Apr 062014
 
ಮತಯಾಚನೆ

ಮತಯಾಚನೆ

  72 Responses to “ಪದ್ಯಸಪ್ತಾಹ ೧೦೩: ಚಿತ್ರಕ್ಕೆ ಪದ್ಯ”

 1. ಕಾಲನುಂ ಮುಟ್ಟಿಯೇ ಸೀಟನುಂ ಕೊಂಡರೂ
  ಕಾಲಬಂದಾಗದಂ ಜಾಡಿಸೇ ಪೋಗುವರ್
  ಸೋಲದಾ ಪಕ್ಷವನ್ನೆಂದಿಗೂ ಮೋಹಿಪರ್
  ಚೀಲವಂ ಕಾಸಿನಾ ಕೂಡುತಲ್ ಸಾಗುವರ್

  ಜಾಡಿಸು = ತಳ್ಳು,ಕೆಡಹು

 2. ಪಲ್ಲಂ ಕಿರಿಯುತೆ ಯಾಚಿಸು
  ತಿಲ್ಲದ ಪುಸಿವೆಳಕತೋರಿ ಮತವಂ ಪಡೆವರ್
  ಕಲ್ಲನೆ ಕರಂಗಿಸುವವೊಲ್
  ಸುಳ್ಳೆನೆ ದಿಟಮಾಗಿಸಿರ್ಪರೀನಾಯಕರ್ಗಳ್|

  • ಹೌದು ಚೀದಿ, ಕಾಂಚನಾ ಅವರ ಪದ್ಯವು ಸ್ರಗ್ವಿಣಿಯಲ್ಲಿದೆ. ಅಂತೆಯೇ ನಿನ್ನ ಈ ಕಂದಪದ್ಯದ ಭಾಷೆ-ಬಂಧಗಳು ತುಂಬತುಂಬ ಸೊಗಸಾಗಿವೆ. ಎಲ್ಲ ರೀತಿಯಿಂದಲೂ ಇದು ಪರಿಪೂರ್ಣವಾಗಿದೆ.

 3. tirutirugi peethadol parivara kullirsi
  madiparu prajegalum kurigalandadi
  tuLivalke yirpadol shiravorage kaTukaMge
  Lokadhol agripa rudra narthana vem

  • ಇಂದ್ರ ಉರುಫ್ ರಾಘವೇಂದ್ರ ನಾಗರಾಜರಿಗೆ ಸ್ವಾಗತ, ಸುಸ್ವಾಗತ !

   ಆಹಾ! ಎನ್ನಯ ಮನಕಂ
   ಮೋಹಕ ದೇವೇಂದ್ರನೆಂದು ಸಂತತಮಾರಂ |
   ವಾಹಿಸಿದಪೆನೋ ಆತನೆ
   ಗಾಹಿಸಿದನೆ ಪದ್ಯಪಾನರಸನಿರ್ಝರಮಂ !!

   ದಯಮಾಡಿ ಕನ್ನಡಲಿಪಿಯಲ್ಲಿ ಟಂಕಿಸಿದರೆ ಪದ್ಯದ ವಿವೇಚನೆ ಮತ್ತು ಸವರಣೆ ಸುಸಾಧ್ಯ. ಆದರೂ ಮೇಲ್ನೋಟಕ್ಕೇ ಇದು ಬಲುಮಟ್ಟಿಗೆ ಚೆನ್ನಾಗಿದೆ.

   • ಓಹೋ! ನಮ್ಮ ರಾಘೂದಾ ಪದ್ಯ, ಬಹಳ ಸಂತೋಷ. ಪದ್ಯಪಾನಕ್ಕೆ ಸ್ವಾಗತ ರಾಘೂ 🙂

   • Soma, there are no punctuation marks whatsoever in that remark of yours. By the tenor of the phrase, it merits a question mark, which means that you are thus countering Sri RG’s remarks: ಏನ್ ಸರ್! ಪದ್ಯಪಾನಕ್ಕೆ ರಾಘುನಾ ಸ್ವಾಗತ?
    Not the way to welcome a good friend man 🙂

    • ಸನ್ಮಿತ್ರರೂ ಆತ್ಮೀಯರೂ ಆದ ಸನ್ಮಾನ್ಯ ಪ್ರಸಾದು ಅವರೇನು ನನ್ನ ಬಗ್ಗೆ ಟೀಕೆ ಮಾಡಿದಾರೆ, ಅದಕ್ಕೆ ಯಾವುದೇ ರೀತಿಯ ಹುರುಳಿಲ್ಲ ಅಂತ ನಾನು ಈ ಸಂದರ್ಭದಲ್ಲಿ ಹೇಳಕ್ಕೆ ಇಷ್ಟಪಡ್ತೀನಿ 😉

     ಪ್ರಸಾದು, ನನ್ನ ಟಿಪ್ಪಣಿಯನ್ನ ನೀವು ಮಿಸಿಣ್ಟರ್ಪ್ರಿಟ್ ಮಾಡಿದೀರಾ, ಇನ್ನೊಮ್ಮೆ ನನ್ನ ಟಿಪ್ಪಣೀ ಗಮನಿಸಿರಿ 😉

     • Very smart! I can quote your earlier post in my comment. But I will abstain from doing so. What I will rather do is take a photo of yours from my archives and incorporate it in above pic among those ಮೋಸಗಾರರ್ 😉

