Mar 012014
 

indus

  105 Responses to “ಪದ್ಯಸಪ್ತಾಹ ೯೮: ಚಿತ್ರಕ್ಕೆ ಪದ್ಯ”

 1. ಏಕಶೃಂಗಿಯೊ ತುರಂಗವೋ ಕಲಾ-
  ಪಾಕವೋ ತಿಳಿಯೆನಾದೊಡಂ ಪುರಾ-
  ಲೋಕನಕ್ಕಿದು ದಲೇಕದರ್ಪಣಂ
  ಸ್ತೋಕನಿಮ್ನದರಪೀನಮಾದೊಡಂ ||

  (ಈ ಸಿಂಧು-ಸರಸ್ವತೀಸಂಸ್ಕೃತಿಯ ಮುದ್ರಿಕೆಯು ಏಕಶೃಂಗಿ (Unicorn) ಎಂದೂ ಕುದುರೆಯೆಂದೂ ವಿದ್ವಾಂಸರು ವಿವದಿಸುತ್ತಿದ್ದಾರೆ. ಇದೇನೇ ಆಗಲಿ, ಪ್ರಾಚೀನವನ್ನು ಕಾಣಲು ಇರುವ ಒಂದು ವಿಶಿಷ್ಟವಾದ ಕನ್ನಡಿ; ಅದು ಸ್ವಲ್ಪ ನಿಮ್ನ (concave) ಮತ್ತು ಸ್ವಲ್ಪ ಪೀನ (convex). ಹೀಗಿದ್ದೂ ಅದುನಮಗೆ ಅನಿರ್ವಾರ್ಯ)

  • ದಲೇಕದರ್ಪಣಂ = ದಲ್+ಏಕದರ್ಪಣಂ ಎಂದಾದರೆ, ’ಏಕದರ್ಪಣಂ’ ಎಂಬುದಕ್ಕೆ ಹೀಗೆ ಕನ್ನಡಪ್ರತ್ಯಯವಿತ್ತು ’ದಲ್’ ಜೊತೆಗೆ ಸಂಧಿಮಾಡಬಹುದೆಂದೆ?

   ಗಂಭೀರವಾದ ನಿಮ್ಮ ಪದ್ಯಕ್ಕೆ ನನ್ನ ಎಂದಿನ ಪ್ರತಿಕ್ರಿಯೆ! ವಿಡಂಬನೆಗಾಗಿ ಕ್ಷಮೆಯಿರಲಿ:
   ಲಿಂಗನಿರ್ಣಯ ಮೊದಲು ತಾನಾಗಲಾ ಮಿಗದ
   ಶೃಂಗನಿರ್ಣಯದೊಳನುಮಾನವೇನೈ?
   ತೊಂಗುತಿರಲಾ ಬದಿಯೊಳೊಂದು ಕಿವಿ, ಈಚಿನೀ
   ಪಾಂಗಿನಿಂ ಕೊಂಬೆನ್ನಲಕ್ಕುಮೇನೈ??

   • ಲಿಂಗನಿರ್ಣಯಮದೇಂ ಪ್ರತ್ಯಕ್ಷಗೋಚರಂ
    ಸಂಗಳಿಸದಯ್ ಜಾತಿನಿರ್ಣಯಂ ಮೇಣ್|
    ಲಿಂಗಮಿಂತನುಮಾನದೊಳ್ ಸಲ್ಲದಾದುದೆಂ-
    ದಂಗೀಕರಿಸುವರೇಂ ತಾರ್ಕಿಕರ್ಕಳ್ ?
    (ಲಿಂಗ = sign, reason) (ಜಾತಿ = species)
    ಇಲ್ಲಿಯ ಪಾಂಡಿತ್ಯಪೂರ್ಣಹಾಸ್ಯವನ್ನು ವಿದಗ್ಧರು ಸವಿದಾರು:-)

    • 🙂 ’ಪ್ರತ್ಯಕ್ಷಗೋಚರಂ’ ಎಂದುದು ಸರಿಯಾಯಿತು. ಆದರೆ ತಾರ್ಕಿಕರೇಕೆ ಬಂದರು ಇಲ್ಲಿ?
     ಎಂದಿನಿಂ ಸಂದುದೈ ಲಿಂಗನಿರ್ಣಯದಿಂತು
     ದಂದುಗವು ತಾರ್ಕಿಕರನಿಶ್ಚಿತತೆಗಂ|
     ಅಂದುಮಿಂದೆಂದೆಂದಿಗಿದು ವೇದ್ಯಮಲ್ಲಮೇಂ
     ಮಂದಿಸಾಮಾನ್ಯರನುಭವದ ಬಗೆಗಂ||

    • 🙂

   • ಹೌದು; ದಲ್ +ಏಕ = ದಲೇಕ ಎಂಬ ಸಂಧಿಯು ಸಾಧು. ಇದು ಅಪ್ಪಟ ಕನ್ನಡದ ಸಂಧಿ. ಉದಾ: ಬಂದು + ಆದರಿಸಿ = ಬಂದಾದರಿಸಿ;
    ಮೇಣ್ + ಈಪ್ಸಿತ = ಮೇಣೀಪ್ಸಿತ…..ಇತ್ಯಾದಿ

  • ಗಣೇಶ್ ಸರ್,
   ಮುದ್ರಿಕೆಯಲ್ಲಿ ಉಬ್ಬು, ತಗ್ಗುಗಳನ್ನು ಗಮನಿಸಿರಲಿಲ್ಲ, ಬಹಳ ಚೆನ್ನಾಗಿದೆ ಪೂರಣ

 2. ಏನಿದೆಂದರಿಯದೆಲೆ ತಿಣುಕುತಿರಲನಿತರೊಳೆ
  ವೈನಾದ ವಿವೃತಿಯಂ ನೀಡೆ ಜೀಯರ್|
  ನಾನೇನನರುಹಲೈ ಮಾತ್ರಮಿನಿತೇ ತಿಳಿದು
  ಯಾನಗೈಯದೆ ಮಾರ್ಗಮಿದರೊಳಿನ್ನುಂ||

 3. ಪರಿಹೃತಿಯ ಕಾಣದಿರುವಿಹವೆನಿತೊ ವಿಷಯಗಳು
  ಚರಿತದೊಳು ಭಾರತೀ ಭೂಮಿಯೊಳಗೆ|
  ಸ್ಥಿರತೆಯನು ರಾಷ್ಟ್ರಕ್ಕೆ ಗೂಹನಮೆ ಇತ್ತಿರಲು
  ಪರಿಹರಿಸದಿದ ದೈವಮೆಂದಪ್ಪುವೆಂ||

 4. For the purpose of this verse, a bulky one-horned Rhino is considered as ಏಕಶೃಂಗಿ, not Unicorn:
  ತನುವಾಗಿಸುತಲೇಕಶೃಂಗಿಯನು ಶಿಲ್ಪಿ ತಾ-
  ನಿನಿತು ಕ್ರೋಧವನೀಯುತಾ ನಯನಕೆ|
  ಅನಿಬರೀ ಕ್ಷಾತ್ರತೇಜವ ಪೊಂದಿರೆಂದನೇಂ
  ಮನುಗೋತ್ರ ಶಾಶ್ವತಂಗೊಳಲೋಸುಗಂ||

  • ಪ್ರಿಯ ಪ್ರಸಾದು,
   ನಿಮ್ಮ ಎಲ್ಲ ಪದ್ಯಗಳೂ ಸೊಗಸಾಗಿವೆ; ವಿಶೇಷತಃ ನನ್ನಪದ್ಯಕ್ಕೆ ತೋರಿದ ಪ್ರತಿಕ್ರಿಯೆಯಂತೂ ತುಂಬ ವೈನೋದಿಕವಾಗಿದೆ; ಧನ್ಯವಾದಗಳು.

   • Why! No! ನನ್ನ actionಗಿಂತ reactionಉ ಜಾಸ್ತಿ ಮಾತ್ರವಲ್ಲ, ಉತ್-ತರವಾಗಿಯೂ ಇದೆಯೆಂದರೆ ಎಷ್ಟೋ ’ಸಮಾಧಾನ’ 🙂

    ಈವರೆಗೆ ಜಾಸ್ತಿ (r>a), ಈನಡುವೆ ಸಮ ಆಧಾನ (r=a), ಕ್ರಮೇಣ ಉತ್ತರಣ (a>r) – ಇದು ಲಕ್ಷ್ಯ

    ಕೃತಜ್ಞತೆಗಳು ಸರ್.

 5. चतुष्पदोऽस्य दीर्घं स्यात् शृङ्गं प्राचीनमार्त्तिके ।
  दर्पशृङ्गं ततो दीर्घं लिप्यभावं प्रजल्पताम् ॥
  मार्तिकम् = मृत्तिकायाः इदम् ।

  ಇಲ್ಲಿರುವುದು ಲಿಪಿಯೋ ಅಲ್ಲವೋ ಎಂಬ ವಾದವನ್ನು ಅಧಿಕೃತ್ಯ ಈ ಪ್ರಯತ್ನ. (ರಾಜೇಶರಾಯರ ಗಣವು ಸೂಕ್ತವಾದ ಉತ್ತರವನ್ನು ನೀಡಿದೆ ಈ ಪ್ರಶ್ನೆಗೆ).

