆ ತೇಗುತ ಹೆಮ್ಮೆ ನಿನಗಾಗ
ಧನ್ಯವಾದಗಳು. ತಿದ್ದುತ್ತೇನೆ.
ರಾಗರಿಂಗಹಿತವಹ ಹಲಸೇ
ಮಾಗುಮುನ್ನಮೆ ಯೋಚಿಸಿನಿತುಂ
ತಾಗೆ ಜಿಹ್ವೆಯನವರದೀಗಲೆ ಪುಳಿಯ ರುಚಿಯೊಪ್ಪು|
ಈಗ ಸುಟ್ಟಿಹ ಹಪ್ಪಳವೆನುತೆ
ಕೂಗಿದೊಡನೆಯೆ ಭರದೆ ಬರುತಲಿ
ವೇಗದಿಂ ಸೇವಿಸುತೆ ತೇಗಿರೆ ಹೆಮ್ಮೆ ನಿನಗಲ್ತೆ||
ಕಾಡುಮೇಡಾದೊಡಮಿದರ ನೆಲೆ
ನಾಡ ಜನಕಿದ ಸವಿವ ಚಪಲವು
ಬೇಡವಾದಿತೆ ಮಿಗಗಳಿಂಗಿದು ಭರಿಸಲವರುದರ |
ನೋಡಲರಿಶಿಣ ಬಣ್ಣ ಸುಂದರ
ಹೂಡಿ ಹುಗಿದಿರೆ ಮೇಣ ಸಾರೆಯು
ನೀಡುತಿರ್ಪುದು ರಸವನೊಂದನೆ ಬಿಡದೆ ತನ್ನತನ ||
ಹಿಂದೆ (ಪದ್ಯಪಾನ ಕಾವ್ಯ ಕುತೂಹಲವಾಗಿದ್ದಾಗ) ಹಲಸು ಹಾಗು ಮಾವುಗಳ ಬಗ್ಗೆ ಬರೆದ ಪದ್ಯಗಳು ಇಲ್ಲಿವೆ :: http://padyapaana.com/?p=38
ಕವಚ ಮುಳ್ಳಾಗಿರ್ದೊಡೇನಾ
ಸವಿಯೆಸಳುಗಳನೆನಿತು ಪೊಗಳಲಿ
ಛವಿಯು ಹೊನ್ನಿನ ತೆರದಿ ಶೋಭಿಪುದಧಿಕ ಬೆಡಗಿನಲಿ
ನವರತುನಗಳ ತೆರದ ಬೇಳೆಗೆ
ನವರಸಗಳ೦ತಿರ್ಪ ಹೊದಿಕೆಯು
ನವುರಿನ೦ಟಿನ ಪದರ ಪೊರ್ದಿದೆ ಭವದ ಬ೦ಧದೊಲು
ದಸ್ಮತಮ: Most wonderful
ಭಸ್ಮಗರ್ಭ: ಒಂದು ಜಾತಿಯ ಸಸ್ಯ. ಇಲ್ಲಿ ಹಲಸೇತರವಾದದ್ದೊಂದು ಎಂಬರ್ಥದಲ್ಲಿ ಮಾತ್ರ ಬಳಸಿಕೊಂಡಿದ್ದೇನೆ.
ವಿಸ್ಮಯವೆ ಕಾಂಬುವೆವು ಸಸ್ಯಜಗದೊಳಮಿತಂ
ದಸ್ಮತಮವಹುದು ಸಸ್ಯರಚನೆಗಳು|
ಭಸ್ಮಗರ್ಭಾದಿ ಪುಷ್ಪದಳಗಳು ಕರ್ಷಮಾ
ತ್ರಸ್ಮೇರ ಪಲಸೊಳಾಂತುವುವಿನಿದೊಳೆ||
In jackfruit it is the corolla which becomes the fruits (ತೊಳೆ)
ಕರ್ಷಮಾತ್ರಸ್ಮೇರ – ಪೂರ್ತಿ ಸಂಸ್ಕೃತವಾಯಿತೇನೋ?
one spelling error corrected:
ವಿಸ್ಮಯವೆ ಕಾಂಬುವೆವು ಸಸ್ಯಜಗದೊಳಮಿತಂ
ದಸ್ಮತಮವಹುದು ಸಸ್ಯರಚನೆಗಳು|
ಭಸ್ಮಗರ್ಭಾದಿ ಪುಷ್ಪದಳಗಳು ಕರ್ಷಮಾ
ತ್ರಸ್ಮೇರ ಪಲಸೊಳಾಂತುವವಿನಿದೊಳೆ||
ದುಷ್ಕರಪ್ರಾಸದೊಳ್ ಕಾವ್ಯಾವಿಷ್ಕಾರಂ ಮರೆಯಾದುದೇ?