     • 🙂

 4. ಜನರಿಂ ಜನರ ಜನರ್ಗೆನೆ
  ತನುವಿದು ಮತವೀಯೆ ಸುಧೆಯ ಮಳೆಗರೆವೆಂಬಾ
  ದನಿ ಗೆಲ್ದು ಪೋಗೆ ಹಾ ಯಾ-
  ಮಿನಿಯೊಳ್ ಚಂದ್ರಿಕೆಯನೀಕ್ಷಿಪರ್ ಗಾವಿಲರ್ಗಳ್

  ಸುಧೆಯನ್ನು ನೀಡುವೆ ಮತ ನೀಡಿರೆಂದು ಯಾಚಿಸುವ ಅಭ್ಯರ್ತಿಗಳು ಗೆದ್ದು ಹೋದಮೇಲೆ (ಜನ) ರಾತ್ರಿಯಲ್ಲಿ (ವಿದ್ಯುತ್ತಿಲ್ಲದೆ) ಚಂದ್ರನ ಕಿರಣವನ್ನೇ ನೋಡುತ್ತಾರೆ ಗಾವಿಲರು (ಮತದಾರರು)

  • ಸೋಮ, ಒಳ್ಳೆಯ ಭಾಷಾ-ಶೈಲಿಗಳ ಕಂದ; ಅಂದವಾಗಿದೆ. ಅಭಿನಂದನೆಗಳು.

  • Wow…sakkattaagide…nakshatra eNisodu antaaralla…haage…

  • ಸೋಜಿಗಮೇಂ ಸೋಮ? ದಿಟದಿ
   ರಾಜರ ಕುನಯಕ್ಕೆ ಫಲವು ಬರಗಾಲಮಲಾ
   ಸಾಜಮೆ ವಿದ್ಯುಲ್ಲತೆಗಳ
   ಗೋಜಿರದೆ ಬರಿದೆ ಸುಧಾಂಶು ದೀಪ್ತಿ ಗಗನದೊಳ್

 5. Even in that seemingly coherent group, only two are wearing caps. The caps are meant (figuratively) not only for the heads of the gullible voters (who are without caps), but to also ditch their own men (who also are without caps – in that pic) after they have been used.
  ಸಂ.ಮ.ಗತಿ|| ಟೋಪಿಯಿಟ್ಟುಕೊಂಡಿರುವುದಲ್ತೆ ಸಂಕೇತಮಿತರರಿಂಗಂ
  ಲೇಪಿಸಲ್ಕದನ್ನಾರಿಹರೊ ನಗ್ನಶೀರ್ಷರೀಗಳೆಂಬೆಂ|
  ಪಾಪದವರಲ್ಲ ಮಾತ್ರಪ್ರಜೆಗಳೈ ನೋಡಲಾಪ್ತರಿಂಗುಂ
  ಯೂಪ ಕಾಣಿಪರು ಕಜ್ಜಸಲ್ಲಲಿನ್ನಿವರಿಗಾರದಾಪ್ತರ್||

 6. ಸ್ವಾಗತ|| ಎಡಕೆ ನಿಂದಿರುವರೀರ್ವರು ಮಾತ್ರಂ
  ಕೆಡುಕ ಕೋರುವ ವಿಚಾರಕರೆಂಬೆಂ|
  ನಿಡಿದು ಸ್ಮೇರವನು ಗೈದಿಹರೇಕೋ
  ಮಿಡುಕುತಿರ್ದಿರಲು ಚಿಂತೆಯಿನನ್ಯರ್||
  (ವಿಚಾರಕ=spy)

  • ಇದು ’ಸ್ವಾಗತ’ವಲ್ಲ; ಆದರೂ ನಿಮ್ಮ ಪದ್ಯ ಮಾತ್ರ ಸ್ವಾಗತಾರ್ಹ:-)

   • ಉತ್ತರಾರ್ಧವನ್ನು ಮಾತ್ರ ಗಮನಿಸಿಕೊಂಡೆ. ಇದು ದ್ರುತಪದ.

 7. “मतभिक्षामहं याचे ददाम्यहं जलादिकम् ।
  भवतां सेवकोऽहं वै”, दैन्यास्त्रेण जयेदसौ ॥
  अहमहमिति पुनरुक्तिः स्वेच्छां द्योतयितुम् । सेवकोस्मि इति दीनमुद्रां दर्शयित्वा जयं प्राप्नुयात् इति मतिः ।

  • ಚೆನ್ನಾಗಿದೆ; ಆದರೆ ಎರಡನೆಯ ಪಾದವು ಪ್ರಮಾಣಿಕೆಯಂತೆ ಕೇಳುತ್ತದೆ. ಹೀಗಾಗಿ ಅನುಷ್ಟುಪ್ ಶ್ಲೋಕದ ಘೋಷವು ಕೇಳದಾಗಿದೆ.

   • प्रमाणिकायाः लक्षणं वोदाहरणं किम्?