  • ದಯಮಾಡಿ ನಿಮ್ಮ ಪದ್ಯದ ತಾತ್ಪರ್ಯವನ್ನೂ ಶ್ರೀ ರಾಜೇಶ್ ಅವರ ಸಂಶೋಧನೆಯು ಇದಕ್ಕೆ ಅನ್ವಿತವಾಗುವ ಬಗೆಯನ್ನೂ ತಿಳಿಸಿವಿರಾ?

   • ಇಂತಹ ಟಾಬ್ಲೆಟ್ ಗಳಲ್ಲಿರುವ ಚಿಹ್ನೆಗಳು ಭಾಷಾಲಿಪಿಯಲ್ಲವೇ ಅಲ್ಲ ಎಂದು ಸಂಶೋಧಕಪತ್ರವೊಂದು ಬರೆದರು ಸ್ಪ್ರೋಟ್ ಮತ್ತಿತರರು. ತದನು ರಾಜೇಶ ರಾವ್ ಮತ್ತಿತರರು ಶಾಸ್ತೀಯಪದ್ಧತಿಯಿಂದ ಲಿಪಿಯ ಸಾಧ್ಯತೆ ಖಂಡಿತ ಇದೆ ಎಂದು ಪ್ರತಿಪಾದಿಸಿದರು ಸೈನ್ಸ್ ಪತ್ರಿಕೆಯಲ್ಲಿ. ಇದರ ಸಂದರ್ಭದಲ್ಲಿ ದೊಡ್ಡ ಚರ್ಚೆಯೆ ನಡೆಯಿತು. ಆ ಚರ್ಚೆಗಳಲ್ಲಿ ಡೇಟಾ ನೋಡಲು ನಿರಾಕರಿಸುವಂತೆ ಸ್ಪ್ರೋಟ್ ಗಣವು ’ಇಲ್ಲ ನಾವು ಹೇಳಿದ್ದೇ ಸರಿ’ ಎಂಬ ಧಾಟಿಯಲ್ಲಿ ವಾದವನ್ನು ಬೆಳಿಸಿದರು. ಇದರ ಹಿನ್ನೆಲೆಯಲ್ಲಿ –

    ಪ್ರಾಚೇನೇ ಮಾರ್ತ್ತಿಕೇ ಟಾಬ್ಲೇಟ್ ಮಧ್ಯೇ ಅಸ್ಯ ಚತುಷ್ಪದಃ ಪ್ರಾಣಿನಃ ಶೃಂಗಂ ದೀರ್ಘಂ ಸ್ಯಾತ್. ಆ ಪ್ರಾಣಿಯ ಕೊಂಬು ದೊಡ್ಡದಿರಬಹುದು. ಆದರೆ,
    ತತ್ರ ಲಿಪೇಃ ಅಭಾವಂ ಪ್ರಜಲ್ಪತಾಂ (ಸ್ಪೋಟ್ ಪ್ರಭೃತೀನಾಂ) ದರ್ಪಶೃಂಗಂ ತತೋ ದೀರ್ಘಂ ಭವತಿ. ಲಿಪಿಯೇ ಅಲ್ಲ ಎಂದು ಹೇಳುವರ ದರ್ಪದ ಕೋಡು ಅದಕ್ಕಿಂತ ಉದ್ದ.

 6. सुज्ञै र्लिखीतः तु कालात् कलुषितः |
  पशु पुरातन विचित्रकिलेषः चित्रः ||

 7. Cheer up Vasu! This could well be the vŗșa/varāha that the śāntiparva (chapter 343) of Mahabharata speaks of. The boar saved the earth for you! Its retort to attack is the fiercest among animals. That is how we sanaatanis have thrived.
  ಮೌಲ್ಯಮುಂಟುಂಟಿನ್ನಮೂಲ್ಯಕಾವ್ಯದೊಳು ಶಾ
  ಬಲ್ಯದನ್ಯದ ನೀರಸದ ಮಾಹಿತಿ|
  ವಲ್ಯ ಸಾಧಿತವು ಸಾಕಲ್ಯದಿಂದೆಂತೊ, ವೈ
  ಕಲ್ಯಮೆಂದದರೊಳ್ ಪೃಥಕ್ಕರಿಪೆಯೇಂ?| (ಅದರೊಳ್=ಶಾಂತಿಪರ್ವದೊಳ್)
  (ಶಾಬಲ್ಯ=mixture, medley)
  ಬೆಸಪಾದಗಳಲ್ಲಿ ಅನುಪ್ರಾಸವುಂಟು

 8. ಹಿಂದೆ ತೀರಿದ ರಾಜ್ಯಗಳ ಸಂಸ್ಕೃತಿಯ ಮರ್ಮ
  ವಂದು ಚಾಲತಿಯಿದ್ದ ನಗದು, ಮುದ್ರೆ
  ಸಂದ ಜೀವನಚರ್ಯೆ, ಶಿಲ್ಪ, ಕಲೆ, ಕಥನಗಳ
  ನಿಂದು ತೋರುತ್ತಿರ್ಪುದೇಮೀ ಚಿರಂ

  [ಚಿರಂ – long lasting]

  • Fine Ram.
   Given that ಚಿರಂ is a verb, the previous word needs to be honed: ತೋರುತ್ತಿರ್ಪುದೇನುಂ.
   It is advisable to explicitly refer to the logo/ಮುದ್ರಿಕೆ in the verse.
   If I may suggest a touch up:
   ಹಿಂದೆ ಸಂದೆಲ್ಲ ಜನಪದದ ಸಂಸ್ಕೃತಿಯ, ಮೇ
   ಣಂದು ಚಾಲತಿಯಿದ್ದ ನಗದು, ಮುದ್ರೆ,|
   ಸಂದ ಜೀವನಚರ್ಯೆ, ಶಿಲ್ಪ, ಕಲೆ, ಕಥನಗಳ
   ನೆಂದುಮೀ ಮುದ್ರಿಕೆಯು ತೋರುತಿಹುದೇಂ||
   (ಮುದ್ರೆ & ಮುದ್ರಿಕೆ have different meanings here)

   • Dear Prasadu,
    ಚಿರ is not a verb. It is a noun form (as per dictionary). We say “ಚಿರವಾಗಿರು” (where ಇರು is the verb); not “ಚಿರು” (if it were to be a verb, we would have to use something like that)
    Also, I thought that the long lasting nature of the tablet is to be brought out rather than specifically / explicitly naming the same.

  • ಕಡೆಯ ಪಾದದಲ್ಲಿ “ಏನೀ ಚಿರಂ” ಎಂದು ಸವರಿಸಿದರೆ ಉತ್ತಮ.

 9. ಮೂಲಮನರಸಲ್ಕೆನೆ ಗಡ
  ಚಾಲಿಪುದಲ್ತೀ ಪ್ರಹೇಲಿಕೆಯು ಪೂರ್ವಿಕರಿಂ
  ಕಾಲದ ಸಹಸ್ರಮಾನದ
  ಮಾಲೆಗಳೆನಿತೋ ಪ್ರಸೂತಿಗಳನಣಕಿಪುದಯ್

  ಪ್ರಸೂತಿ – offspring

  • ಸೋಮ,
   ವಸ್ತು ಚೆನ್ನಾಗಿದೆ.
   ೧) ಎನೆ-ಗಡ ಪುನರುಕ್ತಿಯಾಯ್ತು
   ೨) ಪೂರ್ವಿಕರಿಂ ಚಾಲಿಪುದು – ಪೂರ್ವಿಕರಿಂ ಚಾಲಿಸಿರ್ಪುದು ಎಂಬರ್ಥವೆ?
   ೩) ’ಪ್ರಸೂತಿ’ಗಿಂತ ’ಸಂತತಿ’ ಮೇಲು (ಮಾತ್ರೆ ಹೊಂದಿಸಬೇಕು)

   • Thanks prasAdu

    ಮೂಲಮನರಸಲ್ಕೆ ಗಡಾ
    ಚಾಲಿಪುದಲ್ತೀ ಪ್ರಹೇಲಿಕೆಯು, ಪೂರ್ವಿಕರಿಂ
    ಕಾಲದ ಸಹಸ್ರಮಾನದ
    ಮಾಲೆಗಳೆನಿತೋ ಪ್ರಸೂತಿಗಳನಣಕಿಪುದಯ್

    ೧) ಎನೆ-ಗಡ ಪುನರುಕ್ತಿಯಾಯ್ತು => Corrected easily
    ೨) ಪೂರ್ವಿಕರಿಂ ಚಾಲಿಪುದು – ಪೂರ್ವಿಕರಿಂ ಚಾಲಿಸಿರ್ಪುದು ಎಂಬರ್ಥವೆ? => ಅಲ್ಲ ‘ಪೂರ್ವಿಕರಿಂ ಅಣಕಿಪುದಯ್’
    ೩) ’ಪ್ರಸೂತಿ’ಗಿಂತ ’ಸಂತತಿ’ ಮೇಲು (ಮಾತ್ರೆ ಹೊಂದಿಸಬೇಕು) => ಸಂತತಿ ಹೊಂದಿಸಲಾಗಲಿಲ್ಲ… ನೋಡೋಣ ಹೊಳೆದರೆ ಸರಿಪಡೆಸುತ್ತೇನೆ

