Apr 272014
 

ವೃದ್ಧಾಪ್ಯದಬಗ್ಗೆ ಅಲಂಕಾರಯುತ ಪದ್ಯ ರಚಿಸಿರಿ

  75 Responses to “ಪದ್ಯಸಪ್ತಾಹ ೧೦೬: ಅಲಂಕಾರಯುತ ವರ್ಣನೆ”

 1. ದಂಡಿಯೆನಿಸಿಯುಂ ಮತ್ತುಂ-
  ದ್ದಂಡರಿನುದ್ದಾಮಭಾಸನೆನಿಸಿಯುಮಕಟಾ !
  ಚಂಡವಿಧಿಯ ಕತದಿಂ ಕಹಿ-
  ಯುಂಡೀ ವೃದ್ಧಂ ಕವಿತ್ವಕೆರವಾದನಿದೇಂ !!

  ಇದು ಶ್ಲೇಷಾಲಂಕಾರವುಳ್ಳ ವ್ಯತಿರೇಕ, ಅಪಹ್ನುತಿ, ವಿರೋಧಾಲಂಕಾರಾಚ್ಛಾಯೆಗಳುಳ್ಳ ಪದ್ಯ. ವಿನೋದ-ಚಮತ್ಕಾರಗಳಷ್ಟೇ ಇಲ್ಲಿಯ ಉದ್ದೇಶ.
  ದಂಡಿ = ದಂಡಿಯೆಂಬ ಕವಿ ಹಾಗೂ ಊರೆಗೋಲನ್ನು ಹಿಡಿದವನು;
  ಉದ್ದಾಮಭಾಸ = ಉತ್ತಮನಾದ ರೂಪಕರಚನಾಕವಿ ಭಾಸ ಹಾಗೂ ಮುದಿಹದ್ದು.

  • ಎಷ್ಟು… ಚೆನ್ನಾಗಿದೆ ಸರ್, ಪದ್ಯ !! ಬಹಳ ಇಷ್ಟವಾಯ್ತು. “ಅಲಂಕಾರ”ಗಳ ಬಗ್ಗೆ ಹೆಚ್ಚು ಅರಿಯಬೇಕೆದೆ.

   • ಉಷಾ ಅವರೆ,ನನ್ನ ಅನಿಸಿಕೆಯೂ ನಿಮ್ಮದೇ..

  • ಗಣೇಶ್ ಸರ್, ಶ್ಲೇಷದೊಡನೆ ವಿವಿಧ ಅಲಂಕಾರಗಳ ಛಾಯೆಯುಳ್ಳ ಪದ್ಯ ಬಹಳ ಚೆನ್ನಾಗಿದೆ. ಈ ಪದ್ಯ ಅಪಹ್ನುತಿ ಹೇಗಾಗುತ್ತದೆ ಎನ್ನುವುದು ಹೊಳೆಯಲಿಲ್ಲ. ದಯವಿಟ್ಟು ತಿಳಿಸಿಕೊಡಿ:)

  • ಅಹುದಲ್ತೆ! ದಂಡಿಯೆನ್ನಿಸಲೆಲ್ಲ ಕಬ್ಬಿಗರು
   ಮಹನೀಯದೊಸರಬೇಡವೆ ಕಾವ್ಯ ತಾಂ|
   ಇಹರೆನಿತೊ ಸಾಸಿರ ಗಣೇಶರೀ ಜಗದೊಳಗೆ
   ವಿಹಿತರಾ ಮಂದಿಯೊಳು ಗಣಿಕೆಗೆನಿತೋ?|

 2. ಜಗದ ಸೊಡರ್ ನೇಸರನನೆ
  ಸುಗಮತೆಯಿಂ,ಪರಿಯುವರ್ಣವಂ ನುಂಗುತಿರಲ್
  ಉಗಮಿಪುದೆಂತುಂ-ಮುದಿತನ
  ಮುಗುಳೀ ಕಾಯಮವಸಾನ ಗೈವ ಭಯಮದುಂ

  • ಪದ್ಯದ ಭಾವ ಮತ್ತು ಕಲ್ಪನಾನಾವೀನ್ಯಗಳೆಲ್ಲ ಚೆನ್ನಾಗಿವೆ. ಆದರೆ ಭಾಷೆಯಲ್ಲಿ ಮತ್ತಷ್ಟು ಹಳಗನ್ನಡದ ಹದ ಮಿಂಚಬೇಕಿದೆ. ಪರಿಯುವ +ಅರ್ಣವ = ಪರಿಯುವರ್ಣವ ಎಂದೇ ಲೋಪಸಂಧಿಯಾಗುತ್ತದೆ; ಪರಿಯುವಾರ್ಣವ ಎಂದಲ್ಲ.

 3. ತನುವುಂ ಪಣ್ತುದು ಮತ್ತವ
  ರನುಭವಮುಂ ಮೃದುತೆ ಸಾರ್ದುದಂತು ನುಡಿಯೊಳಂ
  ಮನದೊಳಮಾರ್ಪುಂ ಕಳೆದುದೊ
  ಡನೊಡನೆ ವೃದ್ಧರ ಬರ್ದುಂಕಿನಾಸೆಗಳುಂ ಮೇಣ್||
  (ಅವರ ತನುವುಂ ಮತ್ತೆ ಅನುಭವಮುಂ ಪಣ್ತುದು, ನುಡಿಯೊಳಂ ಮನದೊಳಂ ಮೃದುತೆ ಸಾರ್ದುದು, ಆರ್ಪುಂ ಒಡನೊಡನೆ ವೃದ್ಧರ ಬರ್ದುಂಕಿನ ಆಸೆಗಳುಂ ಮೇಣ್ ಕಳೆದುದು-ಸಹೋಕ್ತಿ)

  • ಎನಿತೊಳ್ಳೆಯ ಪದ್ಯಮನೇ
   ಮನನೀಯೋಪಾಯನೋಪಮಮೆನಲ್ ನೀಳ್ದಯ್ |
   ಕನದುಕ್ತಿಶತೀಶತಕ-
   ಕ್ಕನುವಾಗಯ್ ಶ್ರೀಗಣೇಶ ಕೊಪ್ಪಲತೋಟಾ !

