ಕಾರಿನಾಟಮುಗಿದಂತೆ ಪಕ್ಕದೂರತ್ತ ನಡೆದ ವರುಣ
ವಾರಿಧಿಯ ದಾಟಿ ಮೋಡದೋಣಿಯಲಿ ಮುಗಿಲಸಾಲು ಹಾಯಿ
ಬಾರನಿನ್ನು ನನ್ನೂರಿಗೆಂದು ಹಿಡಿದಿಟ್ಟೆ ಬೆನ್ನ ಚಿತ್ರ
ಭೋರುಭೋರೆಂದು ನೆಲವ ದಣಿಸಿ ಸುರಿದಿದ್ದು ನೆನಪು ಮಾತ್ರ
ಆಕಾಶವು ನೀಲಿಯಾಗಿಲ್ಲ, ಆ ನೀಲವರ್ಣವನ್ನು ಸಾಗರವು ಬಿಂಬಿಸಬೇಕಿತ್ತು. ಚಿತ್ರಕಾರನು ದೈವಸೃಷ್ಟಿಯಲ್ಲಿಯ ವರ್ಣಗಳನ್ನು ತೋರಿಸದೆ, ಬರಿಯ ಮಾನವನಿರ್ಮಿತ ಹಡಗಿನ ಬೆಡಗನ್ನು ಏತ್ತಿತೋರಿಸಿದ್ದಾನೆ. Therefore the caption for this verse is:
Art for art-sake
ಆಗಸಂ ತಿಳಿಯ ನೀಲಿಯಿಲ್ಲವೈ
ಸಾಗರಂ ಬಗೆಯ ಬಿಂಬಿಸಿಲ್ಲವೈ
ನೀಗಿ ದೈವಕೃತಿಯೊಳ್ ವಿಶೇಷವಂ
ಬೀಗಲೇಕೆ ತನ ಸೃಷ್ಟಿಯೊಳ್ ನರಂ
(ರಥೋದ್ಧತ)
ಬೊಮ್ಮನೆನ್ನಯ ಸೃಷ್ಠಿ ರಸರಹಿತವಾಯ್ತೆಂದು
ಸುಮ್ಮನೆಯೆ ಕೂರುವುದೆ ಬೇಸರವು ತನಗೆಂದು
ಹೊಮ್ಮಿಹನು ಸೃಷ್ಠಿಯಂಚನು ದಾಟಿ ಹಾಯಿಯಲಿ
ಚಿಮ್ಮಲೆನೆ ಬಣ್ಣಗಳ ತನ್ನ ಲೀಲೆಯ ಮೇಲೆ
ಮೊಗದೊಳ್ಗೆ ನಗುವಿತ್ತು, ಸೊಗಸೆಂಬ ಪದವಿತ್ತು
ಬಿಗುವುಬಿನ್ನಾಣಮಂ ಪೆಣ್ಣೊಳಗೆ ಹುದುಗಿಟ್ಟು
ಸೊಗದಮಾಗಿಯ ತಂದು ಋತುಗಳೊಳ್ ಸಿಗಿಸಿಟ್ಟು
ಬಗೆವುಗುವ ಹಿಗ್ಗಿನಿಂ ಮನೆಯ ಸಿಂಗರಿಸಿದಂ
[ತನ್ನ black and white ಸೃಷ್ಠಿಗೆ ಬಣ್ಣ ಬಳಿಯಲು ಸೃಷ್ಠಿಕರ್ತ ಬರುತ್ತಿದ್ದಾನೆ – ಎಂದು ಹೇಳುವ ಯತ್ನ.]
Welcome to padyapaana. Its a Nice first entry. This is in 3 * 4 * 3 maatra pattern. Please spend some time(if not already) on the video tutorials under “Padya vidye” menu at the top left of the page. It will definitely be an enjoyable tutorial and We expect more verses in meters like bhamini, kanda etc. Loaded with aadi praasa too :-). Thanks for your interest and post once again.
