ಗಣೇಶ್ ಸರ್
ಈ ರೀತಿಯ ವಕ್ರವಾದ ವರ್ಣನೆ ಮಾಡಬಹುದು ಅಲ್ಲವೇ, ಅಲಂಕಾರದ ತರಗತಿಯಲ್ಲಿ ಇಂತಹ ಪ್ರಯೋಗದ ಉಲ್ಲೇಖ ಮಾಡಿದ ನೆನಪಿದೆ, ಆದರೆ ಹುಡುಕಿದರೆ ಯಾವುದೆಂದು ಸಿಗುತ್ತಿಲ್ಲ. ಸರಿಯಿದೆಯೇ? ಸರಿಯಿದ್ದರೆ ಯಾವ ಅಲಂಕಾರವೆಂದು ತಿಳಿಸಿರಿ
ಹೌದಯ್ಯ ಸೋಮ! ನೀನು ಬಲುಜಾಣನಪ್ಪ! ಇದು ವ್ಯಾಜಸ್ತುತಿಯೆಂಬ ಅಲಂಕಾರ. ನಿಂದೆಯ ಮುಸುಕಿನಲ್ಲಿ ಮಾಡುವ ಹೊಗಳಿಕೆಯೇ ವ್ಯಾಜಸ್ತುತಿ. ಒಳ್ಳೆಯ ಶ್ರೀಹರ್ಷನ ಶೈಲಿಯಲ್ಲಿ ಪದ್ಯವನ್ನು ರಚಿಸಿದ್ದೀಯ (ಹೋಲಿಸಿರಿ: ನೈಷಧೀಯಚರಿತ ೧೨-೧೦೬).
सर्वामयमहाकाल राकामालेश भो कुरु ।
भक्तज्वरविनाशं च वामशङ्केतिबाधनम् ॥
ಸರ್ವಾಮಯಮಹಾಕಾಲ => ಸರ್ವರೋಗಗಳಿಗೂ ಮಹಾಕಾಲನಾಗಿರುವ
ರಾಕಾ-ಮಾಲೇಶ => ಹುಣ್ಣಿಮೆಗಳ ಮಾಲೆಯಾಗಿರುವ ಆಯುಷ್ಯದ ಎಂದರೆ ಜೀವನದ ಅಧಿಪ (ಸಹಸ್ರಚಂದ್ರ ದರ್ಶನ ಮಾಡುವುದಿಲ್ಲವೇ?) – ಸ್ವಲ್ಪ ಎಳೆತ ಇಲ್ಲಿ 🙂
ಭಕ್ತಜ್ವರವಿನಾಶಂ ಚ => ಭಕ್ತರ ಜ್ವರದ ನಾಶವನ್ನು ಮತ್ತು
ವಾಮಶಂಕೇತಿಬಾಧನಂ => ವಮನ, ಶಂಕೆ (ಮನೋದೌರ್ಬಲ್ಯ) ಮತ್ತು ಈತಿಗಳ ಬಾಧನವನ್ನು
ಭೋ ಕುರು
The rest are ’diseases’ except jvara (fever), which is a ‘symptom’; विषमज्वर is a disease.
ಪ್ರಶ್ನೆಯೊಳು ದೋಷವಿರ್ಪುದು ವಿಚಾರಿಸೆ ಪರಿ-
ಪ್ರಶ್ನೆಯೇಳ್ವುದು ದತ್ತಪದವ ಕುರಿತು|
ಪೃಶ್ನಿಯಪ್ಪುದು ದೇಹ ರೋಗಂಗಳೊಳುಳಿದೀ
ಪ್ರಶ್ನೆ – ಜ್ವರವು ರೋಗಲಕ್ಷಣವು ತಾಂ||
ನನ್ನ ಪದ್ಯದ ಆಶಯ ಇಷ್ಟೇ. ಓ ಧನ್ವಂತರಿಯೇ, ನೀನಿಲ್ಲದಿದ್ದರೆ ಸಾಧಾರಣ ರೋಗಗಳನ್ನು ನಿವಾರಿಸಿಕೊಳ್ಳಲೂ ಕೇವಲ ಧನಿಕರಿಗೆ ಮಾತ್ರ ಸಾಧ್ಯವಾಗುತ್ತಿತ್ತು. ನಿನ್ನ ಕೃಪೆಯಿಂದ ಎಲ್ಲರೂ ರೋಗಮುಕ್ತರಾಗಬಹುದು.
