ಪದ್ಯಸಪ್ತಾಹ – ೨೦ – ಲಹರಿ ಪದ್ಯ ಕಲೆ, ಲಹರಿ Add comments May 132012 ನಿಮಗೆ ಇಷ್ಟವಾದ ಛಂದಸ್ಸಿನಲ್ಲಿ, ವೀರ ರಸದ ಪದ್ಯಗಳನ್ನು ಬರೆಯಿರಿ 7 Responses to “ಪದ್ಯಸಪ್ತಾಹ – ೨೦ – ಲಹರಿ” K.B.S Ramachandra says: May 14, 2012 at 1:12 pm ಸದ್ಯದ ಅವಧಾನದಲ್ಲಿನ ಚಿತ್ರ ಕವಿತೆಯ ಪರಿಹಾರ ವಿಷಯ :: ಛಂದಸ್ಸಿನ ಬಗ್ಗೆ ವಿವರಣೆ, ವರ್ಣನೆ [ಇಲ್ಲಿನ ಪರಿಹಾರದ ಛಂದಸ್ಸ್ಸು – ಕಂದ] ಬಂಧ :: ಗೋಮೂತ್ರಿಕಾ – ೧,೩ ನೆ ಸಾಲುಗಳಲ್ಲಿ ಹಾಗು ೨,೪ ನೇ ಸಾಲುಗಳಲಿ, ಪ್ರತಿ ಎರಡನೆ ಅಕ್ಷರ ಒಂದೇ ಇರಬೇಕು ಕಂದನು ನಡೆವುದ ಕಲಿಯಲ್ ಮಂದದ ಗತಿಯನ್ನು ತಾನು ತಿಳಿಯದ ತೋಷಂ ಕಂದವು ನಲಿವುದು ಕವಿಯಲ್ ಛಂದದ ಗಡಿಯಲ್ಲೆ ತಾರೆ ತಿರೆಯಲೆ ತೋರ್ಗುಂ [ಇದು ವೀರ ರಸದ್ದಲ್ಲದಿದ್ದರೂ ಹಾಕಿದ್ದೇನೆ. ಮನ್ನಿಸಿ] Reply Soma says: May 15, 2012 at 9:07 am Ram tumba chennagide 🙂 Reply V.R.BHAT says: May 17, 2012 at 10:56 am ಸಮಯಮಿತಿ ಪ್ರಯೋಗದಲ್ಲಿ ವಿಭಿನ್ನ ಪ್ರಯತ್ನ, ದಯಮಾಡಿ ತಿದ್ದುವುದು ಬೆಂಕಿ ಬಿರುಸುಗಳಟಾಟೋಪ ದಿಂದಲಂ ಸಂಕಟಮಂ ತಂದಿರ್ಪ ರಕ್ಕಸ ಕಾರ್ಯವಂ ನೆನೆದೊಡೆ ತೆಂಕಿನಿಂದಲೇ ನುಸುಳಿ ಒಳಪೊಕ್ಕು ಎಲ್ಲರಂ ಹತಗೈದು ಬಿಂಕವನಳಿವಾಸೆ ಯೆನಗಂ ಪಾಕಿಗಳಂ ಕಂಡೊಡೆ Reply ಜೀವೆಂ says: May 18, 2012 at 1:09 am ಕಿರಿದಾದೊಡೇಂ ಮೂರ್ತಿ ಪಿರಿದು ಕೀರ್ತಿಯದೆಂಬೆ; ಒರಲುತೊಳ್ಳೊಳ್ಳೆಂದು ಬರಲು ಕಳ್ಳಂ ಪರಿದು ಮೇಲೆರಗಿ ನೆಲಕೊರಗಿಸಲ್ಕಾಯಲಾ ಮರಿಯಾದೊಡೇಂ ನಾಯಿ ವೀರಮಲ್ತೆ? Reply ಜೀವೆಂ says: May 18, 2012 at 6:04 am ಕಿರಿದಾದೊಡೇಂ ಮೂರ್ತಿ ಪಿರಿದು ಕೀರ್ತಿಯದೆಂಬೆ; ಭರತಭೂಮಿಯನಾಕ್ರಮಿಸಲು ದುಷ್ಟಂ ತರಿದು ಕೊರಳಂ ತಲೆಯ ಚೆಂಡಾಡಿ ನೆತ್ತರಿಂ ಧರೆಯ ತೊಳೆದಪನಲ್ತೆ ಗೋರ್ಖವೀರಂ ಕಾರ್ಗಿಲ್ ಕಾಳಗದ ಸಂದರ್ಭವನ್ನಾಧರಿಸಿ. Reply prasAdu says: May 20, 