   • ನಿಮ್ಮ ’ಎನೆ ಗಡ’ ಬಗೆಗಿನ objection ಯುಕ್ತವಾಗಿದೆ. ಆದರೆ ಮಿಕ್ಕದ್ದೆಲ್ಲ ಅನವದ್ಯವಾಗಿಯೇ ಉಂಟು. ಪ್ರಸೂತಿ ಎಂಬುದಕ್ಕೆ ಹೆರಿಗೆ ಎನ್ನುವ ಅರ್ಥವಲ್ಲದೆ ಸಂತಾನವೆಂಂಬ ಅರ್ಥವೂ ಪ್ರಸಿದ್ಧ. ಅಲ್ಲದೆ ಸೋಮನ ಕಲ್ಪನೆಯೂ ಚೆನ್ನಾಗಿದೆ.
    ನನ್ನ ಮಟ್ಟಿಗೆ ಹೇಳುವುದಾದರೆ ಈ ಚಿತ್ರಕ್ಕೆ ಪದ್ಯವನ್ನು ಬರೆಯುವುದು ಒಂದು ತೊಡಕಾದ ಸವಾಲೆನ್ನಬಹುದು. ಏಕೆಂದರೆ ಎಷ್ಟು ಪ್ರಯತ್ನಿಸಿದರೂ ಇತಿಹಾಸದ ವಾಸ್ತವವನ್ನು ಮೀರಿ ಶುದ್ಧಕಾವ್ಯವನ್ನಿಲ್ಲಿ ತರುವುದು ಮಿಗಿಲಾದ ಕಷ್ಟ.

    • ಧನ್ಯವಾದಗಳು ಗಣೇಶ್ ಸರ್ :), ‘ಎನೆ ಗಡ’ವನ್ನು ಸರಿಪಡಿಸಿದ್ದೇನೆ

 10. ಜಲದೊಳ್ ಬಿರುಸಿಂದೀಜುವ,
  ಬಲ,ವೇಗವನೊಂದಿ,ಬುವಿಯೊಳು ಮೆರೆವ-ಮಿಗಗಳ್
  ಶಿಲೆಯೊಳ್ ರೂಪತಳೆದು ತಾಂ
  ಬಲುವೇಗದ ಕಾಲದೋಟಮಂ ಪೇಳಿದುವೇಂ!

  • very good interpretation.
   ವೇಗವನೊಂದಿ = ವೇಗವ ಪೊಂದಿ ಎಂತಲೆ?

   • ಹೌದು . ಇದು ತಪ್ಪಾದರೆ ಸರಿಪಡಿಸುವೆ. ಧನ್ಯವಾದಗಳು.

   • ಹೌದು;ಅದೇ ಅರ್ಥ; ಮತ್ತಿದು ಸಾಧುವೂ ಆಗಿದೆ. ಪದ್ಯದ ಕಲ್ಪನೆಯಂತೂ ತುಂಬ ಚೆನ್ನಾಗಿದೆ. ಈ ಸಂಚಿಕೆಯಲ್ಲಿ ಬಹುಶಃ ಇದೇ ಈ ವರೆಗಿನ ಅತ್ಯುತ್ತಮಕಲ್ಪನೆ. ಆದರೆ ಕಡೆಯ ಸಾಲಿನ ಕಡೆಯ ಪದವನ್ನು ಪೇಳಿದುವೇಂ ಎಂದು ಸವರಿಸಿದರೆ ಯುಕ್ತತರ.

    • ಧನ್ಯವಾದಗಳು ಸರ್, ತಮ್ಮ ಸಲಹೆಗೆ ಮತ್ತು ಪ್ರೋತ್ಸಾಹದ ನುಡಿಗೆ.

  • ಬಹಳ ಚೆನ್ನಾಗಿದೆ ಕಾಂಚನ ಅವರೆ 🙂

 11. कोऽयं प्राणी तुरगसदृशः सिन्धुदेशे प्रसिद्धः
  केयं भाषा मृदि निगदिता यातकालस्य वक्त्री ।
  स्यामाप्येवं विगतनयना मूकसंभाषणेस्मिन्
  स्मृत्यास्माकं मनसि भवतान्नन्दनं पूर्वकृत्याम् ॥

  ಈ ಸಿಂಧುದೇಶದ ಪ್ರಾಣಿ ಯಾವುದೋ, ಗತಕಾಲದ ಬಗ್ಗೆ ಹೇಳುತ್ತಿರುವ ಭಾಷೆ ಯಾವುದೋ ಎಂಬುದು ತಿಳಿದಿಲ್ಲ. ಅಥವಾ ಈ ಮೂಕಸಂಭಾಷಣೆಯಲ್ಲಿ ನಾವೇ ಅಂಧರಾಗಿರಬಹುದು (ಪೂರ್ವಜರು ಹೇಳುತ್ತಿರುವುದು ಅರ್ಥವಾಗದೆಂದು), ಆದರೂ ಅವರ ರಚನೆಯನ್ನು ಸ್ಮರಿಸುತ್ತ ಸಂತೋಷಪಡೋಣ.

  • ಸುಂದರಂ ಕಲ್ಪನಂ ಬಂಧುರಂ ಶಿಲ್ಪನಂ
   ಸ್ಪಂದತೇ ಕಾಪಿ ವಿಚ್ಛಿತ್ತಿರನ್ಯಾದೃಶೀ|

  • ಚೆನ್ನಾಗಿದೆ ನರೇಶರೆ

 12. ಪಶುವಿಂ ತೋರ್ದಪ ಚಿತ್ರಮೈದೆ ತಿಳಿವಿಂಗಲ್ತು ಸ್ಫುಟಂ ವರ್ಗಿಸ-
  ಲ್ಕೆ ಶಿರೋನಾಮೆಯನುಂ ಪ್ರಹೇಲಿಕೆಯವೊಲ್ ಗೈದಂ, ರಸಾಭಾಸದಂ-
  ಕುಶಮಂ ಶಿಲ್ಪಿಯು ದಾಂಟಿರಲ್ಕೆ ದಲಿದೇ ದೃಷ್ಟಾಂತಮೇಂ? ಕರ್ತೃ ತಾಂ
  ಕುಶನೇಂ ನವ್ಯರವೊಲ್ ನಿರರ್ಥಕಮನೇ ಸಾರಲ್ಕೆ? ಧಿಕ್ಕಾರಮಯ್

  ಕರ್ತೃವು ಸ್ಫುಟವಲ್ಲದ ಪ್ರಾಣಿಯ ಚಿತ್ರಕ್ಕೆ ಶಿರೋನಾಮೆಯನ್ನೂ ಸಹ ಯಾರಿಗೂ ತಿಳಿಯದ ಹಾಗೆ ಕೊಟ್ಟು ರಸಾಭಾಸದ ಅಂಕುಶವನ್ನು ದಾಟಿದನೇ? ಅವನು ನವ್ಯರಹಾಗೆ ನಿರರ್ಥಕವನ್ನು ಸಾರುತ್ತಿದ್ದಾನೆಯೇ? ಧಿಕ್ಕಾರವಿರಲಿ

  • ಇಂಗಿತವು ಚೆನ್ನಾಗಿದೆ.ಆದರೆ ಕೆಲವೂಂದೆಡೆ ಅಸ್ಪಷ್ಟತೆಯುಂಟು. ಪದಪದ್ಧತಿಯಲ್ಲಿ ಸ್ವಲ್ಪ ಪರಿಷ್ಕಾರ ಬೇಕಿದೆ. ದೂರವಾಣಿಯಲ್ಲಿ ತಿಳಿಸುವೆ.

   • ಗಣೇಶ್ ಸರ್, ಹೌದು ಸರ್, ಮತ್ತೇಭದಲ್ಲಿ ಬರೆಯೋಣವೆಂದುಕೊಂಡೆ, ವಸ್ತು ದೊಡ್ಡದಿರಲಿಲ್ಲ ಸ್ವಲ್ಪ filling ಮಾಡಬೇಕಾಗಿ ಬಂದು ಪದ್ಯ ಸೊರಗಿತು :). ನಿಮ್ಮೊಡನೆ ಮಾತಾಡಿ ತಿಳಿದುಕೊಳ್ಳುತ್ತೇನೆ.