  • ಕೊಪ್ಪಲತೋಟ ಪದ್ಯ ಬಹಳ ಚೆನ್ನಾಗಿದೆ

 4. वार्धक्येन हि किं तात
  बुद्धिस्त्वशिक्षिता स्थिता।
  बुद्धिवार्धक्यमूचुस्ते
  बुधाः “बालेऽपि पूज्यतम्”॥

  • ನಾಸ್ಯ ಭಾವೋ ದತ್ತವಸ್ತುನೋSನುರೋಧೀತಿ ಪ್ರಾಯೋ ಮನ್ಮನೀಷಾ|

 5. ತಿಳಿನೀರಬಿಂಬದೊಳ್ಮೊಗವುತಾ ನಗುತಿರಲು
  ಪೊಳೆವಕಂಗಳು ತನೆಗಿನಿತು ಪೇಳಲು|
  ಬೆಳೆದಮಕ್ಕಳಕಣ್ಗೆ ತುಚ್ಚನೆನಿಸಿದರುನೀ
  ನಳುವುದೇಕಿದುವೆ ಜೀವನ ಸತ್ಯವು|

  • ನನಗೆ ಪದ್ಯದ ಭಾವ ಸ್ಪಷ್ಟವಾಗಲಿಲ್ಲ. ಆದರೆ ಯಾವುದೋ ಒಳ್ಳೆಯ ಕಲ್ಪನೆಯು ಇಲ್ಲಿರುವಂತಿದೆ.

   • ಕಲ್ಪನೆ ಹೀಗಿದೆ: ತನ್ನ ಬಿಂಬವನ್ನು ನೀರಿನಲ್ಲಿ ಕಂಡ ವೃದ್ಧನಿಗೆ ಬೀಂಬದೊಳಿರುವ ತಾನೇ ತನಗೆ ಜೇವನದ ಸತ್ಯವನ್ನು ಹೇಳಿತು ಎಂಬ ಕಲ್ಪನೆ…

    ಪ್ರಯತ್ನ ಸಫಲವಾಗದಿದ್ದಲ್ಲಿ ಮತ್ತೆ ಪ್ರಯತ್ನಿಸುವೆ… 🙂

 6. ಉದಯಿಪ ಬಾಲಸೂರಿಯೊಲು ಸಂದುದು ಕೆಂಪಿನ ತಂಪುಕೂರ್ಮೆಯುಂ
  ಬದುಕದುವೊಂದು ತಾ ದಿನದ ಹಾದಿಯದಾಗಿರೆ ಕಾಣ ಲೀಲೆಯಂ
  ಹುದುಗುವ ವೇಳೆ ಸಂಜೆಯೊಳು ಮತ್ತದೊ ಮುತ್ತುದು ಕೆಂಪಿನೊಲ್ಮೆಯುಂ
  ಪದುಳಿಗನೈ ನರಂ ಸಹಜ ಜೀವಿತ ತುಂಬಿರೆ ಭಾವಬಂಧುರಂ ।।

  (ಮಾನವನ ಜನ್ಮವನ್ನು ಒಂದು ದಿನಕ್ಕೆ ಹೋಲಿಸಿದಲ್ಲಿ : ದಿನದ ಮುಂಜಾವು-ಸಂಜೆ ವೇಳೆ (ಎರಡೂ ಒಂದೇ ಅವಸ್ಥೆ ) ಸಹಜವಾಗಿ ಮುಸುಕುವ ನಸುಗೆಂಪು – ಮಾನವನ ಜೀವಿತದ ಬಾಲ್ಯ -ಮುಪ್ಪಿನಲ್ಲಿ (ಎರಡೂ ಒಂದೇ ಅವಸ್ಥೆ) ಸಹಜವಾಗಿ ಹೊಮ್ಮುವ ಒಲುಮೆಯ ಸಂಕೇತದಂತೆ ಕಂಡ ಕಲ್ಪನೆಯಲ್ಲಿ – ಇಂತಹ ಮನುಜ ಅದೆಷ್ಟು “ಸುಖಿ” ಅಲ್ಲವೇ?!)

  • ಪದ್ಯಭಾವವೂ ಪದಪದ್ಧತಿಯೂ ಇನಿದಾಗಿವೆ; ಅರ್ಥವೈಶದ್ಯಕ್ಕೆ ಮತ್ತಷ್ಟು ಪ್ರಾಶಸ್ತ್ಯವನ್ನಿತ್ತರೆ ಒಳಿತು.