ಸ್ವಾಗತಿಸಿದ್ದಕ್ಕೆ, ಶ್ರೀಶರಿಗೆ ಧನ್ಯವಾದಗಳು
ಸರಿಯಾಗಿ ಗುರುತಿಸಿದಿರಿ, ನನಗೆ ಛಂದಸ್ಸು ಮತ್ತು ಪದ್ಯ ರಚನೆಯ ಪೂರ್ಣ ಅರಿವಿಲ್ಲ, ಇದೊಂದು ನನ್ನ “ಆಸೆ” ಕವಿತೆಯಷ್ಟೆ.
“ಬಾಳ ಭರದ ಗೀತೆ ನಿಮ್ಮಾಶುಕವಿತೆ, ಬಂದ ಬಾರದ ಕವಿತೆ ನನ್ನ “ಶಿಶು” ಗೀತೆ”. ನಿಮ್ಮ ಆತ್ಮೀಯ ಸಲಹೆಗೆ ಮತ್ತೊಮ್ಮೆ ಧನ್ಯವಾದಗಳು.
“ಪದ್ಯ ವಿದ್ಯೆ” ಕೂಡಲೇ ಪ್ರಾರಂಭಿಸುವೆ, “ಪದ್ಯ ಪಾನ”ವಂತೂ ಶುರುವಾಗಿದೆ, ನಿಮ್ಮೆಲ್ಲರೊಂದಿಗೆ
ವಂದನೆಗಳು
ಉಷಾ ಉಮೇಶ್
ದೂರಸಾಗರದಲ್ಲಿ ದೋಣಿಯು
ನೀರವದಿ ಸಾಗುತ್ತ ಮುಂದಕೆ
ದೂರವೆಲ್ಲಿಗೊ ಪಯಣಹೊರಟಿದೆ ಹಾಯಿ ವರ್ಣಮಯ|
ಕಾರ್ಮುಗಿಲು ಸಾಲ್ಗಟ್ಟಿ ಬಂದಿವೆ
ಸೇರುತೊಂದರನೊಂದು ಜತೆಯಲಿ
ಘೋರಗಾಳಿಗು ಮಳೆಗು ಮುನ್ನವೆ ಸೇರುವುದೆ ಗಮ್ಯ ?
ಭಟ್ಟರೆ,
ಪದ್ಯ ಹೃದ್ಯ. ‘ತೋರಣದ ಬೆಳ್ ಮುಗಿಲ ಸಾಲವು’ ಎಂಬರೀತಿಯಲ್ಲಿ ನಾಲ್ಕನೇ ಸಾಲನ್ನು ಪೋಣಿಸಿದರೆ, ಪ್ರಾಸದ ಬೀಸು ಲೇಸು
ನನ್ನಿ ಮೌಳಿ, ತಮ್ಮ ಸಲಹೆಯನ್ನು ಅಳವಡಿಸಿದ್ದೇನೆ:
ದೂರಸಾಗರದಲ್ಲಿ ದೋಣಿಯು
ನೀರವದಿ ಸಾಗುತ್ತ ಮುಂದಕೆ
ದೂರವೆಲ್ಲಿಗೊ ಪಯಣಹೊರಟಿದೆ ಹಾಯಿ ವರ್ಣಮಯ|
ತೋರಣದ ಬೆಳ್ಮುಗಿಲ ಸಾಲವು
ಸೇರುತೊಂದರನೊಂದು ಜತೆಯಲಿ
ಘೋರಗಾಳಿಗು ಮಳೆಗು ಮುನ್ನವೆ ಸೇರುವುದೆ ಗಮ್ಯ ?
ಬಲುದಿನದ ಬಳಿಕ ಪದ್ಯಪಾನಕ್ಕೆ ಬಂದ ಭಟ್ಟರಿಗೆ ಮತ್ತೊಮ್ಮೆ ನಲ್ಬರವು:-) ಪದ್ಯ ಚೆಲುವಾಗಿದೆ.