 13. ನೆಗಳ್ದಾ ವಿಚಿತ್ರಮೃಗಕಂ
  ನೆಗಳ್ತಿಯಾಂತಾ ವಿಚಿತ್ರಲಿಪಿ ಸಿಂಗರಿಸಲ್
  ಮಿಗದೊಡೆಯನವೊಲದೃಶ್ಯಂ
  ಜಗಕೀ ಪೂರ್ವಿಕಕಲಾಕೃತಿಯ ಹೇತುತ್ವಂ

  ನೆಗಳ್ದಾ(ಶಿ.ದ್ವಿ) – famous
  ಮಿಗದೊಡೆಯ – rider

  • ಚಿತ್ರದಲ್ಲಿರುವುದರ ಕುರಿತು ಬರೆಯುವುದು ಒಂದಾದರೆ, ಅಲ್ಲಿರದಿರುವುದರ (ಸವಾರ) ಬಗೆಗೆ ಬರೆದಿರುವುದು ಬಹಳ ವಿಶೇಷ. Can open up a new line of versification. ಹಿಂದೊಮ್ಮೆ ಅನಂತಪದ್ಮನಾಭಸ್ವಾಮಿಯ ಚಿತ್ರಕ್ಕೆ ನಾನು ಇದೇ ಮಾದರಿಯಲ್ಲಿ ಪದ್ಯವನ್ನು ಬರೆದಿದ್ದೆ. I and Manjunatha Kollegala had then sparred (in verse) over my imagination. Item No.4 & 8 in http://padyapaana.com/?p=844

 14. ಆರ್ಯರಾಕ್ರಮಣಸಿದ್ಧಾಂತಮಂ ಧಿಕ್ಕರಿಪ
  ಕಾರ್ಯಯೂಪದ ರಕ್ಷಣೆಗೆ ಸತ್ಯದಾ
  ಸೂರ್ಯಾಸ್ತಮಂ ಗೈವೆನೆಂಬ ಪಾಶ್ಚಾತ್ಯರಂ
  ಶೌರ್ಯದಿಂ ದಿಟ್ಟಿಪುದು ಕಾಳಗಕೆನೆ

  ಯೂಪ – trophy

  The last symbol shows upward arrow, I am interpreting it as North :), hence the unicorn is facing west. Also I am interpreting the trophy in front of unicorn as trophy of ‘indigenous civilization’ which is being defended by unicorn from the wicked west.

  • ತುಂಬ ಸೊಗಸಾದ ಹಾಗೂ ನನ್ನಂಥ ಆರ್ಯಸ್ವದೇಶೀಯವಾದಿಗಳಿಗೆ ಇಷ್ಟವಾಗುವ ಪದ್ಯ. ಆದರೆ ಕೋಡಗ ಎಂದರೆ ಕೋಡುಳ್ಳ ಪ್ರಾಣಿಯೆಂಬ ಅರ್ಥ ಹೇಗೆ? ನಾನಿನ್ನೂ ನಿಘಂಟುವನ್ನು ನೋಡಿಲ್ಲ….

   • ಧನ್ಯವಾದ ಗಣೇಶ್ ಸರ್,

    ಕೋಡಗವೆಂದರೆ ಮಂಗ ಎಂದು ಈಗಷ್ಟೆ ನಿಘಂಟಿನಿಂದ ತಿಳಿಯಿತು. ಕೋಡು ಎಂಬುದಕ್ಕೆ ಹತ್ತ್ರಿರವಿರುವುದರಿಂದ ಹಳಿ ತಪ್ಪಿಸಿತು. ಈ ಪದ ನನ್ನನ್ನ ನಿಜಾರ್ಥದಲ್ಲಿ ಕೋಡಗ ಮಾಡಿತ್ತು :).

    ಸರಿ ಪಡಿಸಿದ್ದೇನೆ

    • ನನಗೆ ಕೋಡಗ ಅಥವಾ ಕೋಡ ಎಂದರೆ ಮಂಗ ಎಂದಷ್ಟೇ ಗೊತ್ತು. ಅದು ನೈಘಂಟುಕಜ್ಞಾನವೇನಲ್ಲ; ತುಂಬ ಹಿಂದೆಯೇ ಅಂದರೆ ಎಳವೆಯಲ್ಲಿಯೇ ಪಾಠ/ಪುಸ್ತಕ/ಪತ್ರಿಕೆಗಳಿಂದ ತಿಳಿದ ಸಂಗತಿ. ಹೀಗಾಗಿ ಇಷ್ಟು ಸರಳ-ಸುಲಭಪದದ ಅರ್ಥವು ನಿನಗೆ ತಿಳಿದೇ ಇದ್ದೀತು; ಮತ್ತಾವ ಮೂಲದಿಂದಲೋ ಈ ಪದಕ್ಕೆ ಬೇರೊಂದು ಅರ್ಥವೂ ಇರುವುದನ್ನು ನೀನು ತಿಳಿದುಕೊಂಡು ಬಳಸಿರಬಹುದೆಂದು ನಾನು ಭಾವಿಸಿದೆ. ಇರಲಿ; ನನ್ನ ಬಾಲ್ಯಪಾಠದ ಬಲವೇ ದಕ್ಕಿತೆಂದು ನೆಮ್ಮದಿ:-)

     • ಇಲ್ಲ ಗಣೇಶ್ ಸರ್ ನನಗೆ ತಿಳಿದಿರಲಿಲ್ಲ, ಈ ಮೊದಲು ಕೋಡಗನ ಕೋಳಿ ನುಂಗಿತ್ತ… ಪದ್ಯದಲ್ಲಿ ಮಾತ್ರ ಕೇಳಿದ್ದು. ಕೋಡುಳ್ಳ ಪ್ರಾಣಿಯೆಂಬ ಕಲ್ಪನೆಯನ್ನೇ ಈ ಹಾಡನ್ನು ಕೇಳಿದಾಗ ಮಾದಿಕೊಳ್ಳುತ್ತಿದೆ… ಹಾಗಾಗಿ ಎಡವಿದೆ 🙂

 15. ಅಂದಿದು ಶಿಲ್ಪಿಯ ಸೊಬಗಿನ ಕೃತಿಯೆನೆ-
  ಪೊಂದಿತೆ, ಮೆಚ್ಚುಗೆ ಮನ್ನಣೆಯ?
  ಸಂದಿರಲಿಲ್ಲಿಯು ವಿಕೃತಿಯ ನಿಯಮವು
  ಇಂದಿದು ಬರಿ ಪಳೆಯುಳಿಕೆಯು ತಾ!

  ವಿಕೃತಿ=ಬದಲಾವಣೆ

 16. पृष्ठे दृष्ट उमाधवस्य वृषभो नैवात्र तस्योन्नतिः
  पूर्वस्मिन् सुविषाणमीदृशमहो शार्ङ्गो मृगो दृश्यते ।
  सिद्धान्तो न हि चित्रसत्त्वविषये ज्ञातं न लिप्यक्षरं
  प्रायो मत्तसुमद्यपेन रचितं दुःस्वप्नचित्रं पशोः ॥

  ಹಿಂದಿನಿಂದ ಕಂಡರೆ ನಂದಿಯ ರೀತಿಯಿದೆ ಈ ಪ್ರಾಣಿ (ಬಾಲದ ದೆಸೆಯಿಂದ). ಆದರೆ ಇದಕ್ಕೆ ವೃಷಭ-ಸಹಜ-ಕಕುತ್ ಇಲ್ಲ.
  ಮುಂದಿನಿಂದ ಇದರ ದೊಡ್ಡಕೊಂಬು ಕಂಡು ಇದೇನು ಶೃಂಗಮೃಗವೋ? (ಯೂನಿಕಾರ್ನ್ ಆಗಬಹುದು ಇಲ್ಲದೆ ಖಡ್ಗಮೃಗವೂ ಆಗಬಹುದು).
  ಇದರ ಸಿದ್ಧಾಂತವೇನೂ ಆಗಲಿಲ್ಲ. ಲಿಪಿಯ ಅಕ್ಷರವೂ ತಿಳಿಯಲಿಲ್ಲ. ಪ್ರಾಯಶಃ, ಕುಡಿತದ ಮತ್ತಿನಲ್ಲಿ ಕಂಡ ಕೆಟ್ಟ ಕನಸಿನ ಪ್ರಾಣಿಯ ಚಿತ್ರವಿರಬೇಕು. 🙂

 17. ಕಲೆಯರಳೆ ನಿನ್ನೊಳಗೆ, ಚಿರಕಾಲ ಉಳಿದಿರುವೆ
  ಸೆಲೆಯಾಗಿ,ಸೊಡರಾಗಿ ಸಂಸ್ಕೃತಿಗೆ ನೀ.
  ಸಲದಿರಲು ಹಲಬಗೆಯ ಗುಣರೂಪ,ಮಹಿಮೆಗಳು,
  ಬೆಲೆನಿನಗದಿತ್ತೆ? ಹೇ ಶಿಲೆಯ ತುಂಡೇ!

  • ಆಹಾ! ಎಷ್ಟು ಸೊಗಸಾದ ಸರಳ-ಸಹಜಭಾವದ ಕವಿತೆ! ಇದರ ಪದಪಾಕವೂ ಮೆಚ್ಚುವಂತಿದೆ. ಕಾಂಚನಾ ಅವರ ಕವನಕೃಷಿಯು ದಿನೇ ದಿನೇ ತುಂಬ ಮಾಗುತ್ತಿದೆ.