    • ಪ್ರಮಾಣಿಕಾ ಭವೇದ್ವರಾ
     ಲಗಂ ಲಗಂ ಗತಿಸ್ಫುಟಾ |
     ದಿಶಾಗಜಾಖ್ಯಸಂಖ್ಯಯಾ
     ಭವನ್ತಿ ವರ್ಣಿಕಾಃ ಪದೇ ||
     (ವರ್ಣಿಕಾಃ = ವರ್ಣಾ ಅಕ್ಷರಾಣೀತಿ ಯಾವತ್)

 8. ಕಡಿಮೆ ಸಂಖ್ಯೆಯಲ್ಲಿರುವ ದಕ್ಷ ,ಪ್ರಾಮಾಣಿಕ ರಾಜಕಾರಣಿಗಳ ಹೊರತಾಗಿ —

  ಸಂಚು ಹೂಡುತಲೆ ಬಂದಿಹರು ಮತ ಯಾಚನೆಗೆ
  ಕೊಂಚವೂ ಬಯಸರಿವರನುವಂಶ ಗಾದಿ !!
  ಪಂಚೆ,ಸೀರೆಗಳು ಮದ್ಯ ನಗದುಗಳನೆಹಂಚಿ
  ಮಿಂಚಿ ಮರೆಯಾಗುವರಿವರದಕ್ಷರು II

  • ಪೇಳಲಾಗದೌ ದುಷ್ಟರೆಂದಮಾತ್ರದಿನದಕ್ಷರೆಂದುಂ
   ಹೋಳುಗೈಯುವರು ದೇಶವನ್ನು ದಕ್ಷತೆಯಿನಿಂದಲೆಂದುಂ|

  • ಉತ್ತರಾರ್ಧದಲ್ಲಿ ಸ್ವಲ್ಪ ಗತಿಭಂಗದ ಸೋಂಕಿದೆ. ಉಳಿದಂತೆ ಪದ್ಯವು ಆನವದ್ಯ.

   • ಸರ್ ,
    ಧನ್ಯವಾದಗಳು .
    …..ಮ/ದ್ಯ ನಗದುಗ/ಳನೆಹಂಚಿ
    ….. ಯಾಗುವರಿ/ ವರದಕ್ಷ/ರು II —ಈ ೨ ಕಡೆಗಳಲ್ಲಿ ಗತಿ ಭಂಗದ ಸಮಸ್ಯೆ ಇದೆಯೆ ಅನ್ನುವ ಸಂದೇಹ ಇರುವುದರಿಂದ ತಾವು ಸೂಚಿಸಿದ ಉತ್ತರಾರ್ಧವನ್ನು ಗುರುತಿಸಲು ಸಾಧ್ಯವಾಗಿಲ್ಲ . ಸೂಚಿಸಿದಲ್ಲಿ ಸರಿ ಪಡಿಸುವ ಪ್ರಯತ್ನ ಮಾಡಬಲ್ಲೆ

   • ತಿದ್ದುಪಡಿ —
    ಸಂಚು ಹೂಡುತಲೆ ಬಂದಿಹರು ಮತ ಯಾಚನೆಗೆ I
    ಕೊಂಚವೂ ಬಯಸರಿವರನುವಂಶ ಗಾದಿ !! II
    ಪಂಚೆ,ಸೀರೆಗಳು ಮದ್ಯದೊಡಗೂಡಿದ ನಗದು I
    ಹಂಚುತಲೆ ಮಿಂಚಿ ಹೋಗುವ ದಕ್ಷರು !! ? II

 9. my problem is that i can’t type kannada font here. please help me in this regard. i know BARAHA well.

 10. ¤ªÀÄä GvÀÛgÀPÉÌ zsÀ£ÀåªÁzÀUÀ¼ÀÄ

 11. ಹಿತವನಾಂ ದೇಶದಂ ಬಯಸಿರ್ಪೆ ಬಂಧುಗಳೆ
  ಮತವೊಂದಮಿತ್ತೆನ್ನಮಾರಿಸಿರಿ ನೀಂ
  ಮಿತಿಮೀರಿ ಪರಪಕ್ಷ ಕೊಳ್ಳೆಹೊಡೆದಿರಲೆಲ್ಲ
  ಗತಿಯೆಮ್ಮದೇನೆಂಬುದರಿತು ಹರಸಿ.(ದೇಶದ / ಸ್ವಂತದ)

 12. ಕನ್ನಡ

 13. ( ಶಾರ್ದೂಲವಿಕ್ರೀಡಿತ ವೃತ್ತ, ಉಪಮಾಲಂಕಾರ,ರೂಪಕಾಲಂಕಾರ)

  ಪೊಳ್ಳಾಗಿರ್ಪ ವಿಚಾರಮನ್ನೊರೆಯೆ,ನೇತಾರರ್ ಮತಾಪೇಕ್ಷೆಯಿಂ,
  ಸುಳ್ಳಂ ನೆಮ್ಮುತೆ,ಮೆಚ್ಚಿ ಬೆಂಬಲಿಸಿ,”ಜೈ”ಯೆಂಬರ್ ಸದಾ,ಸಜ್ಜನರ್ |
  ಕಳ್ಳರ್ ಗೆದ್ದಿರೆ, ನಿತ್ಯಮುಂ ಬಿನದದಿಂದೋಲಾಡಿ,ಮೋಜಿಂದಿರಲ್,
  ಪಳ್ಳಕ್ಕಾಕುರಿವಿಂಡು ತಾನ್ ಪಗಲಿನೊಳ್ ಬಿಳ್ದಂತೆವೋಲ್,ಮಂದಿಗಳ್ ||