ಸ್ವಾಮೀ, ನಾನು ಕೆಲವುದಿನ ಹೆಚ್ಚಿನಕಾಲ ನೆಟ್ ಪರಿತ್ಯಾಗಿಯಾಗಿ ಕಳೆದೆ! ಹೀಗಾಗಿ ಈಗ ಮರಳಿದೆ, ಧನ್ಯವಾದಗಳು
ಕಾರಿನಾಟ ಮುಗಿದಂತೆ ಪಕ್ಕದೂರತ್ತ ನಡೆದ ವರುಣ
ವಾರಿಧಿಯ ದಾಟಿ ಮೋಡದೋಣಿಯಲಿ ಮುಗಿಲಸಾಲು ಹಾಯಿ
ಮೂರನೆಯ ಪಾದ, ನಾಲ್ಕನೆಯ ಪಾದ ಮತ್ತೆಲ್ಲಿ ಎಲ್ಲಿ ಗೆಳೆಯ?
ಶಾರದೆಯ ನಾಲ್ಕು ನುಡಿರೂಹಿನಂತೆ ಪದ್ಯಕ್ಕೆ ತನ್ನಿರೆಳೆಯ||
ರಾಗರಾಸೆ ಪೂರೈಸ ಬಂತಿದೋ ಪಾದಯುಗ್ಮವೋಡಿ
ಕಾರಿನಾಟಮುಗಿದಂತೆ ಪಕ್ಕದೂರತ್ತ ನಡೆದ ವರುಣ
ವಾರಿಧಿಯ ದಾಟಿ ಮೋಡದೋಣಿಯಲಿ ಮುಗಿಲಸಾಲು ಹಾಯಿ
ಬಾರನಿನ್ನು ನನ್ನೂರಿಗೆಂದು ಹಿಡಿದಿಟ್ಟೆ ಬೆನ್ನ ಚಿತ್ರ
ಭೋರುಭೋರೆಂದು ನೆಲವ ದಣಿಸಿ ಸುರಿದಿದ್ದು ನೆನಪು ಮಾತ್ರ
ಆಕಾಶವು ನೀಲಿಯಾಗಿಲ್ಲ, ಆ ನೀಲವರ್ಣವನ್ನು ಸಾಗರವು ಬಿಂಬಿಸಬೇಕಿತ್ತು. ಚಿತ್ರಕಾರನು ದೈವಸೃಷ್ಟಿಯಲ್ಲಿಯ ವರ್ಣಗಳನ್ನು ತೋರಿಸದೆ, ಬರಿಯ ಮಾನವನಿರ್ಮಿತ ಹಡಗಿನ ಬೆಡಗನ್ನು ಏತ್ತಿತೋರಿಸಿದ್ದಾನೆ. Therefore the caption for this verse is:
Art for art-sake
ಆಗಸಂ ತಿಳಿಯ ನೀಲಿಯಿಲ್ಲವೈ
ಸಾಗರಂ ಬಗೆಯ ಬಿಂಬಿಸಿಲ್ಲವೈ
ನೀಗಿ ದೈವಕೃತಿಯೊಳ್ ವಿಶೇಷವಂ
ಬೀಗಲೇಕೆ ತನ ಸೃಷ್ಟಿಯೊಳ್ ನರಂ
(ರಥೋದ್ಧತ)
ಪದ್ಯವು ಸೊಗಸಾಗಿದೆ. ಕಡೆಯ ಸಾಲಿನಲ್ಲಿ”ತನ ಸೃಷ್ಟಿ’ ಎಂಬ ಅಸಾಧುರೂಪಕ್ಕಿಂತ ನಿಜಸೃಷ್ಟಿ ಎನ್ನುವ ಪದದ ಬಳಕೆ ಯುಕ್ತ.
ತನ್ನ = ನಿಜ. Thanks. I too was fumbling for a better expression at that point.