   • ಧನ್ಯವಾದಗಳು ಸರ್.
    ಈ ಚಿತ್ರಕ್ಕೆ ಪದ್ಯವು ಸಹಜವಾದರೂ,ಇದನ್ನು ಅನ್ಯೋಕ್ತಿಯೆಂದು ಪರಿಗಣಿಸಬಹುದೇ?

    • ದಿಟ,ಇದು ಅನ್ಯೋಕ್ತಿಯಾಗಬಲ್ಲುದುದು.

     • ಬರೆವಾಗ ಅನ್ಯೋಕ್ತಿಯ ಮಾದರಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡಿದ್ದರಿಂದ ಈಗ ಸಮಾಧಾನವಾಯಿತು.ಧನ್ಯವಾದಗಳು.

  • ನಿಮ್ಮದು ಕಶ್ಯಪ(ಪಶ್ಯಕ)ಗೋತ್ರವೆ? ಎಷ್ಟು ಬಗೆಯಾಗಿ ನೋಡುವುದು! ಧನ್ಯವಾದಗಳು.

 18. ಮೀನಮೇಷಾವೃಷಭ ರಾಶಿ ಸಂಕೇತಗಳ
  ತಾನವಡಗಿಹ ಕಾಲಚೌಕವಿದುವೇಂ ?
  ಮೌನ ಮೀನಾಕಾರ ತುರಗ ಕಲಿಯವತಾರ
  ತಾನೇ ತಳೆದಿಹ ಹರಿಯ ಚಿತ್ರ ವಿದುವೇಂ ?

  ತಾನ = ಸೂತ್ರ
  (ಮತ್ಸ್ಯದಿಂದ ಕಲ್ಕಿವರೆಗಿನ ದಶಾವತಾರದ – “ಹರಿಚಿತ್ತ”ದ / “ಕಾಲಚಕ್ರ”ದ ಕಲ್ಪನೆಯಲ್ಲಿ)

  • ಕಲ್ಪನೆ ಚೆನ್ನಾಗಿದೆ.
   ಮೇಷಾ – ದೀರ್ಘ? (ಮೇಷ+ಅವೃಷಭ ಆಗುತ್ತೆ)
   ‘ಮೌನ’?
   ‘ಳೆದಿಹ ಹರಿಯ’ – ಒಂದು ಮಾತ್ರೆ ಹೆಚ್ಚಾಯಿತು. ‘ಯ’ವನ್ನು ಮುಂದಿನ ಗಣಕ್ಕೆ ತೆಗೆದುಕೊಂಡರೆ, ಅದು ಲಗಂ ಆಗುತ್ತದೆ.

   • ಧನ್ಯವಾದಗಳು ಪ್ರಸಾದ್ ಸರ್ ,

    ಆಫೀಸ್ ಸಮಯದಲ್ಲಿ (ಮೀನಮೇಷದಲ್ಲಿ) ಬರೆದಿದ್ದರಿಂದ ಹೀಗಾದದ್ದು. “ಮೌನ”ವಾಗಿ “ಲಗಂ” ಬಂದದ್ದು !!
    ಸರಿಪಡಿಸಲು ಪ್ರಯತ್ನಿಸಿದ್ದೇನೆ.

    ಮೀನಮೇಷದವೃಷಭ ರಾಶಿ ಸಂಕೇತಗಳ
    ತಾನವಡಗಿಹ ಕಾಲಚೌಕವಿದುವೇಂ ?
    ಏನ ಮೀನಾಕಾರ ತುರಗ ಕಲಿಯವತಾರ
    ತಾನೆ ತಳೆದಿಹ ಹರಿಯ ಚಿತ್ರ ವಿದುವೇಂ ?

 19. ಶಿಲ್ಪಿ ತಾನ್ ಧ್ಯಾನದಿಂ ರಚಿಸುತಿರೆ ಪ್ರಾಣಿಯಂ,
  ಕಲ್ಪನಾಲೋಕದೊಳ್ ಕಂಡಿರ್ಪುದಂ,|
  ಜಲ್ಪಿಸುತೆಯವನ ಬಾಲತನಯಂ ಜೊತೆಗೂಡಿ|
  ಕಲ್ಪಿಸುತೆ ಮೂಡಿಸಿದನೇನುಳಿದವಂ ? ||

  • Oh. Very good imagination.
   ಸಂತುಲಿತ ಮಧ್ಯಾವರ್ತಗತಿ|| ನೋಡಿ ನಿಮ್ಮ ಪದ್ಯಗಳ ಪರಿಯನುಂ ಬರೆಯಲಂತೆ ತೊಡಗಲ್
   ಜಾಡುಹಿಡಿದುದಾ ಶಿಲ್ಪಿಕುವರದಂ ಕಬ್ಬಮೆನ್ನದಿಂದು|
   ಅದಕೆ ಪದ್ಯಮಂ ಪ್ರಚುರಗೊಳಿಸದೆಲೆ ಮಾತ್ರಮೆನ್ನ ವೆತೆಯಂ
   ತೊದಲು ನುಡಿಯಿನಿಂ ತೋಡಿಕೊಂಡಿರುವೆನೀಗಳಿಲ್ಲಿ ಇಂತುಂ||

   • ಪ್ರಸಾದರೆ,ನಿಮ್ಮ ಪ್ರೋತ್ಸಾಹದ ನುಡಿಗೆ ಹಾಗೂ ಮನರಂಜಿಸುವ ಪದ್ಯಕ್ಕೆ ಧನ್ಯವಾದಗಳು.

 20. ಮಾತ್ರಾಸೀಸ|| ಉಳುಮೆಯಂ ಗೈದು ವಿಶ್ರಮಿಸುತ್ತಿಹುದು ಹೋರಿ ಮೇಣದರ ಜೊತೆಗಾರ ಹಾಕಿಮೆಲುಕು (top left corner – only face visible)
  ಬಳಸಿಕೊಂಡವುಗಳನು ರೈತನುತ್ತಿಹ ನೆಲವ ಮುಂಗಾರ ಮೊದಲ ಮಳೆಯಿಂ ತೊಯ್ದುದಂ| (Top middle – ಹೇಗೋ ಕೋಚುಕೋಚಾಗಿ ಉತ್ತಿದ್ದಾನೆ. ಋತುವಿನ ಮೊದಲ ಉಳುಮೆ/ಹುಕ್ಕೆಯಲ್ಲವೆ? ನಡೆಯುತ್ತೆ! ಗೀತಿ ನೋಡಿ)
  ತಳಿರೊಡೆದು ಕಾಳುಕಟ್ಟಲು ಮುಂದೆ, ಮುಗಿಬೀಳ್ವ ಗಿಳಿವಿಂಡ ವಾರಿಸಲು ಬೆದರುಬೊಂಬೆ (bottom left)
  ಸುಳುಹುಗಳುಮಲ್ತೆಲಿವು ಕೃಷಿಯ ಕಾಯಕಮನೆಂತೆಮ್ಮ ಪೂರ್ವಿಕರು ಗೈದಿರ್ದರೆಂದುಂ||

  ತೇಟಗೀತಿ|| ಸಾಲsನುತ್ತಿರ್ಪುsದಿರದಿರ್ದೊsಡೇನೈ ನೇರಂ
  ಮೇಲಿನ್ನೆರಡೊಮ್ಮೆsಯುಳುವsನುs ವಾಪsಪೂರ್ವಂ|
  ಕಾಲsಕಾಲಕ್ಕೆs ಹದಮಾಗಿs ಸುರಿಸೈ ಬರಿಸಂ
  ಫಾಲsನೇತ್ರs ನೀನೆಂದಿರ್ಪs ರೈತs ವೆತೆಯಿಂ (top right corner)||

  • Dear Prasad,

   Appreciate your venture in seesa bandha and also the micro details of the plate. You may rehone ‘tEtageethi’ to sound better, especially the first and last lines.

 21. ಎರಡು ಕಲ್ಪನೆಗಳು.

  ೧.
  ಹೊಸತೊಂದು ಸಂಶೋಧನೆಯಿದು ನೋಡೈ ಮುಂದೆ
  ಹುಸಿಯೆನಿಸುವ ಪ್ರಕೃತಿಯ ವಿಜ್ಞಾನದೊಳ್
  ಪಸರಿಸಿದರೇನ್ ವಿಕೃತ ಸಂತಾನವದು ಜಗದೆ
  ಕಸಿವಿಸಿಯು ಮನದೊಳಗೆ ದುರವಸ್ಥೆಗೆ

  ೨.
  ಮತಗಟ್ಟೆಯಲಿ ಚುನಾವಣೆಯ ದಿನ ನಿಮ್ಮಗಳ
  ಮತವಬೇಡುವ ದೀನ ಬಂಧು ನಾನೈ
  ಹಿತವನೇ ಬಯಸುವೀ ಸೇವಕನ ಗುರುತೀಗ
  ನುತಿಸಲಾನಂದಿಸುವ ನಂದಿನೋಡೈ

  • ತುಂಬ ತುಂಬ ಸೊಗಸಾದ ನವೀನಸ್ವೋಪಜ್ಞಕಲ್ಪನೆಗಾಗಿ ಧನ್ಯವಾದಗಳು.
   ಮೊದಲ ಪದ್ಯದಲ್ಲಿ “ಹುಸಿಯೆನಿಸುವ ಪ್ರಕೃತಿವಿಜ್ಞಾನದೊಳ್” ಎಂಬ ಸಣ್ಣತಿದ್ದುಪಡಿಯಿಂದ ಛಂದಸ್ಸು ಸರಿಯಾಗುವುದು. ಉಳಿದಂತೆ ಎಲ್ಲವೂ ಅನವದ್ಯ.