Never had I strove as much to pen such a naive verse, that too compromising on prAsa 🙁
ಕ್ಷಯಕಾಲರಾಹಿತ್ಯ ಧನ್ವಂತರಿಯ ಕೊಡುಗೆ
ಲಯ ಪಥ್ಯದಿಂ ರೋಗ ಕಾಮಾಲೆಯು|
ಹರಿಯೆ ಜ್ವರವು ಬೇಗ ಗಿಡಮೂಲಿಕೆಗಳಿಂದೆ
ಪರಿಣಾಮ – ಶಂಕೆಯೊಂದುಮಿರದೆಂಬೆಂ||
ಹುರಿಯೆ ರೋಗದಬೀಜ ಕಾಲರಾತ್ರಿಯವಿಭವ
ವರವೊ ಜ್ವರಾಪಹಪ್ರಿಯಸಖನದೈ
ವರಮೂಲಿಕಾಮಾಲೆ ಧನ್ವಂತರಿಯಲೀಲೆ
ಯಿರೆ ಸೌಖ್ಯದಾಮ ಶಂಕೆಯವಿರಾಮ
ಕಾಲರಾತ್ರಿ: ೭೭ನೇವರ್ಷದ ೭ನೇ ಮಾಸದ ೭ನೇ ರಾತ್ರಿಯನ್ನು ಆರೋಗ್ಯದಿಂದ ಅನುಭವಿಸುವ ಭಾಗ್ಯ
ಜ್ವರಾಪಹ(ಬಿಲ್ವಪತ್ರೆ)+ಪ್ರಿಯ(ಶಿವ)+ಸಖ(ಮಿತ್ರ-ವಿಷ್ಣುವಿನ) ಅಂಶನಾದ ಧನ್ವಂತರಿ
ದಾಮ = ಹಾರ, ರಕ್ಷಾಪಟ್ಟಿಕೆ
ಲೀಲೆಯಿಂ ದತ್ತಪದ್ಯಂ ದಲ್ ಸಾಲಂಕಾರಂ ರಸಾವಹಂ|
ಮಾಲೆಯಯ್ ವಾಣಿಗಂ ನಿಮ್ಮೀ ಶೀಲನಂ ಚಂದ್ರಚೂಡರೇ!
ಮೆಚ್ಚುವಾತಿಂಗಿದೋ ಮಾನ್ಯಾ ಸ್ವಚ್ಛಭಾವದಿವಂದಿಪೆಂ
ಕಾಲರಾ ಕಾಮಾಲೆಯಾಮಶಂಕೆ ಜ್ವರದ
ಲೀಲೆ ನೀನಿರ್ದೊಡಂ ಪೆರ್ಚಿತೆಂಬ
ಸಾಲಿಂದೆ ಪಾಡಿಪರ್ ಮೂಗರೆಲ್ಲರ್ ಗಡಾ
ಜೋಲುತ್ತೆ ಜೇಡನಿಹ ಬಲೆಯ ನೂಲೊಳ್
ಗಣೇಶ್ ಸರ್
ಈ ರೀತಿಯ ವಕ್ರವಾದ ವರ್ಣನೆ ಮಾಡಬಹುದು ಅಲ್ಲವೇ, ಅಲಂಕಾರದ ತರಗತಿಯಲ್ಲಿ ಇಂತಹ ಪ್ರಯೋಗದ ಉಲ್ಲೇಖ ಮಾಡಿದ ನೆನಪಿದೆ, ಆದರೆ ಹುಡುಕಿದರೆ ಯಾವುದೆಂದು ಸಿಗುತ್ತಿಲ್ಲ. ಸರಿಯಿದೆಯೇ? ಸರಿಯಿದ್ದರೆ ಯಾವ ಅಲಂಕಾರವೆಂದು ತಿಳಿಸಿರಿ
ಹೌದಯ್ಯ ಸೋಮ! ನೀನು ಬಲುಜಾಣನಪ್ಪ! ಇದು ವ್ಯಾಜಸ್ತುತಿಯೆಂಬ ಅಲಂಕಾರ. ನಿಂದೆಯ ಮುಸುಕಿನಲ್ಲಿ ಮಾಡುವ ಹೊಗಳಿಕೆಯೇ ವ್ಯಾಜಸ್ತುತಿ. ಒಳ್ಳೆಯ ಶ್ರೀಹರ್ಷನ ಶೈಲಿಯಲ್ಲಿ ಪದ್ಯವನ್ನು ರಚಿಸಿದ್ದೀಯ (ಹೋಲಿಸಿರಿ: ನೈಷಧೀಯಚರಿತ ೧೨-೧೦೬).