ಬದುಕು ಪಟದ ನೌಕೆಯ ಪೋ-
ಲ್ವುದು ಹವಣಿಸೆ ತಾ೦ ಸರಾಗದಿ೦ ಪಯಣವನ೦
ಹದವ೦ ತಪ್ಪಿಸಿ ರ೦ಗಿನ-
ವಿಧಿ ಹಾಯಿಯವೊಲು ವಿಚಿತ್ರ ಮಾಳ್ಪುದು ಪಥಮ೦
ವಿಚಿತ್ರ – uncommon, surprising , unplanned
ಪದ್ಯದ ಭಾವ ಸೊಗಸಾಗಿದೆ. ಆದರೆ ಮತ್ತು ಹಳಗನ್ನಡದ ಹದವೊಸರಬೇಕು:-)
ಭವಭಾವಂಗಳ ಮುನ್ನೀರ್
ನವೆಯಿಪುದೆಮ್ಮಂ ಸಿತಾಸಿತರುಚಿಯ ಭರದಿಂ|
ಕವಿತಾರಸನೌಕೆಯದೇ
ಸ್ತವನೀಯಂ ಸಕಲವರ್ಣರಾಗಸುರುಚಿರಂ||
(ಮುನ್ನೀರ್ = ಕಡಲು, ಸಿತಾಸಿತ = ಬಿಳುಪು+ಕಪ್ಪು, ರುಚಿ = ಬಣ್ಣ, ಬೆಳಕು, ಸವಿ,
ವರ್ಣ = ಬಣ್ಣ, ಆಯ್ಕೆ, ಸಮಾಜದ ವಿಭಾಗಕ್ರಮ, ಗಾನಭಾಗ, ನೃತ್ಯಭಾಗ, ಅಕ್ಷರ,
ರಾಗ = ಬಣ್ಣ, ಪ್ರೀತಿ, ಗಾನವಿಶೇಷ)
A diagonally opposite view as compared to mine. A subtle way of telling that mine is a bad composition 😉
Aha! Beautiful! Thanks for such as colorful poem on poetry.
ನಿಚ್ಚಂ ಪೊಸತೀ ಪ್ರಕೃತಿ
ಇಚ್ಛಾ ಕ್ರಿಯೆ ದ್ರವ್ಯ ಶಕ್ತಿ ಸಂಗಮದಿಂದಂ
ಆಚ್ಛಾದಿಪ ವರ್ಣಭ್ರಮೆ
ಸ್ವಚ್ಛ ಬ್ರಹ್ಮನದುಪಾಯ ಮಾಯಾಜಾಲಂ
ಕಡಲಾಳದಿಂದ ನವನಿಧಿಳೆಲ್ಲವು ಕೂಡಿ ಕರಗುತೆರಕವ ಹೊದ್ದು ಮೇಲೆದ್ದಿತೋ
ನಡುಬಿಸಿಲ ರವಿಕಿರಣ ಪ್ರಿಸಮಿನೊಳು ಸೇರಿ ಬಿಡುಗಡೆಯಾಗಿ ಪಡೆಯಿತೋ ಬಣ್ಣಗಳನು
ಸಡಗರದ ಸಂಧ್ಯೆ ಗಗನಾನಿಲವ ಚುಂಬಿಸಲು ಪಡೆದ ಪದವಿಯೊ ಶಕ್ರಚಾಪಕಾಂತಿ
ಜಡವಜಗ? ಜಗದೊಳೆಮೊಳೆತ ಮಾನವನ ಶಕ್ತಿ ದೃಢತೆವಡೆಯಲು ಕಾಣ್ಬ ಚೈತನ್ಯವೋ