   • ಧನ್ಯವಾದಗಳು ಗಣೇಶ್ ಸರ್,
    ಅರ್ಥಸ್ಪಷ್ಟತೆ ತರಲು ಸಾದ್ಯವಾಗುತ್ತಿಲ್ಲ, ಹಳೆಗನ್ನಡ ಕ್ರಿಯಾಪದ & ವಿಭಕ್ತಿ ಪ್ರತ್ಯಯಗಳ ಜೋಡಣೆಯಲ್ಲಿ ತೊಡಕಾಗಿ ಧಾಟಿ ತಪ್ಪುತ್ತಿದೆ. ದಯವಿಟ್ಟು ತಿದ್ದಲು ಸಹಾಯ ಮಾಡಿ. ಸ್ವಲ್ಪ ಬದಲಾವಣೆಯೊಂದಿಗೆ

    ಉದಯಿಪ ಬಾಲಸೂರಿಯೊಲು ಸುತ್ತಲು ಸಂದಿರೆ ಕೆಂಪಕೂರ್ಮೆಯುಂ
    ಬದುಕಿನೊಳಿಂತು ಸಾಗುತಿಹ ಹಾದಿಯೊಳಿಂದಿನ ಲೀಲೆಯೇನಿದುಂ
    ಹುದುಗುವ ಸಂಜೆ ವೇಳೆಯೊಳು ಮತ್ತೆಯುಮುತ್ತಿರೆ ಕೆಂಪಿನೊಲ್ಮೆಯುಂ
    ಪದುಳಿಗನೈ ನರಂ ಸಹಜ ತುಂಬಿರಲೀಪರಿ ಭಾವಬಂಧುರಂ ।।

 7. ನಾಗಾಲಿ ಯಿಗ್ಗಾಲಿ ಮೂಗಾಲಿ ಯಾನದ ವಿಭಾಗದಂತಿಮ ರೂಪ ಮಲಗಿದಂಗಿ
  ಸಾಗಾಟ ನೇಸರನ ದಾರಿ ನೆತ್ತಿಯನೇರಿ ಹೋರಿ ಪಡುವಣಗಿರಿಗೆ ಜಾರ್ವ ಸಂಗಿ
  ಮಾಗಿ ಹುಳಿಸಿಹಿಯ ಬಳುವಳಿಯ ಮುಸ್ಸಂಜೆಯಲು ತೋರಿ ಕಳಚಲುನಿಂತ ಮೃದುಲ ಸಫಲ
  ಭೋಗಮೇಲ್ಮೆ ತರಂಗ ನಿರ್ವೇದದೊಳಸೇರಿ ತ್ಯಜಿಸಲಲೆಮೈ ವಾರ್ಧಿಯೆಲ್ಲ ಸಲಿಲ

  ನಿಂತರೂ ವಿದ್ಯುತಿನ್ನಿಷ್ಟು ತಿರುಗೊ ಪಂಖ
  ಕಾಂತಿಯಳಿದಿದ್ದಿಲಾದರೂ ಶಾಖದಂಕ
  ಹಂತಮಂತಮೇನ್ ಅತ್ತ ಮಗು ಮಲಗಿದಂತೆ
  ಸಂತೆ ಸೇರುವೆಗೆ ಮುಗಿವಾದಿ ಮತ್ತೆ ಕಂತೆ

  • ಸರ್: ಪಂಖ ಎಂಬುದು ಹಿಂದೀ ಪದವಲ್ಲವೇ? ಅದನ್ನು ಕನ್ನಡದಲ್ಲೂ ಇದೇ ಹೆಸರಿಂದ ಕರೆಯುತ್ತಾರೆಯೇ?

 8. (ತರಲ ವೃತ್ತ, ಉಪಮಾಲಂಕಾರ)

  ಬೆಳಗೆ ಬಾಳಿನ ಸಂಜೆಯಂ ಹರಿನಾಮಕೀರ್ತನೆಯಿಂ ಸದಾ,
  ಬೆಳೆವ ದೈವಿಕಭಕ್ತಿಯಿಂ ನವಜೀವನಾದರಮುರ್ಕುತುಂ,|
  ಇಳೆಯ ಮೇಗಣ ಸಸ್ಯಶ್ಯಾಮಲೆಯೊಲ್ ಮನಂ ಪಸಿರಾಗಿ ತಾನ್,
  ಕಳಿತ ಬಾಳೆಯ ಪಣ್ಣಿನೊಲ್ ಸವಿಯಾದ ವಾರ್ಧಿಕಮಾಗದೇಂ? ||

  • ಸರಳ-ಸುಂದರಭಾವದ ಸೊಗಸಿಲ್ಲಿದೆ. ಕೆಲವೊಂದು ಸವರಣೆಗಳು:
   ಸಸ್ಯಶ್ಯಾಮಲೆ ಎನ್ನುವಲ್ಲಿ ’ಶ್ಯಾ’ ಒತ್ತಕ್ಷರವಾದ ಕಾರಣ’ಸ್ಯ’ ಗುರುವಾಗಿ ತನ್ಮೂಲಕ ಛಂದಸ್ಸು ಕೆಡುತ್ತದೆ. ಹೀಗಾಗಿ ಸಸ್ಯಸುಂದರಿ, ಸಸ್ಯಸಂಪದೆ ಎಂದು ತಿದ್ದಿಕೊಳ್ಳಬಹುದು. ಪಣ್ಣಿನೊಲ್ ಎಂಬುದಕ್ಕಿಂತ ಪಣ್ಣವೊಲ್ ಎಂಬುದು ಮತ್ತೂ ವ್ಯಾಕರಣಶುದ್ಧ.

