Jul 232011
 

ಆದಿಪ್ರಾಸವಿರದ ವಾರ್ಧಕ ಷಟ್ಪದಿ

ಕ್ಷಾಮವತಿಯದೊಡೇನ್? ರೋಗದಿಂ ಕೃಶನಾಗೆ
ಶಿಥಿಲಪ್ರಾಯವು ಬಡಿದು ಹತ್ತಾರು ಕಷ್ಟಗಳ –
ನಿಂದ ಬುಧ್ಧಿಯು ಸಮತೆ ಕಳೆಚಿರಲು ದೇಹದಿಂ ಪ್ರಾಣಜಾರುತಲಿರ್ದೊಡೇನ್?
ಮದಗಜಗಳಧಿಪನಲಿ ನೆತ್ತಿ ಸೀಳುತ ಕವಳ
ಸವೆಯ ಬಯಸುವವೊಂದೆ ಮನದಾಸೆ ಹೊಂದಿರ್ಪ
ಮಹನೀಯಮಾನಿಗಳ ಮೊದಲಿಗನು ಕೆಸರಿಯು ಜೀರ್ಣಿಪನೆ ಹುಲ್ಲ ತಿಂದು?

  One Response to “क्षुत्क्षामोपि जराकृशोपि शिथिलप्रायोपि… ಕನ್ನಡದಲ್ಲಿ”

  1. ಸೋಮರವರೇ,
    ಬಿಡುವು ಮಾಡಿಕೊಂಡು ಈ ವಾರ್ಧಕ ಷಟ್ಪಧಿಯ ಕಾವ್ಯವನ್ನು ಓದಿದೆ. ನಿಜ ಕೇಸರಿಗಳು ಮತ್ತು ಹುಲಿಗಳಂಥಾ ವ್ಯಕ್ತಿತ್ವದವರು ಹುಲ್ಲು ತಿನ್ನದೇ ಇರುವುದರಿಂದ ಅವುಗಳ ಸಂತತಿ ವಿನಾಶದ ಅಂಚಿನಲ್ಲಿದೆ!ನಿಮ್ಮ ಅನುವಾದ ಚೆನ್ನಾಗಿದೆ; ಒಂದೆರಡು ಕಡೆ ಮುದ್ರಾರಾಕ್ಷಸನ ಹಾವಳಿ ಕಂಡು ಬಂದಿದೆ – ಅದನ್ನು ನೀಗಿಸಿಕೊಳ್ಳುವಿರೆಂದು ತಿಳಿಯುತ್ತೇನೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)