ಎನುವ ಭಾವಗಳ ಬಣ್ಣವೇ ದೋಣಿಯಾಯ್ತೆ
ಕನಸು ಬಣ್ಣಗಳು,ಕಣ್ಣುಗಳೊ ಕಪ್ಪು ಬಿಳುಪು
ಮನವು ದೂಡುತ್ತ ದುಗುಡ ಹೊಸ ಭರವಸೆಯದು
ಜಿನುಗಿ ಮೇಲೇರಿ ಸಾಗಿತೇ ದೋಣಿಯಾಗಿ
“ಕನಸು ಬಣ್ಣಗಳು,ಕಣ್ಣುಗಳೊ ಕಪ್ಪು ಬಿಳುಪು” – ಬಲು ಸುಂದರವಾದ ಸಾಲು
[ ಗೋಪಾಲಕೃಷ್ಣ ಅಡಿಗರ ನೆರವು ಪಡೆದು … ]
ಮಳಲಗಾಡಾಗೆ ಮನವು ನೀರಸದ ದುಃಖದಳಲಿನಲ್ಲಿ
ಕಳೆದ ಸುಖದಿನದ ನೆನಪ ನೊಗದಿಂದ ಕುಸಿದ ಧೈರ್ಯದಲ್ಲಿ
ಗೆಳೆಯನೈತಂದ ಸಾಂತ್ವನದ ತಿಳಿಯ ಮಂದ ಹಾಸ ವಾಣಿ
ಅಳುವ ಕಡಲೊಳಗೆ ತೇಲುತಲೆ ಬಂದ ನಗೆಯ ಹಾಯಿ ದೋಣಿ ||
ಭಾಮಿನೀ ಷಟ್ಪದಿಯಲ್ಲಿ ಒಂದು ಪ್ರಯತ್ನ:
ಸುತ್ತ ಮುತ್ತಲು ಮಬ್ಬು ಕಂಡಿರ
ಲೆತ್ತ ಸಂತಸ ದಣಿದ ಮನಸಿಗೆ?
ಚಿತ್ತವನು ನಲಿಸೀತೆ ಬಣ್ಣದ ಹಾಯಿರುವ ನಾವೆ?
ಕುತ್ತು ಕಳವಳಗಳನು ತಾ ಮರೆ-
ಸುತ್ತ ತುಂಬಲು ಹುರುಪು ಸಹಚರಿ
ಮತ್ತೆ ಹಾಯೆನಿಪುದೀ ಜೀವಕೆ ಕವಿದ ಮುಸುಕಿನಲು!
ಲಗಂ ಕಳೆದು, ಒಂದು ಬದಲಾವಣೆಯೊಂದಿಗೆ:
ಸುತ್ತ ಮುತ್ತಲು ಮಬ್ಬು ಕಂಡಿರ
ಲೆತ್ತ ಸಂತಸ ದಣಿದ ಮನಸಿಗೆ?
ಚಿತ್ತವನು ನಲಿಸೀತೆ ಬಣ್ಣದ ಹಾಯಿರುವ ನಾವೆ?
ಕುತ್ತು ಕಳವಳಗಳನು ತಾ ಮರೆ-
ಸುತ್ತ ತುಂಬಲು ಹುರುಪು ಸಹಚರಿ
ಮತ್ತೆ ಹಾಯೆನಿಸೀತು ಜೀವಕೆ ಕವಿದ ಮುಸುಕಿನಲು!
ಇತ್ತ ಕಾಲಾಂತರದೆ ಸುಳಿಯುತ
ತೆತ್ತು ಕರ ರಸ ಪದ್ಯದಿಂದಲೆ ,
ಮತ್ತೆ ಪಾನವನುಣಿಸೆ ಬಂದವಗೀವೆ ನಲ್ಬರವ
🙂
ಮೊರೆಯುತಿರ್ದಾ ನೀಲ ಸಾಗರ
ಹರಡಿದಿನನಪ್ರತಿಮ ನೋಟಗ –
ಳಿರದ ಗಂಡಗೆ ತುಡಿವ ಮನಕಿನ್ನೀವವೇ ಮುದವ ?