  • ಒಳ್ಳೆಯ ವೃತ್ತವನ್ನೇ ಸೊಗಸಾದ ಭಾಷೆ-ಭಾವಗಳು ಉಕ್ಕುವಂತೆ ರಚಿಸಿದ್ದೀರಿ ಧನ್ಯವಾದ. ಒಂದೇ ಒಂದು ಸಣ್ಣ ತಿದ್ದುಪಡಿ:
   ವಿಚಾರಮಂ + ಒರೆಯೆ =ವಿಚಾರಮನೊರೆಯೆ ಎಂದೇ ಸಂಧಿಯಾಗುವುದು. ಅನ್ಯಥಾ ಅಲ್ಲ. ಹೀಗಾದಾಗ ಛಂದಸ್ಸು (ಪ್ರಕೃತದ ನಿಮ್ಮ ಪದ್ಯದಲ್ಲಿ ) ಕೆಡುವುದು.
   ಆದುದರಿಂದ ವಿಚಾರಮಂ ಕಥಿಸೆ ಎಂದಲ್ಲಿ ಸರಿಯಾಗುವುದು.

   • ಗುರುಗಳೆ,( ಕ್ಷಮಿಸಿರಿ,ನನಗೊಬ್ಬಳಿಗೆ ಮಾತ್ರ ಸಂಬೋಧನೆಯ ನಿಮ್ಮ ನಿಯಮವನ್ನು ಸ್ವಲ್ಪ ಸಡಿಲಿಸಬೇಕಾಗಿ ಕೋರುತ್ತೇನೆ.)
    ಧನ್ಯವಾದಗಳು. ನೀವೆಂದಂತೆ ಅಲ್ಲಿ ತಪ್ಪಾಗಿದೆ.(ವಿಚಾರವನ್ನು+ಒರೆ)
    ಎಂಬ ಹೊಸಗನ್ನಡದ ಸಂಧಿಯ ಪ್ರಭಾವದಿಂದ ಹೀಗಾಗಿದೆ. 🙁
    ವಿಚಾರಮಂ ಕಥಿಸೆ ಎಂಬುದಾಗಿ ಸವರುತ್ತೇನೆ.
    ( ವಿಶೇಷ ಮನವಿ : ನನ್ನ ಪದ್ಯಗಳಿಗೆ ನೀವು ಧನ್ಯವಾದವನ್ನು ದಯಮಾಡಿ ತಿಳಿಸಬಾರದಾಗಿ ವಿನಂತಿಸುತ್ತೇನೆ.)

    • ಇಲ್ಲ, ಯಾರಿಗೂ ಈ ಸಂಬಂಧವಾಗಿ ನಿಯಮದ ಶೈಥಿಲ್ಯವಿಲ್ಲ. ನನ್ನನ್ನು ಸಹಪದ್ಯಪಾನಿಗಳು ಹೇಗೆ ಸಂಬೋಧಿಸಬೇಕೆನ್ನುವ ಸ್ವಾತಂತ್ರ್ಯವು ನನ್ನದೇ ಆಗಬೇಕು:-)

 14. ಬರಿಮಾತೊಳು ಮೋಡಿಯಿದೈ ಜನನಾಯಕ ದೀನರ್
  ಕರಜೋಡಿಸಿ ಬೇಡಿರಲುಂ ಮತದಾನವನೀಗಲ್ ।
  ಹರಸಾಹಸ ಪಟ್ಟಿಹರೈ ಪಡಕೊಳ್ಳಲು ವೋಟಂ
  ಸರಕಾರವ ನೆಟ್ಟವರುಂ ಬೆಳಕೊಂಬರು ನೋಟಂ !!

  • ಆಹಾ! ಸೊಗಸಾದ ಸಂತುಲಿತಮಧ್ಯಾವರ್ತಗತಿಯ ಪದ್ಯ!! ಭಾವವೂ ಚೆನ್ನಾಗಿದೆ.

   • ಧನ್ಯವಾದಗಳು ಗಣೇಶ್ ಸರ್,
    ಕೆಲಸದ ಮಧ್ಯೆ ಆಶುವಾಗಿಬಂದ ಪದ್ಯ. ಮಾರ್ಚ್ busyಯಲ್ಲಿ ಹಬ್ಬದ ಉಡುಗೆತೊಡುಗೆತೊಟ್ಟು ಸಂಭ್ರಮಿಸಲಾಗದ ವ್ಯಥೆಯನ್ನು ದೂರಮಾಡಿದೆ.

 15. ಪೃಥ್ವಿಯಲ್ಲಿ ಒಂದು ಪ್ರಯತ್ನ:

  ಕುತಂತ್ರಗಳ ಗೈಯುತುಂ|ಮತವ ಗಿಟ್ಟಿಸಲ್ ಬಂದಿಪರ್
  ಪ್ರತಾಪಗಳತೋರುತುಂ|ಗೆಲಿಸಿರೆನ್ನುವರ್ ದುರ್ಬಲರ್
  ಮತಿಭ್ರಮಣೆಯಾದವೊಲ್|ತಿಳಿಯದನ್ನೆಪೇಳಿರ್ಪರೈ
  ಪ್ರತಿಧ್ವನಿಸುವರ್ ಸದಾ|ಪರರಸೊಲ್ಗಳಂ ಧೈರ್ಯದಿಂ

  • ಅಸಾಧ್ಯತರವೃತ್ತಮಂ ನಡಸುವೊಂದು ನಿನ್ನೀ ಚಲಂ
   ಪ್ರಸನ್ನತೆಯನಿತ್ತುದಯ್ ನನಗಮಿಂದು ಮತ್ತಾದೊಡೀ |
   ನಿಸರ್ಗರುಚಿರಂ ಗಡಂ ಪಳೆಯ ಕನ್ನಡಂ ವೃತ್ತದೊಳ್
   ವಿಸರ್ಜಿತಮದಾದುದೇಂ? ಪೊಸತು ಕನ್ನಡಂ ನುಗ್ಗಿರಲ್?