   • ಸಹೋದರರಾದ ಶತಾವಧಾನಿಗಳ ಅನಿಸಿಕೆ,ಸವರಣೆಗಳಿಗೆ ತುಂಬ ಧನ್ಯವಾದಗಳು.ಕ್ಷಮಿಸಿರಿ,ಛಂದಸ್ಸು ಕೆಟ್ಟದ್ದು ನನ್ನ ಗಮನಕ್ಕೆ ಬರಲೇ ಇಲ್ಲ. 🙁 ಸದ್ಯದ ಅಧ್ಯಯನರಹಿತ ಬರವಣಿಗೆಯಿಂದಾಗಿ ವ್ಯಾಕರಣದೋಷವಾಗಿದೆ. ಭಾಷೆಯ ಸ್ಡರೂಪ,ಶಬ್ದಭಂಡಾರಕ್ಕಾಗಿ ಮಹಾಕವಿಗಳ ಕೃತಿಗಳನ್ನು ಓದಲೇಬೇಕಾಗಿರುವುದನ್ನು ತಿಳಿದೂ ಹಾಗೆ ಮಾಡಲಾಗದಿರುವುದಕ್ಕಾಗಿ ವಿಷಾದವಿದೆ. 🙁
    ಸವರಣೆಗೊಂಡ ಪಾದಗಳು-
    ಇಳೆಯ ಮೇಗಣ ಸಸ್ಯಸುಂದರಿಯೊಲ್ ಮನಂ ಪಸಿರಾಗಿ ತಾನ್,
    ಕಳಿತ ಬಾಳೆಯ ಪಣ್ಣವೊಲ್ ಸವಿಯಾದ ವಾರ್ಧಿಕಮಾಗದೇಂ ? ||

 9. ಅಂಗಾಂಗಮಮ್ ಮುಪ್ಪದು ಬಾಡಿಸಲ್ತಾಂ
  ರಂಗೇರ್ವ ಚಿತ್ತಂ ಕಳೆಗುಂದಲೆಂತಯ್
  ತಂಗಿರ್ದಿರಲ್ಗಂಗೆ ಯುಗಂಗಳಿಂತಾಂ
  ಇಂಗಿರ್ಪುದೇಂ ಚೇತನಮಂದಿನಿಂದಂ?

  • ನಿಮ್ಮಿಂದ್ರವಜ್ರಾಕವನಂ ಮನೋಜ್ಞಂ
   ಸಮ್ಮೋದಕಾರಿ ಸ್ಫುಟಭಾವದಿಂದಂ |
   ಸಮ್ಮೇಳಮಾಗಳ್ಕೆ ಯಥಾರ್ಹದೃಷ್ಟಾಂ-
   ತಮ್ಮಾನ್ಯಮಪ್ಪೊಂದು ವಚೋವಿಭೂಷಂ ||
   (ನಿಮ್ಮ ಕವಿತೆಯ ದೃಷ್ಟಾಂತಾಲಂಕಾರವು ಸೊಗಸಾಗಿದೆ. ಕೇವಲ ಎರಡನೆಯ ಸಾಲಿನಲ್ಲಿ “ಕಳೆಗುಂದಲೆಂತಯ್ ” ಎಂದು ಸವರಿಸಿದರೆ ಮತ್ತೂ ಉತ್ತಮ)

   • ಧನ್ಯವಾದಗಳು. ಸವರಣೆಯನ್ನು ಮಾಡಿಕೊಂಡಿದ್ದೇನೆ.

  • ಕಾಂಚನಾ ಅವರೇ ಪದ್ಯ ಚೆನ್ನಾಗಿದೆ

 10. ಉಪ್ಪುತುಪ್ಪವನುಣಿಸಿ ನಿನನಂ
  ದಪ್ಪಿನಲಿದಿದ್ದಮ್ಮಗಿಂತುಂ
  ಮುಪ್ಪದಡರಿರಲವಳನದನಿಂದೊಪ್ಪಿ ಸಲಹವಳಂ।
  ಸಪ್ಪೆ ಮೊಗವಿದುವೇಕೆ ಬೆಪ್ಪನೆ
  ಉಪ್ಪನಿತ್ತುದು ತಾಯ ಬಾಧ್ಯವು
  ಮುಪ್ಪು ಮುತ್ತುದು ಸಹಜ ವ್ಯಾಧಿಯು ಮನುಜ ಬಾಳಿನೊಳುಂ ।।

  ಬಾಲ್ಯದಲ್ಲಿ ಅಮ್ಮನಿತ್ತ “ಉಪ್ಪುತುಪ್ಪದ”ಸವಿನೆನಪಿನ ಪದ್ಯ – ವೃದ್ಧಾಪ್ಯದಲ್ಲಿರುವ ತಾಯಂದರಿಗಾಗಿ
  (ತಪ್ಪಿದ್ದರೂ ಒಪ್ಪಿಸಿಕೊಳ್ಳಿ)

  • ಮತ್ತೆ ಮತ್ತೆ ಪ್ರಾಸಮೋಹದೆ ಕುತ್ತು ಬಂದುದಲಾ ರಸಾರ್ಥಕೆ !
   ಕೆತ್ತಿಹೋದುದೆ ಪದ್ಯಶಿಲ್ಪದ ರೂಪವಷ್ಟಿಷ್ಟು 🙂

   • ಗಣೇಶ್ ಸರ್, ಉಪ್ಪು-ತುಪ್ಪ ಮೆತ್ತಿದ್ದರಿಂದ ಕಂದನ(ಭಾಮಿನಿಯ) ಅಲಂಕಾರಕ್ಕೇ ಕುತ್ತಾಗಿದೆಯಲ್ಲವೇ ?!
    ಪ್ರಾಯಶ್ಚಿತ್ತಕ್ಕಾಗಿ ಈ ತ್ರಿಪದಿ.