2012 at 1:42 pm ಕಂಡು ಹಿಡಿಂಬನು ಸಿಡಿಯಲ್ ಮೊಂಡು ಹಿಡಿಂಬೆಯಳು ಗಂಡು ಕಲಿಯಂ ಕೂಡಲ್| ಕೊಂಡೊಡುಡುಂಬರಕಾಂಡವ ಚೆಂಡಾಡದೆ ಬಿಡುವನಲ್ಲ ಕಡು ಭೀಮ ಗಡಾ|| Reply prasAdu says: May 20, 2012 at 2:06 pm ’ಡ’ಕಾರತಾಡನವಷ್ಟೇ. ರಸಸ್ಫುರಣೆ ಬಹಳೇನಿಲ್ಲ. Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಸದ್ಯದ ಅವಧಾನದಲ್ಲಿನ ಚಿತ್ರ ಕವಿತೆಯ ಪರಿಹಾರ
ವಿಷಯ :: ಛಂದಸ್ಸಿನ ಬಗ್ಗೆ ವಿವರಣೆ, ವರ್ಣನೆ [ಇಲ್ಲಿನ ಪರಿಹಾರದ ಛಂದಸ್ಸ್ಸು – ಕಂದ]
ಬಂಧ :: ಗೋಮೂತ್ರಿಕಾ – ೧,೩ ನೆ ಸಾಲುಗಳಲ್ಲಿ ಹಾಗು ೨,೪ ನೇ ಸಾಲುಗಳಲಿ, ಪ್ರತಿ ಎರಡನೆ ಅಕ್ಷರ ಒಂದೇ ಇರಬೇಕು
ಕಂದನು ನಡೆವುದ ಕಲಿಯಲ್
ಮಂದದ ಗತಿಯನ್ನು ತಾನು ತಿಳಿಯದ ತೋಷಂ
ಕಂದವು ನಲಿವುದು ಕವಿಯಲ್
ಛಂದದ ಗಡಿಯಲ್ಲೆ ತಾರೆ ತಿರೆಯಲೆ ತೋರ್ಗುಂ
[ಇದು ವೀರ ರಸದ್ದಲ್ಲದಿದ್ದರೂ ಹಾಕಿದ್ದೇನೆ. ಮನ್ನಿಸಿ]
Ram tumba chennagide 🙂
ಸಮಯಮಿತಿ ಪ್ರಯೋಗದಲ್ಲಿ ವಿಭಿನ್ನ ಪ್ರಯತ್ನ, ದಯಮಾಡಿ ತಿದ್ದುವುದು
ಬೆಂಕಿ ಬಿರುಸುಗಳಟಾಟೋಪ ದಿಂದಲಂ
ಸಂಕಟಮಂ ತಂದಿರ್ಪ ರಕ್ಕಸ ಕಾರ್ಯವಂ ನೆನೆದೊಡೆ
ತೆಂಕಿನಿಂದಲೇ ನುಸುಳಿ ಒಳಪೊಕ್ಕು ಎಲ್ಲರಂ ಹತಗೈದು
ಬಿಂಕವನಳಿವಾಸೆ ಯೆನಗಂ ಪಾಕಿಗಳಂ ಕಂಡೊಡೆ
ಕಿರಿದಾದೊಡೇಂ ಮೂರ್ತಿ ಪಿರಿದು ಕೀರ್ತಿಯದೆಂಬೆ;
ಒರಲುತೊಳ್ಳೊಳ್ಳೆಂದು ಬರಲು ಕಳ್ಳಂ
ಪರಿದು ಮೇಲೆರಗಿ ನೆಲಕೊರಗಿಸಲ್ಕಾಯಲಾ
ಮರಿಯಾದೊಡೇಂ ನಾಯಿ ವೀರಮಲ್ತೆ?
ಕಿರಿದಾದೊಡೇಂ ಮೂರ್ತಿ ಪಿರಿದು ಕೀರ್ತಿಯದೆಂಬೆ;
ಭರತಭೂಮಿಯನಾಕ್ರಮಿಸಲು ದುಷ್ಟಂ
ತರಿದು ಕೊರಳಂ ತಲೆಯ ಚೆಂಡಾಡಿ ನೆತ್ತರಿಂ
ಧರೆಯ ತೊಳೆದಪನಲ್ತೆ ಗೋರ್ಖವೀರಂ
ಕಾರ್ಗಿಲ್ ಕಾಳಗದ ಸಂದರ್ಭವನ್ನಾಧರಿಸಿ.
ಕಂಡು ಹಿಡಿಂಬನು ಸಿಡಿಯಲ್
ಮೊಂಡು ಹಿಡಿಂಬೆಯಳು ಗಂಡು ಕಲಿಯಂ ಕೂಡಲ್|
ಕೊಂಡೊಡುಡುಂಬರಕಾಂಡವ
ಚೆಂಡಾಡದೆ ಬಿಡುವನಲ್ಲ ಕಡು ಭೀಮ ಗಡಾ||
’ಡ’ಕಾರತಾಡನವಷ್ಟೇ. ರಸಸ್ಫುರಣೆ ಬಹಳೇನಿಲ್ಲ.