   • ಹೌದು ಸಾರ್ 🙁 ಹಳೆಯಗನ್ನಡದ ಬಿಗಿ ಬರಲಿಲ್ಲ… ಹೊಸ ಛಂದಸ್ಸಿನಲ್ಲಿ ಬರೆಯುವ ಆತುರದಲ್ಲಿ ನನ್ನ ಗುರಿ ತಪ್ಪಿದೆ…

 16. देहि देहि मतं मे त्वं
  धनराशिं ददाम्यहम्।
  मदिरां यदि वा ते स्यात्
  स्वार्थसिद्धवनीतिता॥

 17. ಕೆಲವು ವರ್ಷಗಳ ಹಿಂದೆ ಒದಗಿದ್ದ मार्गेचरः श्वाप्यभिवन्दनीयः ಎಂಬ ಸಮಸ್ಯೆಯನ್ನು ಮತಯಾಚನೆಯ ವಿಷಯವನ್ನಾಧರಿಸಿಯೇ ಪರಿಹರಿಸಿದ್ದೆ. ಆ ಪದ್ಯ ಹೀಗಿದೆ.

  आरूढपीठाः सचिवा यदामी
  नॄन् कुक्कुरेभ्योऽपि विदन्ति नीचान् ।
  प्राप्ते तु निर्वाचनकाल एषां
  मार्गेचरः श्वाप्यभिवन्दनीयः ॥

  ಇದರದ್ದೇ ಕನ್ನಡಾನುವಾದ ಸ್ರಗ್ವಿಣೀವೃತ್ತದಲ್ಲಿ –

  ಗಾದಿಯೊಳ್ ಕುಳ್ಳಿರಲ್ಕೀ ಮಹಾಮಂತ್ರಿಗಳ್
  ಕಾದು ನಿಂದಿರ್ಪರಂ ಲೋಗರಂ ಕಾಂಬರಯ್ |
  ಪಾದಕುಂ ಬೀಳುವರ್ ವೋಟಿಗಾ ಕಾಲದೊಳ್
  ಹಾದಿಯೊಳ್ ಸಾಗುವ ಶ್ವಾನಮುಂ ವಂದ್ಯಮಯ್ ||

  • ಬಹುದಿನಗಳ ಬಳಿಕ ಪದ್ಯಪಾನಕ್ಕೆ ಕಾಲಿಸಿರಿದ ಪೆಜತ್ತಾಯರಿಗೆ ಸ್ವಾಗತ. ನಿಮ್ಮ ಪದ್ಯವು ಚೆನ್ನಾಗಿದೆ; ಎರಡು ನುಡಿಗಳಲ್ಲಿಯೂ ಒಪ್ಪವಾಗಿ ಮೂಡಿದೆ.

 18. ಚಿತ್ರಕ್ಕೆ ಪದ್ಯ – ಮತ್ತೇಭವಿಕ್ರೀಡಿತಂ

  ಮತವನ್ನೀಯುತೆ ಕಾವುದೆನ್ನ ಜನರೈ ನಿಮ್ಮಾತನುಂ ನಾನಹೆಂ
  ಋತದಿo ರಾಜ್ಯಮನಾಳ್ಪೆ ನಿಮ್ಮ ಸಕಲಂ ಸೌಕರ್ಯಮಂ ಕಲ್ಪಿಪೆಂ |
  ಇತರಾಭ್ಯರ್ಥಿಗಳೆಲ್ಲರುಂ ಖಳರಿರಲ್ಲಾನೊರ್ವನೇ ಸಜ್ಜನಂ
  ಕಿತವಂ ತೋರುತೆ ಪಾಲ್ಮೊಗಂ ವಿಷಘಟಂ ನಿಂದಿರ್ಪನಿಂತೆನ್ನುತುಂ ||