ಚೆನ್ನಾಗಿದೆ. ಮೂಗರು ಹಾಡುವದು ಮತ್ತು ಬಲೆಯ ನೂಲಲ್ಲಿ ಜೋಲುವದು 🙂
Ganesh Sir, Kanchana avare, dhanyavAdagaLu
ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶದಲ್ಲಿರುವ ಕವಿಯೊಬ್ಬ ಸಕಲರಿಗಾಗಿ ಸಲ್ಲಿಸುವ ಪ್ರಾರ್ಥನೆಯ ಕಲ್ಪನೆ —
ಕಾಲ ರಾವಣನಟ್ಟಹಾಸಕೆ
ವೋಲೆಗಾರನ ತೆರದಿ ಹುಡುಕುತ
ಮೂಲೆ ಮೂಲೆಗು ಜವ ರಭಸದಿ೦ದಿಳಿದ ನೋಡಿಲ್ಲಿ I
ಮೂಲ ವೈದ್ಯನ ಬೇಡುವೆನು ನಾ೦
ಮೂಲಿಕಾ ಮಾಲೆಯಿದನರ್ಪಿಸಿ
ಯಾಲಿಸೀ ನಿಷ್ಕಾಮ ಶಂಕೆಗಳಿಂದೊರೆವ ಸುತನಾ II
ನಿಷ್ಕಾಮ ಶಂಕೆ=ಫಲಾಪೇಕ್ಷೆಯಿಲ್ಲದೆ : ಆದರೆ ಭಯದಿಂದ,ಆತಂಕದಿಂದ ಸಂಪೂರ್ಣ ಶರಣಾಗಿ ಅನ್ನುವ ಅರ್ಥದಲ್ಲಿ ಬಳಸಿದ್ದೇನೆ
”ಮೂಲಿಕಾ ಮಾಲೆ” ಅನ್ನುವುದು ಪದ್ಯವನ್ನೇ ಸಾಂಕೇತಿಕವಾಗಿ ಬಳಸಿದ್ದೇನೆ .ಜ್ವರ ಅನ್ನುವಲ್ಲಿ ಜವರ ಪ್ರಯೋಗ ಸರಿಯೇ ?ತಪ್ಪಿದ್ದರೆ ದಯವಿಟ್ಟು ತಿಳಿಸಿ
ಸಣ್ಣ ತಿದ್ದುಪಡಿ–
ಕಾಲ ರಾವಣನಟ್ಟಹಾಸಕೆ
ವೋಲೆಗಾರನ ತೆರದಿ ಹುಡುಕುತ
ಮೂಲೆ ಮೂಲೆಗು ಜವ ರಭಸದಿ೦ದಿಳಿದ ನೋಡಿಲ್ಲಿ I
ಮೂಲ ವೈದ್ಯನ ಬೇಡುವೆನು ನಾ೦
ಮೂಲಿಕಾ ಮಾಲೆಯಿದನರ್ಪಿಸ
ಲಾಲಿಸೀ ನಿಷ್ಕಾಮ ಶಂಕೆಗಳಿಂದೊರೆವ ಸುತನಾ II
ಅರ್ಪಿಸಲು+ ಆಲಿಸು+ಈ =ಅರ್ಪಿಸಲಾಲಿಸೀ
ಪದ್ಯವು ಚೆನ್ನಾಗಿದೆ; ಅಭಿನಂದನೆಗಳು.
Sir, thank you.
ಪರಿಮಳದ ಮಲ್ಲಿಕಾ ಮಾಲೆಯಂ ಹೆಣೆಯುತ್ತ
ಲಿರುವಂತ ಮೋಹಜ್ವರವನಳಿಸಲು,
ಚಿರಕಾಲ ರಾಜಿಸಲು ಹೃದಯ ಮಂದಿರದಲ್ಲಿ
ಕರೆವೆನಾ ಹರಿನಾಮ ಶಂಕೆಯಿರದೇ
ಅಚ್ಚುಕಟ್ಟಾದ ಪೂರಣ; ಧನ್ಯವಾದಗಳು.