  • 1st verse: ತುಸು ಅಸ್ಪಷ್ಟ. ’ಪಸರಿಸಿದರೇನ್’ ಎಂದರೆ ’ಕಸಿವಿಸಿ’ಗೆ ಸರಿಯಾಗಿ ಹೊಂದುವುದಿಲ್ಲ. ’ಪಸರಿಸಿರೆ’ ಎಂದರೆ ಸರಿಯಾಗುತ್ತದೆ (ಮಾತ್ರೆ ಹೊಂದಿಸಬೇಕಾಗುತ್ತದೆ).
   2nd verse: ಚೆನ್ನಾಗಿದೆ. ’ನಂದಿ ನೋಡಿಂ’ ಎಂದರೆ ಮೊದಲಸಾಲಿನ ’ನಿಮ್ಮಗಳ’ಗೆ ಹೊಂದುತ್ತದೆ.

   • ರಾ ಗಣೇಶ್ ಮತ್ತು ಪ್ರಸಾದರಿಗೆ ಧನ್ಯವಾದಗಳು.

    ಮೊದಲನೆಯ ಪದ್ಯದ ಅರ್ಥ: ಮುಂದೆಂದಾದರೂ ವಿಜ್ಞಾನದ ಸಹಾಯದಿಂದ ಯಾವುದೋ ವಿಕೃತ ಪಶುವು ಸೃಷ್ಟಿಸಲ್ಪಟ್ಟು ,ಅವುಗಳ ಸಂಖ್ಯೆಯು ಹೆಚ್ಚಾದಲ್ಲಿ ಆಗುವ ಅವಸ್ಥೆಯ ಬಗ್ಗೆ ನನಗೆ ಯೋಚನೆ.

 22. ಪದ್ಯಪಾನಿಗಳಿಗೆಲ್ಲ ಒಂದು ಕಳಕಳಿಯ ನಿವೇದನೆ:
  ಈಚಿನ ದಿನಗಳಲ್ಲಿ ಕನ್ನಡದ ವಿಭಾಗದ ಎಲ್ಲರೂ ವೃತ್ತಗಳನ್ನೇ ಮರೆತಂತಿದೆ. ಕಂದವೂ ವಿರಳವಾಗುತ್ತಿದೆ; ಹೆಚ್ಚಿನವರು ಸುಲಭದ ಪಂಚಮಾತ್ರಾ-ಚತುರ್ಮಾತ್ರಾಚೌಪದಿಗಳಿಗೇ ಸೀಮಿತವಾಗುತ್ತಿದ್ದಾರೆ:-( ನಿರ್ದಯವಾಗಿ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಂಡು ತಿಂಗಳಿಗೆ ಎರಡು ಮೂರಾದರೂ ವೃತ್ತಗಳನ್ನು ಬರೆಯುವ ಶಿಸ್ತನ್ನು ರೂಢಿಸಿಕೊಳ್ಳೋಣ. ಅಲ್ಲದೆ ಅಲಂಕಾರಗಳನ್ನು ಗಾಢವಾಗಿ ಪರಿಶೀಲಿಸಿ ತಾವು ರಚಿಸಿದ ಪದ್ಯಗಳ ಅಲಂಕಾರಗಳನ್ನು ಗುರುತಿಸಿಕೊಂಡು ಅಲ್ಲಿಯೇ ಹೆಸರಿಸುವ ಪರಿಪಾಟಿಯನ್ನು ಬೆಳಸಿಕೊಳ್ಳುವಂತಾಗಲಿ.

  • ಗಣೇಶ್ ಸರ್, ಬಹಳ ಸರಿಯಾದ ಮಾತು . ವಿವಿಧ ಅಲಂಕಾರಗಳು ಮತ್ತು ವೃತ್ತಗಳಿಂದ ಪದ್ಯ ರಚನೆ ಮಾಡಬೇಕು. ಇದು ಸ್ವಲ್ಪ ಸಡಿಲ ಗೊಂಡಿತ್ತು ಇನ್ನು ಮುಂದೆ ಈ ರೀತಿಯ ಪ್ರಯತ್ನ ಮಾಡುತ್ತೇವೆ ಸರ್ 🙂

  • ನಮಸ್ಕಾರಗಳು ಗಣೇಶ್ ಸರ್,
   ವೃತ್ತಗಳಲ್ಲಿ ಪದ್ಯರಚಿಸುವ ಮಹದಿಚ್ಛೆಯಂತು ಇದೆ. ಅದರೆ ಪ್ರಯತ್ನಸಾಲದೆ ಸಾಧ್ಯವಾಗುತ್ತಿಲ್ಲ. ನೀವು ವಿಧಿಸಿರುವ ನಿಯಮದನುಸಾರ ಪ್ರಾಮಾಣಿಕ ಪ್ರಯತ್ನ ಖಂಡಿತ ಮಾಡುತ್ತೇವೆ. ಸಾಧ್ಯವಾಗುವಂತೆ ದಯವಿಟ್ಟು ನಮ್ಮನ್ನು ಹರಸಿ.

  • ಉಷಾರವರೆ, ನಿಮ್ಮ ಮಾತಿನ ತಾತ್ಪರ್ಯ ಇದೇಯೆ?
   ಸಂ.ಮ.ಗತಿ||
   ನಮನಗೈಯುವೆಂ ಈಶಪುತ್ರ ನೀಂ ಹರಸಿ ಭೂರಿಯಿಂದಂ
   ತಿಮಿರಹರಿದು ವೃತ್ತದೊಳು ರಚಿಪವೋಲ್ ಯತ್ನಗೈಯುವಂದಂ|
   ಬರಿಯ ಪಾಠಮನ್ನೊರೆದು ಪದ್ಯಮಂ ರಚಿಸಿರೆನ್ನಲೇಕೈ
   ಹರಿಸಿ(ರಿ) ಕಂಪನವ ಧಮನಿಧಮನಿಯೊಳು ಶಿರದೊಳಿರಿಸಿ ಕರಮಂ / ಶಿರದೆ ಬಿಟ್ಟು ಹುಳಮಂ|| 😉

   • ಹೌದು ಪ್ರಸಾದ್ ಸರ್,
    ಅಭಯ / ವರದ ಎರಡೂ ಹಸ್ತಗಳಲ್ಲಿ ಹರಸಲಿ ಎಂದೇ ಅಭಿಪ್ರಾಯ.

 23. ಆಕಾರಂ ರೇಖೆ ಕಲೆತು
  ದೀ ಕೋನಂ, ತ್ರಿಭುಜ ಬಂಧದೊಳ್ ಚದುರಂಗಂ |
  ಸಾಕಾರಂ ಬಿಂದು ಮಿಡಿದು
  ದೀ ಕೋಶಂ, ತ್ರಿಗುಣ ರೂಪಮಿದು ಸಾರಂಗಂ ||

  • ಪದ್ಯಬಂಧವು ಸೊಗಸಾಗಿದೆ; ಆದರೆ ನನಗಿಲ್ಲಿ ಅರ್ಥಸ್ಪಷ್ಟತೆ ಕಾಣುತ್ತಿಲ್ಲ.

   • ಧನ್ಯವಾದಗಳು ಗಣೇಶ್ ಸರ್ ,
    ಚಿತ್ರದಲ್ಲಿರುವ ವಿವಿಧ ಆಕಾರಗಳನ್ನು ಸಾಕಾರರೂಪದಲ್ಲಿ ಕಾಣುವ ಪ್ರಯತ್ನ – (ಅವುಗಳ ಗಣಿತ -ಅಗಣಿತಗಳ ಹಿನ್ನೆಲೆಯಲ್ಲಿ)
    “ಆಕಾರ” : ರೇಖೆ ಕೂಡಿದ ಆಕೃತಿ(ಕನಿಷ್ಠ ತ್ರಿಭುಜ) – ಆಕೃತಿಗಳಿಂದ ಕೂಡಿದ ಚದುರ(ಈ ಚಿತ್ರ) – ಚದುರಂಗ
    “ಸಾಕಾರ” : ಬಿಂದು ಹೊಂದಿದ ಜೀವ-ಕೋಶ / ಶರೀರ – ತ್ರಿಗುಣ ರೂಪದಲ್ಲಿ ಕಂಡ ಸಾರಂಗ (ಕೋಡು ಮೂಡಿದ ಕುದುರೆ! )
    (ಸಂಸ್ಕಾರವಿಲ್ಲದೆ) “ಪ್ರಣಾಳ ಶಿಶು”ವಾಗಿದೆಯೇ, ನನ್ನ “ಕಂದ”?!