  • ಪ್ರಿಯ ಕೇಯೂರ್,

   ನಿನ್ನ ಪದ್ಯವೂ ಬಂಧವೂ ಚೆನ್ನಾಗಿವೆ. ಸ್ವಲ್ಪಮಾತ್ರದ ಹಳಗನ್ನಡದ ಹದವಷ್ಟೇ ಅಪೇಕ್ಷಿತ. ಮೊದಲ ಸಾಲಿನ ಮೊದಲಿನ ಪದಪುಂಜವನ್ನು “ಮತಮಂ ನೀಡುತೆ” ಎಂದು ಸವರಿಸಿದರೆ ಒಳಿತು. ಇದಕ್ಕೆ ಕಾರಣವನ್ನು ಈಚೆಗೆ ಶ್ರೀಮತಿ ಶಕುಂತಲಾ ಮೊಳೆಯಾರರ ಪದ್ಯವೊಂದನ್ನು ತಿದ್ದುತ್ತಾ ವಿಸ್ತರಿಸಿ ತಿಳಿಸಿದ್ದೆ. ದಯಮಾಡಿ ಅಲ್ಲಿ ನೋಡಿರಿ. ಉಳಿದಂತೆ ’ನಿಮ್ಮಾತನಾನಪ್ಪೆನಯ್’ ಅಥವಾ ’ನಿಮ್ಮಾತನೇ ಅಪ್ಪೆನಾಂ’ ಎಂದು ತಿದ್ದಬಹುದು. ಕೊನೆಯದಾಗಿ ’ಋತದಿಂ ರಾಜ್ಯಮನಾಳಿ ನಿಮ್ಮೊಳಖಿಳಂ ಸೌಕರ್ಯಮಂ’ ಎಂದು ಸವರಿಸಿದರೆ ಯುಕ್ತ.

 19. ನಾಯಕನ ಮೋರೆಯನು ಸಹಿಸದಾಮಂದಿಯು ವಿ-
  ನಾಯಕಗೆ ಬೇಡಿದವು ಬದಲಿಸೆಂದೂ !
  ಕಾಯದೆಯೆ ಗಣಪತಾಮಸ್ತುಯೆನಬೇಕು; ಬದ-
  ಲಾಯಿಸೆಂದನು ಮುಖವ ನೇತಾರನೂ ||

 20. ಖಾದಿಯಂಗಿಯ ತೊಟ್ಟವರ್ ಬಿಳಿ ಗಾಂಧಿಟೋಪಿಯನಿಟ್ಟವರ್
  ಸಾದ ಕೋಟೊಳು ನಾಯಕರ್ ಬರಿ ವೋಟಿಗೆಂದೆನೆ ಕಾದಿಹರ್ ।
  ಭೇದಭಾವವ ಬಿಟ್ಟವರ್ ನವದೇಶ ಕಟ್ಟುವೆವೆಂದವರ್
  ಗಾದಿಯೇರಿದ ಮೇಲವರ್ ನಿಜವೇಷವೆಂತೆನೆ ತೋರುವರ್ ।।

  ಖಾದಿದಾರಿ ಪುಡಾರಿಗಳ ಮೇಲೆ – “ಮಲ್ಲಿಕಾಮಾಲೆ” !!

  • ಖಾದಿಯಂಗಿಯ ತೋಳಿದೋ ಬಲು ಜೋಲುತಿರ್ಪುದು ಕಾಣಿರೇಂ?
   ಸಾದ ಕೋಟಿನೊಳಿಟ್ಟಿಹರ್ ಪದಿನೆಂಟು ಜೇಬವು ತೋರವೇಂ?
   ಭೇದಭಾವವ ಮಾಣುವೆಂ; ಧನಮೆಲ್ಲರಿಂದಲು ದೋಚುವೆಂ
   ಗಾದಿಯೇರುವ ಮುನ್ನಮೇ ನಿಜರೂಪಮೆಲ್ಲೆಡೆ ತೋರಿಹೆಂ

   • ಜೀವೆಂ, ನಿಮ್ಮ ಖಾದಿ ವೇಷವೇ ಚಿತ್ರಕ್ಕೆ ಹೆಚ್ಚು ಸೂಕ್ತವಾಗಿದೆ !

 21. ನನ್ನ ಮೊದಲ ಪ್ರಯತ್ನ :

  ನೋಟವ ಹರಿಸದೆ ಈ ದಿನ
  ನೋಟನು ಹರಿಸುತ ಬರುತಿಹ ಅಭ್ಯರ್ಥಿಯೆ ನಾ
  ನೋಟನು ಹಾಕುವೆ ಒತ್ತುತ
  ನೋಟವ ನಿನ್ನ ಮಣಿಸುವೆ ಮತದಾನ ದಿನದಿಂ

  ಮೊದಲ ನೋಟ : ದ್ರಷ್ಟಿ
  ಎರಡನೇ ನೋಟ : ಹಣ
  ಮೂರನೇ ನೋಟ : ಓಟು
  ನಾಲ್ಕನೇ ನೋಟ : NOTA : None Of The Above

  • ಆಜೇಯ,
   ಒಳ್ಳೆಯ ಆರಂಭ. ಶುಭಾಶಯಗಳು. ಮೊದಲ ಪ್ರಯತ್ನದಲ್ಲಿರುವಂಥ ಸಣ್ಣಪುಟ್ಟ ದೋಷಗಳಿವೆ. ಎರಡೂ ಸಮಪಾದಗಳ (ಮಧ್ಯದ) ಜಗಣ ಸರಿಯಾಗಿಲ್ಲ. ನಾಲ್ಕನೆಯ ಪಾದದ ನಾಲ್ಕನೆಯ ಗಣ ಲಗಂ ಆಗಿದೆ.
   ಮೊದಮೊದಲು ಪದ್ಯದ ತಾತ್ಪರ್ಯವನ್ನು ಹೇಳುವುದೊಳ್ಳೆಯದು.
   ಬಿಡದೆ ಮುಂದುವರಿಯಿರಿ.