ಹರಡಿ ಬಲೆಯನು ಮೀನ ರಾಶಿಯ
ತರುವೆ ತಾನೆಂದಗಲಿದವ ಹಿಂ –
ದಿರುಗುತಿರಲೀ ತಿರೆಯ ರಂಗುಗಳದಲೆ ಕಂಗೊಳಿಸಿ ||
ಬೊಮ್ಮನೆನ್ನಯ ಸೃಷ್ಠಿ ರಸರಹಿತವಾಯ್ತೆಂದು
ಸುಮ್ಮನೆಯೆ ಕೂರುವುದೆ ಬೇಸರವು ತನಗೆಂದು
ಹೊಮ್ಮಿಹನು ಸೃಷ್ಠಿಯಂಚನು ದಾಟಿ ಹಾಯಿಯಲಿ
ಚಿಮ್ಮಲೆನೆ ಬಣ್ಣಗಳ ತನ್ನ ಲೀಲೆಯ ಮೇಲೆ
ಮೊಗದೊಳ್ಗೆ ನಗುವಿತ್ತು, ಸೊಗಸೆಂಬ ಪದವಿತ್ತು
ಬಿಗುವುಬಿನ್ನಾಣಮಂ ಪೆಣ್ಣೊಳಗೆ ಹುದುಗಿಟ್ಟು
ಸೊಗದಮಾಗಿಯ ತಂದು ಋತುಗಳೊಳ್ ಸಿಗಿಸಿಟ್ಟು
ಬಗೆವುಗುವ ಹಿಗ್ಗಿನಿಂ ಮನೆಯ ಸಿಂಗರಿಸಿದಂ
[ತನ್ನ black and white ಸೃಷ್ಠಿಗೆ ಬಣ್ಣ ಬಳಿಯಲು ಸೃಷ್ಠಿಕರ್ತ ಬರುತ್ತಿದ್ದಾನೆ – ಎಂದು ಹೇಳುವ ಯತ್ನ.]
ಜಹಾಜಿನಲ್ಲಿರ್ಪುದು ರಾಜ್ಯವೆಲ್ಲಂ
ಚಹಾಗೃಹಂಗಳ್ ಪಣ-ಪಾನರಂಗಂ|
ಮಹಾತಲಂಗಳ್ ನಿಲಲಾ ವಿಮಾನಂ
ಸಹಾಸದಿಂದಾಡುಗು ಖೇಲವೆಲ್ಲಂ||
ಇದಾವುವುಂ ತಾವಿರದಿರ್ದೊಡೇನಾ
ಚಿದಾತ್ಮಕಂ ಬಾನ ವಿಶಾಲ ತಾವೊಳ್|
ಮುದಾವಹಂ ತಾನದಭಾವಭಾವಂ
ಪದಾರ್ಥವಾ ನಾವೆವೊಲಲ್ಲ ಭೇದ್ಯಂ||
(ಉಪೇಂದ್ರವಜ್ರಂ)
Correction suggested by Sri. RG to the 2nd line of 2nd verse:
ಚಿದಾತ್ಮಕಂ ಬಾನ ವಿಶಾಲದೊಳ್ಪೊಳ್|
Changes to last paada of 1st verse”
ಸಹಾಸದಿಂದಾಡುಗುಮೆಲ್ಲಮಾಟಂ||
ಇ೦ಬನಿತ್ತಿಹ ನೆಲೆಯ ಬೀಳ್ಕೊಡು
ತ೦ಬುದಗಳೇರುತಲಿ ಸೊಬಗಿನೊ
ಳ೦ಬರದಿ ನರ್ತಿಸುತ ಬೆಡಗಿನೊಳಾಡುತಿವೆ ಸೊಗದಿ
ಅ೦ಬಿಗರು ಕೈಗೋಲ ಹಾಕುತ
ಅ೦ಬುಧಿಯನುತ್ತರಿಸುತಿರ್ಪರು
ಅ೦ಬ ಬಿಲ್ಲಿ೦ದೆಸೆವ ತೆರ ಸೊಬಗಿ೦ದ ನಾವೆಯೊಳು
ಸೊಬಗಿನ ಪುನರಾವರ್ತನೆಯನ್ನು ತಪ್ಪಿಸಲು ತಿದ್ದುಪಡಿ .