ಧನ್ಯವಾದಗಳು,ಸರ್.
चन्द्रेण नष्टेव हि कालरात्रिर्
धन्वन्तरे त्वं ज्वरनाशकोऽसि।
भोः कामशङ्केऽपि शरण्यता ते
कामालये येन तवैव कीर्तिः॥
ಉತ್ತಮಂಪೂರಣಂ ವಿಶಿಷ್ಯ ಹ್ರಸ್ವೇ ವೃತ್ತೇ ನಿಬದ್ಧಮಿತಿ ಸ್ತುತ್ಯರ್ಹಮೇವ|
सर्वामयमहाकाल राकामालेश भो कुरु ।
भक्तज्वरविनाशं च वामशङ्केतिबाधनम् ॥
ಸರ್ವಾಮಯಮಹಾಕಾಲ => ಸರ್ವರೋಗಗಳಿಗೂ ಮಹಾಕಾಲನಾಗಿರುವ
ರಾಕಾ-ಮಾಲೇಶ => ಹುಣ್ಣಿಮೆಗಳ ಮಾಲೆಯಾಗಿರುವ ಆಯುಷ್ಯದ ಎಂದರೆ ಜೀವನದ ಅಧಿಪ (ಸಹಸ್ರಚಂದ್ರ ದರ್ಶನ ಮಾಡುವುದಿಲ್ಲವೇ?) – ಸ್ವಲ್ಪ ಎಳೆತ ಇಲ್ಲಿ 🙂
ಭಕ್ತಜ್ವರವಿನಾಶಂ ಚ => ಭಕ್ತರ ಜ್ವರದ ನಾಶವನ್ನು ಮತ್ತು
ವಾಮಶಂಕೇತಿಬಾಧನಂ => ವಮನ, ಶಂಕೆ (ಮನೋದೌರ್ಬಲ್ಯ) ಮತ್ತು ಈತಿಗಳ ಬಾಧನವನ್ನು
ಭೋ ಕುರು
ಭವತಾ ಇತೋsಪಿ ಹ್ರಸ್ವೇ ಛಂದಸಿ ಸಾಲಂಕಾರಂ ಸಲೀಲಂ ಪೂರಣಂ ವಿಹಿತಮಿತಿ ನ ಕಸ್ಯ ಮನಸ್ತೋಷಾಯ?
iti bhavatAM vishvAsaH | dhanyavAdAH |
ಸಮ್ಯಕ್ತಯಾ ಶಬ್ದಾಃ ಯೋಜಿತಾಃ ರಾಘವೇಂದ್ರಮಹೋದಯ
Very compact. Thanks for a good verse.
Thank you, prasAdu-Mahesh-mahodayau!
ಸ್ತುತಿಪೆನಾಂ ಚಿರಕಾಲರಾಜಯೋಗವನೀಡೆ
ನುತಮಲ್ಲಿಕಾಮಾಲೆಯಿಂ ಪೂಜಿಪೆ|
ಗತಿನೀನೆ ಧನ್ವಂತರೀ! ಜ್ವರವ ಕಳೆಯೆನ್ನ
ಸುತಗಾಮಶಂಕೆಯಿಂ ಮುಕ್ತಿಗೊಳಿಸೈ|
ಅಚ್ಚುಕಟ್ಟಾದ ಪೂರಣ! ಧನ್ಯವಾದಗಳು.
Thank you sir! 🙂
ಚೆನ್ನಾಗಿದೆ ಚೀದಿ. ಕೊನೆಯ ಪಾದವನ್ನು ’ಸುತಗಾಮಶಂಕೆಯಿಂ ಮುಕ್ತಿ ನೀಡೈ’ ಅಥವಾ ’ಸುತನಾಮಶಂಕೆಯಂ ನೀ ವಾರಿಸೈ’ ಎಂದು ಅನ್ವಯವನ್ನು ಚೆನ್ನಾಗಿಸಬಹುದು.