   • ಧನ್ಯವಾದಗಳು ಪ್ರಸಾದು ಅವರಿಗೆ.
    ಬದಲಾವಣೆ :
    ಹರಿಸುತ ಬರುತಿಹ : ಹರಿಸುತಲಿ ಬಂದ
    ನೋಟವ ನಿನ್ನ ಮಣಿಸುವೆ ಮತದಾನ ದಿನದಿಂ : ನೋಟವ ಮತದಾನ ದಿವಸ ಮಣಿಸುವೆ ನಿನ್ನಂ

    ಅರ್ಥ : ಕಳೆದ ಚುನಾವಣೆಯ ನಂತರ ಈ ಕಡೆ ಧೃಷ್ಟಿ ಹರಿಸದ ಈ ವ್ಯಕ್ತಿ, ಇಂದು ದುಡ್ದನು ನೀಡಲು ಬಂದಿಹನು.
    ಈ ಬಾರಿ ಚುನಾವಣೆಯಲ್ಲಿ “NOTA” ಒತ್ತುತ ಈತನನ್ನು ಸೂಳಿಸಲು ಪಣತೊಟ್ಟಿದ್ದೇನೆ.

    ಪದ್ಯ :

    ನೋಟವ ಹರಿಸದೆ ಈ ದಿನ
    ನೋಟನು ಹರಿಸುತಲಿ ಬಂದ ಅಭ್ಯರ್ಥಿಯೆ ನಾ
    ನೋಟನು ಹಾಕುವೆ ಒತ್ತುತ
    ನೋಟವ ಮತದಾನ ದಿವಸ ಮಣಿಸುವೆ ನಿನ್ನಂ

  • ಪ್ರಿಯ ಅಜೇಯ,
   ಜಗಣದ ಎರಡೂ ಸಾಧ್ಯತೆಗಳನ್ನು ಬಳಸಿಕೊಂಡು ಮಾಡಿದ ಸವರಣೆ ಸ್ತುತ್ಯ. ಈಗ ಪದ್ಯ ಛಂದೋಶುದ್ಧವಾಗಿದೆ.
   ನಾಲ್ಕನೆಯ ಪಾದದಲ್ಲಿನ ’ಮತದಾನ’ ಎಂಬ ಶಬ್ದಕ್ಕೆ ಪ್ರತ್ಯಯ ಇಲ್ಲ. ಇದು ಆಡುಮಾತಿನ ಜಾಡಿನದಾಯಿತು – ’ಚಿತ್ರ(ವನ್ನು) ನೋಡೋಣ’, ’ಬಾಗಿಲು(ಲಿಗೆ) ಬೀಗ ಹಾಕಿತ್ತು’ ಇತ್ಯಾದಿಯಾಗಿ. ’ಮತದಾನದಂದು’ ಎಂದು ಸವರಬಹುದು.

   ಭಾಷೆಯನ್ನು ಹಳತಾಗಿಸಿ. ಒಂದು ಮಾದರಿ (ಇದೂ ಪೂರ್ತಿ ಹಳತಲ್ಲ):
   ನೋಟಮದಿಲ್ಲಿನ್ನೆವರಂ.
   ನೋಟಂ ಪರಿಸುತಲಿದೀಗ ಬೇಡುತ ಬಹೆಯೇಂ?
   ನೋಟ(N.O.T.A.)ದ ರಖಮಿನ ಕೊಳ್ಳೆ-
   ನ್ನೋಟನು, ಪಾತ್ರನಿದಕಿಂ ಮಿಗಿಲು ನೀನಪೆಯೇಂ??

   ಮೊದಲು ನಿಮ್ಮ ಪರಿಚಯ ಹೇಳಿ.

   • ಹೆಸರು : ಅಜೇಯ ಭಾರದ್ವಾಜ ಎ .
    ಊರು : ಹಾಸನ ಜಿಲ್ಲೆಯ ಅರಕಲಗೂಡು .
    ವಿದ್ಯಾರ್ಹತೆ : B.E ( CS ) PESIT .
    ಉದ್ಯೋಗ : CISCO ಕಂಪನಿಯಲ್ಲಿ Software Engineer.

 22. ಇಂದ್ರವಜ್ರದಲ್ಲಿ ಮೊದಲ ಪ್ರಯತ್ನ

  ಕುಸಂಗದಿಂ ಪಕ್ಷಗಳಸೃಷ್ಟಿಸಿರ್ಪರ್
  ಪ್ರಸಿದ್ದರಾಗಲ್ ಮತಯಾಚಕರ್ಗಳ್
  ಅಸಾಧ್ಯಮಾರ್ಗಂಗಳ ತೋರ್ವವೊಲ್ ತಾಂ
  ಪ್ರಸಾರಗೈವರ್ ಪುಸಿಸೊಲ್ಗಳಿಂದಂ

  • Congrats to your debut to Indravajra. There is an excess letter in the first line. Pls correct it.

   • ಸವರಣೆಗೆ ಧನ್ಯವಾದಗಳು…. “ಕುಸಂಗದಿಂ ಪಕ್ಷವಸೃಷ್ಟಿಸಿರ್ಪರ್” … ಇದು ಸರಿಯೇ?