ಇ೦ಬನಿತ್ತಿಹ ನೆಲೆಯ ಬೀಳ್ಕೊಡು
ತ೦ಬುದಗಳೇರುತಲಿ ಸೊಬಗಿನೊ
ಳ೦ಬರದಿ ನರ್ತಿಸುತ ಬೆಡಗಿನೊಳಾಡುತಿವೆ ಸೊಗದಿ
ಅ೦ಬಿಗರು ಕೈಗೋಲ ಹಾಕುತ
ಅ೦ಬುಧಿಯನುತ್ತರಿಸುತಿರ್ಪರು
ಅ೦ಬ ಬಿಲ್ಲಿ೦ದೆಸೆವ ತೆರ ಭರದಿ೦ದ ನಾವೆಯೊಳು
೧) 1st pAda: ಬೀಳ್ಗೊಂಡಂಬುದಗ… would be better
೨) Last 2 pAda-s: ಆರಂಭದಲ್ಲಿರುವ ವಿಸಂಧಿದೋಷಗಳನ್ನು ಸುಲಭದಲ್ಲಿ ನೀವೇ ತಿದ್ದಬಹುದು.
ತಿದ್ದುವಿಕೆಗೆ ಧನ್ಯವಾದ ಪ್ರಸಾದರೆ.
ಇ೦ಬನಿತ್ತಿಹ ನೆಲೆಯ ಬೀಳ್ಕೊ೦
ಡ೦ಬುದಗಳೇರುತಲಿ ಸೊಬಗಿನೊ
ಳ೦ಬರದಿ ನರ್ತಿಸುತ ಬೆಡಗಿನೊಳಾಡುತಿವೆ ಸೊಗದಿ
ಅ೦ಬಿಗರು ಕೈಗೋಲ ಹಾಕುತ
ಲ೦ಬುಧಿಯನುತ್ತರಿಪ ಸೊಗ ಕಾ
ಣ೦ಬ ಬಿಲ್ಲಿ೦ದೆಸೆವ ತೆರ ಭರದಿ೦ದ ನಾವೆಯೊಳು
ವಿಷಜಂತು ಮಾಡಿದವೆ ನೀಲ್ಗಡಲ ಕರಿದು
ಹಸನಾದ ಮೇಘನಿಗು ಮಸಿಬಣ್ಣ ಬಳಿದು
ನಸುಹಳದಿ ನಾವೆರುಚಿ ಬದಲಿಸದು ನೋಡು
ಕೆಸರ ಸಂಸಾರದಾ ಸಾಧುಗಳ ಪಾಡು
“ಪದ್ಯಪಾನ”ದಿಂದ ಬಂದ “ಪತ್ತು” !!
ನೆಲದ ನೆಲವಿನಮೇಲೆ
ಕಪ್ಪು ಬಿಳುಪಿನ ಲೀಲೆ ||
ಮುಗಿಲು ಮುತ್ತಿದೆಯಲ್ಲೆ
ಅಲೆಯು ಅಲೆದಿದೆಯಲ್ಲೆ
ಸಪ್ತ ವರ್ಣದ ಬಿಲ್ಲೆ
ಅಲ್ಲಿ ತೇಲಿದೆಯಲ್ಲೆ ||
ಹಾಯಿ ಹುಟ್ಟಿದೆಯಲ್ಲೆ
ಹಾಸ ಗುಟ್ಟಿದೆಯಲ್ಲೆ
ಗಗನ ಮುಟ್ಟಿದೆಯಲ್ಲೆ
ನಿನಗೆ ಎಲ್ಲೆ ಎಲ್ಲೆ ?