 24. अनुपमतुरगं तौ वीक्ष्य मीनौ नु डीनौ
  तदनुचरणशीलो मीनवर्गस्तडागात् ।
  अनुविगमनकाले तोयमेवाहरत् किं
  जलरहितमृगास्ते नष्टजीवास्तदर्थम् ॥

  ಅನುಪಮವಾದ ತುರಗವನ್ನು ನೋಡಿ ಆ ಮೀನುಗಳು (ಚಿತ್ರದ ಮೇಲ್ಭಾಗದಲ್ಲಿ ಮೀನುಗಳಂತೆ ತೋರುವ ಚಿಹ್ನೆಗಳು) ಭೀತರಾಗಿ ಹಾರಿಹೋದವೇನೋ. ಅವರಿಬ್ಬರನ್ನು ಅನುಕರಿಸಿ ಕೆರೆಯಲ್ಲಿದ್ದ ಮೀನುವರ್ಗವೇ ಹಾರುತ್ತಾ ನೀರನ್ನೇ ಎತ್ತಿಕೊಂಡು ಹೋಯಿತೇನೊ. ಅದಕ್ಕೆ ಪಾಪ ಆ ಪ್ರಾಣಿಗಳಿಗೆ ನೀರು ಸಿಗದೆ ಸತ್ತು ಹೋದವು. (ಹೀಗಾಗಿ ಅದು ಏಕಶೃಂಗವೋ ತುರಗವೋ ಮತ್ತೊಂದೋ ಎಂದು ಇಂದು ತಿಳಿಯುತ್ತಿಲ್ಲ).

  • विचित्रकल्पना वरा कृताsभिनन्दनं तदर्हति
   क्वचित्तु ’मीन”वाचकं पदं पुनः प्रयॊजितम् ।
   न पद्यबन्धमध्यगा पुनःप्रयुक्तिरीदृशी
   रसाय नोपकारिणी ह्यवाञ्छनीयतां भजेत् ॥

   • तर्हि
    तदनुचरणशीलं तत्कुटुम्बं तडागात् ।
    इति द्वितीये पादे परिवर्तिते पुनःप्रयोगदोषो निवारितो भवेदिति मन्ये ।

 25. 🙁 No idea coming to my mind :'(

  ಬರೆಯಲೇನಿದಕೆನ್ನ ಮಸ್ತಕದೆ ಶೂನ್ಯವಿದೆ
  ಬರಿಯ ಕುದುರೆಯೆ ಬರ್ಪುದೆನ್ನಮನಕೆ|
  ಚರಿತೆಯನು ಕುರಿತೋದಲಿಲ್ಲ ನಾಂ ಬಾಲ್ಯದೊಳ್
  ಸರಿಯ ಪದ್ಯಮನೀಡದಾದೆನಯ್ಯ|

  • ಚೀದಿ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದಕಡೆಗೋಡು…

 26. ಪ್ರಯತ್ನದ ಹೆಸರಲಿ…

  ರಾಸು ಕೊಡುಗೆಯ ಕಡತವಂ
  ಶಾಸನ ಬಲದಿಂ ಸುವರ್ಣ ಸಿರಿಯಿಂ ಸರಿದೂ
  ಗಿಸಲೇಂ? ವರ ಸಿರಿ ಸಂಸ್ಕೃತಿ
  ಯಸುನೀಗದೆಯುಳಿಯಲೀತಕಾರಣಕರ್ತಂ ।।

  • ಸಿಂಹ-ಗಜಪ್ರಾಸಸಂಕರವಾಗಿದೆ.
   ಕೊನೆಯ ಪಾದದಲ್ಲಿ ಟೈಪೊ – ಅಸುನೀಗದೆ

   • ಧನ್ಯವಾದಗಳು ….ಪ್ರಾಸವನು ಪುನಃ ನೋಡುವೆ….
    ಟೈಪೋ ಸರಿ ಮಾಡಿದ್ದೆನೆ … ಮತ್ತೊಮ್ಮೆ ಧನ್ಯವಾದಗಳು ….!!

 27. ವಂಶಸ್ಥದಲ್ಲಿ ರಚಿಸಲು ಪ್ರಯತ್ನಿಸಿದ್ದೇನೆ.

  ವಿಕಾರ ರೂಪಕ್ಕೆ ತೆಗಳ್ದ ಲೋಕಕಮ್
  ವಿಕೀರ್ಣವಾಗಲ್ ನೆರವಾಗುತಿರ್ಪನೇಂ
  ಸುಕಾಲ ಪೊಂದಿರ್ಪೆಮಗಂ ಸದಾಶಿವಂ
  ದುಕೂಲದಿಮ್ ಬಣ್ಣಗಳಿಮ್ ಯಥೋಚಿತಮ್

  ವಿಕೀರ್ಣ – ಪ್ರಸಿದ್ಧ

 28. ಕಾಡುತಲ್ ಬಾಲ್ಯದಾ ನೆಂಪುಗಳ್,ವಸ್ತುಗಳ್,
  ನೀಡುಗುಂ ತೋಷ ಮೇಣ್ ಬಾಳಿನೊಳ್ ಸ್ಪೂರ್ತಿಯಂ|
  ಪಾಡಿರಲ್ ಪೂರ್ವದಾ ಪಾಡನೀ ಚಿತ್ರ ತಾಂ
  ಮೋಡಿಯಂ ಮಾಡದೇಂ ಪೇಳಿರೈ ಯೆಮ್ಮನುಂ?||

  • ಬರಿದೆ ಆ ಚಿತ್ರಮನ್ನು ನೋಡಲೇಂ ಸ್ಫುರಿಪುದೇನಿದೆಲ್ಲಂ?
   ಕೊರೆದ ಚಿತ್ರಮಲ್ತೊರೆದ ನಿಮ್ಮ ಪದ್ಯವದು ಗೈಯೆ ಮೋಡಿ|

   • ಬರಿವಾದ ತರವಲ್ಲ ರಂಗಣ್ಣ! ನಿಮಗಿದಾಂ
    ಬರೆದೆನೆಂತಾದರೂ ಸಹಿಸಿಕೊಳ್ಳೀ 🙂
    (ಚಿತ್ರವು ಮೋಡಿ ಮಾಡದಿದ್ದರೂ, ಬರೆದಿದ್ದಕ್ಕೆ ಹೂಂ ಎಂದುಬಿಡಿ 🙂 )

  • ಸಹಿಸಿಕೊಳ್ಳಿ?
   ಆ ಚಿತ್ರವನ್ನು ನೋಡಿದಮಾತ್ರಕ್ಕೆ ನೀವು ಹೇಳಿರುವುದೆಲ್ಲ ಸ್ಫುರಿಸುವುದಿಲ್ಲ. ಮೋಡಿಮಾಡಿರುವುದು ಆ ಕೊರೆದ ಚಿತ್ರವಲ್ಲ, ನೀವು ಬರೆದ ಪದ್ಯ ಎಂದು ನಾನು ಹೇಳಿರುವುದು.

 29. ಲಯಗ್ರಾಹಿ||
  ಎಂದೆಂದುಮಿಂತಲ್ತೆ ಸಾರಾಂಶ ನೋಡಲ್
  ಪೊಂದಿದ್ದಿತೀ ವಿಶ್ವ ಗೋ-ಮಾನರಂ ತಾಂ| (animals and humans – top right)
  ಮುಂದೊಮ್ಮೆ ಸಂಪರ್ಕಸಂಜ್ಞಾವಿಧಾನಂ (some language of communication – top centre)
  ತಿಂದುಂಡು ವಿಶ್ರಾಂತಿಕಾಲಕ್ಕೆ ಕಾವ್ಯಂ|| (artifact in bottom left corner)

  ಇನ್ನು ಅಲಂಕಾರನಿರ್ದೇಶನ:
  ಅರೆಬರೆ ಪಕ್ವದ ಕಬ್ಬಮ-
  ನೊರೆವೊತ್ತಿಗೆ ’ಸಾಕು’-’ಸಾಕ್’ಎನಿಸಿರಲ್ ನಿಚ್ಚಂ|
  ಮಿರುಗದೆ ಎನ್ನಯ ಪದ್ಯದೆ
  ಪರಿಚಿತ್ತಾರಗ’ಳಲಂ’ಕೃತಿನವೋನ್ಮೇಷಂ?|

 30. मृगोऽयं न शृङ्गी न वा गौः कथंचित्
  तथा वच्मि वीक्ष्याथ यन्त्रं पुरःस्थम् ।
  ततो वाति केशेषु तूर्ध्वं निदाघे
  स चित्रार्पितारम्भ एवावतस्थे ॥

  lite ವಿಚಿತ್ರಕಲ್ಪನಧಾರಾ ಅನುವರ್ತತೇ 🙂
  ಈ ಮೃಗ ಶೃಂಗಿಯಲ್ಲ, ಗೋವೂ ಅಲ್ಲ. ಅದರ ಮುಂದಿರುವ ಯಂತ್ರವನ್ನು ನೋಡುತ್ತ ಹೀಗೆ ಹೇಳುತ್ತಿದ್ದೇನೆ. ಗ್ರೀಷ್ಮದಲ್ಲಿ ಆ ಯಂತ್ರದಿಂದ ಗಾಳಿ ಬೀಸುತ್ತಿದೆ. ಆಗ ಆ ಮೃಗವು ಹೀಗೆ ಪೋಸ್ ಕೊಡುತ್ತಾ ನಿಂತಿತು. (ಗಾಳಿ ಬೀಸುತ್ತಿರುವುದರಿಂದ ಅದರ ಕೂದಲು ಎದ್ದು ನಿಂತಿದೆ!)