ಪುಷ್ಕರಸ್ಥೆಯನಾನಲ್ಕೆ ಪುಷ್ಕಲಂ ಪದಸಂಪದಂ||
ಅಸ್ಮನ್ಮತದೆ ನಿತಾಂತಂ
ಪ್ರಸ್ಮೇರಕಚೋದ್ಯಮಲ್ತೆ ಪ್ರಾಸದ ಪರಿಯಿಂ|
ಘಸ್ಮರಗತಿಗಾಗಳ್ ಕೃತಿ
ವಿಸ್ಮರಣಕೆ ಸಲ್ವುದಲ್ತೆ ರಸವಿಸ್ತರಣಂ||
Ram, good that you posted that earlier blog here. I can’t let my verse be so. Here is the redraft.
In jackfruit it is the petals which become the fruitlings (ತೊಳೆ). The fruit here is the outer thorny shell!
ವಿಸ್ಮಯಂ ಸಸ್ಯಜಗದೊಳಗೆನಿತೊ ನೋಡು ನೀಂ
ದಸ್ಮತಮವೈ ಸಸ್ಯವಿನ್ಯಾಸಗಳ್|
’ಭಸ್ಮಗರ್ಭ(A plant specie)’ದ ಪುಷ್ಪದಳವಹುದು ಕರ್ಷಮಾ-
ತ್ರಸ್ಮೇರ (Pleasing so as to attract attention), ಪಲಸೊಳದೆ(ಪುಷ್ಪದಳ) ತೊಳೆಯಪ್ಪುದೈ||
ತನಿಯಪ್ಪತಿರುಳ್ಕಾಣ್ಕೆ ಮನಬಂದಂತೆ ನೇಹವೋ
ಘನವಪ್ಪುದಲಾ ಪೇಳ್ಸಜ್ಜನಮೋ ಪನಸೋಯಿದು
ಸಣ್ಣ ಮಾರ್ಪಾಡಿನೊಂದಿಗೆ
ತನಿಯಪ್ಪತಿರುಳ್ಗಾಣ್ಕೆ ಮನಬಂದಂತೆ ನೇಹಮೋ
ಘನವಪ್ಪುದಲಾ ಪೇಳ್ಸಜ್ಜನಮೋ ಪನಸೋಯಿದು
ಆನುಷ್ಟುಭಾಂಗದಿಂ ಬಂದೀ ಸಾನುರಾಗದ ಕಬ್ಬಮಂ|
ಆನೋದಿ ಪಲಸೊಳ್ ತೆತ್ತೆಂ ಮಾನಮಂ ಕವಿಗಾನಮಂ||
ಎಲ್ಲ ಪದ್ಯಪಾನಿಗಳಿಗೆ ನಮಸ್ಕಾರ. ನಾಲ್ಕು ವರ್ಷಗಳ ಹಿಂದೆ ತಾವು ಕೊಟ್ಟ ವಿಷಯದ ಮೇಲೆ ಈಗ ನಾನು ಬರೆಯುತ್ತಿದ್ದೇನೆ. ದಯವಿಟ್ಟು ತಪ್ಪುಗಳನ್ನು ತಿಳಿಸಿಕೊಡಿ.
ಎಳೆಯಿರಲು ತನಗಿಂತ ಫಲಬಿಡಲು ಮಾಮರವು
ಬೆಳೆದಿರ್ಪ ಹಲಸಸೂಯೆಯಿಂದುದರ ಹಿಚುಕಲ್
ಹಲಸಿನಂ ಫಲಪುಟ್ಟಿ ನೂರಧಿಕ ಸುತರಿಹರು
ಸೊಳೆಗಳವು ಗಾಂಧಾರಿ ಪುತ್ರರಂತಿಹವು ಕಾಣ್
ದುರುಳರ ಕೈಯಿಂದ ತನ್ನನ್ನು ರಕ್ಷಿಸ-
ಲಿರುವುದು ಹಲಸಿಗೆ ಮುಳ್ಳು
ಬಿರಿವರು ಜನರೆಲ್ಲ ಬೆದರದೆ ಮುಳ್ಳನ್ನು
ಹಿರಿದಾದ ಹಣ್ನನ್ನು ತಾವು
ಹೊರವಿಕಾರಮಿರಲೈ ಕೆಟ್ಟಿತೇಂ ಹಣ್ಣಿಂದು
ಬಿರಿದೊಡನೆ ಫಲದಂಶದೊಳ್ಳೆಯದು ನೀ ಕಾಣು
ನರಕೂಡ ಹಾಗೆಯೇ ಕರಿಬಣ್ಣಮಿರಲವನು
ಹಿರಿಮನವದೊಳ್ಳೆಯದು ಇರಬಹುದು ಪರಿಕಿಸಿರು
Idea is good. ಹೊರವಿಕಾರ ಅರಿಸಮಾಸವಾಯಿತು. ಸಮಪಾದಗಳಲ್ಲಿ ಕೊನೆಯ ಗಣವು ಊನವಿರಲಿ.