   • ಇದು ಉಪೇಂದ್ರವಜ್ರಾ; ಇಂದ್ರವಜ್ರವಲ್ಲ. ಆದರೆ ಇವೆರಡರ ನಡುವಣ ವ್ಯತ್ಯಾಸ ಅತ್ಯಲ್ಪ; ಕೇವಲ ಆದಿಮಾಕ್ಷರದ ಲಾಘವ-ಗೌರವಗಳಿಂದ ಇವೆರಡೂ ಕ್ರಮವಾಗಿ ಮೆಯ್ದಾಳುತ್ತವೆ. ಇವೆರಡರ ಬೆರಕೆಯೇ ಉಪಜಾತಿವೃತ್ತಕ್ಕೆ ಮೂಲ.

    • ನಿನ್ನಿನಧ್ಯಯನಗೋಷ್ಠಿಯೊಳು ಚೀದಿಗೆಂದುಪೇಂದ್ರವಜ್ರಂ|
     ಸನ್ನಿಬಡಿದವೋಲಿಂದ್ರವಜ್ರಮೆಂದೀಗಳೆಂದೆನೇಕೋ!!

 23. ಐದು ವರ್ಷಕ್ಕೊಮ್ಮೆಯಾದರು
  ಪಾದಸೇವಾಕಾಶವಿತ್ತಿರಿ
  ಯಾದರಿಸುತೆಮ್ಮಗಳ ಜೀವನಭಾಗ್ಯಕೆಣೆಯುಂಟೆ?
  ಐದು ವರ್ಷಕ್ಕೊಮ್ಮೆ ದರ್ಶನ
  ವಾದುದೀ ಸೌಭಾಗ್ಯ ಪಡೆದವ
  ರೈದು ವರ್ಷಕೆ ಮರಳುವೆವು ವಿಶ್ವಾಸವಿರಲೆಂದ

 24. ಸುಲಿಪಲ್ ಸಂಚಿನ ಗೊಂಚಲುಟ್ಟ ದುಗುಲಂ ಕಾದಂಬರೀಫೇನಮು
  ಜ್ಜ್ವಲ ಮುಕ್ತಾಭರಣಂ ಕಪಾಲಮಣಿಹಾರಂ ನೀಳ ಕೆಯ್ ಭಾರದಂ
  ಗಲತಾ-ತಾಡಿತ-ಖಳ್ಗಮಾಗೆ ಮುಖದಾ ತಾಂಬೂಲಮೇ ನೆತ್ತರಾ
  ಗುಲಿಯಲ್ ಮಾಂತ್ರಿಕರೆನ್ನೆ ಪಾಪಸದನಂ ಬಂದಿರ್ಕುಮೇಂ ದ್ವಾರಕಂ ||
  (ಸುಲಿಪಲ್ ಸಂಚಿನ ಗೊಂಚಲ್, ಉಟ್ಟ ದುಗುಲಂ ಕಾದಂಬರೀಫೇನಂ, ಉಜ್ಜ್ವಲ ಮುಕ್ತಾಭರಣಂ ಕಪಾಲಮಣಿಹಾರಂ, ನೀಳ ಕೈ ಭಾರದ ಅಂಗಲತಾ ತಾಡಿತ ಖಳ್ಗಂ ಆಗೆ ಮುಖದಾ ತಾಂಬೂಲಮೇ ನೆತ್ತರಾಗಿ, ಉಲಿಯಲ್ ಮಾಂತ್ರಿಕರೆನ್ನೆ, ಪಾಪಸದನಂ ದ್ವಾರಕಂ ಬಂದಿರ್ಕುಮೇಂ!?)

  ( ಪಂಪನ ಪದ್ಯಕ್ಕಣಕಂ (ವಿಕ್ರಮಾರ್ಜುನವಿಜಯಂ-೧-೧೩೭)
  ಪೆಂಪಿಂ ಬಿಣ್ಪಿಂ ರಸಾನುಭವದಿಂಪಿಂ ತಾಂ
  ಸೊಂಪಕ್ಕೆ ಸಹೃದಯರೆರ್ದೆಗೆ
  ಜೊಂಪಿಂ ತಣ್ಪೀಗೆ ಕಂಪಿನೊಳ್ಪಿಂ ಬಲ್ಪಿಂ|| 😉 )

  • ಆಹಾ! ಏನೀ ಭಾಷಾ-
   ಮಾಹಾತ್ಮ್ಯಂ ಗಾಹಿತೋಕ್ತಿಯೋಷಾಘೋಷಂ !!
   ಸ್ವೇಹಿತಂ ಮತ್ತೀ ಪರಿ-
   ಯೂಹಾತೀತಪ್ರಕಾರದಿಂದೊರೆವಳವೇ !!!

 25. ಬಿಗುಮಾನವಂ ತೊರೆದು ನಗೆ
  ಮೊಗದಿಂ ನಾಯಕರು ಯಾಚಿಸಿರಲುಂ ಮತಮಂ
  ಬಗೆಯಾಮಿಷಮೊಡ್ಡುತಲಿಂ
  ನಿಗವರಿತುಂ ಜನರು ಯೋಚಿಪರೆ ತಾವ್ ಹಿತಮಂ ?!

  • ಬಿಗುಮಾನಮಂ ತೊರೆದು ನಗೆ
   ಮೊಗದಿಂ ನಾಯಕರು ಯಾಚಿಸಿರಲುಂ ಮತಮಂ
   ಬಗೆಯಾಮಿಷಮೊಡ್ಡುತಲಿಂ,
   ನಿಗಮರಿತುಂ ಜನರು ಯೋಚಿಪರೆ ತಾವ್ ಹಿತಮಂ ?!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)