ಕಾಮಾಲೇರ್ಮಿತ್ರ ಪೀಯೂಷೈಃ
ತ್ವಂ ಕಾಲಕಾಲ ರಾಜಸೇ |
ಹರಾಪದಾಮಶಂಕಂ ಮೇ
ಜಾಡ್ಯಜ್ವರಾದಿಕಾರಣಮ್ ||
(ರಲಯೋರಭೇದಃ ಇತಿ ಕೃತ್ವಾ) ಕಾಮಾಲೇಃ ಕಾಮಾರೇಃ ಶಿವಸ್ಯ ಮಿತ್ರ (ಹೇ ವಿಷ್ಣೋ) ಹೇ ಕಾಲಕಾಲ ಮೃತ್ಯುಹನ್ತಕ ಪೀಯೂಷೈಃ ಅಮೃತೈಃ ತ್ವಂ ರಾಜಸೇ (ಸಮುದ್ರಮಥನೇ). ಅಪದಾಂ ಕಷ್ಟಾನಾಂ ಜಾಡ್ಯಜ್ವರಾದೀನಾಂ ಕಾರಣಂ ಮೇ ಮಮ ಅಶಂಕಂ ಹರ ನಿಃಶೇಷಂ ನಿವಾರಯ. “ಹರ”, “ಕಾಲ”, “ಕಾಮಾರೇಃ” ಇತಿ ಶಿವದ್ಯೋತಕೇನ ಮುಖರಿತೇನ ವಿಷ್ಣುರೂಪಃ ಅತ್ರ ಸ್ತುತಃ ಇತಿ ಕೃತ್ವಾ ಕಶ್ಚಿತ್ ದೊಷಃ ಭವೇದಿತಿ ಶಂಕೇ.
ಮೀರೆ ಜ್ವರ ಕಾಮಾಲೆಯು
ದೋರುದು ಪೊರೆ ದೇವವೈದ್ಯ ಧನ್ವಂತರಿಯೇ।
ಪೂರೈಸಿ ಸಾಮಶಂಖವ
ಪೂರ್ಣಾಮೃತದೆಪರಿಹರಿಸಕಾಲಾರಕ್ಷಂ ।।
well appointed dattapada-s in a small meter. Only kAlara has become kAlAra 🙁
ಕಾಮಾಲೆ,ಕಾಲರಾ ಜ್ವರದೆ ಬಲು ಬಳಲಿರ್ಪೆ-
ನಾಮಶಂಕೆಯುಮಿರ್ಪುದೆಂಬ ಶಂಕೆ |
ಸಾಮಾನ್ಯೆಯಾದೆನ್ನ ದಯೆದೋರಿ ರಕ್ಷಿಸೈ,
ನಾಮದಿಂ ಧನ್ವಂತರಿಯೆ,ವೈದ್ಯನೇ ||
The rest are ’diseases’ except jvara (fever), which is a ‘symptom’; विषमज्वर is a disease.
ಪ್ರಶ್ನೆಯೊಳು ದೋಷವಿರ್ಪುದು ವಿಚಾರಿಸೆ ಪರಿ-
ಪ್ರಶ್ನೆಯೇಳ್ವುದು ದತ್ತಪದವ ಕುರಿತು|
ಪೃಶ್ನಿಯಪ್ಪುದು ದೇಹ ರೋಗಂಗಳೊಳುಳಿದೀ
ಪ್ರಶ್ನೆ – ಜ್ವರವು ರೋಗಲಕ್ಷಣವು ತಾಂ||
ಪೃಶ್ನಿ – speckled, spotted (as yellow in kAmAle)
ಧನ್ವಂತರಿ ವೈದ್ಯರೇ ಉತ್ತರಿಸಿದಂತಿದೆ ! ಧನ್ಯವಾದ !!
ಕಾಲರಾ,ಜ್ವರ,ಕಾಮಾಲೆಯಾಮಶಂಕೆ ನಿವಾರಣೆ|
ನೀನಿಲ್ಲದಿರೆ ವೈದ್ಯಾಢ್ಯ, ಧನವಂತರಿಗೇ ಸರಿ ||
ನಿನ್ನಂತೆ ಕವಿತಾಗುಂಫೋದಾರರಿಂತಪ್ಪ ರೀತಿಯೊಳ್ |
ಮನ್ನಿಸಲ್ ದತ್ತಪದಿಯಂ ಧನ್ವಂತರಿಯೆ ರೋಗಿಯಯ್!!