ಮೂಲೆ ಕೂಡಿದೆಯಲ್ಲೆ
ಬಿಂಬ ಮೂಡಿದೆಯಲ್ಲೆ
ಗಾಜ ಗೋಜಿದೆಯಲ್ಲೆ
ಬಂದ ಬಣ್ಣವ ಬಲ್ಲೆ !!
Usha avare,
Welcome to padyapaana. Its a Nice first entry. This is in 3 * 4 * 3 maatra pattern. Please spend some time(if not already) on the video tutorials under “Padya vidye” menu at the top left of the page. It will definitely be an enjoyable tutorial and We expect more verses in meters like bhamini, kanda etc. Loaded with aadi praasa too :-). Thanks for your interest and post once again.
ಸ್ವಾಗತಿಸಿದ್ದಕ್ಕೆ, ಶ್ರೀಶರಿಗೆ ಧನ್ಯವಾದಗಳು
ಸರಿಯಾಗಿ ಗುರುತಿಸಿದಿರಿ, ನನಗೆ ಛಂದಸ್ಸು ಮತ್ತು ಪದ್ಯ ರಚನೆಯ ಪೂರ್ಣ ಅರಿವಿಲ್ಲ, ಇದೊಂದು ನನ್ನ “ಆಸೆ” ಕವಿತೆಯಷ್ಟೆ.
“ಬಾಳ ಭರದ ಗೀತೆ ನಿಮ್ಮಾಶುಕವಿತೆ, ಬಂದ ಬಾರದ ಕವಿತೆ ನನ್ನ “ಶಿಶು” ಗೀತೆ”. ನಿಮ್ಮ ಆತ್ಮೀಯ ಸಲಹೆಗೆ ಮತ್ತೊಮ್ಮೆ ಧನ್ಯವಾದಗಳು.
“ಪದ್ಯ ವಿದ್ಯೆ” ಕೂಡಲೇ ಪ್ರಾರಂಭಿಸುವೆ, “ಪದ್ಯ ಪಾನ”ವಂತೂ ಶುರುವಾಗಿದೆ, ನಿಮ್ಮೆಲ್ಲರೊಂದಿಗೆ
ವಂದನೆಗಳು
ಉಷಾ ಉಮೇಶ್
“ಪದ್ಯ ವಿದ್ಯೆ” ಪ್ರಾರಂಭದ ಗಣಪತಿ ಸ್ತುತಿ.
“ಗಣೇಶ ವಂದನೆ ಸಲ್ಲಿಸೆ ಬಂದೆನು”
“ನಿಬಿಡ ಬಂಧ”ದಲ್ಲಿ ತೇಲಿದ ಚೌಪದಿಯ “ಬಣ್ಣದ ದೋಣಿ”
ತೊರೆ ನೊರೆಯ ತೆರೆ ಮೊರೆಯ ಆಲೋಡನ
ತೆರೆ ತೊರೆಯ ತೆರೆ ಮರೆಯ ಆಲಿಂಗನ |
ನೊರೆಯನೊರೆಯೆ ಬೆಳ್ಮುಗಿಲ ನವನೀತ
ತೆರೆದು ಕರೆಯೆ ಸುಪ್ತ ವರ್ಣನವನೀತ |
ಗುಣ/ಗಣ ಬದ್ಧ “ಪದ್ಯ ಪಾಠ” ಆನಂದತಂದಿದೆ.
ಆದಿಪ್ರಾಸ ತ್ರಾಸತಂದಿತು. ಹಳೆಗನ್ನಡ ಓದಬೇಕಿದೆ. ಪದಸಂಪತ್ತು ಸಾಲದು.
ತಪ್ಪಿದ್ದರು “ಕಂದ”ನೆಂದು ಒಪ್ಪಿಸಿಕೊಳ್ಳಿ.
ಪದ್ಯ ಲೋಕ ಇಷ್ಟವಾಯ್ತು