 11. ಸಲ್ಲದ ಮಾತುಗಳಿಂದಿ-
  ಲ್ಲೆಲ್ಲರಬೈಗುಳಕೆನೊಂದಮುದಿಜೀವನದೊಳ್
  ವಲ್ಲಭರಾರಿರ್ಪರೆನುತ
  ಕಲ್ಲಂತಿಹತಾನುಮೂಕಮಿಗದೊವೊಲಿರ್ಪಂ

  • ಕಡೆಯ ಸಾಲನ್ನು “ಕಲ್ಲಂತಿರಲಾಗದಯ್ಯೊ ಮಿಗದವೊಲಿರ್ಪಂ”
   ಎಂದು ತಿದ್ದಿದರೆ ಯುಕ್ತ. ಇದು ಭಾಷೆ ಮತ್ತು ಭಾವಗಳೆರಡರ ನಿಟ್ಟಿನಿಂದಲೂ ಒಳಿತಾಗುವುದು.

 12. ಕಣ್ಣsದು ಮಂಜಾಗೆ । ಉಣ್ಣsಕೆ ನಂಜಾಗೆ
  ಸಣ್ಣsಗದರುತೆ ಗುಂಜಾಗೆ । ಮುದುಪsನು
  ಹಣ್ಣಾಗಿವುದುರುವೆಲೆಯಾಗೆ ।।

  ಹಣ್ಣಾಗೆ ಕಾಯೆಂದು । ಸುಣ್ಣsವ ಬಳಿದಂಗ
  ಬಣ್ಣsವು ನರೆತ ತಲೆಯsದು । ಮುದುಕಾsಗ
  ಮಣ್ಣಾಗೆ ದೊರೆತ ಕಲೆಯsದು ।।

  ಗುಂಜು = ಮುದುಡು,ಮುರುಟಿಕೊಳ್ಳು

 13. प्रीतिं मे प्रिय दर्शितां स्मरसि किं पत्रेषु ते यौवने ?
  नूनं देवि न विस्मरामि रुचिरे, दृष्टिर्भवेद्दुर्बला ?
  ता रेखास्तव पद्मकोमलपुटे मह्यं नु याः प्रेषिताः
  रूढाः सन्ति मुखे ममाद्य जगते तत्प्रीतिसंद्योतकाः ॥

  (ಮುಪ್ಪಿನಲ್ಲಿ ಮುಖದಲ್ಲಾಗುವ ಸುಕ್ಕುಗಳನ್ನು ಅವಲಂಬಿಸಿ ಇದು …)
  “ಪ್ರಿಯ, ಯೌವನದಲ್ಲಿ ನಾನು ಬರೆದ ಪ್ರೇಮಪತ್ರಗಳು ನೆನಪಿದೆಯೇ?”
  “ದೇವಿ, ಖಂಡಿತ ಮರೆತಿಲ್ಲ. ನಿನ್ನ ದೃಷ್ಟಿ ದುರ್ಬಲವಾಯಿತೇ? ಇಗೋ ನೋಡು –
  ಆ ಪದ್ಮದಂತೆ ಕೋಮಲವಾದ ಕಾಗದಗಳಲ್ಲಿ ಬರೆದು ಕಳುಹಿಸಿದ ನಿನ್ನ ರೇಖೆಗಳು (ಪತ್ರದಲ್ಲಿ ಅಕ್ಷರಗಳು) ಈಗ ನನ್ನ ಮುಖದಲ್ಲಿ ಆ ಪ್ರೀತಿಯನ್ನು ಜಗತ್ತಿಗೇ ತೋರುವಂತೆ ರೂಢವಾಗಿವೆ.”

  • ನರೇಶರೆ ಬಹಳ ಚೆನ್ನಾಗಿದೆ ಪದ್ಯದ ಭಾವ

  • ಅತ್ಯುತ್ತಮಂ ನವಲಕಲ್ಪನಶಿಲ್ಪನಂ ತೇ
   ಸ್ತುತ್ಯಂ ವಯಸ್ಯ ! ಜರಸೋ ಮಧುರಾನುಭೂತಿಮ್ |
   ವ್ಯಾಖ್ಯಾತಿ ಯೇನ ಸಕಲಃ ಕವಿಲೋಕ ಆರಾ-
   ದ್ವಾರ್ಧಕ್ಯಮಾಪ್ಯ ಮನುತೇ ಕವನಾಯ ತದ್ವತ್ ||

 14. ಮುದುಡಿದ ಮನದೊಳ್ ಮೂಡಲ್
  ಮುದಿತನ ವಿಶ್ವಾಸದೆಲುಬುಬಾಗಿ, ಹೃದಯದಾ-
  ಳದಿ ವಿಜ್ಞಾನ ಬೆಳಕ ರವಿ
  ಚದುರಲ್, ಮನವರಳಿ ಚೇತನ ಪುನಃ ಮೂಡೀ ||

  • ತಮ್ಮ ಭಾಷೆಯ ಸುಧಾರಣೆ ಸಾಕಷ್ಟು ಆಗಬೇಕಿದೆ. ಉಳಿದಂತೆ ಛಂದಸ್ಸು-ಭಾವನೆಗಳ ನಿರ್ವಾಹದಲ್ಲಿ ತೊಡಕೇನಿಲ್ಲ. ದಯಮಾಡಿ ಹಳಗನ್ನಡಕವಿಗಳ ಪದ್ಯಗಳನ್ನು ಆಗೀಗ ಓದಿಕೊಳ್ಳುತ್ತಿರಿ.

   • ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಷ್ಟ್ರೇ …. ಅಭ್ಯಾಸ ಯತ್ನಗಳನ್ನು ಮತ್ತಷ್ಟು ರೂಢಿಸುವ ಪ್ರಯತ್ನ ಮಾಡುವೆ…

 15. ತಂದೆಯಾ ಕೊನೆಗಾಲದೊಳ್ನಾ
  ನೆಂದಿಗುಂ ಕೈನೀಡದಾದೆನು
  ಚೆಂದದಿಂ ಕಾಲವನು ಕಳೆದೆನು ಪಣದ ಸೊರ್ಕಿನಲಿ|
  ಹಿಂದಿನಾ ಜೀವನವ ನೆನೆಯುತ
  ಮುಂದಿರುವ ಕಳ್ತಲೆಯ ದಿನಗಳ
  ಗೊಂದಲದ ವೃದ್ಧಾಪ್ಯದೊಳ್ ನನಗಾಪ್ತರಾರಿಹರು?

 16. ತಟ್ಟಲ್ ಜೀರ್ಣತೆ ಕಾಲನ
  ಪೆಟ್ಟನಲಕ್ಷಿಪ ನಿರಾಕರಣಮನೆ ಗೈವರ್
  ಗಟ್ಟಿಗನಾನೆನೆ ಗಡಮೆರ್ದೆ
  ಘಟ್ಟಿಸಿ ವಿಷಯದ ಮರೀಚಿಕೆಯನನುಸರಿಪರ್

  • ಗಂಭೀರತರಂ ಪದ್ಯಂ
   ಗುಂಭಿಸಿದ ಬೆಡಂಗದೇಂ ಪಟಿಷ್ಠಮೊ ಸೋಮಾ !

 17. ಮುಪ್ಪಿನ ಜೀವನಮಂನೀ
  ನೊಪ್ಪದೆ ನಮ್ಮನು ಮರುಳ್ಗಳಾಗಿಸುತೀಗಳ್|
  ಕಪ್ಪಾಗಿಸೆ ಕೂದಲ ಗಡ!
  ಸೊಪ್ಪಿನ ಚರ್ಮವನದೇಕೆ ಮರತೆಯೊ ಮರುಳೇ?

  • ಸೊಗಸಾದ ರಚನೆ; ಕಲ್ಪನೆ. ಒಂದೆರಡು ಸವರಣೆಗಳು:
   ಎರಡನೆಯ ಸಾಲಿನಲ್ಲ ’ನಮ್ಮಂ’ ಎಂದು ತಿದ್ದಿದರೆ ಹಳಗನ್ನಡಕ್ಕೆ ಹೆಚ್ಚು ಹಿತ. ಮೂರನೆಯ ಸಾಲಿನಲ್ಲಿ “ಕಪ್ಪಾಗಿಸೆ ಮುಡಿಯಂ ಗಡ”
   ಎಂದು ಮಾರ್ಪಡಿಸಿದರೆ ಹಳಗನ್ನಡವ್ಯಾಕರಣದ ರೀತ್ಯಾ ಯುಕ್ತ.

 18. ಪಲಿತ ಪಣ್ಗಳೊಳಿರ್ಪ ಸಾರಮ, ಪಾರ್ವ ಪಕ್ಕಿಯು ಬೇಡದೇಂ?
  ನಲಿದದುಣ್ಣು ಗುಮೆಲ್ಲಮಂ ಹುಡುಕಾಡಿ ಕಾನನ, ವೆಟ್ಟಮಂ
  ಕಲೆತು ಕೂಡಿರೆ ಬಿಜ್ಜೆ ಮೇಣ್ ಪರರೊಪ್ಪಿಕೊಂಬುವ ಭಾವಗಳ್,
  ಒಲಿದು ಬಾರರೆ? ಲೋಕದೊಳ್ ಜನವೆಲ್ಲ ವೃಧ್ಹರ ಸಾರ್ದುತಾಂ
  (ಪ್ರೇರಣೆ = ಶಕುಂತಲಾ ಮೊಳೆಯಾರ್ ರ ಪದ್ಯ)

  • ನಿಮ್ಮ ಪದ್ಯವನ್ನು ಮತ್ತಷ್ಟು ಹಳಗನ್ನಡದ ಹದದಿಂದ ಸಜ್ಜಾಗಿಸಬಹುದು:
   ಕಳಿತ ಪಣ್ಗಳ ಸಾರಮಂ ಸಲೆ ಪಾರ್ವ……………..
   ……………………………….ತಡಕಾಡಿ ಕಾನನ-ಶೈಲಮಂ |
   ……………………………..ಪರರೊಪ್ಪಿಕೊಳ್ಳುವ ಭಾವಮಂ
   ಒಲಿದು ಬಾರದೆ ಲೋಕದೊಳ್ ಜನಮೆಲ್ಲಮಯ್ದುತೆ ವೃದ್ಧರಂ ||

   • ಹಳಗನ್ನಡವನ್ನು ರೂಢಿಸಿಕೊಳುವುದಕ್ಕೆ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದಗಳು.

 19. ವರ್ಣಿಪರು ಬಾಲ್ಯದೆಸೆಯೆ ಸು
  ವರ್ಣಯುಗಮೆನುತಲಿ ಯೌವನದೆ. ಯೌವನ ತಾಂ
  ಪೂರ್ಣವದೆಂಬರು ವೃದ್ಧರ್.
  ವರ್ಣಿಪರೇಂ ಲೇಸೆನುತ್ತೆ ಮುಪ್ಪಂ ಸಾವೊಳ್??