 31. धातस्त्वमादिकवितास्फुरणे प्रभूय
  काव्यप्रबोधनविधावभवत्सहायः |
  तद्वत्त्वमादिलिपिसंस्फुरणे न भूतः
  तस्मात्प्रहेलिरिव सोन्मथतेऽद्य सर्वम् ||

  हे धातः त्वं आदि कवितास्फुरणे प्रभूय काव्यप्रबोधनविधौ सहायः अभवत् | तद्वत् त्वं आदिलिपिसंस्फुरणे (सहायः) न भूतः तस्मात् (कारणात्) अद्य (अपि) सा प्रहेलिः इव सर्वं उन्मथते |

  ಹೇ ಬ್ರಹ್ಮನೇ, ನೀನು ಆದಿಕಾವ್ಯವಾದ ರಾಮಾಯಣದ ಹುಟ್ಟಿನ ಸಂದರ್ಭದಲ್ಲಿ ಬಂದು (ಛಂದಸ್ಸಿನ ಲಕ್ಷಣ, ಕಾವ್ಯದ ಹೇತು, ಇತ್ಯಾದಿ ತಿಳಿಸಿ ) ಅದರ ಅರಿವಿನ ಕಾರ್ಯದಲ್ಲಿ ಸಹಕಾರಿಯಾಗಿದ್ದೆ. ಅದರಂತೆ (ಹಾಗೆಯೇ) ನೀನು (ನಮ್ಮ ಪಾಲಿಗೆ) ಆದಿಲಿಪಿಯಾದ ಸಿಂಧುಸರಸ್ವತೀ ಲಿಪಿಯ ಉಗಮದ ವೇಳೆ ಬರಲಿಲ್ಲ ಅದರಿಂದಲೇ ಈಗಲೂ ಸಹ ಅದು ಒಗಟಿನಂತೆ ಎಲ್ಲರನ್ನು ಉದ್ವಿಗ್ನಗೊಳಿಸುತ್ತಿದೆ.

  • क्रौञ्चाभ्यां ननु वाल्मीकिः मत्कृताभ्यां कथामदात् ।
   मृगोयं न मया सृष्टः, साहाय्यं मम पृच्छसि ?

   ವಾಲ್ಮೀಕಿಃ ಮಯಾ ಕೃತಾಭ್ಯಾಂ ಕ್ರೌಂಚಾಭ್ಯಾಂ (ಸಹ) ಕಥಾಮ್ ಅದಾತ್. ನಾನು ಸೃಷ್ಟಿಸಿದ ಕ್ರೌಂಚಪಕ್ಷಿಗಳೊಂದಿಗೆ ಕಥೆಯನ್ನು (ಲೋಕಕ್ಕೆ) ಕೊಟ್ಟನು. ಅಯಂ ಮೃಗಃ ನ ಮಯಾ ಸೃಷ್ಟಃ. ನನ್ನ ಸೃಷ್ಟಿಯಲ್ಲ. ಸಾಹಾಯ್ಯಂ ಮಮ ಪೃಚ್ಛಸಿ ? ನಾನೇಕೆ ಸಹಾಯ ಮಾಡಬೇಕೆಂದ ಬೊಮ್ಮ.

  • @ GS: Clap Clap. Very fine GS-brand idea, and versification too.
   @ Naresh: Your pratikriyA is relishable. I am not very good at sanskrit, wherefore I am apprehensive at making this observation. Nevertheless I will share it with you so that you may clarify my miscomprehension: I am not able to match vAlmeeki and matkRta (in your translation too). Also, there is no brahma in the verse. As this calls for scripting of direct speech, better appoint it in a bigger meter.

   • ಪ್ರಸಾದು, ಮೊದಲ ಪಂಕ್ತಿಯ ಅನ್ವಯ ಹೀಗಿದೆ – “ವಾಲ್ಮೀಕಿಃ ಮತ್ಕೃತಾಭ್ಯಾಂ ಕ್ರೌಂಚಾಭ್ಯಾಂ ಕಥಾಮ್ ಅದಾತ್ ನನು.”
    ಮತ್ಕೃತಾಭ್ಯಾಂ ಎನ್ನುವುದು ಕ್ರೌಂಚಾಭ್ಯಾಂ ಪದದ ವಿಶೇಷಣ. ವಾಕ್ಯದ ವಕ್ತಾ ಬ್ರಹ್ಮಾ ಡೈರೆಕ್ಟ್ ಸ್ಪೀಚ್ ನೀವು ಹೇಳಿದಂತೆ. ಮತ್ಕೃತಾಭ್ಯಾಮ್ = ಮಯಾ ಕೃತಾಭ್ಯಾಮ್. ಮಯಾ = ಅಹಮ್ ಇನ ತೃತೀಯಾ ವಿಭಕ್ತಿ

    ರಾಘವೇಂದ್ರರ ಪದ್ಯದಲ್ಲಿ ಧಾತಃ ಎಂಬ ಸಂಬೋಧನೆಯಿರುವುದರಿಂದ ಮತ್ತು ಈ ಪದ್ಯವು ಅದರ ಉತ್ತರರೂಪದಲ್ಲಿ ಬರೆದಿರುವುದರಿಂದ ’ಅಹಂ ಧಾತಾ ಏವಂ ವಚ್ಮಿ’ ಎಂದು ಹೇಳುವ ಅವಶ್ಯಕತೆ ಕಾಣಲಿಲ್ಲ – ಹೇಗೆ ನಿಮ್ಮ ಪ್ರಶ್ನೆಯ ಉತ್ತರವಾಗಿ ಈಗ ಬರಿಯುತ್ತಿರುವ ಉತ್ತರದಲ್ಲಿ ’ನರೇಶನಾದ ನಾನು ಹೀಗೆ ಹೇಳುತ್ತಿದ್ದೇನೆ’ ಅಂತ ಹೇಳುವುದಿಲ್ಲ ಅಲ್ಲವೆ? Let’s put in a brahmovAcha if it makes it clearer!

    As far as bigger meter, I didn’t see a need for it. I figured punctuation marks would take care of the needed kAku.

 32. ಮಂದಾಕ್ರಾಂತ – ಉಪಮಾನ
  ವರ್ಣದ್ರವ್ಯಂ ಪಲವುಮಿರಲೇಂ ವರ್ಣಚಿತ್ರಂ ಗಡಿಂತು-
  ತ್ತೀರ್ಣಂ ಮಾತ್ರಂ ಸಹಜತೆಯಿನಿಂ, ನಾನ್ಯಮೇಕಂ ವಿಶೇಷಂ|
  ಸ್ವರ್ಣಂ ನೋಡಿಂ ಫಲಕಮಿದರೊಳ್ ಶಿಲ್ಪವೈವಿಕ್ತ್ಯಮೆಂತೋ
  ಪೂರ್ಣಂ(=ಏಕಂ) ತಾನಾತುಮಮಿರುತ,(ಅ)ನೇಕಂ ವಪುಸ್ಸೆಂಬವೋಲಿಂ||

 33. ಪಸಿದಿಹ ಹುಲ್ಲೆತಾಂ ಮಿಸುಕುಜೀವವ ಹೊಂದುದಕಾವ ಕಾರಣಂ |
  ಪ್ರಸವಮೆ ಮೀನರಾಶಿಯೊಳು ವೃಶ್ಚಿಕಲಗ್ನದೆ ಜೀವಧಾರಣಂ |
  ಬೆಸೆಯಲುಮೆಲ್ಲವಂ ಗಣಿತಸೂತ್ರವು ಜಾತಕಪತ್ರ ಮಾತ್ರದೊಳ್ |
  ಪೊಸೆದಿಹುದಂದೆತಾಂ ಗಣಕಯಂತ್ರವು ಮಂತ್ರದೆ ದಾಸ್ಯ ಲಾಸ್ಯವಂ ||

  ( ಚಿತ್ರದಲ್ಲಿ ಮೀನು,ಚೇಳು ಕಂಡ ಕಾರಣ – “ಚಂಪಕಮಾಲೆ”ಯಲ್ಲಿ ಬಂದ ಜನ್ಮ ಕುಂಡಲಿ !! ಇಂದಿನ “Compute Animation Technique” ಅಂದೇ ಇದ್ದಿರಬಹುದಾದ ಸಂಭವದ ಕಲ್ಪನೆಯಲ್ಲಿ )

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)