🙂
ನನ್ನ ಪದ್ಯದ ಆಶಯ ಇಷ್ಟೇ. ಓ ಧನ್ವಂತರಿಯೇ, ನೀನಿಲ್ಲದಿದ್ದರೆ ಸಾಧಾರಣ ರೋಗಗಳನ್ನು ನಿವಾರಿಸಿಕೊಳ್ಳಲೂ ಕೇವಲ ಧನಿಕರಿಗೆ ಮಾತ್ರ ಸಾಧ್ಯವಾಗುತ್ತಿತ್ತು. ನಿನ್ನ ಕೃಪೆಯಿಂದ ಎಲ್ಲರೂ ರೋಗಮುಕ್ತರಾಗಬಹುದು.
ಮೊದಲೇ ಗೊತ್ತಾಗಿತ್ತು; ಆದರೆ ನೀನೂ ಸಹ ದತ್ತಪದಗಳನ್ನು ಇಷ್ಟು ಸುಲಭದ ದಾರಿಯಲ್ಲಿ ಬಳಸಿದರೆ ಉಳಿದ ನಮ್ಮಂಥವರ ಗತಿಯೇನೆಂದು ನನ್ನ ಕಾತರ:-)
ಸ್ವಲ್ಪ ಬದಲಾವಣೆಯೊಂದಿಗೆ :
ನರಕೋಟಿ ಜರ್ಜರಿಸಿರಲ್
ಜ್ವರ ಕಾಲರ ಬಾಧೆಯಿಂದೆ ಭವಬಂಧನದೊಳ್ ।
ಪೊರೆಯೈ ಧನ್ವಂತರಿನೀಂ
ಪರಿಹರಿಸೈ ವಾಮಶಂಖ ತೋರಿಂತು ಕಮಾಲ್ ।।
(ನಿನ್ನ ಎಡಗೈ ಶಂಖದಿಂದಲೇ (ಅಮೃತ ಕಲಶವೇಕೆ?!) ಎಲ್ಲರನ್ನೂ ಕಾಪಾಡಿ ನಿನ್ನ ಕೈವಾಡ ತೋರಿಸು !!! ಎಂಬ ಕಲ್ಪನೆಯಲ್ಲಿ )
ಲೋಗರ ರೋಗವನ್ನು ಧನ್ವಂತರಿಗೆ ಬಡಿಯುವಂತೆ ಮಾಡುವುದು – ಶಂಖs ಹ್ವಡ್ಕಳsದು 🙂
ಕ್ಷಮೆ ಇರಲಿ. ಪದ್ಯ ಚೆನ್ನಾಗಿದೆ.
Never had I strove as much to pen such a naive verse, that too compromising on prAsa 🙁
ಕ್ಷಯಕಾಲರಾಹಿತ್ಯ ಧನ್ವಂತರಿಯ ಕೊಡುಗೆ
ಲಯ ಪಥ್ಯದಿಂ ರೋಗ ಕಾಮಾಲೆಯು|
ಹರಿಯೆ ಜ್ವರವು ಬೇಗ ಗಿಡಮೂಲಿಕೆಗಳಿಂದೆ
ಪರಿಣಾಮ – ಶಂಕೆಯೊಂದುಮಿರದೆಂಬೆಂ||
ಕಾಲರಹ ದಾರಿಯೊಳು ತದ್ವಿರುದ್ಧ ವಿಚಾರ
ಗಳು ಘರ್ಷಿಸಲ್ಕೂರ್ಮ ರಂಗದೊಳ್ಜ್ವರ ವಿಷಯ
ಗಳಕಡಿದು ಮಂದ್ರವಾಸುಕಿಗಳಪಿಡಿದು ಕಾಮಶಂಕೆಯವಿಷವನೀಶ ಹೀ
ರಲು ಶಶಿಶ್ರೀಲಲಿತೆ ಕಲ್ಪ ವೃ ಕ್ಷಾದಿಗಳು
ಪಾಲಿಂದುಗಮಿಸಲ್ಸೃಜನಕಲಶದಿಂಮಮೃತ
ಕಲೆಪಿಡಿದುವೈಚಾರಿಕಾಮಾಲೆಯಂಧರಿಸಿದಮರದೇವತೆಯುದಯಿಸಲ್ ||
ತಡವಾಗಿ ಪೋಸ್ಟ್ ಮಾಡಿದ್ದಕೆ ಕ್ಷಮಿಸಿ ….!!
ತಪ್ಪುಗಳನ್ನು ತಿದ್ದಿಕೊಡಲು ವಿನಂತಿ …!!