  • ತುಂಬ ಒಳ್ಳೆಯ ಕವಿತೆಯನ್ನು ನೀಡಿದ್ದೀರಿ; ಅಭಿನಂದನೆಗಳು. ಹಳಗನ್ನಡದ ಹದವನ್ನು ಹೀಗೆ ಮತ್ತೂ ಹಿಗ್ಗಿಸಬಹುದು:
   ವರ್ಣಿಪರಯ್ ಬಾಲ್ಯಮದೆ ಸು-
   ವರ್ಣಯುಗಮೆನುತ್ತೆ ಯೌವನದೆ,ಯೌವನಮೇ |
   ಪೂರ್ಣಮದೆಂಬರ್ ವೃದ್ಧರ್
   ವರ್ಣಿಪರೇಂ ಲೇಸೆನುತ್ತೆ ಮುಪ್ಪಂ ಸಾವೊಳ್?

 20. बाल्ये च यौवनविधौ कृतपापशैलम्
  भृत्वा प्रकुञ्चितशरीर इहास्मि वृद्धः ।
  हे कृष्ण ! शैलमुरलीधर ! चक्रधारिन् !!
  त्वत्पादपद्मयुगले भवताद्भरो मे ॥

 21. ಆರಾರಾರುಣಿಸರ್ಪರೊ!
  ಜಾರೆ ಸುಲಭದಿಂ ಪಸಿರ್ದ ವಾಯೊಳ್ , ಕಳಿತುಂ
  ಮೇರು ಫಲಂಗಳ್ ನರಗಿರೆ
  ಭೂರಿಜರೆಗವಿದರನಾರ್ ಬಯಸುಗುಂ ದೇವಾ!

  • ಮೊದಲ ಪಾದದಲ್ಲಿ ಸಂಧಿಪದ ಚೆನ್ನಾಗಿದೆ – ಆರಾರು ಆರ ಉಣಿಸು ಅರ್ಪರು. ಅರ್ಪರು=ಅಹರು ಎಂದು ಆಗುವುದೆ?

 22. ಪಣ್ಣೆಲೆಯಿರೆ ಮರದೆ,ಪಸಿರ-
  ಬಣ್ಣಮಳಿದು,ಕಂದಿ,ಕಾಂತಿಗುಂದುತೆ,ಬೆತೆಯೊಳ್,|
  ಪಣ್ಣೆಡೆಯೊಳ್ ನಗುತೆ,ಪೊಳೆವ-
  ಸಣ್ಣೆಲೆ ತಾನ್ ಶ್ರೇಷ್ಥಮೆಂದು ಬೀಗುತ್ತಿರ್ಕುಂ ||

  • ಅದು ಬೀಗುವುದನ್ನು ಕಂಡು ಹಣ್ಣೆಲೆ ಎಂದಿತು:
   ಪಲ್ಲವ|| ಬೀಗು ಬೀಗೆಲೆ ಪೋರ ನೀನೀ
   ಗಾಗ ಬೀಗಿದ ವೋಲು ನಾನುಂ|
   ಬೇಗ ಸರಿವುದು ವರುಷವರ್ಧವು
   ನೀಗೆ ನಿನ್ನಯ ಪಚ್ಚೆಯಂ||

  • ಒಳ್ಳೆಯ ಕಂದಪದ್ಯ! ಅಭಿನಂದನೆಗಳು.

   • ಸಹೋದರರಾದ ಶತಾವಧಾನಿಗಳಿಗೆ ಧನ್ಯವಾದಗಳು.

 23. ಕಂದದಲ್ಲಿ ಪದ್ಯ ಸರಣಿಗಳು… I Know this is a very bad one… Thought I can get feedback So that I can improve..

  ಒತ್ತಡ ವಿರುವಾ ಕೆಲಸದೊ
  ಳೆತ್ತಲುಮಿರದಿರೆ ವಿರಾಮಮೆನಗೆನ್ನುತ್ತುಂ|
  ಕತ್ತೆಯವೊಲ್ ದುಡಿದಿರ್ಪೆಂ
  ದೆತ್ತಲು ನಿದ್ರೆಯಕಚೇರಿಯೊಳ್ಕಾಣಲ್ಕಾ|

  ಹಿತ್ತಲ ಮರದನೆಳಲಿನೊಳ್
  ಮೆತ್ತನೆ ಕಂಬಳಿಯಹಾಸಿ ತಾನೇ ಕನಸೊಳ್|
  ಪೊತ್ತಂ ಕರಂಗಿಸುತಿರಲ್
  ಚಿತ್ತಕೆ ವಿಶ್ರಾಂತಿಯಿತ್ತು ಮುದಿಜೀವನದೊಳ್|

  ಪತ್ತಾರುಬರಿಸ ಕಳೆಯಲ್
  ನೆತ್ತಿಯಮೇಲ್ಮುಡಿಯುಪೂರ್ತಿಬಿಳುಪಾಗುತಿರಲ್|
  ತತ್ತಿಯವೊಲ್ಬೋಳು ತಲೆಯ
  ನೆತ್ತಲಳುಕಿಬೆಪ್ಪುಮೋರೆಯಿಂ ಚಿಂತಿಸಿರಲ್|

  ಮತ್ತಾರಿಗುಮಿದ ಪೇಳದೆ
  ಕೆತ್ತುತೆ ಪಳೆನೆನಪತನ್ನ ಮನದೊಳಗಿಂದಾ|
  ಕುತ್ತಿನ ದಿನಗಳೆ ಲೇಸೆ
  ನ್ನುತ್ತಲಿ ಕಣ್ಮುಚ್ಚಿಕಂಡ ಸವಿಗನಸುಗಳಂ|

  • ಹಾಸ್ಯಕೆ ತಕ್ಕಂತೆ ವಚೋ-
   ಲಾಸ್ಯಕೆ ತಕ್ಕಿಟ್ಟತಕ್ಕ ತತ್ತೋಂ ಗತಿಯಿಂ |
   ರಸ್ಯಕವಿತೆಯನ್ನೊರೆದ ರ-
   ಹಸ್ಯಜ್ಞನೆ ನೀಂ ಕಣಾ! ಕದರ್ಥಿತಬಾಣಾ!!

 24. ವೃದ್ಧನಿಗೆ ಚಾಮರಸೇವೆ 😀 ಪಂಚಚಾಮರ ವೃತ್ತದಲ್ಲಿ
  ಉಪಘ್ನಯಷ್ಟಿಸುಂದರೀ ಯದಾಂತಮಗ್ರಚಾರಿಣೀ
  ವಿಪನ್ನಪೂರ್ವದೀಧಿತಿಸ್ತ್ವಪೇತದಂತಮೂರ್ಧಜಃ |
  ತದೇವ ವಾವದೀತಿ ಯತ್ ತದುಕ್ತಪೂರ್ವಮತ್ಯಯಂ
  ಜುಗುಪ್ಸಮಾಣಜೀವನೋ ಜರನ್ನಸೌ ಪ್ರತೀಕ್ಷತೇ ||

  • ಪದ್ಯವು ನಿಜಕ್ಕೂ ಸೊಗಸಾಗಿದೆ. ಜುಗುಪ್ಸಮಾನ ಎಂಬುದು ಸಾಧುರೂಪ.

   • ಧನ್ಯವಾದಗಳು ಸರ್..

    ಮಹೇಶ ಭಟ್ಟರ ಅವಧಾನ ಹೇಗಾಯಿತು ಸರ್ ? ಹಾಳಾದ ರೈಲಿನ ಸಮಯವಾಗಿದ್ದರಿಂದ ಬೇಗನೆ ಎದ್ದು ಹೋಗಬೇಕಾಯಿತು.

 25. याता पत्नी, तदनु तनया वृत्तिबाहुल्यदग्धाः
  श्वा मे पुच्छे निजचपलतां दर्शयन् गेहमेति ।
  ईषद्दुःखं वदति मनसि प्राप्तसन्ध्यानुसंगः
  सूर्यो दृष्ट्वोदयशमगतिं त्यागधीर्मे न ते&भूत् ?

  ಪತ್ನಿಯು ಹೋದಳು, ಮಕ್ಕಳು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದರು, ನಾಯಿಯೂ ಬಾಲ ಆಡಿಸುತ್ತಾ ಹೋಯಿತು. ಹೀಗೆ ಮನಸ್ಸು ಸ್ವಲ್ಪ ಬೇಸರ ಪಟ್ಟಾಗ ಸಂಧಾವೇಳೆಯ ಸೂರ್ಯ ಹೀಗೆ ಕೇಳಿದ, “ನನ್ನ ಗತಿಯನ್ನು (ಉದಯ, ಅಸ್ತಮಯವನ್ನು) ನೋಡಿ ಇನ್ನೂ ತ್ಯಾಗಭಾವ ಬರಲಿಲ್ಲವೇ ನಿನಗೆ?”

  (वदति इति । मनसः पक्षे भावलक्षणम्, सूर्यस्य पक्षे लटि प्रयोगः – एवं कर्तुं अनुमतं वेति जिज्ञासा मम । दुःखं मनसि वदति सूर्यः एवं वदति । )

  • रमणीया कल्पना, हृद्या च वृत्तचातुरी। तथापि कॆचन लघुपरिष्कारा निरीक्ष्यन्ते । यथा : गेहमेति इति तु गेहं याति इति भवेत्। नॊ चेत् श्वा वृद्धमुपास्त इवार्थबोधः स्फुरति। तृतीये पादे त्वन्वयक्लेश इव, साकाङ्क्ष इव दृउश्यते। अपि च अनुसङ्ग इति प्रयोगो दुष्यति। तत्तु अनुषङ्ग इति भवेत्। तथा च तुरीये पादेsपि केचन स्वल्पतयापि समीकार्या वर्तन्ते येन पद्यं तमां राजते।

 26. [विरोधाभासस् स्यान्न्वत्र?]
  वार्धक्यं न हि रुच्येत
  येन केनापि जन्तुना।
  यौवने मरणं तस्माद्-
  आधिक्येन तु नेष्यते॥

 27. With thanks to Dr. Shankar for graciously reviewing and refining a few versions of this verse… here goes…

  निद्रासक्तावयवरथिनः कृष्टदुर्दान्तसप्तेः ।
  सन्नाभीशोर्बहुसपथिकस्यार्भकस्वामिनो वै
  घाताघातैर्विगलिततनोर्जीर्णचक्रस्य चित्रं ।
  निश्शुल्कार्था गमनचिटिका वार्द्धक-स्यन्दनस्य ॥

  A verse on old-age comparing it to a chariot, obviously drawing inspiration from the Upanishadic metaphor.

  With a driver whose organs are inclined towards sleep, this is drawn by horses difficult to control.
  Weak-reined, the car is filled with several passengers. However, its owner is but a boy (child).
  Weakened by constant blows, the chariot’s wheels are worn out. The ticket to go on this chariot of old-age is free of charge!

  Note:
  sannAbhIshu – weak-reined.
  saptiH – horse

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)